'Ganji Puja' performed: ಬರ ದೂರವಾಗಿ ಮಳೆ ಸುರಿಯಲೆಂದು ಓಂ ಶಕ್ತಿ ದೇವಿಗೆ ಗಂಜಿ ಪೂಜೆ ಆಚರಣೆ: 800ಕ್ಕೂ ಹೆಚ್ಚು ಮಹಿಳೆಯರಿಂದ ವಿಶೇಷ ಪೂಜೆ, ಮೆರವಣಿಗೆ
ಕೆ.ವಿ. ನವೀನ್ ಕಿರಣ್ ಮಾತನಾಡಿ, 8ನೇ ವಾರ್ಡಿನಲ್ಲಿ ಎರಡು ವರ್ಷಗಳ ಹಿಂದೆ ಓಂ ಶಕ್ತಿ ದೇವಸ್ಥಾನ ನಿರ್ಮಾಣವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜಿಲ್ಲೆಯ ಬರ ಪರಿಸ್ಥಿತಿ ದೂರವಾಗಿ ಉತ್ತಮ ಮಳೆಯಾಗಿ ಜನರ ಜೀವನ ಸಮೃದ್ಧಿಯಾಗಲಿ ಎಂಬ ಆಶಯದಿಂದ ಮಹಿಳೆಯರು ಪೂಜೆ ನೆರವೇರಿಸಿದ್ದಾರೆ
-
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿವಾರಣೆಯಾಗಿ ಸಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆ ಬರಬೇಕು ಹಾಗೂ ರೈತಾಪಿ ವರ್ಗದ ಬದುಕು ಹಸನಾಗಬೇಕು ಎಂದು ಪ್ರಾರ್ಥಿಸಿ ನಗರದ 8 ಮತ್ತು 9ನೇ ವಾರ್ಡಿನ ಸುಮಾರು 800ಕ್ಕೂ ಹೆಚ್ಚು ಮಹಿಳೆಯರು ಓಂ ಶಕ್ತಿ ದೇವಿಗೆ ವಿಶೇಷ ಗಂಜಿ ಪೂಜೆ ನೆರವೇರಿಸಿದರು.
ಮಹಿಳೆಯರು ಚಿಕ್ಕ ಮಡಿಕೆಗಳಲ್ಲಿ ಗಂಜಿ ತುಂಬಿಕೊಂಡು ತಲೆಯ ಮೇಲೆ ಹೊತ್ತು, ಓಂ ಶಕ್ತಿ ಮಾಲೆ ಧರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.
ಇದನ್ನೂ ಓದಿ: Chikkaballapur News: ಅಧಿಕಾರಿಗಳನ್ನು ಹೀಯಾಳಿಸುವ ಶಾಸಕರ ಪ್ರವೃತ್ತಿ ಖಂಡನೀಯ: ರಾಜ್ಯ ಉಪಾಧ್ಯಕ್ಷ ವೆಂಕಟರಮಣಪ್ಪ
ಈ ಸಂದರ್ಭದಲ್ಲಿ ಕೆ.ವಿ. ನವೀನ್ ಕಿರಣ್ ಮಾತನಾಡಿ, 8ನೇ ವಾರ್ಡಿನಲ್ಲಿ ಎರಡು ವರ್ಷಗಳ ಹಿಂದೆ ಓಂ ಶಕ್ತಿ ದೇವಸ್ಥಾನ ನಿರ್ಮಾಣವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜಿಲ್ಲೆಯ ಬರ ಪರಿಸ್ಥಿತಿ ದೂರವಾಗಿ ಉತ್ತಮ ಮಳೆಯಾಗಿ ಜನರ ಜೀವನ ಸಮೃದ್ಧಿಯಾಗಲಿ ಎಂಬ ಆಶಯದಿಂದ ಮಹಿಳೆಯರು ಪೂಜೆ ನೆರವೇರಿಸಿದ್ದಾರೆ ಎಂದರು.
ಪೂಜೆಯ ನೇತೃತ್ವ ವಹಿಸಿದ್ದ ವೆಂಕಟರತ್ನಮ್ಮ ಹಾಗೂ ಕನಕಮ್ಮ ಮಾತನಾಡಿ, ಮಳೆ ಕೊರತೆ ಯಿಂದ ಉಂಟಾಗಿರುವ ಸಂಕಷ್ಟ ನಿವಾರಣೆಯಾಗಿ ಉತ್ತಮ ಮಳೆಯಾಗಲಿ ಎಂಬ ಸಂಕಲ್ಪದಿಂದ ಮಾಲಾಧಾರಣೆ ಮಾಡಿ ಪೂಜೆ ಸಲ್ಲಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವೆಂಕಟೇಶ್, ಶಿವರಾಜ್, ಜಾನಿ, ಮಹೇಶ್, ಅಭಿ, ವೆಂಕಟಲಕ್ಷ್ಮಮ್ಮ, ಸುಮಾ, ನವೀನ್, ನರಸಿಂಹಮೂರ್ತಿ, ಭರತ್, ಸೋಮಚಾರಿ ಮತ್ತಿತರರು ಭಾಗವಹಿಸಿದ್ದರು.