Chikkaballapur News: ಪರಿಶಿಷ್ಟಜಾತಿಯ ಜಾತಿ ಸಮೀಕ್ಷೆಯ ವೇಳೆ ಯಾವುದೇ ಗೊಂದಲವಿಲ್ಲದೆ ಮಾದಿಗ ಎಂದೇ ನಮೂದಿಸಿ
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅಸ್ಪೃಶ್ಯರಿಗೆ ಮೀಸಲಾತಿ ಒದಗಿಸು ವಂತೆ ತಿಳಿಸಿದ್ದರೂ, ಕೆಲ ಸ್ಪೃಶ್ಯರನ್ನು ಮೀಸಲಾತಿ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದರಿಂದ ಉದ್ಯೋಗ ಸೇರಿ ದಂತೆ ಎಲ್ಲ ಕ್ಷೇತ್ರ ಮೀಸಲಾತಿ ಅವರ ಪಾಲಾಗುತ್ತಿದ್ದು, ಇದರಿಂದ ಸಮುದಾಯ ಇಂದಿಗೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿದೆ. ಆದ್ದರಿಂದ ಸಮುದಾಯದ ಏಳಿಗೆಗಾಗಿ ಒಳಮೀಸಲಾತಿ ಅಗತ್ಯವಾಗಿದೆ


ಚಿಕ್ಕಬಳ್ಳಾಪುರ: ಮೂರು ದಶಕಗಳ ಪ್ರತಿಫಲವಾಗಿ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಪರಿಶಿಷ್ಟಜಾತಿಯ ಜಾತಿ ಸಮೀಕ್ಷೆಯ ವೇಳೆ ಯಾವುದೇ ಗೊಂದಲವಿಲ್ಲದೆ ಮಾದಿಗ ಎಂದೇ ನಮೂದಿಸಿ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾದಿಗ ಸಮುದಾಯ ದವರಿಗೆ ಕರೆ ನೀಡಿದರು. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತ ನಾಡಿ, ಸಮೀಕ್ಷೆಯಲ್ಲಿ ಎ.ಕೆ, ಎ.ಡಿ ಹಾಗೂ ಆದಿ ಆಂಧ್ರ ಎಂಬುದು ಜಾತಿ ಸೂಚಕ ಪದಗಳಲ್ಲ ಎಂದು ಸರ್ಕಾರವೇ ಹೇಳಿದ್ದು, ಗಣತಿಗಾಗಿ ಜನಗಣತಿದಾರರು ನಿಮ್ಮಲ್ಲಿಗೆ ಬಂದಾಗ ಯಾವುದೇ ಗೊಂದಲಗಳಿಗೆ ಗುರಿಯಾಗದೆ ಕಾಲಮ್ ಸಂಖ್ಯೆ 61ರಲ್ಲಿ ಮಾದಿಗ ಎಂದು ನಮೂದಿಸುವಂತೆ ಮನವಿ ಮಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅಸ್ಪೃಶ್ಯರಿಗೆ ಮೀಸಲಾತಿ ಒದಗಿಸು ವಂತೆ ತಿಳಿಸಿದ್ದರೂ, ಕೆಲ ಸ್ಪೃಶ್ಯರನ್ನು ಮೀಸಲಾತಿ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದರಿಂದ ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರ ಮೀಸಲಾತಿ ಅವರ ಪಾಲಾಗುತ್ತಿದ್ದು, ಇದರಿಂದ ಸಮುದಾಯ ಇಂದಿಗೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿದೆ. ಆದ್ದರಿಂದ ಸಮುದಾಯದ ಏಳಿಗೆಗಾಗಿ ಒಳಮೀಸಲಾತಿ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Chikkaballapur News: ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದ ನೀಟ್ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ
ಸಮುದಾಯದಲ್ಲಿ ಮಾದಾರ, ಹರಳಪ್ಪ, ಚಮ್ಮಾರ, ಆದಿಜಾಂಬವ ಸೇರಿ 49-50 ಉಪಜಾತಿಗಳಿದ್ದು, ಅವರೆಲ್ಲರೂ ಮಾದಿಗ ಎಂದೇ ನಮೂದಿಸಬೇಕು. ಸಮುದಾಯದದಲ್ಲಿ ಅನಕ್ಷರಸ್ಥರು ಹೆಚ್ಚಾಗಿ ರುವುದರಿಂದ ಮುಖಂಡರು ತಮ್ಮ ಒಣಪ್ರತಿಷ್ಟೆಗಳನ್ನು ಬದಿಗಿಟ್ಟು ಸಮೀಕ್ಷೆಯ ಕುರಿತು ಜಾಗೃತಿ ಮೂಡಿಸಬೇಕು. ಅಲ್ಲದೆ ಖುದ್ದು ಸಮೀಕ್ಷೆಯಲ್ಲಿ ಪಾಲ್ಗೊಂಡು ಸಮುದಾಯದವರನ್ನು ಮಾದಿಗ ಎಂದು ನಮೂದಿಸುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಜಾತಿ ಜನಗಣತಿಯ ವೇಳೆ ಹಲವು ತಾಂತ್ರಿಕ ಸಮಸ್ಯೆಗಳು ಕಂಡು ಬರುತ್ತಿವೆ. ಕೆಲ ಪ್ರದೇಶಗಳ ಹೆಸರು ಮತ್ತು ಮಾಹಿತಿ ಜನಗಣತಿದಾರರ ಮೊಬೈಲ್ ಆ್ಯಪ್‌ನಲ್ಲಿ ತೋರಿಸುತ್ತಿಲ್ಲ. ಸರ್ವರ್ ಸಮಸ್ಯೆ ಎದುರಾಗಿದ್ದು, ಒಂದು ಕುಟುಂಬದ ಮಾಹಿತಿ ಭರ್ತಿ ಮಾಡಲು ಕನಿಷ್ಟ ೪೫ ನಿಮಿಷ ಬೇಕಾಗಿದೆ. ಈ ಕೂಡಲೇ ಸಮಸ್ಯೆ ಸರಿಪಡಿಸಬೇಕಿದೆ. ನಿಗಧಿತ ಕಾಲಾವಧಿಯಲ್ಲಿ ಜಾತಿ ಜನಗಣತಿ ಪೂರ್ಣಗೊಳ್ಳದಿದ್ದಲ್ಲಿ, ಸಮೀಕ್ಷೆಯ ಅವಧಿಯನ್ನು ವಿಸ್ತರಿಸಲು ಸರ್ಕಾರವನ್ನು ಒತ್ತಾಯಿಸ ಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಬಾಲಕುಂಟಹಳ್ಳಿ ಗಂಗಾಧರ್, ದೇವರಾಜ್, ಮಂಜುನಾಥ್, ರಾಮು, ತಿರುಮಳಪ್ಪ, ಕೃಷ್ಣಮೂರ್ತಿ, ಗಂಗಾಧರ್, ಮುನಿಯಪ್ಪ, ಶ್ಯಾಮ್ ರಾಜ್, ಈರಚಿನ್ನಪ್ಪ ಇದ್ದರು.