ಕಿಸಾನ್ ಸಮ್ಮಾನ್ ಯೋಜನೆಯಡಿ 4 ಸಾವಿರ ಕೊಡಿ: ಕುರುಬೂರು ಶಾಂತಕುಮಾರ್ ಆಗ್ರಹ
ರಾಜ್ಯದ 34 ಸಾವಿರ ಹೈನು ರೈತರಿಗೆ ಕಳೆದ 10 ತಿಂಗಳಿಂದ ಹಾಲಿನ ಪ್ರೋತ್ಸಾಹಧನ 1 ಸಾವಿರ ಕೋಟಿ ಹಣ ಬಾಕಿ ಉಳಿಸಿಕೊಂಡಿರುವ ಸರ್ಕಾರ ಹೈನು ರೈತರಿಗೆ ತೀವ್ರ ಸಂಕಷ್ಟ ನೀಡುತ್ತಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೂ ಮುನ್ನ ಹಾಲಿನ ಪ್ರೋತ್ಸಾಹಧನ ನೀಡ ಬೇಕು, ಇಲ್ಲದಿದ್ದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು
![ಹಾಲಿನ ಪ್ರೋತ್ಸಾಹಧನ 10 ರೂಗಳಿಗೆ ಹೆಚ್ಚಿಸಿ, ಬಾಕಿ ಹಣ ಬಿಡುಗಡೆ ಮಾಡಿ](https://cdn-vishwavani-prod.hindverse.com/media/original_images/ks.jpg)
ಕಿಸಾನ್ ಸಮ್ಮಾನ್ ಯೋಜನೆಯಡಿ ೪ ಸಾವಿರ ನೀಡುವುದು ಸೇರಿ ರೈತರ ಇತರೆ ಬೇಡಿಕೆ ಈಡೇರಿಸಲು ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
![Profile](https://vishwavani.news/static/img/user.png)
ಚಿಕ್ಕಬಳ್ಳಾಪುರ : ರಾಜ್ಯಸರ್ಕಾರ ಕಳೆದ 10 ತಿಂಗಳಿನಿಂದ ಹೈನು ರೈತರಿಗೆ ನೀಡಬೇಕಾದ ಪ್ರೋತ್ಸಾ ಹಧನ ವಿತರಣೆ, ಚುನಾವಣಾಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಭರವಸೆಯಂತೆ ಪ್ರೋತ್ಸಾಹಧನ 10 ರೂಗಳಿಗೆ ಹೆಚ್ಚಿಸಬೇಕು, ಕಿಸಾನ್ ಸಮ್ಮಾನ್ ಯೋಜನೆಯಡಿ 4 ಸಾವಿರ ನೀಡುವುದು ಸೇರಿ ರೈತರ ಇತರೆ ಬೇಡಿಕೆ ಈಡೇರಿಸಲು ರೈ ತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರೈತಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಭೆಯ ನಂತರ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹಧನ ನೀಡಬೇಕು, ಅಲ್ಲದೆ ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಭರವಸೆಯಂತೆ ಹಾಲಿನ ಪ್ರೋತ್ಸಾಹಧನವನ್ನು 10 ರೂಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: Chikkaballapur News: ನೂತನ ಬಿಜೆಪಿ ಜಿಲ್ಲಾಧ್ಯಕ್ಷ 2 ವಾರದಲ್ಲಿ ಬದಲಾಗಲಿದ್ದಾರೆ : ಹೆಚ್.ಆರ್.ಸಂದೀಪ್‌ರೆಡ್ಡಿ ಭವಿಷ್ಯ
