Chief Justice Vibhubakru: ಪರಿಸರ ಸಂರಕ್ಷಣೆ ಸಮುದಾಯದ ಅಸ್ತಿತ್ವಕ್ಕೆ ಅತ್ಯಾವಶ್ಯಕ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅಭಿಮತ
ಪರಿಸರ ಸಂರಕ್ಷಣೆಯು ಕೇವಲ ಇಂದಿನ ಮಹತ್ವಕಾಂಕ್ಷಿ ಅಪೇಕ್ಷೆಯಾಗಿರದೆ ಅದು ಸಮಾಜದ ಹಾಗೂ ಸಮುದಾಯದ ಅಸ್ತಿತ್ವಕ್ಕೆ ಮೂಲಭೂತ ಅವಶ್ಯಕತೆಯಾಗಿದೆಯೆಂದು ಹೇಳಿದರು. ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರವು ಇತರ ಎಲ್ಲಾ ಸಮಾಜಮುಖಿ ಸಂಸ್ಥೆಗಳೊಂದಿಗೆ ಈ ಕಾರ್ಯಕ್ರಮ] ಹಮ್ಮಿಕೊಂಡಿದ್ದು ಈ ಸಮಾಜಮುಖಿ ಕಾರ್ಯಕ್ರಮವನ್ನು ಹೃದಯ ಪೂರ್ವಕವಾಗಿ ಶ್ಲಾಘಿಸುವುದಾಗಿ ತಿಳಿಸಿದರು
ಐದು ಕೊಟಿಗೂ ಹೆಚ್ಚು ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನನಗೆ ಅತ್ಯಂತ ಸಂತೋಷವಾಗುತ್ತಿದೆ ಮತ್ತು ಇದು ನನಗೆ ಸಂದಿರುವ ಸೌಭಾಗ್ಯ ಎಂದು ರಾಜ್ಯ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭುಬಕ್ರು ಅಭಿಪ್ರಾಯಪಟ್ಟರು. -
ಚಿಕ್ಕಬಳ್ಳಾಪುರ: ಐದು ಕೊಟಿಗೂ ಹೆಚ್ಚು ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನನಗೆ ಅತ್ಯಂತ ಸಂತೋಷವಾಗುತ್ತಿದೆ ಮತ್ತು ಇದು ನನಗೆ ಸಂದಿರುವ ಸೌಭಾಗ್ಯ ಎಂದು ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭುಬಕ್ರು(Chief Justice of the State High Court, Vibhubakru) ಹೇಳಿದರು.
ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಸಸಿ ನೆಡುವ ಮೂಲಕ ಐದು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಸಿ ನೆಡುವ ಕಾರ್ಯಕ್ರಮವನ್ನು ಕರ್ನಾಟಕ ಉಚ್ಛ ನ್ಯಾಯಾಲಯ(Karnataka High Court), ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(Karnataka State Legal Services Authority), ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ(Chikkaballapur District Legal Services Authority), ಚಿಕ್ಕಬಳ್ಳಾಪುರ ಜಿಲ್ಲಾ ವಕೀಲರ ಸಂಘ, ಪ್ರಶಾಂತಿ ಬಾಲಮಂದಿರ ವಿಶ್ವಸ್ಥ ಮಂಡಳಿ, ವಂದೇ ಭಾರತ್ ಪ್ರತಿಷ್ಠಾನ ಮತ್ತು ದರೆ ಪ್ರತಿಷ್ಠಾನಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದು,ಈ ಎಲ್ಲಾ ಸಂಸ್ಥೆಗಳು ಹಮ್ಮಿಗೊಂಡಿರುವ ಈ ಮಹತ್ವಪೂರ್ಣ ಹಾಗೂ ಪವಿತ್ರ ಕಾರ್ಯಕ್ರಮವು ಸಮಾಜಕ್ಕೆ ಬಹಳ ಅತ್ಯಂತ ಪ್ರಯೋಜನಕಾರಿಯೆಂದು ಅಭಿಪ್ರಾಯ ಪಟ್ಟರು.
ಇದನ್ನೂ ಓದಿ: Chikkaballapur News: ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಜೂ.15ರಂದು ಬೃಹತ್ ಕಾಲ್ನಡಿಗೆ ಜಾಥಾ: ಕೆ.ಸಿ.ರಾಜಕಾಂತ್ ಹೇಳಿಕೆ
ಪರಿಸರ ಸಂರಕ್ಷಣೆಯು ಕೇವಲ ಇಂದಿನ ಮಹತ್ವಕಾಂಕ್ಷಿ ಅಪೇಕ್ಷೆಯಾಗಿರದೆ ಅದು ಸಮಾಜದ ಹಾಗೂ ಸಮುದಾಯದ ಅಸ್ತಿತ್ವಕ್ಕೆ ಮೂಲಭೂತ ಅವಶ್ಯಕತೆಯಾಗಿದೆಯೆಂದು ಹೇಳಿದರು. ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರವು ಇತರ ಎಲ್ಲಾ ಸಮಾಜಮುಖಿ ಸಂಸ್ಥೆಗಳೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಸಮಾಜಮುಖಿ ಕಾರ್ಯಕ್ರಮವನ್ನು ಹೃದಯ ಪೂರ್ವಕವಾಗಿ ಶ್ಲಾಘಿಸುವುದಾಗಿ ತಿಳಿಸಿದರು.
