ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಆಗ್ರಹಿಸಿ ರೈತಸಂಘದ ಪ್ರತಿಭಟನೆ

ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡುವ ಉದ್ದೇಶದಿಂದ ಸರಕಾರ ೨೮೨೩ ಎಕರೆ ಭೂಸ್ವಾಧೀನ ಮಾಡಲು ಅಧಿಸೂಚನೆ ಹೊರಡಿಸಿದೆ. ಕೆಐಎಡಿಬಿ ರೈತರಿಗೆ ನೋಟಿಸು ಜಾರಿ ಮಾಡಿ ಸುಮ್ಮನಾಗದೆ ಅವರಿಂದ ಅಭಿಪ್ರಾಯ ಸಂಗ್ರಹಣೆ ಮಾಡಿ ಒಂದು ವರ್ಷ ಕಳೆದಿದೆ.ಈ ನಡುವೆ ಕೆಲ ರೈತಸಂಘಟನೆಗಳ ಮುಖಂಡರು ಇದು ಸರಿಯಿಲ್ಲ, ರೈತರ ಒಪ್ಪಿಗೆ ಯಿಲ್ಲ, ರೈತರ ಸಹಿ ನಕಲು ಮಾಡಲಾಗಿದೆ

ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಆಗ್ರಹಿಸಿ ರೈತಸಂಘದ ಪ್ರತಿಭಟನೆ

ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ರೈತಸಂಘದ ಪದಾಧಿಕಾರಿಗಳು ಕೈಗಾರಿಕೆ ಸ್ಥಾಪನೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

Profile Ashok Nayak May 7, 2025 5:11 PM

ಚಿಕ್ಕಬಳ್ಳಾಪುರ : ಜಂಗಮಕೋಟೆ ಹೋಬಳಿಯಲ್ಲಿಯೇ ಕೆಐಎಡಿಬಿ ಉದ್ದೇಶಿತ ಕೈಗಾರಿಕೆ ಸ್ಥಾಪನೆ ಮಾಡಲು ಸರಕಾರ ಮುಂದಾಗಬೇಕು.ನಿಮ್ಮ ಜತೆಯಲ್ಲಿ ಜಂಗಮಕೋಟೆ ಹೋಬಳಿ ಕೆಐಎಡಿಬಿ ಜಮೀನುಗಳ ರೈತಪರ ಹೋರಾಟ ಸಮಿತಿ ಇರಲಿದೆ ಎಂದ ಸಮಿತಿಯ ಸಂಚಾಲಕ ಭಕ್ತರಹಳ್ಳಿ ಪ್ರತೀಶ್ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ಎದುರು ಕೆಐಎಡಿಬಿ ಜಮೀನು ಗಳ ರೈತಪರ ಹೋರಾಟ ಸಮಿತಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡುವ ಉದ್ದೇಶದಿಂದ ಸರಕಾರ ೨೮೨೩ ಎಕರೆ ಭೂಸ್ವಾಧೀನ ಮಾಡಲು ಅಧಿಸೂಚನೆ ಹೊರಡಿಸಿದೆ. ಕೆಐಎಡಿಬಿ ರೈತರಿಗೆ ನೋಟಿಸು ಜಾರಿ ಮಾಡಿ ಸುಮ್ಮನಾಗದೆ ಅವರಿಂದ ಅಭಿಪ್ರಾಯ ಸಂಗ್ರಹಣೆ ಮಾಡಿ ಒಂದು ವರ್ಷ ಕಳೆದಿದೆ.ಈ ನಡುವೆ ಕೆಲ ರೈತಸಂಘಟನೆಗಳ ಮುಖಂಡರು ಇದು ಸರಿಯಿಲ್ಲ, ರೈತರ ಒಪ್ಪಿಗೆಯಿಲ್ಲ, ರೈತರ ಸಹಿ ನಕಲು ಮಾಡಲಾಗಿದೆ ಎಂದು ಗುಲ್ಲೆಬ್ಬಿಸಿದ ಪರಿಣಾಮ ಏ.25 ರಂದು ಶಿಡ್ಲಘಟ್ಟ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು,ಕೆಐಎಡಿಬಿ ಇಲಾಖೆ ಕಮಿಷನರ್ ಎಲ್ಲರೂ ಕೂಡಿ ದಿನವಿಡೀ ಅಂದರೆ ಬೆಳಗ್ಗೆ ೮ ರಿಂದ ಸಂಜೆ ೭ರ ತನಕ ರೈತರ ಅಭಿಪ್ರಾಯ ಸಂಗ್ರಹಣೆ ಕಾರ್ಯಕ್ರಮ ನಡೆಸಿದರು.ಈ ಕಾರ್ಯ ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆದಿದೆ ಎಂದರು.

