ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

70th Kannada Rajyotsava: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 15 ಮಂದಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

ನಾಡ ಹಬ್ಬದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೈಗೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿನ ಸಲಹೆ ಸೂಚನೆಗಳಂತೆ ಕ್ರೀಡಾಂಗಣದಲ್ಲಿ ಈಗಾಗಲೇ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶನ, ಮೈದಾನ ದಲ್ಲಿ ವಿವಿಧ ತಂಡಗಳ ಪಥ ಸಂಚಲನ ಸೇರಿದಂತೆ ವಿವಿಧ ಚಟುವಟಿಕೆಯ ತಾಲೀಮು ಮುಗಿದಿದೆ

15 ಮಂದಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

-

Ashok Nayak Ashok Nayak Nov 1, 2025 2:37 PM

ಚಿಕ್ಕಬಳ್ಳಾಪುರ: 70ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾಡಳಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 15ಮಂದಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ್ದಾರೆ 

ಪ್ರತಿ ವರ್ಷದಂತೆ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ವಿವಿಧ ಕ್ಷೇತ್ರಗಳ ಸಾಧಕ ರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಘೋಷಿಸಿದೆ.ಉಪ ವಿಭಾಗಾಧಿಕಾರಿ ಡಿ.ಎಚ್‌.ಅಶ್ವಿನ್‌ ನೇತೃತ್ವದ ಸಮಿತಿಯು ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ವಿಶೇಷವಾಗಿ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ಸಮಾಜಸೇವೆ, ಶಿಕ್ಷಣ ಹಾಗೂ ಸುದ್ದಿ ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ೧೫ ಸಾಧಕರ ಪಟ್ಟಿಯನ್ನು ಪ್ರಕಟಿಸಿದೆ.

ನಗರದ ಸರ್‌ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ನ.೧ ರಂದು ನಡೆಯಲಿರುವ  70ನೇ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾರತುರಾಯಿ, ಫಲ ತಾಂಬೂಲ ಪ್ರಮಾಣ ಪತ್ರ, ಪುರಸ್ಕಾರದೊಂದಿಗೆ ಸಾಧಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್‌ ಸನ್ಮಾನಿಸ ಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಇದನ್ನೂ ಓದಿ: Chikkaballapur News: ಶ್ರೀರಾಮ್ ಫೈನಾನ್ಸ್ ವತಿಯಿಂದ ೩೬೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವಿತರಣೆ ಶ್ರೀ ಮಂಗಳನಾಥ ಸ್ವಾಮೀಜಿ ಭಾಗಿ

70 ನೇ ಕನ್ನಡ ರಾಜ್ಯೋತ್ಸವ
ನಗರದ ಸರ್. ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನ.1 ರಂದು ಬೆಳಿಗ್ಗೆ 9 ಗಂಟೆಗೆ 70 ನೇ ಕನ್ನಡ ರಾಜ್ಯೋತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಧ್ವಜಾರೋಹಣ ವನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ನೆರವೇರಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಸಕ ಪ್ರದೀಪ್ ಈಶ್ವರ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದರಾದ ಡಾ. ಕೆ.ಸುಧಾಕರ್, ಎಂ.ಮಲ್ಲೇಶ್ ಬಾಬು ಮತ್ತಿತರರು ಭಾಗವಹಿಸಲಿದ್ದಾರೆ.

ಪಥ ಸಂಚಲನ ತಾಲೀಮು
ನಾಡ ಹಬ್ಬದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೈಗೊಂಡಿದ್ದ ಪೂರ್ವಭಾವಿ ಸಭೆಯಲ್ಲಿನ ಸಲಹೆ ಸೂಚನೆಗಳಂತೆ ಕ್ರೀಡಾಂಗಣದಲ್ಲಿ ಈಗಾಗಲೇ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶನ, ಮೈದಾನದಲ್ಲಿ ವಿವಿಧ ತಂಡಗಳ ಪಥ ಸಂಚಲನ ಸೇರಿದಂತೆ ವಿವಿಧ ಚಟುವಟಿಕೆಯ ತಾಲೀಮು ಮುಗಿದಿದೆ. ಇನ್ನು ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಸಾಧನೆಯನ್ನು ಬಿಂಬಿಸುವ ಸ್ತಬ್ಧ ಚಿತ್ರಗಳ ಮೆರವಣಿಗೆಯು ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ನಡೆಯಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಕ್ರೀಡಾಂಗಣದಲ್ಲಿನ ಕಾರ್ಯಕ್ರಮ ಯಶಸ್ವಿಯ ಅಗತ್ಯ ಸಿದ್ಧತೆಗಳ ವ್ಯವಸ್ಥೆಯನ್ನು ಪರಿಶೀಲಿಸಿ, ಸಲಹೆ ಸೂಚನೆಗಳನ್ನು ನೀಡಿದರು.  

ಸಾಧಕರ ಪಟ್ಟಿ
· ಕೆ.ಎಂ.ರೆಡ್ಡಪ್ಪ (ಶಿಕ್ಷಣ)
· ಎಂ.ರವಿಚಂದ್ರ (ಕ್ರೀಡೆ)
ಎನ್.ವೆಂಕಟಪತಿ(ಸಮಾಜ ಸೇವೆ)
· ಎಂ.ಎನ್.ಸುಕನ್ಯಾ(ಶಿಕ್ಷಣ)
ಜಿ.ಎನ್.ಮಂಜುನಾಥ್‌ (ಕಲೆ)
ಎಲ್.ಅಶ್ವತ್ಥ್‌ ನಾರಾಯಣ (ಪತ್ರಕರ್ತ)
ಬಿ.ಕೆ.ಮುದ್ದುಕೃಷ್ಣ(ಪತ್ರಕರ್ತ)
ರಾಜಪ್ಪ(ಪತ್ರಕರ್ತ)
ಕಾಗತಿ ನಾಗರಾಜಪ್ಪ (ಪತ್ರಕರ್ತ)
· ಕವಿತ (ಆರ್ಥಿಕತೆ)
ಎನ್.ಶ್ರೀನಿವಾಸ್‌ (ಕನ್ನಡಪರ ಸೇವೆ)
ರಮೇಶ್‌ ಚಂದ್ರ (ಕಲೆ)
ಜಿ.ಎನ್.ಆಂಜನೇಯಲು(ನಾದಸ್ವರ ವಿದ್ವಾನ್)‌
ಕೃಷ್ಣೇಗೌಡ(ಸಮಾಜ ಸೇವೆ)
ಶ್ವೇತಾ ಗಂಜಾಂ (ಸಮಾಜ ಸೇವೆ)