ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಸಂವಿಧಾನದ ಆಶಯಗಳ ಈಡೇರಿಕೆ, ಸರಕಾರಿ ನೌಕರರ ಹೊಣೆ: ಜಿಲ್ಲಾಧಿಕಾರಿ ಜಿ.ಪ್ರಭು

ಸಂವಿಧಾನದ ಬಲಿಷ್ಟ ಅಂಗವಾದ ಕಾರ್ಯಾಂಗದ ಅಡಿಯಲ್ಲಿ ಬರುವ ನಾವು ನೀವೆಲ್ಲಾ ಸೇರಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗಿಯಾಗುವ ಮೂಲಕ ಮನೋಲ್ಲಾಸದ ಜತೆಗೆ ಕ್ರೀಡೋಲ್ಲಾಸದ ಅಮೃತದ ಗಳಿಗೆಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಸಾರ್ವಜನಿಕ ಜೀವನದಲ್ಲಿರುವ ನಾವು ನೀವೆಲ್ಲಾ ಲವಲವಿಕೆಯಿಂದ ಕೆಲಸ ಮಾಡಬೇಕಾದರೆ ಸದೃಢ ದೇಹ ಮತ್ತು ಮನಸ್ಸನ್ನು ಹೊಂದಿರ ಬೇಕಾದ್ದು ಮುಖ್ಯ

ಸಂವಿಧಾನದ ಆಶಯಗಳ ಈಡೇರಿಕೆ, ಸರಕಾರಿ ನೌಕರರ ಹೊಣೆ

ಸರಕಾರಿ ನೌಕರರ ಜಿಲ್ಲಾ ಕ್ರೀಡಾಕೂಟ ಉದ್ಘಾಟಿಸಿ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿದರು. -

Ashok Nayak
Ashok Nayak Feb 6, 2026 7:24 PM

ಚಿಕ್ಕಬಳ್ಳಾಪುರ : ಸಂವಿಧಾನದ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ಸ್ಥಾನದಲ್ಲಿರುವ ಬುದ್ದಿವಂತ ವರ್ಗವೇ ಕಾರ್ಯಾಂಗವೆನಿಸಿಕೊಳ್ಳುವ ಸರಕಾರಿ ನೌಕರರ ವರ್ಗವಾಗಿದೆ. ಹೀಗಾಗಿ ಸಾಂವಿಧಾನಿಕ ಮೌಲ್ಯಗಳಿಗೆ ಚ್ಯುತಿ ಬರದ ಹಾಗೆ ನಾವು ನೀವೆಲ್ಲಾ ಕೂಡಿ ಕೆಲಸ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ನಗರದ ಜಿಲ್ಲಾ ಸರ್.ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಹಯೋಗದಲ್ಲಿ ಶುಕ್ರವಾರ ನಡೆದ 2025ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಗುಣಮಟ್ಟದ ಮಾನವ ಸಂಪನ್ಮೂಲವು ದೇಶದ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಮಾನವ ಸಂಪನ್ಮೂಲಕ್ಕೆ ಯಾವ ರೀತಿಯ ವಿದ್ಯೆ, ಸಂಸ್ಕಾರ, ಮೌಲ್ಯ ಮತ್ತು ಆದರ್ಶಗಳನ್ನು ಹೇಳಿಕೊಡುತ್ತೇವೆ. ಸಮಸಮಾಜದ ನಿರ್ಮಾಣಕ್ಕೆ ನಾವೆಲ್ಲಾ ಹೇಗೆ ಬದ್ಧರಾಗಿರು ತ್ತೇವೆ ಇವೆಲ್ಲವುಗಳ ಆಧಾರದಲ್ಲಿ ಮಾನವ ಸಂಪನ್ಮೂಲದ ಗುಣಮಟ್ಟ ನಿರ್ಧಾರವಾಗಲಿದೆ.ಸಂ ವಿಧಾನದ ಆಶಯದಂತೆ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗಗಳು ಕಾರ್ಯ ನಿರ್ವಹಿಸಿ ದರೆ ದೇಶವು ರಾಮರಾಜ್ಯವಾಗುವುದರಲ್ಲಿ ಅನುಮಾನವೇ ಇಲ್ಲ.ಇದಾಗಬೇಕಾದರೆ ನಮ್ಮಲ್ಲಿ ಬದ್ಧತೆ ಬೇಕಿದೆ ಎಂದು ಕರೆ ನೀಡಿದರು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ಸಂವಿಧಾನದ ಬಲಿಷ್ಟ ಅಂಗವಾದ ಕಾರ್ಯಾಂಗದ ಅಡಿಯಲ್ಲಿ ಬರುವ ನಾವು ನೀವೆಲ್ಲಾ ಸೇರಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗಿಯಾಗುವ ಮೂಲಕ ಮನೋಲ್ಲಾಸದ ಜತೆಗೆ ಕ್ರೀಡೋಲ್ಲಾಸದ ಅಮೃತದ ಗಳಿಗೆಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಸಾರ್ವಜನಿಕ ಜೀವನದಲ್ಲಿರುವ ನಾವು ನೀವೆಲ್ಲಾ ಲವಲವಿಕೆಯಿಂದ ಕೆಲಸ ಮಾಡಬೇಕಾದರೆ ಸದೃಢ ದೇಹ ಮತ್ತು ಮನಸ್ಸನ್ನು ಹೊಂದಿರಬೇಕಾದ್ದು ಮುಖ್ಯ. ಶಾಂತಚಿತ್ತರಾಗಿ ನಮ್ಮ ಕರ್ತವ್ಯವನ್ನು ಪ್ರೀತಿಸಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಇರಲೇಬೇಕು.ನಿತ್ಯವೂ ಒಂದರೆಡು ಗಂಟೆಗಳ ಕಾಲ ವ್ಯಾಯಾಮದಲ್ಲಿ ತೊಡಗುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದರು.

