ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಿಲ್ಲಾಡಳಿತದಿಂದ ಭಗವಾನ್ ಬುದ್ಧ ಜಯಂತಿ ಆಚರಣೆ, ಬುದ್ಧನ ತತ್ತ್ವಗಳನ್ನು ಅಳವಡಿಸಿಕೊಳ್ಳಲು ಜಿಲ್ಲಾಧಿಕಾರಿ ಜಿ ಪ್ರಭು ಕರೆ

ಮಹಾತ್ಮ ಬುದ್ಧರ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿದೆ “ಬುದ್ಧ ಜಯಂತಿ ಕೇವಲ ಆಚರಣೆಯ ದಿನವಲ್ಲ, ಇದು ಮಾನವೀಯತೆ, ಶಾಂತಿ, ಕರುಣೆ, ಸಹಬಾಳ್ವೆ, ಪ್ರೀತಿ, ವಾತ್ಸಲ್ಯ ಮತ್ತು ಸಹನೆಗೆ ಮಾರ್ಗದರ್ಶನ ನೀಡುವ ದಿನವಾಗಿದೆ. ಬುದ್ಧರು ನೀಡಿದ ಅಹಿಂಸೆ ಮತ್ತು ಸಮಾನತೆಯ ಸಂದೇಶಗಳು ಇಂದಿನ  ಸಮಾಜಕ್ಕೆ  ಅತ್ಯಂತ ಪ್ರಸ್ತುತವಾಗಿವೆ,” ಎಂದು ತಿಳಿಸಿದರು.

ಬುದ್ಧನ ತತ್ತ್ವಗಳನ್ನು ಅಳವಡಿಸಿಕೊಳ್ಳಲು ಜಿಲ್ಲಾಧಿಕಾರಿ ಜಿ ಪ್ರಭು ಕರೆ

ಬುದ್ಧಜಯಂತಿ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. -

Profile
Ashok Nayak May 2, 2026 8:49 AM

ಚಿಕ್ಕಬಳ್ಳಾಪುರ : ಭಗವಾನ್ ಗೌತಮ ಬುದ್ಧನ ಸಮ ಸಮಾಜದ ಪರಿಕಲ್ಪನೆ ಮತ್ತು ಸಂತೋಷ ಭರಿತವಾದ ಸಾಮಾಜಿಕ ವ್ಯವಸ್ಥೆ ರೂಪಿಸುವ ಆಶಯದಂತೆ ಬಡವರಿಗೆ,ತಳಮಟ್ಟದ ಸಮುದಾಯ ದವರಿಗೆ ಸರ್ಕಾರದ ಎಲ್ಲ ಯೋಜನೆಗಳನ್ನು ಮತ್ತು ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಂಕಣಬದ್ಧರಾಗಿ ದುಡಿಯೋಣ ಎಂದು ಜಿಲ್ಲಾಧಿಕಾರಿ ಜಿ ಪ್ರಭು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯ ದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ  "ಬುದ್ಧ ಜಯಂತಿ" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಾತ್ಮ ಬುದ್ಧರ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿದೆ “ಬುದ್ಧ ಜಯಂತಿ ಕೇವಲ ಆಚರಣೆಯ ದಿನವಲ್ಲ, ಇದು ಮಾನವೀಯತೆ, ಶಾಂತಿ, ಕರುಣೆ, ಸಹಬಾಳ್ವೆ, ಪ್ರೀತಿ, ವಾತ್ಸಲ್ಯ ಮತ್ತು ಸಹನೆಗೆ ಮಾರ್ಗದರ್ಶನ ನೀಡುವ ದಿನವಾಗಿದೆ. ಬುದ್ಧರು ನೀಡಿದ ಅಹಿಂಸೆ ಮತ್ತು ಸಮಾನತೆಯ ಸಂದೇಶಗಳು ಇಂದಿನ ಸಮಾಜಕ್ಕೆ  ಅತ್ಯಂತ ಪ್ರಸ್ತುತವಾಗಿವೆ,” ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆ ಈಡೇರಿಕೆಯ ಮನವಿ ಪತ್ರ ಸಲ್ಲಿಕೆ

ಕಾಯಕದ ಮಹತ್ವ, ಪರಿಶ್ರಮ ಮತ್ತು ಏಕಾಗ್ರತೆಯ ಮಹತ್ವವನ್ನು 2500 ವರ್ಷಗಳ ಹಿಂದೆಯೇ ಬುದ್ಧರು ನಮಗೆ ನೀಡಿದ್ದಾರೆ.ಬೌದ್ಧ ಧರ್ಮದ ನಂತರ ಬಂದಂತಹ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳ ಮೇಲೆ ಬೌದ್ಧ ಧರ್ಮವು ಗಾಢವಾದ ಪ್ರಭಾವವನ್ನು ಬೀರಿದೆ ಎಂದು ತಿಳಿಸಿದರು.

