ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೋವಿಡ್ ಕಳ್ಳ ಎಂದು ಯಾರನ್ನು ಕರೆದರು ಎಂಬುದನ್ನು ಡಾ.ಕೆ.ಸುಧಾಕರ್ ಮರೆತಂತಿದೆ : ಡಾ.ಎಂ.ಸಿ,ಸುಧಾಕರ್ ವಾಗ್ದಾಳಿ

ನಂದಿ ಬೆಟ್ಟಕ್ಕೆ ರೋಪ್ ವೇ ಕೇವಲ ಘೋಷಣೆಯನ್ನು ಮಾತ್ರ ಮಾಡಿದ್ದರು. ಯಾವುದೇ ಇಲಾಖೆಯ ಮಂಜೂರಾತಿ ಪಡೆದಿರಲಿಲ್ಲ.ಕಳೆದ ಮೂರು ವರ್ಷಗಳಿಂದ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಕೈಗೊಂಡಿ ದ್ದೇವೆ. ಹೂ ಮಾರುಕಟ್ಟೆ,ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆ ಎಲ್ಲ ಆಡಳಿತಾತ್ಮಕ ಪ್ರಕ್ರಿಯೆ ಗಳನ್ನು ಕೈಗೊಂಡು ಹಣ ಮಂಜೂರಾತಿ ಮಾಡಿಸಿದ್ದು ನಾನು

ಕೋವಿಡ್ ಕಳ್ಳ ಎಂದು ಯಾರನ್ನು ಕರೆದರು ಎಂಬುದನ್ನು ಡಾ.ಕೆ.ಸುಧಾಕರ್ ಮರೆತಂತಿದೆ

-

Profile
Ashok Nayak Apr 14, 2026 11:19 PM

ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಎಂಆರ್‌ಐ ಯಂತ್ರ ಕೊಡಿಸಲಾಗದ ವ್ಯಕ್ತಿಗೆ ನನ್ನ ಬಗ್ಗೆ ಮಾತ ನಾಡುವ ಅರ್ಹತೆ ಇಲ್ಲ ಎಂದು ಟೀಕೆ

ಚಿಂತಾಮಣಿ: ಆರೋಗ್ಯ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಎಂ.ಅರ್.ಐ ಯಂತ್ರವನ್ನು ಕೊಡಿಸಲಾಗದ ವ್ಯಕ್ತಿಗೆ ನನ್ನ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡುವ ಅರ್ಹತೆ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್(Higher Education Minister Dr. M.C. Sudhakar) ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಕೆ ಸುಧಾಕರ್(K Sudhakar, MP from Chikkaballapur Lok Sabha constituency )ವಿರುದ್ಧ ವ್ಯಂಗ್ಯವಾಡಿದರು.

ತಾಲ್ಲೂಕಿನ ಕೋಟಗಲ್ ಗ್ರಾಮದಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ಕಂದಾಯ ಉಪಗ್ರಾಮಗಳ ರಚನೆ ಹಾಗೂ ಅನಧಿಕೃತ ಮನೆಗಳಿಗೆ ಶಾಶ್ವತ ಮಾಲೀಕತ್ವ ನೀಡುವ ಅಭಿಯಾನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಂಸದ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಸಚಿವರ ವಿರುದ್ಧ ಮಾಡಿದ್ದ ಆರೋಪಗಳನ್ನು ಪ್ರಸ್ತಾಪಿಸಿ, ನನ್ನ ಮುಖವಾಡ ಕಳಚುವುದಾಗಿ ತಿಳಿಸಿದ್ದಾರೆ.ನನಗಿರುವುದು ಒಂದೇ ಮುಖ,ಕೋವಿಡ್ ಕಾಲಘಟ್ಟದಲ್ಲಿ ಅವರ ವ್ಯಾಘ್ರಮುಖವನ್ನು ರಾಜ್ಯದ ಜನತೆ ಕಂಡಿದ್ದಾರೆ.

ಚಾಮರಾಜನಗರದಲ್ಲಿ 33 ಜನರು ಮೃತಪಟ್ಟಿದ್ದು ಅವರ ಗೋಮುಖ ವ್ಯಾಘ್ರ‍್ರದಿಂದಲೇ ಎಂದು ಅವರ ಪಕ್ಷದವರೇ ಕೋವಿಡ್ ಕಳ್ಳ ಎಂದು ಕರೆದಿದ್ದನ್ನು ಮರೆತು ಬಿಟ್ಟಿದ್ದಾರೆ ಪಾಪ ಎಂದು ವ್ಯಂಗ್ಯ ವಾಡಿದರು.

