ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ಪದವೀಧರರು ಸೂಕ್ತ ದಾಖಲಾತಿಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಿ : ಎನ್.ಡಿ.ಎ. ಸಂಭವನೀಯ ಅಭ್ಯರ್ಥಿ ತೂಪಲ್ಲಿ ಚೌಡರೆಡ್ಡಿ ಮನವಿ

ಅರ್ಹ ಪದವೀಧರ ವ್ಯಕ್ತಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಲು ನಿಗದಿತ ನಮೂನೆ-೧೮ರ ಅರ್ಜಿಯೊಂದಿಗೆ ಪದವಿ ಪ್ರಮಾಣ ಪತ್ರದ ಪ್ರತಿ, ಅಂಕ ಪಟ್ಟಿಯ ಪ್ರತಿಯನ್ನು ಸ್ವಯಂ ದೃಢೀಕರಿಸಿ ಮತ್ತು ಗೆಜೆಟೇಡ್ ಅಧಿಕಾರಿಗಳಿಂದ ದೃಢೀಕರಿಸಿ ಅಡಕದೊಂದಿಗೆ ಸಲ್ಲಿಸಬೇಕು ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಶಿಕ್ಷಕರು ಮಾಡಬೇಕು

ಪದವೀಧರರು ಸೂಕ್ತ ದಾಖಲಾತಿಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಿ

ಪದವೀಧರರು ಸೂಕ್ತ ದಾಖಲಾತಿಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಿ  ಎಂದು ಎನ್.ಡಿ.ಎ. ಸಂಭವನೀಯ ಅಭ್ಯರ್ಥಿ ತೂಪಲ್ಲಿ ಚೌಡರೆಡ್ಡಿ ಮನವಿ ಮಾಡಿದರು. -

Ashok Nayak Ashok Nayak Nov 1, 2025 3:14 PM

ಬಾಗೇಪಲ್ಲಿ: ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಆರಂಭವಾಗಿದ್ದು ಕೂಡಲೇ ಪದವೀಧರರು ಸೂಕ್ತ ದಾಖಲಾತಿಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಲು  ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಎನ್.ಡಿ.ಎ. ಸಂಭವನೀಯ ಅಭ್ಯರ್ಥಿ ತೋಪಲ್ಲಿ ಚೌಡರೆಡ್ಡಿ ಸಲಹೆ ನೀಡಿದರು.

ಪಕ್ಷದಿಂದ ಅಗತ್ಯ ಸಲಹೆ ಮಾರ್ಗದರ್ಶನ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡಿಸಿ ಕೊಂಡು ಪ್ರತಿಯೊಬ್ಬರೂ ನೋಂದಣಿ ಮಾಡಿಸುವಂತೆ  ಆಗ್ನೇಯ ಪದವೀಧರ ಕ್ಷೇತ್ರದ ಸಂಭವ ನೀಯ ಅಭ್ಯರ್ಥಿ ತೋಪಲ್ಲಿ ಚೌಡರೆಡ್ಡಿ ಶಿಕ್ಷಕರು ಹಾಗೂ ಪದವೀಧರರ ಮತದಾರರಲ್ಲಿ ಮನವಿ ಮಾಡಿದರು.

ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿ ಹಾಗೂ ಪದವೀಧರಿಗೆ ಅರ್ಜಿಗಳನ್ನು ವಿತರಿಸಿ ಮಾತನಾಡಿದ ಅವರು ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಯ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಮತ್ತು ದಾವಣಗೆರೆ (ಹರಿಹರ, ಜಗಳೂರು ದಾವಣಗೆರೆ ತಾಲ್ಲೂಕುಗಳು) ಐದು ಜಿಲ್ಲೆಗಳು ಒಳಪಟ್ಟಿದ್ದು ಮತದಾರರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಸಲುವಾಗಿ ಮತದಾರರರ ನೋಂದಣಿಗಾಗಿ ನಮೂನೆ ೧೮ ರಲ್ಲಿನ ಅರ್ಜಿಯನ್ನು ಭರ್ತಿಮಾಡಿ ನ.೬ ಒಳಗಾಗಿ ಸಂಬಂಧಪಟ್ಟ ತಾಲೂಕು ತಹಶಿಲ್ದಾರ್ ಕಛೇರಿಯಲ್ಲಿನ ಅಧಿಕಾರಿ ಗಳಿಗೆ ತಲುಪಿಸಲು ಮನವಿ ಮಾಡಿದರು.

