ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ಚೀಮಲಗುಟ್ಟ ಗ್ರಾಮದ ಭೂಮಿ ವಿಚಾರದಲ್ಲಿ ಸುಳ್ಳು ಆರೋಪ: ಕೋಡಿಗಲ್ ರಮೇಶ್ ಆಕ್ರೋಶ

ಚೆನ್ನರಾಯಪ್ಪನವರ ಮಗ ಪೊಲೀಸ್ ಅಧಿಕಾರಿಯಾಗಿದ್ದು,ಅವರು ಯಾರನ್ನೂ ಬೈದಿಲ್ಲ, ಹೊಡೆದಿಲ್ಲ. ಆದರೂ ಕೆಲವರು ಗುಂಪು ಕಟ್ಟಿಕೊಂಡು ಅವರ ಮೇಲೆ ಉದ್ದೇಶಪೂರ್ವಕ ವಾಗಿ ಪಿತೂರಿ ನಡೆಸಿ ಎಫ್‌ಐಆರ್ ದಾಖಲಿಸಿದ್ದಾರೆ. ಮದ ನಕ್ಷೆ ಮತ್ತು ಮಂಜೂರಾತಿ ಅರ್ಜಿಗಳ ಪ್ರಕಾರ, ಸುಮಾರು 23 ಜನರಿಗೆ ಅಲ್ಲಿ ಜಮೀನು ಗ್ರಾಂಟ್ ಆಗಿದೆ. ಅದರಲ್ಲಿ ಚೆನ್ನರಾಯಪ್ಪ ನವರಿಗೆ 3 ಎಕರೆ 20 ಕುಂಟೆ ಜಮೀನು ಮಂಜೂರಾಗಿದೆ"ಎಂದು ರಮೇಶ್ ದಾಖಲೆಗಳನ್ನು ಪ್ರದರ್ಶಿಸಿದರು

ಚೀಮಲಗುಟ್ಟ ಗ್ರಾಮದ ಭೂಮಿ ವಿಚಾರದಲ್ಲಿ ಸುಳ್ಳು ಆರೋಪ

ಚೀಮಲಗುಟ್ಟ ಗ್ರಾಮದ ಜಮೀನು ವಿಚಾರಕ್ಕೆ ಸಂಬAಧಿಸಿದAತೆ ಇತ್ತೀಚೆಗೆ ಮಾಡಲಾದ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಸತ್ಯಕ್ಕೆ ದೂರವಾದವು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಕೋಡಿಗಲ್ ರಮೇಶ್ ತಿಳಿಸಿದ್ದಾರೆ. -

Profile
Ashok Nayak Jun 9, 2026 11:59 PM

ಚಿಂತಾಮಣಿ: ಚೀಮಲಗುಟ್ಟ ಗ್ರಾಮದ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಾಡಲಾದ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಸತ್ಯಕ್ಕೆ ದೂರವಾದವು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಕೋಡಿಗಲ್ ರಮೇಶ್ ತಿಳಿಸಿದ್ದಾರೆ.

ಇಂದು ಚಿಂತಾಮಣಿ ತಾಲ್ಲೂಕಿನ ಕೊಡಿಗಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಚೆನ್ನರಾಯಪ್ಪ ಎಂಬುವವರ ಜಮೀನಿನ ವಿಚಾರವಾಗಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ನೂರಕ್ಕೆ ನೂರರಷ್ಟು ತಪ್ಪು ಮತ್ತು ಸುಳ್ಳು ಮಾಹಿತಿ ನೀಡಲಾಗಿದೆ. ಸಾರ್ವಜನಿಕರಿಗೆ ವಾಸ್ತವಾಂಶ ತಿಳಿಯಬೇಕೆಂಬ ಉದ್ದೇಶದಿಂದ ನಾವು ಈ ಸ್ಪಷ್ಟನೆ ನೀಡುತ್ತಿದ್ದೇವೆ" ಎಂದರು.

