ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗುವವರೆಗೂ ಸ್ವಾತಂತ್ರ‍್ಯಕ್ಕೆ ಬೆಲೆ ಸಿಗುವುದಿಲ್ಲ
೧೯೪೭ ರ ಆಗಸ್ಟ್ ೧೫ ರಂದು ಸ್ವಾತಂತ್ರ‍್ಯ ಲಭಿಸಿದರೂ ಸಂವಿಧಾನ ಜಾರಿಯಾಗಿದ್ದು ೧೯೫೦ ಜನವರಿ ೨೬ ರಂದು. ಈ ಹಿನ್ನಲೆಯಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ೧೯೩೦ ಜನವರಿ ೨೬ ರಂದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಲಾಹೋರ್ ಅಧಿವೇಶನದಲ್ಲಿ ಸಂಪೂರ್ಣ ಸ್ವರಾಜ್ಯ ಮಾತ್ರವೇ ದೇಶದ ಗುರಿ

ಸಂವಿಧಾನ ಹೇಗೇ ಇರಲಿ ಅದನ್ನು ಅನುಷ್ಠಾನಗೊಳಿಸುವವರ ಉದ್ದೇಶ ಸರಿಯಾಗಿದ್ದರೆ ಸಂವಿಧಾನ ಸದಾ ಸಮಾಜಕ್ಕೆ ಅನುಕೂಲಕರವಾಗಿರುತ್ತದೆ ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು ಎಂದು ತಹಶೀಲ್ದಾರ್ ಸುದರ್ಶನ ಯಾದವ್ ತಿಳಿಸಿದರು.

ಚಿಂತಾಮಣಿ: ಸಮಾಜದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗುವವರೆಗೂ ಸ್ವಾತಂತ್ರ‍್ಯಕ್ಕೆ ಬೆಲೆ ಸಿಗುವುದಿಲ್ಲ. ಸಂವಿಧಾನ ಹೇಗೇ ಇರಲಿ ಅದನ್ನು ಅನುಷ್ಠಾನಗೊಳಿಸುವವರ ಉದ್ದೇಶ ಸರಿ ಯಾಗಿದ್ದರೆ ಸಂವಿಧಾನ ಸದಾ ಸಮಾಜಕ್ಕೆ ಅನುಕೂಲಕರವಾಗಿರುತ್ತದೆ ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು ಎಂದು ತಹಶೀಲ್ದಾರ್ ಸುದರ್ಶನ ಯಾದವ್ ತಿಳಿಸಿದರು.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ನಗರದ ಝಾನ್ಸಿರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರ ವೇರಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ಯುವಜನತೆ ಅಪರಾಧಿಕ ಕೃತ್ಯಗಳಿಂದ ದೂರವಿರಲಿ: ರಾಜ್ಯ ಉಪಾಧ್ಯಕ್ಷ ವೆಂಕಟರೋಣಪ್ಪ ಕರೆ
೧೯೪೭ ರ ಆಗಸ್ಟ್ ೧೫ ರಂದು ಸ್ವಾತಂತ್ರ‍್ಯ ಲಭಿಸಿದರೂ ಸಂವಿಧಾನ ಜಾರಿಯಾಗಿದ್ದು ೧೯೫೦ ಜನವರಿ ೨೬ ರಂದು. ಈ ಹಿನ್ನಲೆಯಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.೧೯೩೦ ಜನವರಿ ೨೬ ರಂದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಲಾಹೋರ್ ಅಧಿವೇಶನದಲ್ಲಿ ಸಂಪೂರ್ಣ ಸ್ವರಾಜ್ಯ ಮಾತ್ರವೇ ದೇಶದ ಗುರಿ. ಬ್ರಿಟೀಷರು ಭಾರತ ಬಿಟ್ಟು ತೊಲ ಗಲೇ ಬೇಕು ಎಂದು ನಿರ್ಣಯಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜನವರಿ ೨೬ ನೇ ದಿನಾಂಕ ವನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದರು.
ಸಂವಿಧಾನ ಆಳವಾದ,ಅಗಾಧವಾದ ಹಾಗೂ ಸುಲಲಿತವಾದುದು.ಬಿ ಆರ್ ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿಯು ಹಲವಾರು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ನಮ್ಮ ದೇಶದ ಸಮಸ್ಯೆಗಳಿಗೆ ಅನುಗುಣವಾದ ಸಂವಿಧಾನವನ್ನು ರಚನೆ ಮಾಡಿದರು. ಇಡೀ ವಿಶ್ವ ದಲ್ಲಿ ಅತ್ಯಂತ ದೊಡ್ಡದಾದ ಲಿಖಿತ ಸಂವಿಧಾನವಾಗಿದೆ ಎಂದು ಹೇಳಿದರು.
