Chikkaballapur News: ಮಂಚೇನಹಳ್ಳಿ ಶೂಟೌಟ್ ಪ್ರಕರಣದ ಹಿಂದಿನ ಸೂತ್ರದಾರಿ ಹುಡುಕಿ: ಎಸ್.ಆರ್.ಹಿರೇಮಠ್ ಸೂಚನೆ
ಜಿಲ್ಲೆಯಲ್ಲಿ ರೈತಸಂಘಟನೆಗಳು ಪ್ರಕೃತಿಯ ಮೂಲಗಳಾದ ಬೆಟ್ಟಗುಡ್ಡ, ನೆಲ, ಜಲ ಗೋಕುಂಟೆ, ಗೋ ಕಾಡುಗಳನ್ನು ಉಳಿಸಲು ಮುಂದಾಗಿರುವ ಸಂದರ್ಭದಲ್ಲಿ ಹಾಡಹಗಲೇ ಕ್ವಾರಿಯ ಮಾಲಿಕನ ಸಂಬಂಧಿ ಈ ನೆಲದ ಕಾನೂನಿನಂತೆ ನಡೆದುಕೊಳ್ಳದೆ ತನ್ನ ದುಷ್ಟಕೂಟವನ್ನು ಕಟ್ಟಿಕೊಂಡು ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸಿದ ರೈತರ ಮೇಲೆ ಗುಂಡಿನ ದಾಳಿ ನಡೆಸಿರುವುದು ಅಕ್ಷಮ್ಯ. ಇಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ ಕಂದಾಯ ಮತ್ತು ಗಣಿ ಇಲಾಖೆ ಅಧಿಕಾರಿಗಳೇ ಇದಕ್ಕೆ ನೇರ ಹೊಣೆ ಹೊರಬೇಕು

ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಮಾತನಾಡಿದರು. ಹೋರಾಟಗಾರಾದ ವಕೀಲ ಲಕ್ಷಿö್ಮÃನಾರಾಯಣ್, ಗುಂಡಾಪುರ ಲೋಕೇಶ್ ಮತ್ತಿತರರು ಇದ್ದರು.

ಚಿಕ್ಕಬಳ್ಳಾಪುರ: ಜಿಲ್ಲೆಯ ಮಂಚೇನಹಳ್ಳಿ ತಾಲೂಕು ಕನಗಾನಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ನಡೆದ ರೈತರ ಮೇಲೆ ನಡೆಸಿದ ಶೂಟೌಟ್ ಪ್ರಕರಣದ ಆರೋಪಿಯನ್ನಯ ಜೈಲಿಗಟ್ಟಿದರೆ ಸಾಲದು. ಆತನಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳುವ ಜತೆಗೆ ಈತ ಹೀಗೆ ಮಾಡಲು ಯಾರ ಸಪೋರ್ಟ್ ಇದೆ ಎಂಬುದನ್ನು ಮೊದಲು ಪತ್ತೆ ಹಚ್ಚಬೇಕು ಈ ಕೆಲಸವನ್ನು ರೈತಸಂಘ ಮಾಧ್ಯಮ ಕೂಡಿ ಮಾಡಬೇಕು ಎಂದು ಎಸ್.ಆರ್.ಹಿರೇಮಠ್ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಚೇನಹಳ್ಳಿ ತಾಲೂಕು ಕನಗಾನಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಸಕಲೇಶ್ ಎಂಬ ರೌಡಿ ನಡೆಸಿದ ಗುಂಡಿನ ದಾಳಿ ಸಂಬಂಧ ನಡೆಸಿದ ಸುದ್ದಿಗೋಷ್ಟಿ ಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ರೈತಸಂಘಟನೆಗಳು ಪ್ರಕೃತಿಯ ಮೂಲಗಳಾದ ಬೆಟ್ಟಗುಡ್ಡ, ನೆಲ, ಜಲ ಗೋಕುಂಟೆ, ಗೋಕಾಡುಗಳನ್ನು ಉಳಿಸಲು ಮುಂದಾಗಿರುವ ಸಂದರ್ಭದಲ್ಲಿ ಹಾಡಹಗಲೇ ಕ್ವಾರಿಯ ಮಾಲಿಕನ ಸಂಬAಧಿ ಈ ನೆಲದ ಕಾನೂನಿನಂತೆ ನಡೆದುಕೊಳ್ಳದೆ ತನ್ನ ದುಷ್ಟಕೂಟವನ್ನು ಕಟ್ಟಿಕೊಂಡು ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸಿದ ರೈತರ ಮೇಲೆ ಗುಂಡಿನ ದಾಳಿ ನಡೆಸಿರುವುದು ಅಕ್ಷಮ್ಯ. ಇಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ ಕಂದಾಯ ಮತ್ತು ಗಣಿ ಇಲಾಖೆ ಅಧಿಕಾರಿಗಳೇ ಇದಕ್ಕೆ ನೇರ ಹೊಣೆ ಹೊರಬೇಕು.ಸಾರ್ವಜನಿಕರ ತೆರಿಗೆ ಹಣದಲ್ಲಿ ಕೆಲಸ ಮಾಡುವ ಜನಪ್ರತಿನಿಧಿಗಳು, ಅವರ ದುಷ್ಟ ನಡವಳಿಕೆಯನ್ನು ಜನತೆ ಖಂಡತುಂಡವಾಗಿ ಖಂಡಿಸಬೇಕು.ಇವರಿಗೆ ಭಯಪಡುವ ಅವಶ್ಯಕತೆ ಬೇಡ ಎಂದರು.
