ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

79th Independence Day: 79ನೇ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಡಳಿತ ಸಜ್ಜು: ಸರ್.ಎಂ.ವಿ ಜಿಲ್ಲಾಕ್ರೀಡಾಂಗಣದಲ್ಲಿ ತಾಲೀಮು ಜೋರು

ರಾಷ್ಟ್ರಭಕ್ತಿಯನ್ನು ಮೆರೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲು ಜಿಲ್ಲಾಡಳಿತ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಳಿನ ಕಾರ್ಯಕ್ರಮದಲ್ಲಿ ಎಲ್ಲೂ ಕೂಡ ಲೋಪವಾಗದಂತೆ ಧ್ವಜವಂಧನೆ ಮತ್ತು ಕವಾಯತು ನಡೆಯಬೇಕಿರುವುದರಿಂದ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.

79ನೇ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಡಳಿತ ಸಜ್ಜು

ಜಿಲ್ಲಾ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದಿರುವ ಪೊಲೀಸ್ ಮತ್ತು ಶಾಲಾ ಮಕ್ಕಳ ತಾಲೀಮಿನ ಚಿತ್ರ..

Ashok Nayak Ashok Nayak Aug 14, 2025 11:05 PM

ಚಿಕ್ಕಬಳ್ಳಾಪುರ : 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲಾಡಳಿತವು ಸಂಭ್ರಮದಿಂದ ಆಚರಿ ಸಲು ಸಕಲ ರೀತಿಯಲ್ಲಿ ತಯಾರಿ ನಡೆಸಿದ್ದು, ಕಾರ್ಯಕ್ರಮದಲ್ಲಿ ಎಲ್ಲೂ ಲೋಪವಾಗದಂತೆ ಕ್ರಮವಹಿಸಿದ್ದು ಗುರುವಾರ ಸರ್.ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳು ಮತ್ತು ಪೊಲೀಸ ರಿಂದ ಬಿರುಸಿನ ತಾಲೀಮು ನಡೆಯಿತು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಒಂದು ವಾರದಿಂದ ಜಿಲ್ಲಾಡಳಿತ ತಾಲೀಮು ನಡೆಸುತ್ತಿದೆ. ಆಚರಣೆಯ ಮುನ್ನಾ ದಿನವಾದ ಗುರುವಾರ ಅಂತಿಮ ತಾಲೀಮು ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎನ್.ಕುಶಾಲ್ ಚೌಕ್ಸೆ ಅವರು ಅಂತಿಮ ತಾಲೀಮು ನೋಡಲು ಜಿಲ್ಲಾಕ್ರೀಡಾಂಗಣಕ್ಕೆ ಆಗಮಿಸಿ ವಿದ್ಯಾರ್ಥಿಗಳು, ಮತ್ತು ಪೊಲೀಸ್ ಇಲಾಖೆಯಿಂದ ಧ್ವಜವಂಧನೆ ಸ್ವೀಕರಿಸಿ ಮಾತನಾಡಿದರು.

ಇದನ್ನೂ ಓದಿ: Independence Day Nail Art 2025: ರಾಷ್ಟ್ರ ಪ್ರೇಮ ಬಿಂಬಿಸುವ ನೇಲ್ ಆರ್ಟ್‌ಗಳಿವು

ರಾಷ್ಟ್ರಭಕ್ತಿಯನ್ನು ಮೆರೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲು ಜಿಲ್ಲಾಡಳಿತ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಳಿನ ಕಾರ್ಯಕ್ರಮದಲ್ಲಿ ಎಲ್ಲೂ ಕೂಡ ಲೋಪವಾಗದಂತೆ ಧ್ವಜವಂಧನೆ ಮತ್ತು ಕವಾಯತು ನಡೆಯಬೇಕಿರುವುದರಿಂದ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಶಾಲಾ ಮಕ್ಕಳಾಧಿ ಯಾಗಿ ಎಲ್ಲರೂ ಕೂಡ ಶಿಸ್ತಿನಿಂದ ತಾಲೀಮಿನಲ್ಲಿ ಭಾಗಿಯಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪೊಲೀಸ್ ಇಲಾಖೆ ಕೂಡ ಶಾಂತಿ ಸುವವ್ಯವಸ್ಥೆ ಹಾಳಾಗದಂತೆ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಿ ಕಾರ್ಯಕ್ರಮ ನೀಡುವುದೇ ಹೆಮ್ಮೆಯ ವಿಚಾರ ಎಂದು ಭಾವಿಸಿರುವ ಎಷ್ಟೋ ಶಾಲಾ ಕಾಲೇಜು ಆಡಳಿತ ಮಂಡಳಿಗಳು ತಮ್ಮ ವಿದ್ಯಾರ್ಥಿಗಳ ಕೈಯಲ್ಲಿ ನಾನಾ ರೀತಿಯ ಸಾಂಸ್ಕೃತಿಕ ಚಟವಟಿಕೆಗಳನ್ನು ಕೈಗೊಂಡು ಜಿಲ್ಲಾಡಳಿತ ನಡೆಸುವ ಕಾರ್ಯಕ್ರಮ ದಲ್ಲಿ ಪ್ರದರ್ಶನ ಮಾಡಲು ಕಾತುರದಿಂದ ಕಾಯುತ್ತಾರೆ. ಅದರಂತೆ ತಾಲೂಕು ಕೇಂದ್ರದಲ್ಲಿ ಕೂಡ ಹತ್ತಾರು ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಸಾರುವ ಗೀತೆಗಳಿಗೆ ನೃತ್ಯ ಸಂಯೋಜನೆ ಮಾಡಿ ಅಂತಿಮ ತಾಲೀಮಿನಲ್ಲಿ ಸೊಗಸಾಗಿ ಪ್ರದರ್ಶನ ಮಾಡಿದರು.

ಶುಕ್ರವಾರ ಬೆಳಿಗ್ಗೆ ೮ಕ್ಕೆ ನಡೆಯುವ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಧ್ವಜಾರೋಹಣ ಮಾಡಿದರೆ,ಶಾಸಕ ಪ್ರದೀಪ್ ಈಶ್ವರ್ ಅಧ್ಯಕ್ಷತೆ ವಹಿಸುವರು.ಉಳಿದಂತೆ ಎಲ್ಲಾ ತಾಲೂಕಿನ ಶಾಸಕರು,ಸಂಸದರು ಎಂಎಲ್‌ಸಿಗಳು, ಉಸ್ತುವಾರಿ ಕಾರ್ಯದರ್ಶಿಗಳು ಭಾಗವಹಿಸಲಿದ್ದು ಇದೇ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಅಭಿನಂದಿಸಿ ಗೌರವಿಸಲಾಗುವುದು.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣ ಆಗಲಿದೆ.

ಒಟ್ಟಾರೆ ಜಿಲ್ಲಾ ಕ್ರೀಡಾಗಂಣದಲ್ಲಿ ವರುಣಕೃಪೆ ದೋರಿ ಮಳೆಗೆ ಬಿಡುವು ನೀಡಿದರೆ ಮಾತ್ರ ಜಿಲ್ಲಾ ಡಳಿತದ ಶ್ರಮ, ಶಾಲಾ ಮಕ್ಕಳ ಆಸೆ ಈಡೇರಲಿದೆ. ಮಳೆ ಬಿಡುವು ನೀಡದಿದ್ದಲ್ಲಿ ಈ ಎಲ್ಲಾ ಶ್ರಮ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗಲಿದೆ ಎನ್ನುವದು ಹೆಸರೇಳದ ಶಾಲಾ ಶಿಕ್ಷಕರೊಬ್ಬರ ಮಾತಾಗಿದೆ.