ವಾತಾವರಣದಲ್ಲಿನ ಬದಲಾವಣೆ, ನೈಸರ್ಗಿಕ ಸಂಪತ್ತಿನ ಇಳಿಕೆ ಹಾಗೂ ದಿನೇ ದಿನೇ ಹೆಚ್ಚುತ್ತಿರುವ ಜಲಕ್ಷಾಮಗಳು ಮುಂದಿನ ಪೀಳಿಗೆಗೆ ಒಂದು ಸವಾಲಾಗಿ ಪರಿಣಮಿಸುತ್ತವೆಯೆಂದು ಅಭಿಪ್ರಾಯ ಪಟ್ಟ ಅವರು ಈ ಎಲ್ಲಾ ಕೊರತೆಗಳನ್ನು ನೀಗಿಸುವಲ್ಲಿ ಸರ್ಕಾರದ ಕ್ರಮಗಳಷ್ಟೇ ಸಾಲದೆಂದು ಇದರಲ್ಲಿ ಜನತೆ ಸಹ ಕ್ರಿಯಾಶೀಲರಾಗಿ ಪಾಲ್ಗೊಳ್ಳುವ ಅಗತ್ಯವಿದೆಯೆಂದು ಹೇಳಿದರು.
ಗಾಳಿ, ನೀರು ಹಾಗೂ ಅರಣ್ಯ ಸಂಪತ್ತು ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಜೀವಿಗಳ ಅಸ್ತಿತ್ವಕ್ಕೆ ಗಾಳಿ, ನೀರು ಮತ್ತು ಜೈವಿಕ ವೈವಿಧ್ಯತೆಯು ಅತ್ಯಾ ವಶ್ಯಕವಷ್ಟೇ ಅಲ್ಲದೆ ಅದೇ ಬದುಕಿನ ಆಧಾರಸ್ಥಂಬವೆಂದು ತಿಳಿಸಿದರು.
ಭಾರತ ಹಾಗೂ ಇಡೀ ವಿಶ್ವವು ಹೆಚ್ಚುತ್ತಿರುವ ತಾಪಮಾನ, ಅಕಾಲಿಕ ಹಾಗೂ ಅನಿಯಮಿತ ಮಳೆ ಮತ್ತು ಅಂತರ್ಜಲ ಪ್ರಮಾಣದ ಇಳಿಕೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದನ್ನು ಸುಧಾರಿಸ ದಿದ್ದಲ್ಲಿ ಮುಂದಿನ ಪೀಳಿಗೆಗೆ ಇದು ಬೃಹತ್ ಸಮಸ್ಯೆಯಾಗಲಿದೆಯೆಂದು ಎಚ್ಚರಿಕೆ ನೀಡಿದರು.
ಹವಾಮಾನ ಬದಲಾವಣೆಗಳು ಮತ್ತು ಪರಿಸರ ಅಸಮತೋಲನವನ್ನು ಕೇವಲ ವೈಜ್ಞಾನಿಕ ವೇದಿಕೆಗಳಲ್ಲಷ್ಟೇ ಚರ್ಚಿಸುತ್ತಿದ್ದು ಇದನ್ನು ಎಲ್ಲಾ ಹಂತಗಳಲ್ಲಿ ಸಮಗ್ರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು.