ಗೌತಮ ಬುದ್ಧರು ಬಾಲ್ಯದಲ್ಲಿ ಒಬ್ಬ ವಯಸ್ಸಾದ ವೃದ್ಧ, ರೋಗಿ, ಮೃತ ದೇಹ ಮತ್ತು ಭಿಕ್ಷುಕನನ್ನು ಕಾಣುತ್ತಾರೆ ಇವರೆಲ್ಲರ ಸ್ಥಿತಿಗತಿಗಳು ಅವರ ಮೇಲೆ ಗಾಢವಾದ ಪರಿಣಾಮವನ್ನು ಬೀರಿ ಅವರನ್ನು ಚಿಂತನೆಗೆ ಒಳಪಡಿಸುತ್ತವೆ. 2563 ವರ್ಷಗಳ ಹಿಂದೆ ಸಮಾಜದಲ್ಲಿ ಇದ್ದ ಅಂಕುಡೊಂಕುಗಳು, ಓರೆ ಕೋರೆಗಳು, ಸಮಸ್ಯೆಗಳಿಗೆ ಕಾರಣ ಏನೆಂಬುದನ್ನು ತಿಳಿಯುವ ನಿಟ್ಟನಲ್ಲಿ ಸಾಮ್ರಾಟನಾಗಿದ್ದ ಒಬ್ಬ ವ್ಯಕ್ತಿ ಅಧಿಕಾರವನ್ನು ತ್ಯಜಿಸಿ ತಾನು ಮೊದಲು ಉತ್ತರವನ್ನು ಕಂಡುಕೊಂಡು ಆ ಉತ್ತರವನ್ನು ಎಲ್ಲರಿಗೂ ತಿಳಿಸುವ ನಿಟ್ಟಿನಲ್ಲಿ ಸ್ಥಾಪಿಸಿದ ಧರ್ಮವೇ ಬೌದ್ಧ ಧರ್ಮ ಎಂದರು.

ಇಂತಹ ಧರ್ಮ ಇಂದು ಹೀನಾಯಾನ, ಮಹಾಯಾನ ಮತ್ತು ವಜ್ರಯಾನ ಎಂಬ ಪ್ರಕಾರಗಳಲ್ಲಿ ಜಗತ್ತಿನ ವಿವಿಧ ಕಡೆ ಆಚರಣೆಯಲ್ಲಿದೆ ಅದರಲ್ಲೂ ಮುಖ್ಯವಾಗಿ ದಕ್ಷಿಣ ಆಗ್ನೇಯ ದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಸಮಗ್ರ ಅರಿವನ್ನು ಪಡೆಯುವ ಕಡೆ ನಮ್ಮ ಗಮನ ಇರಬೇಕು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು, ನುಡಿದರೆ ಮುತ್ತಿನ ಹಾರದಂತಿರಬೇಕೆಂದು ಬಹಳ ವರ್ಷಗಳ ಹಿಂದೆ ನಮಗೆ ಬುದ್ಧರು ತಿಳಿಸಿದ್ದಾರೆ.ಒಳ್ಳೆಯದನ್ನು ಮಾಡುವ ಕಡೆ ನಮ್ಮ ಚಿಂತನೆಗಳು ಇರಬೇಕು, ಯಾರನ್ನು ನೋಯಿಸುವ ರೀತಿ ನಮ್ಮ ಮಾತುಗಳು ಇರಬಾರದು ಎಂಬುದನ್ನು ಗೌತಮರು ಇಂದಿನ  ಪೀಳಿಗೆಗೆ ನೀಡಿ ಹೋಗಿದ್ದಾರೆ ಎಂದು ತಿಳಿಸಿದರು.

ಸಮಾಜದಲ್ಲಿ ದ್ವೇಷ ಮತ್ತು ಹಿಂಸೆಯನ್ನು ದೂರ ಮಾಡಿ, ಪರಸ್ಪರ ಗೌರವ ಮತ್ತು ಸಹಾನುಭೂತಿ ಯನ್ನು ಬೆಳೆಸಬೇಕು. ವಿದ್ಯಾರ್ಥಿಗಳು ಹಾಗೂ ಯುವಜನತೆ ಸೇರಿದಂತೆ ಎಲ್ಲರು ಬುದ್ಧರ ತತ್ವ ಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂತಹ ಮಹಾತ್ಮರ ಸಂದೇಶಗಳನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ 39 ಮಹನೀಯರ ಜಯಂತಿಗಳನ್ನು ಆಚರಿಸುತ್ತಿದೆ. ಈ ಎಲ್ಲ 39 ಮಹನೀಯರ ತತ್ವಗಳೆ ನಮಗೆ ಜೀವನ ಪಾಠವಾಗಿವೆ.ಇವರೆಲ್ಲರನ್ನು ಅರ್ಥ ಮಾಡಿಕೊಂಡರೆ ಇನ್ನೂ ಯಾವುದೇ ಪಾಠವನ್ನು ಕಲಿಯುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದರು.

ಉಪನ್ಯಾಸಕ ಪ್ರೊ.ಮಂಜಣ್ಣ ಟಿ ರವರು ಗೌತಮ ಬುದ್ಧರ ಜೀವನದ ವೃತ್ತಾಂತಗಳನ್ನು ತಿಳಿಸಿ ಕೊಟ್ಟರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ರಾಜ್ಯಕ್ಕೆ ೨ನೇ ರ‍್ಯಾಂಕ್ ಪಡೆದ ಪ್ರಣತಿರಾಜ್ ಸೇರಿದಂತೆ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ತಹಸಿಲ್ದಾರ್ ರಶ್ಮಿ, ನಗರಸಭೆ ಆಯುಕ್ತ ಮನ್ಸೂರ್ ಅಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಸಮುದಾಯದ ಮುಖಂಡರಾದ ಸುಧಾ ವೆಂಕಟೇಶ್, ಜೆ ಸಿ ವೆಂಕಟರಮಣಪ್ಪ, ಆನಂದ್ ನರಸಿಂಹಯ್ಯ, ಗಂಗಾಧರ್ ಗೌತಮ್, ಮುನಿಕೃಷ್ಣಪ್ಪ ಸೇರಿದಂತೆ ಬುದ್ಧನ ಅನುಯಾಯಿಗಳು, ಬುದ್ದನ ಪ್ರೇಮಿಗಳು ಹಾಜರಿದ್ದರು.