Chikkaballapur News: ಕಾರ್ಮಿಕರು ತಮ್ಮ ಶ್ರಮದ ಹಣವನ್ನು ದುಂದುವೆಚ್ಚಗಳಿಗೆ ಬಳಸಿದರೆ ಭವಿಷ್ಯ ಮಂಕಾಗಲಿದೆ: ನ್ಯಾ.ಟಿ.ಪಿ.ರಾಮಲಿಂಗೇಗೌಡ ಆತಂಕ
ಸಮಯದ ಅರಿವಿಲ್ಲದೆ ದುಡಿಯುವ ಕಾರ್ಮಿಕರು ಜಾಣರಾಗಬೇಕು. ಜಾಗರೂಕರಾಗಿ ಬದುಕು ಕಟ್ಟಿ ಕೊಳ್ಳಬೇಕು. ಅದನ್ನು ಬಿಟ್ಟು ಮೊಬೈಲ್ ಹಾಗೂ ಇತರ ವಿಲಾಸಿ ವಸ್ತುಗಳ ಖರೀದಿಯಂತಹ ದುಂದು ವೆಚ್ಚಗಳಿಗೆ ಬಹುತೇಕ ಸಂಬಳವನ್ನು ಬಳಕೆ ಮಾಡದೆ, ಅಗತ್ಯಕ್ಕೆ ತಕ್ಕಂತೆ ಬಳಸಿ ಉಳಿಸುವ ಮೂಲಕ ಮಕ್ಕಳ ಭವಿಷ್ಯದತ್ತ ಗಮನ ಹರಿಸಬೇಕಿದೆ
ಕಾರ್ಮಿಕರು ತಮ್ಮ ಶ್ರಮದ ಹಣವನ್ನು ದುಂದುವೆಚ್ಚಗಳಿಗೆ ಬಳಸಿದರೆ ಭವಿಷ್ಯ ಮಂಕಾಗಲಿದೆ ಎಂದು ನ್ಯಾ. ಟಿ.ಪಿ.ರಾಮಲಿಂಗೇಗೌಡ ಆತಂಕ ವ್ಯಕ್ತಪಡಿಸಿದರು. -
ಚಿಕ್ಕಬಳ್ಳಾಪುರ : ಕಾರ್ಮಿಕರು ಬೆವರು ಹರಿಸಿ ದುಡಿದ ಹಣವನ್ನು ದುಂದು ವೆಚ್ಚಗಳಿಗೆ ಬಳಸುವು ದರಿಂದ ಭವಿಷ್ಯ ಮಂಕಾಗಲಿದೆ.ಅಭದ್ರತೆಯ ಬದುಕಿಗೆ ಭದ್ರತೆ ಕಾಣಬೇಕಾದರೆ ಉಳಿತಾಯದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಪಿ. ರಾಮಲಿಂಗೇಗೌಡ(Justice T.P. Ramalingegowda) ಕಾರ್ಮಿಕರಲ್ಲಿ ಮನವಿ ಮಾಡಿದರು.
ನಗರದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದ ಟೈಟಾನ್ ಕಂಪನಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಟೈಟಾನ್ ಕಂಪನಿ, ಚಿಕ್ಕಬಳ್ಳಾ ಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಯದ ಅರಿವಿಲ್ಲದೆ ದುಡಿಯುವ ಕಾರ್ಮಿಕರು ಜಾಣರಾಗಬೇಕು. ಜಾಗರೂಕರಾಗಿ ಬದುಕು ಕಟ್ಟಿಕೊಳ್ಳಬೇಕು. ಅದನ್ನು ಬಿಟ್ಟು ಮೊಬೈಲ್ ಹಾಗೂ ಇತರ ವಿಲಾಸಿ ವಸ್ತುಗಳ ಖರೀದಿಯಂತಹ ದುಂದು ವೆಚ್ಚಗಳಿಗೆ ಬಹುತೇಕ ಸಂಬಳವನ್ನು ಬಳಕೆ ಮಾಡದೆ, ಅಗತ್ಯಕ್ಕೆ ತಕ್ಕಂತೆ ಬಳಸಿ ಉಳಿಸುವ ಮೂಲಕ ಮಕ್ಕಳ ಭವಿಷ್ಯದತ್ತ ಗಮನ ಹರಿಸಬೇಕಿದೆ ಎಂದರು.