ಪರಿಸರ ಸಂರಕ್ಷಣೆಯು ಕೇವಲ ಪರಿಸರದ ಸಮತೋಲನ ಕಾಪಾಡುವಷ್ಟೇ ಅಲ್ಲದೆ ಅದು ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯ ಪ್ರತೀಕವಾಗಿದೆ. ಸುಮಾರು ಐದು ಕೋಟಿಗಳಷ್ಟು ಸಸಿಗಳನ್ನು ನೆಡುವ ಕಾರ್ಯಕ್ರಮವು ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮವಷ್ಟೇ ಅಲ್ಲದೆ ಅತ್ಯಂತ ಸೂಕ್ಷಾವಲೋಕನ ಮತ್ತು ಮುಂದಾಲೋಚನೆಯ ಕ್ರಮವಾಗಿದೆ. ಪರಿಸರ ಸಮತೋಲನ ವು ಕೃಷಿ ಚಟುವಟಿಕೆಗಳು ಹಾಗೂ ಆರ್ಥಿಕ ಸ್ಥಿರತೆಯನ್ನು ಖಾತ್ರಿ ಪಡಿಸುತ್ತದೆ ಯೆಂದು ಅವರು ಅಭಿಪ್ರಾಯಪಟ್ಟರು. ಈ ಸುಸಂದರ್ಭದಲ್ಲಿ ನೆಡುತ್ತಿರುವ ಪ್ರತಿಯೊಂದು ಸಸಿಯೂ ಸಹ ಮುಂದಿನ ಪೀಳಿಗೆಗೆ ಒಂದು ಆಸ್ತಿಯಾಗಿ ಪರಿಣಮಿಸುತ್ತದೆಯೆಂದು ಮುಖ್ಯ ನ್ಯಾಯ ಮೂರ್ತಿಯವರು ತಿಳಿಸಿದರು.
ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆ, ಹಸಿರು ಅಭಿವೃದ್ಧಿ ಮತ್ತು ಆರೋಗ್ಯಕರ ಜೀವನಶೈಲಿಗೆ ಸಸಿ ನೆಡುವಿಕೆ ಹಾಗೂ ಸಾವಯವ ಕೃಷಿಯ ಮಹತ್ವ ದಿನದಿಂದ ದಿನಕ್ಕೆ ಅನಿವಾರ್ಯವಾಗುತ್ತಿದೆ. ಅರಣ್ಯ ನಾಶ, ಹವಾಮಾನ ಬದಲಾವಣೆ ಮತ್ತು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸಲು ಹೆಚ್ಚಿನ ಪ್ರಮಾಣದಲ್ಲಿ ಸಸಿ ನೆಡುವುದು ಅಗತ್ಯ ಹಾಗೂ ನೆಟ್ಟ ಸಸಿಗಳನ್ನು ಸಮರ್ಪಕವಾಗಿ ಆರೈಕೆ ಮಾಡಿದಾಗ ಮಾತ್ರ ಪರಿಸರ ಸಂರಕ್ಷಣೆಯ ಗುರಿ ಯಶಸ್ವಿಯಾಗುತ್ತದೆ ಎಂದರು.
ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ ಅಲ್ಲದೆ ಕ್ಯಾನ್ಸರ್ ನಂತಹ ಅನೇಕ ಮಾರಕ ರೋಗಗಳ ಹೆಚ್ಚಳಕ್ಕೆ ಕಾರಣ ವಾಗುತ್ತಿದೆ. ನೈಸರ್ಗಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಸುಧಾರಿಸಿ, ಸುರಕ್ಷಿತ ಮತ್ತು ಪೌಷ್ಟಿಕ ಆಹಾರ ಉತ್ಪಾದನೆ ಸಾಧ್ಯವಾಗುತ್ತದೆ. ಪರಿಸರ= ಕಾಪಾಡುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನು ನೆಟ್ಟು ಬೆಳೆಸುವುದು, ನೀರು ಮತ್ತು ಪ್ರಕೃತಿ ಸಂಪನ್ಮೂಲಗಳನ್ನು ಮಿತವಾಗಿ ಬಳಸುವುದು ಹಾಗೂ ಸಾವಯವ ಕೃಷಿಯನ್ನು ಉತ್ತೇಜಿಸುವ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛ ಮತ್ತು ಹಸಿರು ಪರಿಸರವನ್ನು ಉಳಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀಮತಿ ಅನು ಶಿವರಾಮನ್, ರಾಜ್ಯದ ಉಚ್ಛ ನ್ಯಾಯಾಲಯದ ಪ್ರಧಂಧಕ ಎಂ. ಚಂದ್ರಶೇಖರ ರೆಡ್ಡಿ, ಚಿಕ್ಕ ಬಳ್ಳಾಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಟಿ.ಪಿ ರಾಮಲಿಂಗೇಗೌಡ, ಪ್ರಶಾಂತಿ ಬಾಲಮಂದಿರ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಡಾ.ಬಿ.ಎನ್.ನರಸಿಂಹಮೂರ್ತಿ,
ಜಿಲ್ಲಾ ನ್ಯಾಯಾಧೀಶರು, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರಶೆಟ್ಟಿ, ದರೆ ಪ್ರತಿಷ್ಠಾನದ ನಿರ್ದೇಶಕ ಡಿ.ಎಂ.ಪೂರ್ಣೇಶ್ ಮತ್ತು ವಂದೇಭಾರತಂ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ಎಚ್. ಲೋಕೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಅಭಿಲಾಷ್ ಸೇರಿದಂತೆ ವಕೀಲರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.