ರಾಜ್ಯದ 34 ಸಾವಿರ ಹೈನು ರೈತರಿಗೆ ಕಳೆದ 10 ತಿಂಗಳಿಂದ ಹಾಲಿನ ಪ್ರೋತ್ಸಾಹಧನ 1 ಸಾವಿರ ಕೋಟಿ ಹಣ ಬಾಕಿ ಉಳಿಸಿಕೊಂಡಿರುವ ಸರ್ಕಾರ ಹೈನು ರೈತರಿಗೆ ತೀವ್ರ ಸಂಕಷ್ಟ ನೀಡುತ್ತಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೂ ಮುನ್ನ ಹಾಲಿನ ಪ್ರೋತ್ಸಾಹಧನ ನೀಡ ಬೇಕು, ಇಲ್ಲದಿದ್ದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ ಈ ಹಿಂದಿನ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯ 4 ಸಾವಿರ ಹಣ ಇದೀಗ ನಿಲ್ಲಿಸಲಾಗಿದೆ. ಅದನ್ನು ಮತ್ತೆ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಇನ್ನು ರಾಜ್ಯದಲ್ಲಿ ಮೈಕ್ರೋಪೈನಾನ್ಸ್ ಕಂಪನಿಗಳ ಕಿರುಕುಳ ಮಿತಿ ಮೀರಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಸರ್ಕಾರ ಎಚ್ಚೆತ್ತು ಕಾನೂನು ಮಾಡಲು ಹೊರಟಿದೆ. ಆದರೆ ಇದಕ್ಕೆ ರಾಜ್ಯಪಾಲರು ಸಹಿ ಮಾಡದ ಕಾರಣ ಸುಗ್ರೀವಾಜ್ಞೆ ತಡವಾಗಿದ್ದು, ಮೈಕ್ರೋಫೈನಾನ್ಸ್ ಸಿಬ್ಬಂದಿ ರೈತರಿಗೆ ಕಿರುಕುಳ ನೀಡಿದರೆ ಫೈನಾನ್ಸ್ನವರಿಗೆ ತಕ್ಕ ಪಾಠ ಕಲಿಸುವ ಕೆಲಸವನ್ನು ರೈತಸಂಘ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
ಬಗರ್‌ಹುಕ್ಕುಂ ಸಾಗುವಳಿ ಚೀಟಿ ವಿತರಣೆ ಅರ್ಹ ರೈತರಿಗೆ ಮಾತ್ರ ವಿತರಣೆ ಮಾಡಬೇಕು, ರಿಯಲ್ ಎಸ್ಟೇಟ್ ಮಾಫಿಯಾಗಳು ರೈತರಿಗೆ ತೊಂದರೆ ಕೊಟ್ಟರೆ ರೈತಸಂಘ ಸುಮ್ಮನಿರುವುದಿಲ್ಲ, ಅಂತಹ ವರಿಗೆ ಪಾಠ ಕಲಿಸುವ ಕೆಲಸ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೃಷಿ ಸಂಕಷ್ಟ ಆರಿಯದೆ, ರೈತರ ನೈಜ ಸಮಸ್ಯೆಗೆ ಪರಿಹಾರ ಸೂಚಿಸದೆ ಬಜೆಟ್ ಮಂಡನೆಯಲ್ಲಿ ಅನ್ನದಾತನ ಗುಣಗಾನ ಮಾಡಿ ಕೃಷಿ ಕ್ಷೇತ್ರದ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡಬಾರದು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಮಾಡುವುದು, ಕೃಷಿ ಸಾಲ ನೀತಿ ತಿದ್ದುಪಡಿ, ಬೆಳೆ ವಿಮೆ ಪದ್ದತಿ ಬದಲಾಯಿಸುವುದು ಸೇರಿ ಇತರೆ ಸಮಸ್ಯೆಗಳನ್ನು ಪರಿಹರಿಸುವ ಬದಲು ರಾಜ್ಯ ಸರ್ಕಾರ ನಾಟಕೀಯವಾಗಿ ರೈತರ ಕಣ್ಣಿಗೆ ಮಣ್ಣೆರೆಚುವ ತಂತ್ರಗಾರಿಕೆ ಮಾಡಬಾರದು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಶ್ರೀನಿವಾಸಲು, ಗೌರವಧ್ಯಕ್ಷರಾಗಿ ಟಿ.ಆರ್ .ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಬೈರಾರೆಡ್ಡಿ ಅವರನ್ನು ನೇಮಕ ಮಾಡಲಾಯಿತು.
ಈ ವೇಳೆ ಜಿ.ವಿ.ರಾಜಣ್ಣ, ಟಿ.ಆರ್.ಕೃಷ್ಣಪ್ಪ,ಶ್ರೀನಿವಾಸಲು,ಕೆ.ಬೈರಾರೆಡ್ಡಿ ಮತ್ತಿತರರು ಇದ್ದರು.