ಇದನ್ನೂ ಓದಿ: Chikkaballapur News: ಪರಿಶಿಷ್ಟಜಾತಿಯ ಜಾತಿ ಸಮೀಕ್ಷೆಯ ವೇಳೆ ಯಾವುದೇ ಗೊಂದಲವಿಲ್ಲದೆ ಮಾದಿಗ ಎಂದೇ ನಮೂದಿಸಿ

ಜಿಲ್ಲಾಡಳಿತದ ಸಾಕ್ಷಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮವಾರು ರೈತರಿದ್ದ ಕೋಣೆಗಳಿಗೆ ತೆರಳಿ ಇಲ್ಲಿ ಕೈಗಾರಿಕೆ ಆಗುವುದರಿಂದ ಆಗುವ ಅನುಕೂಲ, ಇದರಿಂದಾಗಿ ರೈತರಿಗೆ ದೊರೆಯುವ ಅನುಕೂಲ,ಭೂಮಿ ಕಳೆದುಕೊಂಡವರಿಗೆ ದೊರೆಯುವ ಹಣ, ನೌಕರಿ ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದನ್ನು ಸಹಿಸಲಾರದ ಕೆಲವರು ಈ ಸಭೆಗೂ ಹಿಂದೆ ಕೆಐಎಡಿಬಿ ಸರಿಯಾಗಿ ಹಣ ಪಾವತಿ ಮಾಡುವುದಿಲ್ಲ.ಒಂದು ಎಕರೆಗೆ ೪೦ ರಿಂದ ೪೦ ಲಕ್ಷ ಮೀರುವುದಿಲ್ಲ ಎಂದೆಲ್ಲಾ ಅಪಪ್ರಚಾರ ಮಾಡುತ್ತಾ ರೈತರನ್ನು ದಿಕ್ಕು ತಪ್ಪಿಸುತ್ತಿದ್ದರು. ಆದರೆ ಏ.೨೫ರಸಭೆ ರೈತರಿಗೆ ಸತ್ಯದರ್ಶನ ಮಾಡಿಸಿದ ಕಾರಣ ೧೩ ಹಳ್ಳಿಗಳ ಬಹುತೇಕ ರೈತರು ಕೈಗಾರಿಕೆ ಸ್ಥಾಪಿಸಲು ಭೂಮಿ ಕೊಡಲು ಮುಂದೆ ಬಂದಿದ್ದಾರೆ ಎಂದರು.

ಇಷ್ಟಾದರೂ ರೈತ ಸಂಘದ ನಮ್ಮದೇ ಸ್ನೇಹಿತರು ಮತ್ತೆ ಸರ್ಕಾದೊಟ್ಟಿಗೆ ಸಂಘರ್ಷಕ್ಕೆ ಇಳಿದಿದ್ದಾರೆ. ಇಲ್ಲಿ ಕೈಗಾರಿಕೆ ಸ್ಥಾಪನೆ ಆಗಿದ್ದೇ ಆದಲ್ಲಿ ನಮ್ಮ ತಾಲೂಕಿನ ಪ್ರತಿಯೊಂದು ಮನೆಯಲ್ಲಿ ಜನತೆ ಉಸ್ತುವಾರಿ ಸಚಿವರ ಪೋಟೋ ಇಟ್ಟುಕೊಂಡು ಪೂಜೆ ಮಾಡುತ್ತಾರೆ.ಕಾರಣ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೈಗಾರಿಕಾಭಿವೃದ್ಧಿಯಾಗಿದೆ.ಆದರೆ ಶಿಡ್ಲಘಟ್ಟ ತಾಲೂಕಿನಲ್ಲಿ ಮಾತ್ರ ಕೈಗಾರಿಕೆ ಆಗಿರಲಿಲ್ಲ.ಈ ಕೊರತೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ತುಂಬುವ ಕೆಲಸ ಮಾಡುತ್ತಿ ಸ್ಥಳೀಯರಿಗೆ ಇದ್ದಲ್ಲಿಯೇ ಉದ್ಯೋಗ ನೀಡುತ್ತಿದ್ದಾರೆ ಎಂದರು.