ಸAವಿಧಾನದ ಆಶಯಗಳಿಗೆ ಇಂಬು ನೀಡುವ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗಗಳನ್ನು ಒಂದು ಕುಟುಂಬದಂತೆ ಭಾವಿಸುವುದಾದರೆ  ಮನೆಗೆ ಆಧಾರವಾಗಿ ನಿಂತು ಅಲ್ಲಿಗೆ ಬೇಕಾದ ಸಂಪನ್ಮೂಲಗಳ ಕ್ರೋಢೀಕರಣ,ಎಲ್ಲರ ಹಿತಕ್ಕಾಗಿ ದುಡಿಯುವ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ತಂದೆಗಿರುವುದರಿAದ ಶಾಸಕಾಂಗವನ್ನು ತಂದೆಗೆ ಹೋಲಿಸಬಹುದು. ಮನೆಯ ಸದಸ್ಯರು ಹೇಗೆ ಒಂದು ರೀತಿ ನೀತಿಗೆ ಬದ್ಧವಾಗಿ ಇರಬೇಕು,ಮನೆಯ ಘನತೆ ಗೌರವವನ್ನು ಹೇಗೆ ಎತ್ತಿಹಿಡಿಯಬೇಕು ಎಂಬುದನ್ನು ಹೇಳಿಕೊಡುವ ಅಜ್ಜ ಅಜ್ಜಿಯರಿಗೆ ನ್ಯಾಯಾಂಗವನ್ನು ಹೋಲಿಸಬಹುದು. ಈ ಇಬ್ಬರ  ಆಶಯದಂತೆ ಮನೆಯಲ್ಲಿರುವ ಮಕ್ಕಳ ಭವಿಷ್ಯವನ್ನು ರೂಪಿಸುವು ದಕ್ಕೆ, ಆವರಿಗೆ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ ಮನೆಯ ಆಧಾರಸ್ತಂಭವಾಗಿ ತಾಯಿ ಕಾರ್ಯನಿರ್ವಹಿಸುತ್ತಾಳೆ. ಕಾರ್ಯಾಂಗವನ್ನು ಈ ತಾಯಿಗೆ ಹೋಲಿಸಬಹುದು.ಬಹುಶ: ಕಾರ್ಯಾಂಗ ಈ ತಾಯಿಯ ಸ್ವರೂಪದಲ್ಲಿ ಕೆಲಸ ಮಾಡಬೇಕಿದೆ ಎಂದರು.