ಜಿಲ್ಲೆಯಲ್ಲಿ ಅವರು ಮಾಡಿದ್ದ ಯೋಜನೆಗಳಿಗೆ ನಾನು ಟೇಪ್ ಕಟ್ ಮಾಡುತ್ತಿದ್ದೇನೆ ಎಂದು ತಿಳಿಸಿರುವುದು ಬಾಯಿಚಪಲದ ಮಾತು.ವೈದ್ಯಕೀಯ ಕಾಲೇಜಿಗೆ ಹೆಚ್ಚುವರಿಯಾಗಿ ಖರ್ಚು ಮಾಡಿದ್ದ ಹಣವನ್ನು ಅಧಿಕೃತವಾಗಿ ಮಂಜೂರು ಮಾಡಿಸಿರಲಿಲ್ಲ. ನಾವು ಸಾಕಷ್ಟು ಹೆಣಗಾಡಿ ಮಂಜೂರು ಮಾಡಿಸಬೇಕಾಯಿತು.ಇದನ್ನು ತಿಳಿದು ಮಾತನಾಡಬೇಕು ಎಂದರು.

ನಂದಿ ಬೆಟ್ಟಕ್ಕೆ ರೋಪ್ ವೇ ಕೇವಲ ಘೋಷಣೆಯನ್ನು ಮಾತ್ರ ಮಾಡಿದ್ದರು. ಯಾವುದೇ ಇಲಾಖೆಯ ಮಂಜೂರಾತಿ ಪಡೆದಿರಲಿಲ್ಲ.ಕಳೆದ ಮೂರು ವರ್ಷಗಳಿಂದ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಕೈಗೊಂಡಿದ್ದೇವೆ.ಹೂ ಮಾರುಕಟ್ಟೆ,ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆ ಎಲ್ಲ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಕೈಗೊಂಡು ಹಣ ಮಂಜೂರಾತಿ ಮಾಡಿಸಿದ್ದು ನಾನು ಎಂದರು.

ಜAಗಮಕೋಟೆ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದರೆ ಸಾಲದು.ಅಲ್ಲಿಗೆ ಯಾವತ್ತದರೂ ಭೇಟಿ ನೀಡಿದ್ದಾರಾ, ಫಲವತ್ತಾದ ಭೂಮಿ ಎಷ್ಟಿದೆ ? ಕಂಪನಿಗಳಿಗೆ ಎಷ್ಟು ಭೂಮಿ ಮಾರಾಟವಾಗಿದೆ? ಸರ್ಕಾರಿ ಜಾಗ ಎಷ್ಟಿದೆ ಎಂಬ ಮಾಹಿತಿ ಇದೆಯೇ?ನಿಮ್ಮ ಕಾಲದಲ್ಲಿ ಒಂದಾದರೂ ಕೈಗಾರಿಕೆ ಯನ್ನು ಜಿಲ್ಲೆಗೆ ತಂದಿದ್ದೀರಾ? ಕಂದಾಯ ಇಲಾಖೆಯ ನೇತೃತ್ವದಲ್ಲಿ ಜಿಲ್ಲಾ ಕೇಂದ್ರದಲ್ಲಿ ರೈತರಿಗೆ ದಾಖಲೆಗಳನ್ನು ನೀಡುವ ಬೃಹತ್ ಆಂದೋಲನಾ ನಡೆಸಲಾಯಿತು.ಕನಿಷ್ಠ ಕಾರ್ಯಕ್ರಮಕ್ಕೂ ಬಾರದೆ ಬೆಂಗಳೂರಿನಲ್ಲಿ ಖಾಸಗಿ ವ್ಯವಹಾರಗಳಲ್ಲಿ ಮುಳುಗಿದ್ದೀರಿ.ನಿಮ್ಮ ಅವಧಿಯಲ್ಲಿ ಇಂತಹ ಒಂದಾದರೂ ಕೆಲಸ ಮಾಡಿದ್ದೀರಾ?ನೀವು ನನ್ನ ಬಗ್ಗೆ ಟೀಕೆ ಮಾಡುತ್ತಿರಾ ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.

ಯೋಜನೆಗಳನ್ನು ಘೋಷಣೆ ಮಾಡಿ ಪ್ರಚಾರ ಪಡೆಯುವುದು ಮುಖ್ಯವಲ್ಲ,ತಾರ್ಕಿಕವಾಗಿ ಅಂತ್ಯ ಕಾಣಬೇಕು.ಅಧಿಕೃತ ಸರ್ಕಾರಿ ಆದೇಶ,ಅನುದಾನ ಬಿಡುಗಡೆಯಾಗಬೇಕು,ಸ್ಥಳ ನೀಡಬೇಕು,ಟೆಂಡರ್ ಆಗಬೇಕು,ಅಂದಾಜುಪಟ್ಟಿ,ನಕ್ಷೆ ಅನುಮೋದನೆಯಾಗಿ ಕಾಮಗಾರಿ ಪ್ರಾರಂಭವಾಗಬೇಕು.ಕೈಗಾರಿಕಾ ಪ್ರಾಂಗಣಗಳ ಯೋಜನೆಯಲ್ಲಿ ಒಂದೇ ಒಂದು ಸೆ.ಮೀ ಜಾಗವನ್ನು ನಾನು ಪಡೆಯುವ ಯೋಚನೆ ಮಾಡಿಲ್ಲ. ಅಂತಹ ಯೋಚನೆಗಳು ನಿಮಗೆ ಸೀಮಿತ.ತಾತಕ್ಕಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.