ಶಾಸಕ ಬಿ.ಎನ್.ರವಿಕುಮಾರ್,ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಜಂಗಮಕೋಟೆ ಭಾಗದಲ್ಲಿ ಕೈಗಾರಿಕೆ ತರಲು ಶ್ರಮಿಸಿದ್ದಾರೆ.ಇಲ್ಲಿ ಕೈಗಾರಿಕೆ ಸ್ಥಾಪನೆ ಆದಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆತು, ಹೊಸಕೋಟೆ, ಕೋಲಾರ, ದೊಡ್ಡಬಳ್ಳಾಪುರದತ್ತ ಕೆಲಸ ಹುಡುಕಿಕೊಂಡು ಹೋಗು ವುದು ತಪ್ಪಲಿದೆ. ಮೇಲಾಗಿ ಭೂಮಿಕೊಡುವ ರೈತರಿಗೆ ಒಳ್ಳೆಯ ಬೆಲೆ ದೊರೆಯಲಿದೆ. ಇದನ್ನು ಅರ್ಥಮಾಡಿಕೊಳ್ಳದ ಕೆಲವರು ರಿಯಲ್ ಎಸ್ಟೇಟ್‌ನವರಿಗೆ, ಲೇಔಟ್ ಮಾಡುವವರಿಗೆ ಭೂಮಿ ಕೊಡಲು ತಕರಾರು ಮಾಡದೆ, ಸರಕಾರ ಕೈಗಾರಿಕೆಗೆ ಭೂಮಿ ಪಡೆಯಲು ಮುಂದಾದಾಗ ತಕರಾರು ಮಾಡುತ್ತಿರುವುದು ಸರಿಯಲ್ಲ ಎಂದು ಬೇಸರಿಸಿದರು.

ಕೈಗಾರಿಕೆಗೆ ಪಡೆಯುವ ಭೂಮಿಯಲ್ಲಿ ನೀರಾವರಿ ಪ್ರದೇಶವನ್ನು ಹೊರತುಪಡಿಸಿ ಬೀಳು ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ನಮ್ಮ ಸಂಘಟನೆ ಮನವಿ ಮಾಡುತ್ತದೆ.ಜಿಲ್ಲಾಡಳಿತ ರೈತರ ಅಭಿಪ್ರಾಯ ಸಂಗ್ರಹಣೆಯಲ್ಲಿ ಪಡೆದಿರುವ ಕೆಂಪುಚೀಟಿ ಬಿಳಿಚೀಟಿಯ ಮಾಹಿತಿಯನ್ನು ಸೋರಿಕೆ ಮಾಡಬಾರದು.ಸೋರಿಕೆ ಮಾಡಿದ್ದಲ್ಲಿ ಹಳ್ಳಿಗಳಲ್ಲಿ ಕೋಮುದ್ವೇಷಗಳು ಪ್ರಾರಂಭವಾಗಿ ಅಶಾಂತಿಗೆ ಕಾರಣವಾಗಲಿದೆ.ಮಾಹಿತಿ ಸೋರಿಕೆ ಆದಲ್ಲಿ ಇದಕ್ಕೆ ನೇರವಾಗಿ ತಾಲೂಕು ಮತ್ತು ಜಿಲ್ಲಾಡಳಿತ  ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಈವೇಳೆ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಉಪಾಧ್ಯಕ್ಷ ಬಿ.ಕೆ. ಮುನಿಕೆಂಪಣ್ಣ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಬಸವಾಪಟ್ಟಣ ಆಂಜಿನಪ್ಪ, ಪ್ರಭುಗೌಡ, ಮುನೇಗೌಡ, ನವೀನ್‌ಕುಮಾರ್, ಸುಬ್ರಮಣಿ, ಪ್ರಮೋದ್, ವಾಸುದೇವಮೂರ್ತಿ, ಮುನಿರಾಜು, ಮಂಜುನಾಥ್, ರಾಮದಾಸ್, ಚೆನ್ನಪ್ಪ, ಕೆ.ಡಿಎಸ್‌ಎಸ್ ರಾಮಾಜಿಂನಪ್ಪ, ವಿಶ್ವನಾಥ್ ಇತರರು ಇದ್ದರು.