ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA SN Subbareddy: ಡ್ಯಾಂ ನಿರ್ಮಾಣಕ್ಕಾಗಿ ಕಲ್ಲು ಮುಳ್ಳುಗಳ ನಡುವೆ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಬೆಟ್ಟಗುಡ್ಡಗಳಿಂದ ಸುತ್ತುವರಿದ ಪ್ರದೇಶದಲ್ಲಿ ಕಲ್ಲಿನ ಗುಡ್ಡಗಳು, ಆಳವಾದ ಕಂದಕಗಳು, ಮುಳ್ಳಿನ ಗಿಡ–ಜುಂಗಲುಗಳಿಂದ ಕೂಡಿದ ಕಠಿಣ ನೆಲವಿತ್ತು. ಈ ಪ್ರದೇಶದಲ್ಲಿ ಭದ್ರವಾದ ಅಡಿಪಾಯಕ್ಕೆ ಸೂಕ್ತವಾದ ಕಲ್ಲಿನ ಮಿಶ್ರಣ, ಮಣ್ಣು, ಜಲಧಾರೆಯ ದಿಕ್ಕು, ಮಳೆಯ ನೀರಿನ ಸಂಗ್ರಹಣ ಸಾಮರ್ಥ್ಯ ಹಾಗೂ ಡ್ಯಾಂ ಗೋಡೆಯ ಎತ್ತರ–ಅಗಲ ನಿಗಧಿಗೆ ಬೇಕಾದ ಪ್ರಾಥಮಿಕ ತಾಂತ್ರಿಕ ಅಂಕಿಅಂಶ ಗಳನ್ನು ಸಣ್ಣ ನೀರಾವರಿ ಇಲಾಖೆ ಎಇಇ ಸುನಿಲ್ ಶಾಸಕರಿಗೆ ವಿವರಿಸಿದರು.

ಅಧಿಕಾರಿಗಳೊಂದಿಗೆ ಸುತ್ತಾಟ ೩ ತಿಂಗಳಲ್ಲಿ ೫ ಕೋಟಿ ವೆಚ್ಚದ ಕಾಮಗಾರಿ ಪ್ರಾರಂಭ

-

Ashok Nayak
Ashok Nayak Nov 28, 2025 9:11 PM

ಬಾಗೇಪಲ್ಲಿ : ಜನಪ್ರತಿನಿಧಿಯಾದವರಿಗೆ ಜನಪರ ಕಾಳಜಿ,ಸಾಮಾಜಿಕ ಜವಾಬ್ದಾರಿ ಇದ್ದರೆ ಕಲ್ಲು-ಮುಳ್ಳುಗಳ ದಾರಿಯೂ ಹೂವಿನ ಹಾದಿಯಾಗುತ್ತದೆ. ಯೋಜನೆಯ ಗುರಿ ಸಾಧನೆಯಾಗಬೇಕಿದ್ದರೆ ಅದರ ಮುಂದಿರುವ ಸವಾಲುಗಳು ಗೌಣ ಎಂಬುದನ್ನು ಸಾಬೀತುಪಡಿಸುವಂತೆ ದಾರಿಯೇ ಇಲ್ಲದ ಗುಡ್ಡಗಾಡು ಪ್ರದೇಶದಲ್ಲಿ ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ಸುಮಾರು ೪-೫ ಕಿಮೀ ದೂರ ಕಲ್ಲು-ಮುಳ್ಳುಗಳ ಹಾದಿಯಲ್ಲಿ ಸಾಗಿ ಸ್ಥಳ ಪರಿಶೀಲನೆ ನಡೆಸಿದ ಆಸಕ್ತಿಕರ ಸನ್ನಿವೇಶ ಕಂಡು ಬಂದಿತು.