ಇದನ್ನೂ ಓದಿ: Bagepally News: ಕಾಂಗ್ರೆಸ್ ಹಿರಿಯ ಮುಖಂಡ ಜಿ.ವಿ.ಬಾಬುರೆಡ್ಡಿ ಅಭಿಮಾನಿಗಳಿಂದ ಅನ್ನದಾನ ಹಾಗೂ ನುಡಿನಮನ ಕಾರ್ಯಕ್ರಮ

ಪದವೀಧರ ಕ್ಷೇತ್ರದ ಮತದಾರರರ ಪಟ್ಟಿಯನ್ನು ಪ್ರತಿ ಚುನಾವಣೆಯಲ್ಲಿ ಮೊದಲು ಹೊಸದಾಗಿ ತಯಾರಿಸಬೇಕಾಗಿದ್ದು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮತದಾರರರ ಪಟ್ಟಿಯಲ್ಲಿ ರುವ ಎಲ್ಲಾ ವ್ಯಕ್ತಿಗಳೂ ಸಹ ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬೇಕಾ ಗಿದೆ. ಮತದಾರರಾಗಿ ನೋಂದಣಿಯಾಗಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾ ಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಮತದಾರರರ ಪಟ್ಟಿಯಲ್ಲಿ ತನ್ನ ಹೆಸರು ಸೇರಿಸಲು ಅರ್ಹನಾಗಿರುತ್ತಾನೆ ಎಂದು ತಿಳಿಸಿದರು.

ಈ ಬಾರಿ ಸುಮಾರು ನಾಲ್ಕು ಲಕ್ಷ ಪದವೀಧರ ಮತದಾರರ ನೋಂದಣಿ ಗುರಿ ಹೊಂದಲಾಗಿದೆ ಅರ್ಹ ಪದವೀಧರ ವ್ಯಕ್ತಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಲು ನಿಗದಿತ ನಮೂನೆ-೧೮ರ ಅರ್ಜಿಯೊಂದಿಗೆ ಪದವಿ ಪ್ರಮಾಣ ಪತ್ರದ ಪ್ರತಿ, ಅಂಕ ಪಟ್ಟಿಯ ಪ್ರತಿಯನ್ನು ಸ್ವಯಂ ದೃಢೀಕರಿಸಿ ಮತ್ತು ಗೆಜೆಟೇಡ್ ಅಧಿಕಾರಿಗಳಿಂದ ದೃಢೀಕರಿಸಿ ಅಡಕದೊಂದಿಗೆ ಸಲ್ಲಿಸಬೇಕು ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು.

ಅಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ೨೦೨೬ ರ ಜೂನ್ ನಲ್ಲಿ ನಡೆಯಲಿದ್ದು ಬಹುತೇಕವಾಗಿ ಎನ್ ಡಿ.ಎ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಈಗಾಗಲೇ ಎನ್.ಡಿ.ಎ ಮಿತ್ರ ಪಕ್ಷಗಳಾದ ಜೆಡಿಎಸ್ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಬಿಜೆಪಿ ಪಕ್ಷದ ಜೆ.ಪಿ ನಡ್ಡಾ ಸೇರಿದಂತೆ ಎರಡು ಪಕ್ಷಗಳ ರಾಜ್ಯ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೇಳಲಾಗಿದೆ ಅವಕಾಶ ಕೊಡಲಿ ಬಿಡಲಿ ಅಂತಿಮವಾಗಿ ಕಣದಲ್ಲಿ ಇದ್ದೇ ಇರುತ್ತೇನೆ ಬೆಂಬಲಿಸು ವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸೂರ್ಯನಾರಾಯಣ ರೆಡ್ಡಿ ಪ್ರಾಥಮಿಕ, ಹಾಗೂ ಪ್ರೌಢಶಾಲಾ ಶಿಕ್ಷಕರು ನಿವೃತ್ತ ಶಿಕ್ಷಕರು ಪ್ರಾಧ್ಯಾಪಕರು ಹಾಗೂ ಪದವೀಧರರು ಹಾಜರಿದ್ದರು.