ಇದನ್ನೂ ಓದಿ: Chikkaballapur News: ಸಮಾಧಾನ ರಾಜೀ ಮೂಲಕ ನ್ಯಾಯದಾನ ಸಕಾಲದಲ್ಲಿ ಕಾನೂನಿನ ಉಚಿತ ನೆರವು: ನ್ಯಾ. ಶಿಲ್ಪ.ಬಿ.
ಕಾರ್ಮಿಕ ದಿನದ ಮಹತ್ವದ ಕುರಿತು ಮಾತನಾಡಿದ ಅವರು 1889ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಕಾರ್ಮಿಕ ನಾಯಕರ ಸಭೆಯಲ್ಲಿ ತೀರ್ಮಾನ ಆದಂತೆ ಮೇ 1ನೇ ತಾರೀಕನ್ನು ಕಾರ್ಮಿಕರ ದಿನಾ ಚರಣೆ ಎಂದು ವಿಶ್ವ ಸಂಸ್ಥೆ ಘೋಷಿಸಿತು. ಅಲ್ಲಿಂದ ಈ ದಿನಾಚರಣೆಯನ್ನು ಭಾರತದಲ್ಲಿ ಆಚರಿಸುತ್ತಾ ಬರಲಾಗಿದೆ ಎಂದು ತಿಳಿಸಿದರು.
ಕಾರ್ಮಿಕರಿಗೆ ದೊರೆಯಬೇಕಾದ ಮೂಲಸೌಕರ್ಯಗಳನ್ನು ಹಾಗೂ ಕಾನೂನು ರೀತ್ಯಾ ಸಿಗಬೇಕಾದ ಸೌಲಭ್ಯಗಳನ್ನು ಜಾಗೃತರಾಗುವ ಮೂಲಕ ಪಡೆದುಕೊಳ್ಳಬೇಕು. ಅದೇ ರೀತಿ, ಕಾರ್ಮಿಕರು ನಿರ್ವಹಿಸಬೇಕಾದ ಕರ್ತವ್ಯಗಳು ಹಾಗೂ ಸುರಕ್ಷಾ ಕ್ರಮಗಳನ್ನು ಕೆಲಸದ ಸ್ಥಳದಲ್ಲಿ ಕಡ್ಡಾಯ ವಾಗಿ ಪಾಲಿಸಬೇಕು. ಕಾರ್ಮಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳವ ಈ ನಿಟ್ಟಿನಲ್ಲಿ ಉದ್ಯೋಗ ದಾತ ಸಂಸ್ಥೆಗಳು ಹೆಚ್ಚಿನ ಗಮನ ಹರಿಸಬೇಕು. ಈಗಿನ ಕಾಲದಲ್ಲಿ ಕಾರ್ಮಿಕರು ಮೊಬೈಲ್‌ಗಳಿಗೆ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಇದು ತಪ್ಪು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಅಭಿಲಾಷ್ ಮಾತನಾಡಿ, ಇಂದಿನ ಕಾರ್ಮಿಕ ಮುಂದೆ ಮಾಲೀಕ ನಾಗುವ ಕನಸು ಕಾಣಬೇಕು. ಕಾರ್ಮಿಕರ ಏಳಿಗೆಯಿಂದಲೇ ದೇಶದ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಶಿಲ್ಪ, ಟೈಟಾನ್ ಕಂಪನಿ ಪ್ರೆವೇಟ್ ಲಿಮಿಟೆಂಡ್ ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಸುಬ್ರತ್ ಕುಮಾರ್ ಭಾತ್ರಾ, ಕಾರ್ಮಿಕ ನಿರೀಕ್ಷಕರಾದ ಜೆ.ವಿ. ಕಲಾವಾಣಿ ಮತ್ತು ವಕೀಲರು, ಟೈಟಾನಿಕ್ ಕಂಪನಿಯ ಸಿಬ್ಬಂದಿಗಳು ಹಾಗೂ ಕಾರ್ಮಿಕರು ಇದ್ದರು.