ತಾಲೂಕಿನ ದೇವರಗುಡಿಪಲ್ಲಿ ಗ್ರಾಪಂ ವ್ಯಾಪ್ತಿಯ ಮುದ್ದಲಪಲ್ಲಿ-ಮಾಕಿರೆಡ್ಡಿಪಲ್ಲಿ ಸಮೀಪ ದಲ್ಲಿರುವ ಬೆಟ್ಟ-ಗುಡ್ಡದ ಪ್ರದೇಶದಲ್ಲಿ ಸುಮಾರು ೫ ಕೋಟಿ ವೆಚ್ಚದ ‘ಕೋಮಟೋಳ್ಳ ಕುಂಟ’ ಪ್ರದೇಶದಲ್ಲಿ ಡ್ಯಾಂ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಯನ್ನು ಪರಿಶೀಲಿಸಲು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ( MLA SN Subbareddy) ಅವರು ಅಧಿಕಾರಿಗಳ ತಂಡದೊಂದಿಗೆ ಕಲ್ಲು–ಮುಳ್ಳುಗಳ ನಡುವೆ ಹರಡಿರುವ ಬೆಟ್ಟಗುಡ್ಡ ಪ್ರದೇಶಕ್ಕೆ ಭೇಟಿ ನೀಡಿದರು.

ಈ ಸುತ್ತಾಟದ ಉದ್ದೇಶ, ಯೋಜಿತ ಡ್ಯಾಂ ನಿರ್ಮಾಣಕ್ಕೆ ಆಯ್ಕೆಯಾಗಿರುವ ಸ್ಥಳದ ಭೌಗೋಳಿಕ ಸ್ಥಿತಿ, ಭೂಸಂರಚನೆ ಹಾಗೂ ಪರಿಸರದ ಮೇಲೆ ಬೀರುವ ಪರಿಣಾಮಗಳನ್ನು ನೇರವಾಗಿ ಅವಲೋಕಿಸುವುದು ಆಗಿತ್ತು.

ಇದನ್ನೂ ಓದಿ: MLA Subbareddy: ಕನಕದಾಸರ ವಚನಗಳು ಸರ್ವಕಾಲಿಕವಾದುದು, ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ: ಶಾಸಕ ಸುಬ್ಬಾರೆಡ್ಡಿ

ಬೆಟ್ಟಗುಡ್ಡಗಳಿಂದ ಸುತ್ತುವರಿದ ಪ್ರದೇಶದಲ್ಲಿ ಕಲ್ಲಿನ ಗುಡ್ಡಗಳು, ಆಳವಾದ ಕಂದಕಗಳು, ಮುಳ್ಳಿನ ಗಿಡ–ಜುಂಗಲುಗಳಿಂದ ಕೂಡಿದ ಕಠಿಣ ನೆಲವಿತ್ತು. ಈ ಪ್ರದೇಶದಲ್ಲಿ ಭದ್ರವಾದ ಅಡಿಪಾಯಕ್ಕೆ ಸೂಕ್ತವಾದ ಕಲ್ಲಿನ ಮಿಶ್ರಣ, ಮಣ್ಣು, ಜಲಧಾರೆಯ ದಿಕ್ಕು, ಮಳೆಯ ನೀರಿನ ಸಂಗ್ರಹಣ ಸಾಮರ್ಥ್ಯ ಹಾಗೂ ಡ್ಯಾಂ ಗೋಡೆಯ ಎತ್ತರ–ಅಗಲ ನಿಗಧಿಗೆ ಬೇಕಾದ ಪ್ರಾಥಮಿಕ ತಾಂತ್ರಿಕ ಅಂಕಿಅಂಶ ಗಳನ್ನು ಸಣ್ಣ ನೀರಾವರಿ ಇಲಾಖೆ ಎಇಇ ಸುನಿಲ್ ಶಾಸಕರಿಗೆ ವಿವರಿಸಿದರು.

cbpm4s

ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಅಧಿಕಾರಿಗಳೊಂದಿಗೆ ತಾಂತ್ರಿಕತೆ ಎಂಬ ಧೋರಣಿಯಲ್ಲಿ ಯೋಜನೆಯನ್ನು ರೂಪಿಸಬೇಕೆಂದು ಸೂಚಿಸಿದರು. ಡ್ಯಾಂ ನಿರ್ಮಾಣದಿಂದ ಸಮೀಪದ ಗ್ರಾಮಗಳಿಗೆ ಸಿಗುವ ಕುಡಿಯುವ ನೀರಿನ ಭದ್ರತೆ, ಸಮಗ್ರ ಪ್ರಗತಿ ನಕ್ಷೆ ಸಿದ್ಧಪಡಿಸುವ ಜೊತೆಗೆ ಅರಣ್ಯ ಪ್ರದೇಶ, ವನ್ಯಜೀವಿ ಸಂರಕ್ಷಿತ ವಲಯಗಳಿಗೆ ಹಾನಿಯಾಗದಂತೆ ಪರಿಸರ ಅಧ್ಯಯನ ವರದಿ ಸಿದ್ಧಪಡಿಸಿ ಮುಂದಿನ ಹಂತದ ಅನುಮೋದನೆ ಪಡೆಯಬೇಕೆಂದು ಡ್ಯಾಂ ನಿರ್ಮಾಣಕ್ಕೆ ಸ್ಥಳೀಯರ ಭೂಮಿ ಅಗತ್ಯಬಿದ್ದರೆ ಅವರ ಮನವೊಲಿಸುವುದರ ಜೊತೆಗೆ ಪರ್ಯಾಯವಾಗಿ ಭೂಮಿ ನೀಡುವುದಾಗಿ ತಿಳಿಸಿದರು.