ಚೆನ್ನರಾಯಪ್ಪನವರ ಮಗ ಪೊಲೀಸ್ ಅಧಿಕಾರಿಯಾಗಿದ್ದು,ಅವರು ಯಾರನ್ನೂ ಬೈದಿಲ್ಲ, ಹೊಡೆದಿಲ್ಲ. ಆದರೂ ಕೆಲವರು ಗುಂಪು ಕಟ್ಟಿಕೊಂಡು ಅವರ ಮೇಲೆ ಉದ್ದೇಶಪೂರ್ವಕ ವಾಗಿ ಪಿತೂರಿ ನಡೆಸಿ ಎಫ್‌ಐಆರ್ ದಾಖಲಿಸಿದ್ದಾರೆ. ಮದ ನಕ್ಷೆ ಮತ್ತು ಮಂಜೂರಾತಿ ಅರ್ಜಿಗಳ ಪ್ರಕಾರ, ಸುಮಾರು 23 ಜನರಿಗೆ ಅಲ್ಲಿ ಜಮೀನು ಗ್ರಾಂಟ್ ಆಗಿದೆ. ಅದರಲ್ಲಿ ಚೆನ್ನರಾಯಪ್ಪನವರಿಗೆ 3 ಎಕರೆ 20 ಕುಂಟೆ ಜಮೀನು ಮಂಜೂರಾಗಿದೆ"ಎಂದು ರಮೇಶ್ ದಾಖಲೆಗಳನ್ನು ಪ್ರದರ್ಶಿಸಿದರು.

ಇದನ್ನೂ ಓದಿ: Chinthamani News: ನಾಯಂದ್ರಹಳ್ಳಿಯಲ್ಲಿ ಎಂ.ಎಸ್.ಡಬ್ಲ್ಯೂ ಗ್ರಾಮೀಣ ಕಲಿಕಾ ಶಿಬಿರಕ್ಕೆ ಚಾಲನೆ

ಗ್ರಾಮದ ಕೆಲವರು ಎಂಬುವವರು 53 ಅರ್ಜಿಯ ಜಮೀನನ್ನು ಇವರು ಉಳುಮೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಗೋಪಾಲಪ್ಪ ಹಾಗೂ ಇತರೆ ಆರು ಜನರು ಫಾರಂ 53ರ ಅಡಿಯಲ್ಲಿ ತಲಾ 1 ಎಕರೆ 20 ಕುಂಟೆ ಜಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಕಂದಾಯ ಅಧಿಕಾರಿಗಳು ವಿಎ ಮತ್ತು ಗ್ರಾಮ ಲೆಕ್ಕಿಗರು ಸ್ಥಳ ತನಿಖೆ ನಡೆಸಿ, 'ಅಲ್ಲಿ ವ್ಯವಸಾಯಕ್ಕೆ ಯಾವುದೇ ಜಮೀನು ಲಭ್ಯವಿಲ್ಲ, ಅದು ಕೇವಲ ದನಕರುಗಳ ಮೇವಿಗಷ್ಟೇ ಸೀಮಿತವಾಗಿದೆ' ಎಂದು ಸರ್ಕಾರಕ್ಕೆ ವರದಿ ನೀಡಿ, ಆ ಅರ್ಜಿಗಳನ್ನು ವಜಾಗೊಳಿಸಿದ್ದಾರೆ. ಹೀಗಿದ್ದರೂ ಜಮೀನು ಕಸಿದುಕೊಳ್ಳಲಾಗಿದೆ ಎನ್ನುವ ಆರೋಪ ಮಾಡುವುದು ಸರಿಯಲ್ಲ ಎಂದು ರಮೇಶ್ ಸ್ಪಷ್ಟಪಡಿಸಿದರು.

ಚಿಂತಾಮಣಿ ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯು ಈ ಹಿಂದೆ ನಡೆದಿರುವ ಹಲವು ದೌರ್ಜನ್ಯದ ಘಟನೆಗಳಿಂದಾಗಿ ಹೆಸರಾಗಿದೆ ಎಂದು ಕೊಡಿಗಲ್ ರಮೇಶ್ ವಿಷಾದ ವ್ಯಕ್ತಪಡಿಸಿದರು.