ಸಂವಿಧಾನದ ಆಶಯಗಳನ್ನು ದೇಶದ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ವಿಶೇಷವಾಗಿ ಯುವ ಜನಾಂಗ ದೇಶದ ಸ್ವಾತಂತ್ರ‍್ಯದ ಇತಿಹಾಸವನ್ನು ವ್ಯಾಸಂಗ ಮಾಡಬೇಕು. ಸಂವಿಧಾನದ ಉದ್ದೇಶ ಗಳನ್ನು ಅರ್ಥ ಮಾಡಿಕೊಳ್ಳಬೇಕು. ದೇಶದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅಭಿವೃದ್ಧಿ ಗಾಗಿ ಶ್ರಮಿಸಬೇಕು. ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ಸರ್ವ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಆರ್ ಜಗನ್ನಾಥ್ ಮಾತನಾಡಿ ದೇಶ ಸ್ವತಂತ್ರವಾಗಿರುವುದರಿಂದಲೇ ಸಂಭ್ರಮ ದಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಅನೇಕ ನ್ಯಾಯಕರ ತ್ಯಾಗ ಬಲಿದಾನದಿಂದ ಲಭಿಸಿರುವ ಸ್ವಾತಂತ್ರ‍್ಯವನ್ನು ಉಳಿಸಿಕೊಂಡು ಮುನ್ನಡೆಯಬೇಕು. ದೇಶದ ವಿವಿಧ ಪ್ರಾಂತ್ಯಗಳನ್ನು ಒಗ್ಗೂಡಿಸಿ ಅಖಂಡ ಭಾರತ ನಿರ್ಮಾಣವಾಯಿತು. ಈ ಹಿನ್ನಲೆಯಲ್ಲೂ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ನಗರದಲ್ಲಿ ಹಾಗೂ ಕ್ಷೇತ್ರದಲ್ಲಿ ನೂರಾರು ಕೋಟಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ.ನೂತನ ಎಂಜನಿಯರಿಂಗ್ ಕಾಲೇಜ ನ್ನು ಮಂಜೂರು ಮಾಡಿಸಿದ್ದಾರೆ. ೧೫೦ ಕೋಟಿ ರೂ ವೆಚ್ಚದಲ್ಲಿ ಎಂಜನಿಯರಿಂಗ್ ಕಾಲೇಜಿನ ಕೈಗೊಂಡಿದ್ದಾರೆ. ನೂತನ ಎಂಜನಿಯರಿಂಗ್ ಕಾಲೇಜನ್ನು ಮಂಜೂರು ಮಾಡಿಸಿದ್ದಾರೆ. ೧೫೦ ಕೋಟಿ ರೂ ವೆಚ್ಚದಲ್ಲಿ ಎಂಜನಿಯರಿಂಗ್ ಕಾಲೇಜಿನ ಕಟ್ಟಡ ನಿರ್ಮಾಣಕ್ಕೂ ಸಚಿವ ಸಂಪುಟದ ಅನುಮೋದನೆ ಕೊಡಿಸಿದ್ದಾರೆ. ಶೀಘ್ರದಲ್ಲೇ ಕಟ್ಟಡದ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ನಗರದಲ್ಲಿ ೯ ಕೋಟಿ ರೂ ವೆಚ್ಚದಲ್ಲಿ ಅಂಬೇಡ್ಕರ್ ಭವನದ ಉನ್ನತೀಕರಣ, ರಸ್ತೆಗಳ ಅಭಿವೃದ್ಧಿ, ವಾಲ್ಮೀಕಿ ಭವನದ ಭವನದ ಅಭೋವೃದ್ಧಿ ಮತ್ತಿತರ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ವಿವಿಧ ಹಂತಗಳಲ್ಲಿವೆ. ಎಲ್ಲವೂ ಅನುಷ್ಠಾನದ ನಂತರ ಬ್ರಾಂಡ್ ಚಿಂತಾಮಣಿ ಆಗಲಿದೆ. ಸಾರ್ವ ಜನಿಕರು ಅವರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪೊಲೀಸ್, ಎನ್.ಸಿಸಿ, ಸೈಟ್ಸ್ ಅಂಡ್ ಗೈಡ್ಸ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳ ತಂಡಗಳು ಪಥಸಂಚಲನೆ ಹಾಗೂ ಧ್ವಜವಂದನೆ ನೀಡಿದರು.
ಸಾಧಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು.
ಈ ವೇಳೆ ಡಿವೈಎಸ್ಪಿ ಪಿ ಮುರಳೀಧರ್, ನಗರಸಭೆ ಉಪಾಧ್ಯಕ್ಷೆ ಕೆ ರಾಣಿಯಮ್ಮ ಹಾಗೂ ಸದಸ್ಯರು, ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್ ಆನಂದ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್ ಅಶೋಕ ಕುಮಾರ್,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್ ವಿ ಶ್ರೀನಿವಾಸನ್,ಬೋವಿ ಸಂಘದ ಜಿಲ್ಲಾಧ್ಯಕ್ಷರಾದ ಎಂ ಗುರ್ರಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.