ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಪ್ರಕೃತಿಯ ಎದುರು ಎಲ್ಲರೂ ಅನಾಥರೇ, ವಾಸ್ತವ ಅರಿತು ಭವಿಷ್ಯ ರೂಪಿಸಿಕೊಳ್ಳಿ: ಜಿಲ್ಲಾಧಿಕಾರಿ ಜಿ.ಪ್ರಭು ಹೇಳಿಕೆ

ಕೋವಿಡ್ ಸಾಂಕ್ರಾಮಿಕದಂತಹ ಪ್ರಾಕೃತಿಕ ದಾಳಿಗೆ ಸಿಕ್ಕಿ ಜಿಲ್ಲೆಯಲ್ಲಿ 16 ಮಕ್ಕಳು ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥರಾಗಿದ್ದರು. ಈ ಪೈಕಿ ಪ್ರಸ್ತುತ 9 ಮಕ್ಕಳು ಪಿ.ಎಂ. ಪೋಷಣ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯಡಿ ನೊಂದಾಯಿತರಾದ 18 ವರ್ಷದೊಳಗಿನ ಮಕ್ಕಳಿಗೆ ಜಿಲ್ಲಾಧಿಕಾರಿಗಳು ಹಾಗೂ ಫಲಾನು ಭವಿಯ ಹೆಸರಲ್ಲಿ ಜಂಟಿ ಖಾತೆಯನ್ನು ತೆರೆಯಲಾಗಿರುತ್ತದೆ

ಪ್ರಕೃತಿಯ ಎದುರು ಎಲ್ಲರೂ ಅನಾಥರೇ, ವಾಸ್ತವ ಅರಿತು ಭವಿಷ್ಯ ರೂಪಿಸಿಕೊಳ್ಳಿ

ಪ್ರಕೃತಿಯ ಎದುರು ಎಲ್ಲರೂ ಅನಾಥರೇ : ವಾಸ್ತವ ಅರಿತು ಸರಕಾರಿ ಸೌಲಭ್ಯ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಹೇಳಿದರು. -

Profile
Ashok Nayak Jun 3, 2026 8:15 PM

ಚಿಕ್ಕಬಳ್ಳಾಪುರ: ಕೋವಿಡ್-19 ಸಾಂಕ್ರಾಮಿಕದಿಂದ ತಂದೆ ತಾಯಿಯನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಧನ ಸಹಾಯ ಸೇರಿದಂತೆ ಹಲವು ಸೌಕರ್ಯಗಳನ್ನು ಸರಕಾರಗಳು ಒದಗಿಸುತ್ತಿವೆ. ಇವುಗಳ ಸದುಪಯೋಗ ಪಡೆದು ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಕರೆ ನೀಡಿದರು.

ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಪಿ.ಎಂ.ಕೇರ್ಸ್ ಯೋಜನೆಯಡಿ ದಾಖಲಾದ ಪೋಷಕ ರಹಿತ ಮಕ್ಕಳ ಅನುಪಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ಸಾಂಕ್ರಾಮಿಕದಂತಹ ಪ್ರಾಕೃತಿಕ ದಾಳಿಗೆ ಸಿಕ್ಕಿ ಜಿಲ್ಲೆಯಲ್ಲಿ 16 ಮಕ್ಕಳು ತಂದೆತಾಯಿಗಳನ್ನು ಕಳೆದುಕೊಂಡು ಅನಾಥರಾಗಿದ್ದರು. ಈ ಪೈಕಿ ಪ್ರಸ್ತುತ 9 ಮಕ್ಕಳು ಪಿ.ಎಂ. ಪೋಷಣ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯಡಿ ನೊಂದಾಯಿತರಾದ 18 ವರ್ಷದೊಳಗಿನ ಮಕ್ಕಳಿಗೆ ಜಿಲ್ಲಾಧಿಕಾರಿಗಳು ಹಾಗೂ ಫಲಾನು ಭವಿಯ ಹೆಸರಲ್ಲಿ ಜಂಟಿ ಖಾತೆಯನ್ನು ತೆರೆಯಲಾಗಿರುತ್ತದೆ ಎಂದರು.

ಇದನ್ನೂ ಓದಿ: Chikkaballapur News: ಮೊಬೈಲ್ ಮೋಹಕ್ಕೆ ಒಳಗಾದವರಿಗೆ ಖಂಡಿತವಾಗಿ ಭವಿಷ್ಯವಿಲ್ಲ: ಪ್ರೊ.ಡಾ.ಶಂಕರ್ ಅಭಿಮತ

ಸರ್ಕಾರದ ಮಾರ್ಗಸೂಚಿಯಂತೆ ವಯಸ್ಸಿಗೆ ಅನುಗುಣವಾಗಿ ಕನಿಷ್ಠ ರೂ.3,58,621ರಿಂದ ರೂ. 10 ಲಕ್ಷಗಳ ವರೆಗೆ ಅಂಚೆ ಕಚೇರಿಯಲ್ಲಿನ ಮಕ್ಕಳ ವೈಯಕ್ತಿಕ ಖಾತೆಗೆ ಜಮೆ ಯಾಗಿರು ತ್ತದೆ. ಈ ಅನುದಾನವನ್ನು ಪ್ರಧಾನ ಮಂತ್ರಿ ಪೋಷಣ್ ಅಭಿಯಾನದ ಫಲಾನು ಭವಿ ಮಗುವಿಗೆ 23 ವರ್ಷ ಪೂರ್ಣಗೊಂಡ ನಂತರ ಪಡೆಯಬಹುದಾಗಿದೆ. ಪ್ರತಿ ಮಗುವಿಗೆ 18 ವರ್ಷ ಪೂರ್ಣವಾದ ತಕ್ಷಣ 10 ಲಕ್ಷಗಳು ಈ ಯೋಜನೆಯಡಿ ಜಮೆಯಾಗಲಿದೆ ಎಂದರು.