ಈ ಭಾಗದಲ್ಲಿ ಈ ಹಿಂದೆ ಸುಮಾರು 35ಕ್ಕೂ ಹೆಚ್ಚು ಜನರ ಕೊಲೆಗಳಾಗಿದ್ದು, ಬಿಲ್ಲಾಂಡ್ಲ ಹಳ್ಳಿ, ಕಮ್ಮಲಹಳ್ಳಿ, ಇರಗಂಪಲ್ಲಿ ಮುಂತಾದ ಗ್ರಾಮಗಳಲ್ಲಿ ಅಹಿತಕರ ಘಟನೆಗಳು ನಡೆದಿವೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯಲ್ಲಿ ಎಲ್ಲಾ ಜಾತಿಯ ಬಡವರೂ ನಮ್ಮ ಜೊತೆಯಲ್ಲಿದ್ದಾರೆ. ಎಸ್‌ಸಿ,ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಬಡವರ ಮೇಲೆ ದೌರ್ಜನ್ಯ ನಡೆದಾಗ ನಾವು ನ್ಯಾಯದ ಪರವಾಗಿ ಧ್ವನಿ ಎತ್ತಿದ್ದೇವೆ ಎಂದು ಹೇಳಿದ ಅವರು ತಾವು ಸದಾ ನ್ಯಾಯದ ಪರವಾಗಿ ಮತ್ತು ಬಡವರ ಪರವಾಗಿ ಧ್ವನಿ ಎತ್ತುತ್ತಿರುವುದರಿಂದಲೇ ತಮ್ಮನ್ನು ಗುರಿಯಾಗಿಸಿಕೊಂಡು ಕೆಲವು ಶಕ್ತಿಗಳು ಸಂಚು ರೂಪಿಸುತ್ತಿವೆ ಎಂದು ರಮೇಶ್ ಗಂಭೀರ ಆರೋಪ ಮಾಡಿದರು.

ನಮ್ಮ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸುವುದು, ನನ್ನನ್ನು ಗಡಿಪಾರು ಮಾಡಲು ಯತ್ನಿಸುವುದು ಮತ್ತು ನನ್ನ ಪ್ರಾಣಕ್ಕೇ ಹಾನಿ ಮಾಡಲು ಹಲವು ಬಾರಿ ಪ್ರಯತ್ನಗಳು ನಡೆದಿವೆ. ಆದರೆ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಧೈರ್ಯ ಮತ್ತು ಪ್ರೇರಣೆಯಿಂದ ನಾವು ಇವತ್ತಿಗೂ ಜೀವಂತವಾಗಿದ್ದುಕೊಂಡು ಬಡವರ ಪರವಾಗಿ ಹೋರಾಡುತ್ತಿದ್ದೇವೆ. ಇಂತಹ ಯಾವುದೇ ಪಿತೂರಿಗಳಿಗೆ ನಾವು ಹೆದರುವುದಿಲ್ಲ"ಎಂದು ಅವರು ದೃಢವಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕರಾದ ಗುಂತೂರು ಪಲ್ಲಿ ಆನಂದ್, ತಾಲ್ಲೂಕು ಅಧ್ಯಕ್ಷರಾದ ಸುರೇಶ ಜಿ,ತಾಲ್ಲೂಕು ಸಂಯೋಜಕರಾದ ಚಂದ್ರಪ್ಪ, ಉಪಾಧ್ಯಕ್ಷರಾದ ಶ್ರೀ ರಾಮ್, ಲಕ್ಷ್ಮೀನಾರಾಯಣ್, ಮೂರ್ತಿ, ಜಿ ಎಂ ಕೋನಪ್ಪ, ಬಾಬು, ಗಿನ್ನ ಶ್ರೀನಿವಾಸ್, ರಾಯಪಲ್ಲಿ ಮಂಜು, ಚಿಮಲಗುಟ್ಟ, ಶ್ರೀನಿವಾಸ್ ಸೇರಿದಂತೆ ಮತ್ತಿತರರು ಇದ್ದರು.