ಪ್ರಾಥಮಿಕ ಅಂದಾಜಿನಲ್ಲಿ ಡ್ಯಾಂ ಅಡಿಪಾಯ, ಮುಖ್ಯ ಗೋಡೆ, ನೀರಿನ ಒಳಹೊಕ್ಕು ನಿರ್ಗಮನ ಕಾಲುವೆಗಳು, ರಸ್ತೆ ಸಂಪರ್ಕ ಮತ್ತಿತರ ಕಾಮಗಾರಿಗಳು ಒಳಗೊಂಡಂತೆ ೫ ಕೋಟಿ ರೂಪಾಯಿಗಳ ವೆಚ್ಚದ ಪ್ರಾಥಮಿಕ ಯೋಜನೆ ರೂಪಿಸಲಾಗಿದೆ. ಗುಡ್ಡ–ಗಾಡು ಪ್ರದೇಶವಾಗಿರುವುದರಿಂದ ಕಲ್ಲು ತೆಗೆಯುವುದು, ಸಮೀಕರಣ, ತಾಂತ್ರಿಕ ಯಂತ್ರೋಪಕರಣಗಳ ಸಾಗಣೆ ಮುಂತಾದ ಕಾಮಗಾರಿ ಗಳಿಂದ ನಿರ್ಮಾಣ ವೆಚ್ಚ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯನ್ನು ಅಧಿಕಾರಿಗಳು ಪ್ರಸ್ತಾಪಿಸಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ಪಡೆಯುವ ಹಾಗು ಯೋಜನೆಯಿಂದ ಯಾರಾದರೂ ಭೂಮಿ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದರೆ, ಕಾನೂನುಬದ್ಧ ಪರಿಹಾರ ಒದಗಿಸುವ ಮತ್ತು ಸದರಿ ಯೋಜನೆಯ ಮೂಲಕ ದೇವರಗುಡಿಪಲ್ಲಿ ಗ್ರಾಪಂ ವ್ಯಾಪ್ತಿಯ ಜನತೆಗೆ ಕುಡಿಯುವ ನೀರು ಕೊಡುವ ಮತ್ತು ೩ ತಿಂಗಳಲ್ಲಿ ಡ್ಯಾಂ ನಿರ್ಮಾಣದ ಕಾಮಗಾರಿಯನ್ನು ಪ್ರಾರಂಭಿಸುವ ವಿಶ್ವಾಸವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸುದ್ದಿಗಾರರೊಂದಿಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಪಿ. ಮಂಜುನಾಥರೆಡ್ಡಿ, ಮಲ್ಲಿಕಾರ್ಜುನರೆಡ್ಡಿ, ವಿಷ್ಣುವರ್ಧನ ರೆಡ್ಡಿ, ಸಣ್ಣ ನೀರಾವರಿ ಇಲಾಖೆ ಎಇಇ ಸುನಿಲ್. ರವೆನ್ಯೂ ಇನ್ಸ್ಪೆಕ್ಟರ್ ಪ್ರಶಾಂತ್,
ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಂಕರಪ್ಪ, ಈಶ್ವರಪ್ಪ, ತಿಪ್ಪನ್ನ, ವೆಂಕಟೇಶ್, ವೆಂಕಟರಾಮಪ್ಪ, ನಾಗಿರೆಡ್ಡಿ, ಆದಿ, ಮೋಪೀರಪ್ಪ, ಈಶ್ವರ ಮತ್ತಿತರರು ಉಪಸ್ಥಿತರಿದ್ದರು.