5 ಲಕ್ಷ ವಿಮೆ ಸೌಲಭ್ಯ!!
ಸದರಿ ಅನುದಾನಕ್ಕೆ ಮಾಸಿಕ ರೂ. 5000 ಗಳ ಬಡ್ಡಿ ಹಣವನ್ನು ಹಿಂಪಡೆಯಬಹುದಾಗಿದೆ. 1ನೇ ತರಗತಿಯಿಂದ 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಜಿಲ್ಲೆಯ 8 ಮಕ್ಕಳಿಗೆ ವಾರ್ಷಿಕ ರೂ. 20000 ವಿದ್ಯಾರ್ಥಿ ವೇತನ ಜಮೆಯಾಗುತ್ತಿದೆ ಹಾಗೂ ಈ ಯೋಜನೆಯಡಿ 18 ವರ್ಷದೊಳಗಿನ ಎಲ್ಲ ತಂದೆತಾಯಿಯಿಲ್ಲದ ಮಕ್ಕಳಿಗೆ ಪ್ರಯೋಜ ಕತ್ವ ಕಾರ್ಯಕ್ರಮದಡಿ ಮಾಹೆಯಾನ ರೂ.4000 ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ 3500 ರೂ.ಗಳ ಹಣವನ್ನು ಮಕ್ಕಳ ವಿದ್ಯಾಭ್ಯಾಸ ಹಾಗೂ ಪಾಲನೆ ಹಿತದೃಷ್ಠಿಯಿಂದ ನೀಡಲಾಗುತ್ತಿದೆ. ಅಲ್ಲದೆ ಪಿ.ಎಂ. ಜನ್ ಧನ್ ಯೋಜನೆ ಯಡಿ ರೂ. 5 ಲಕ್ಷಗಳವರೆಗೆ ವೈದ್ಯಕೀಯ ವಿಮೆಯ ಸೌಲಭ್ಯವನ್ನು ನೀಡಲಾಗುತ್ತಿದೆ. ಒಟ್ಟಾರೆ ಸರ್ಕಾರ ಒದಗಿಸುವ ಈ ಎಲ್ಲ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಅರಿವು ಮೂಡಿಸಿ!!
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ತಿಳಿಸಿ ಅರಿವು ಮೂಡಿಸಲು ಯೋಜಿತ ರೀತಿಯಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದರು.

ಪ್ರತಿ ಶಾಲೆಗೆ ಯಾವ ದಿನಾಂಕ ಅರಿವು ನೀಡಲಾಗುತ್ತದೆ ಎಂಬುದನ್ನು ಶಾಲಾವಾರು ಹಾಗೂ ತಾಲ್ಲೂಕುವಾರು ಪಟ್ಟಿ ಮಾಡಿ ಕರಾರುವಕ್ಕಾಗಿ ಅರಿವು ಮೂಡಿಸುವ ಮೂಲಕ ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಕಟ್ಟುನಿಟ್ಟಿನ ಸೂಚನೆಗಳನ್ನು ಜಿಲ್ಲಾಧಿಕಾರಿಗಳು ನೀಡಿದರು.

ಮೆಚ್ಚುಗೆ!!
ಕೋವಿಡ್ ಸಾಂಕ್ರಾಮಿಕದಿಂದ ಅನಾಥರಾದ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರದಿಂದ ಭರಿಸಲು ಹಾಗೂ ವಿಶೇಷ ಪ್ರಕರಣದಡಿ ಜಿಲ್ಲೆಯ ವಸತಿ ನಿಲಯಗಳಲ್ಲಿ ಅವಕಾಶ ಕಲ್ಪಿಸಲು ಜಿಲ್ಲಾಧಿಕಾರಿಗಳು ಸ್ಥಳದಲ್ಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿ ಮಕ್ಕಳಿಂದ ಜಿಲ್ಲಾಧಿಕಾರಿಗಳು ಮೆಚ್ಚುಗೆಗೆ ಪಾತ್ರರಾದರು. ಈ ವೇಳೆ ಮಕ್ಕಳೊಂದಿಗೆ ಗುಂಪು ಚಿತ್ರಕ್ಕೆ ಸೆರೆಯಾಗಿ ನಿಮ್ಮೊಂದಿಗೆ ನಾವಿದ್ದೇವೆ ಏನೇ ಸಮಸ್ಯೆ ಬಂದರೂ ನಮ್ಮನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಮಕ್ಕಳಿಗೆ ತಿಳಿ ಹೇಳಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೌತಾಜ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ ಸೇರಿದಂತೆ ವಿವಿಧ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿ ಗಳು, ಸಿಬ್ಬಂದಿ ಹಾಗೂ ಮಕ್ಕಳು ಹಾಜರಿದ್ದರು.