ಇದನ್ನೂ ಓದಿ: Chikkaballapur News: ವಾಸವಿ ಅಮ್ಮನವರ ಜಯಂತೋತ್ಸವದ ಅಂಗವಾಗಿ ಬ್ರೆಡ್, ಬಿಸ್ಕೆಟ್ ಹಾಗೂ ಓ ಆರ್ ಎಸ್ ವಿತರಣೆ
ಇAದಿನ ಭ್ರಷ್ಟ ಕಲುಷಿತ ವಾತಾವರಣದಲ್ಲಿ ನ್ಯಾಯಕ್ಕಾಗಿ ಹೋರಾಡುವುದು ಕಷ್ಟವಾಗಿದೆ. ಇದರ ಬಗ್ಗೆ ಅರಿವಿದ್ದರೂ ಸೂಕ್ತ ದಾಖಲೆಗಳಿದ್ದಲ್ಲಿ ಎಂತಹ ದೊಡ್ಡ ಭ್ರಷ್ಟನೇ ಆಗಿರಲಿ ಅವರ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮೊದಲು ಭ್ರಷ್ಟಾಚಾರ, ಅವ್ಯವಹಾರಗಳನ್ನು ನಿರ್ಭಯವಾಗಿ ಪ್ರಶ್ನಿಸಲಾಗುತ್ತಿತ್ತು. ಸಮಾಜದಲ್ಲಿ ಸಿಕ್ಕಿ ಬೀಳುತ್ತಿದ್ದಂತೆ ತಪ್ಪಿತಸ್ಥರು ಮುಜುಗರಕ್ಕೊಳಗಾಗುತ್ತಿದ್ದರು. ಆದರೆ, ಈಗ ವ್ಯವಸ್ಥೆ ಬದಲಾ ಗಿದೆ. ಆರೋಪ ದೃಢಪಟ್ಟ ಬಳಿಕ ಸಹ ತಪ್ಪು ಮಾಡಿದ ಭಾವನೆಯಿಲ್ಲದೇ ಸಮರ್ಥಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದೊಂದು ದುರದೃಷ್ಟಕರ ಬೆಳವಣಿಗೆ ಎಂದು ಬೇಸರಿಸಿದರು.
ಅಕ್ರಮ ಗಣಿಗಾರಿಕೆಗೆ ವಿಚಾರವಾಗಿ ದಾಖಲೆಗಳನ್ನಿಟ್ಟುಕೊಂಡು ನಿರಂತರವಾಗಿ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಗಾಲಿ ಜನಾರ್ಧನರೆಡ್ಡಿ ಅಂತಹ ದೊಡ್ಡ ಪ್ರಭಾವಿ ರಾಜಕಾರಣಿ ಹಾಗೂ ಅಧಿಕಾರಿಗಳ ಅವ್ಯವಹಾರ ದೃಢಪಟ್ಟಿದ್ದು ಶಿಕ್ಷೆಯು ಘೋಷಣೆಯಾಗಿದೆ ಎಂದರು.
ಅವ್ಯವಹಾರ, ಅಕ್ರಮಗಳಿಗೆ ಸಂಬAಧಿಸಿದAತೆ ಸೂಕ್ತ ದಾಖಲೆಗಳಿದ್ದಲ್ಲಿ ಎಂತಹವರ ವಿರುದ್ಧವಾ ದರೂ ಹೋರಾಟ ನಡೆಸಲಾಗುತ್ತದೆ. ತಪ್ಪಿತಸ್ಥರಿಗೆ ಪಾಠ ಕಲಿಸುವ ತನಕ ಬಿಡುವುದಿಲ್ಲ ಎಂದು ಇದೇ ವೇಳೆ ಗುಡುಗಿದರು.
ಈ ಸಂದರ್ಭದಲ್ಲಿ ಹೋರಾಟಗಾರಾದ ವಕೀಲ ಲಕ್ಷ್ಮೀನಾರಾಯಣ್, ಗುಂಡಾಪುರ ಲೋಕೇಶ್ ಮತ್ತಿತರರು ಇದ್ದರು.
ಮಂಚೇನಹಳ್ಳಿಯಲ್ಲಿ ಅಕ್ರಮ
ಅಕ್ರಮ ಗಣಿಗಾರಿಕೆ ಹಾಗೂ ರಸ್ತೆ ನಿರ್ಮಾಣವನ್ನು ಪ್ರಶ್ನಿಸಿದ ರೈತರ ಮೇಲೆ ಹಾಡಹಗಲೇ ಶೂಟ್ ಔಟ್ ನಡೆದಿದೆ. ಇದು ಇಲ್ಲಿನ ವಾತಾವರಣ ಹೇಗಿದೆ ಎಂಬುದಕ್ಕೆ ನಿದರ್ಶನ. ಇಂತಹ ಘಟನೆ ನಡೆದಾಗ ಇಲ್ಲಿನ ಪ್ರಭಾವಿ ಸಂಸದರು ಹಾಗೂ ಶಾಸಕರು ಏನು ಮಾಡುತ್ತಿದ್ದಾರೆ ಎಂದು ಎಸ್.ಆರ್.ಹಿರೇಮಠ ಪ್ರಶ್ನಿಸಿದರು.
ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಸರ್ಕಾರದ ಅನುದಾನ ಸಮರ್ಪಕ ಬಳಕೆ ಅಗತ್ಯ. ಇದನ್ನು ಲೂಟಿ ಹೊಡೆಯಲು ಬಿಡಬಾರದು. ಜನರು ಸಂಟಿತರಾಗಬೇಕು. ಹೋರಾಟಗಾರರೊಂದಿಗೆ ಕೈ ಜೋಡಿಸಬೇಕು ಎಂದ ಅವರು, ಇಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟವನ್ನು ಬೆಂಬಲಿ ಸುವುದಾಗಿ ಹೇಳಿದರು.