ZP2

ಸಂವಿಧಾನ ಬಹಳ ದೊಡ್ಡ ಜವಾಬ್ದಾರಿಯನ್ನು ನಮಗೆ ಕೊಟ್ಟಿದೆ.ಪಾಶ್ಚಾತ್ಯ ದೇಶಗಳಲ್ಲಿ ಶಾಸಕಾಂಗ ರಚಿಸಬೇಕಾದರೆ ಆ ವಿಷಯದಲ್ಲಿ ಪರಿಣಿತಿ ಹೊಂದಿರುವವರನ್ನು ಆ ಸ್ಥಾನದಲ್ಲಿ ತಂದು ಕೂರಿಸುತ್ತಾರೆ.ಬಾಬಾ ಸಾಹೇಬರು ಸಂವಿಧಾನ ರಚಿಸುವಾಗಲೂ ಈ ಅಂಶ ಚರ್ಚೆಗೆ ಬರುತ್ತದೆ. 2 ಕಾರಣಗಳಿಗಾಗಿ ಎಂ.ಎಲ್.ಎ ಮತ್ತು ಎಂಪಿಗಳಿಗೆ ವಿದ್ಯಾರ್ಹತೆ ನಿಗದಿ ಬಿದ್ದು ಹೋಗುತ್ತದೆ. ಕಾರಣ ಭಾರತದಲ್ಲಿ ಸ್ವಾತಂತ್ರö್ಯ ಪೂರ್ವದಲ್ಲಿ ಶಿಕ್ಷಣ ಉಳ್ಳವರ ಸ್ವತ್ತಾಗಿದ್ದು ಎಲ್ಲರಿಗೂ ಅದು ಮುಕ್ತವಾಗಿ ಧಕ್ಕಿರಲಿಲ್ಲ.ಹೀಗಾಗಿ ಅರ್ಹತೆಯಿಟ್ಟರೆ ಬಹುಸಂಖ್ಯಾತರು ರಾಜಕೀಯ ಪ್ರಾತಿನಿಧ್ಯದಿಂದ ಹೊರಗುಳಿಯುತ್ತಾರೆ. ಅಂದರೆ ವಿಧಾನ ಸಭೆ ಲೋಕಸಭೆಗಳಿಗೆ ಹೋಗಲು ಆಗುವುದಿಲ್ಲ ಎಂದು ಒಪ್ಪಲಿಲ್ಲ.ಇದು ಐತಿಹಾಸಿಕವಾಗಿ ತೆಗೆದುಕೊಂಡ ತೀರ್ಮಾನ ವಾಗಿತ್ತು.

ಎರಡನೆಯದು ನಮ್ಮ ಅಣ್ಣ ತಮ್ಮಂದಿರುವ ಮಕ್ಕಳು ನಮ್ಮ ಭವಿಷ್ಯ ಕಾರ್ಯಾಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹ ಕಾನೂನುಗಳನ್ನು ರಚನೆ ಮಾಡುವ ಸಂದರ್ಭದಲ್ಲಿ ನಮಗೆ ಯಾವತ್ತೂ ಬೆನ್ನೆಲುಬಾಗಿ ಕಾರ್ಯಾಂಗ ಶಾಸಕಾಂಗದ ಜತೆ ನಿಲ್ಲಲಿದೆ. ನಮ್ಮ ಕಾರ್ಯಾಂಗವನ್ನು ನಾವು ನಂಬಬೇಕು. ಅದನ್ನು ಗಟ್ಟಿಗೊಳಿಸಿಕೊಂಡು ಅದರ ಹೆಜ್ಜೆಯಲ್ಲಿ ಹೆಜ್ಜೆ ಹಾಕಿ ಶಾಸಕಾಂಗದೊಟ್ಟಿಗೆ ನಡೆಯಬೇಕು ಎಂಬುದೇ ಅಗಿದೆ.ವಿಶ್ವದ ಪ್ರಜಾಪ್ರಭುತ್ವವನ್ನು ನೋಡಿದಾಗ ಕಾರ್ಯಾಂಗಕ್ಕೆ ಮಾತ್ರ ಇಷ್ಟು ದೊಡ್ಡ ಶಕ್ತಿಯಿರುವುದು ತಿಳಿಯಲಿದೆ ಎಂದರು.

ಸರಕಾರಿ ನೌಕರರು ಕಾನೂನು ಬದ್ದವಾಗಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸು ವುದು ಇಂದಿನ ವ್ಯವಸ್ಥೆಯಲ್ಲಿ ಕಷ್ಟಸಾಧ್ಯ ಎನ್ನುವಂತಾಗಿದೆ. ಆದರೆ ಇಂತಹು ದರಲ್ಲಿಯೇ ದಿನಕ್ಕೆ ನೂರಾರು ಜನಕ್ಕೆ ಸಾವಿರಾರು ಜನಕ್ಕೆ ಕಾನೂನು ಅಡಿಯಲ್ಲಿ ತೀರ್ಮಾನಗಳನ್ನು ನೀಡುತ್ತೇವೆ. ಎಷ್ಟು ದೊಡ್ಡ ಸ್ವಾತಂತ್ರ್ಯ ಅವಕಾಶ ಕೆಲಸ ನಮ್ಮದು ಎಂಬುದನ್ನು ಅರ್ಥ ಮಾಡಿಕೊಂದರೆ ಕಾರ್ಯಾಂಗದ ಮಹತ್ವ ತಿಳಿಯಲಿದೆ ಎಂದರು.

ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳು, ಜಾನಪದ ಕಲೆ, ಲಲಿತಕಲೆಗಳು ಇವೆಲ್ಲಾ ಪ್ರತಿಯೊಬ್ಬ ಮನುಷ್ಯ ನಿಗೆ ನೈಜವಾದ ವ್ಯಕ್ತಿತ್ವ ರೂಪಿಸಲು ನೆರವಾಗಲಿವೆ.ಪುಸ್ತಕದ ಓದು ಬರೀ ಜ್ಞಾನಕ್ಕಷ್ಟೇ ಸೀಮಿತ. ಆದರೆ ವ್ಯಕ್ತಿತ್ವ ರೂಪಿಸಿಕೊಳ್ಳುವ ಜ್ಞಾನ ಬರುವುದು ಈ ರೀತಿಯ ಆಚರಣೆಗಳಿಂದ ಮಾತ್ರ, ಎಂಬುದನ್ನು ಮನಗಂಡು ನಮ್ಮ ಹಿರೀಕರು ಪ್ರತಿ ಆಚರಣೆಗಳೊಂದಿಗೆ ಜೀವನಕ್ರಮಗಳೊಂದಿಗೆ ಈ ರೀತಿ ಕಲೆ, ಆಚರಣೆಗಳನ್ನು ನಮ್ಮೊಂದಿಗೆ ಜೋಡಿಸಿದ್ದಾರೆ.ಪ್ರಶ್ನೆ ಕೇಳುವ ಛಾತಿ ಗೊತ್ತಿದ್ದರೆ ಎ.ಐ ಮೂಲಕ ಎಲ್ಲವನ್ನೂ ಇಂದು ಪಡೆಯಬಹುದು.ಆದರೆ ಸದೃಢವಾಗಿ ಸಮಾಜವನ್ನು ಎದುರಿಸುವ ಧೈರ್ಯ, ಸಂಘ ಜೀವನ, ಹಿರಿಯದೊಂದಿಗೆ ನಡೆದುಕೊಳ್ಳಬೇಕಾದ ರೀತಿ ನೀತಿಗಳು ಪುಸ್ತಕದ ಮೂಲಕ ಕೊಡಲಾಗುವುದಿಲ್ಲ. ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಕಲಿಯಬಹುದು ಎಂದು ಹೇಳಿದರು.

ಜಿಲ್ಲಾ ಮಟ್ಟದ ಕ್ರೀಡಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನೀವೆಲ್ಲಾ ಭಾಗವಹಿಸಿ ಉತ್ತಮ ಸಾಧನೆ ತೋರಿ. ಇದರೊಟ್ಟಗೆ ನಿಮಗೆ ಇಲ್ಲಿ ಭಾಗವಹಿಸಲು ಅವಕಾಶ ನೀಡಿದ ಇಲಾಖೆಗೆ ಘನತೆ ಗೌರವ ತರುವ ಕೆಲಸ ಮಾಡೋಣ.ಸಾರ್ವಜನಿಕ ಜವಾಬ್ದಾರಿ ನಮ್ಮ ನಿಮ್ಮೆಲರದು,ನಿಮ್ಮೆಲ್ಲರ ಜವಾಬ್ದಾರಿ ಜಿಲ್ಲಾಧಿಕಾರಿಯಾಗಿ ನಾನು ಹೊರಲು ಸಿದ್ಧನಿದ್ದೇನೆ.ನಿಮಗೆ ಏನೇ ಸಮಸ್ಯೆ ಇರಲಿ ಇದನ್ನು ಪರಿಹರಿಸಲು ಶಾಸಕರು ಸಚಿವರು ಸರಕಾರ ನಿಮ್ಮೊಟ್ಟಿಗಿದೆ.ಹೀಗಾಗಿ ಜವಾಬ್ದಾರಿಯಿಂದ ನಮ್ಮ ನಮ್ಮ ಕರ್ತವ್ಯ ನಿರ್ವಹಿಸೋಣ ಎಂದು ಶುಭ ಹಾರೈಸಿದರು.

ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲು ಕಾರಣಕರ್ತರಾದ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಮತ್ತು ತಂಡಕ್ಕೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಪರಿಶಿಷ್ಟಜಾತಿಪಂಗಡ ಸರಕಾರಿ ನೌಕರರ ಸಂಘದ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು.

ಈ ವೇಳೆ ಜಿಲ್ಲಾಧಿಕಾರಿ ಜಿ.ಪ್ರಭು, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಭಾಸ್ಕರ್, ಜಿಲ್ಲಾ ಉಪವಿಭಾಗಾಧಿ ಕಾರಿ ಅಶ್ವಿನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಶ, ಡಿಡಿಪಿಐ ರಮೇಶ್,ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಜಯಲಕ್ಷಿö್ಮಬಾಯಿ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಸಮಿತಿ ಸದಸ್ಯ ಅಮರನಾರಾಯಣಸ್ವಾಮಿ,ರಾಜ್ಯ ಕಾರ್ಯದರ್ಶಿ ಸುನಿಲ್ ಮತ್ತಿತರರು ಇದ್ದರು.