Sadhguru Shri Madhusudan Sai: ಆರೋಗ್ಯ ಮತ್ತು ಶಿಕ್ಷಣ ಪ್ರಜಾಸತ್ತಾತ್ಮಕ ಹಕ್ಕುಗಳಾಗಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ
ಸಮಾನತೆ, ಸ್ವಾತಂತ್ರ‍್ಯ, ಭ್ರಾತೃತ್ವ ಹಾಗೂ ಎಲ್ಲರಿಗೂ ನ್ಯಾಯದ ಬಗ್ಗೆ ಅಮೆರಿಕದ ಮಹಾನ್ ನಾಯಕರ ದೃಷ್ಟಿಕೋನದ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಗುಲಾಮಗಿರಿ ಮುಕ್ತ ಮತ್ತು ಬಣ್ಣದ ವಿಚಾರದಲ್ಲೂ ಜನರಿಗೆ ಸಮಾನ ಹಕ್ಕುಗಳನ್ನು ನೀಡುತ್ತಾರೆ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಸೇರಿದಂತೆ ಹಲವು ಅದ್ಭುತ ನಾಯಕರು ತಮ್ಮ ಕೊಡುಗೆಗಳ ಮೂಲಕ ಅಮೆರಿಕವನ್ನು ಮಹಾನ್ ರಾಷ್ಟ್ರವಾಗಿಸಿದರು
-
ಚಿಕ್ಕಬಳ್ಳಾಪುರ: ಶಕ್ತರಿರಲಿ, ಅಶಕ್ತರಿರಲಿ ಎಲ್ಲರಿಗೂ ಆರೋಗ್ಯ ಸೇವೆಗಳು ಸಿಗಬೇಕು. ಇದೇ ಕಾರಣಕ್ಕಾಗಿ ನಾವು ೬೦೦ ಹಾಸಿಗೆಗಳ ಹೊಸ ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ ೯೨ನೇ ದಿನವಾದ ಶನಿವಾರ (ನ ೧೫) ಆಶೀರ್ವಚನ ನೀಡಿದ ಸದ್ಗುರು, ಅಮೆರಿಕವು ಪ್ರಜಾಪ್ರಭುತ್ವವನ್ನು ಪ್ರತಿಪಾದಿಸುತ್ತದೆ. ಆರೋಗ್ಯ ಮತ್ತು ಶಿಕ್ಷಣಗಳೂ ಪ್ರಜಾಸತ್ತಾತ್ಮಕ ಹಕ್ಕುಗಳಾಗಬೇಕು ಎಂದು ಪ್ರತಿಪಾದಿಸಿ ದರು.
ಸಮಾನತೆ, ಸ್ವಾತಂತ್ರ‍್ಯ, ಭ್ರಾತೃತ್ವ ಹಾಗೂ ಎಲ್ಲರಿಗೂ ನ್ಯಾಯದ ಬಗ್ಗೆ ಅಮೆರಿಕದ ಮಹಾನ್ ನಾಯಕರ ದೃಷ್ಟಿಕೋನದ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಗುಲಾಮಗಿರಿ ಮುಕ್ತ ಮತ್ತು ಬಣ್ಣದ ವಿಚಾರದಲ್ಲೂ ಜನರಿಗೆ ಸಮಾನ ಹಕ್ಕುಗಳನ್ನು ನೀಡುತ್ತಾರೆ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಸೇರಿದಂತೆ ಹಲವು ಅದ್ಭುತ ನಾಯಕರು ತಮ್ಮ ಕೊಡುಗೆಗಳ ಮೂಲಕ ಅಮೆರಿಕವನ್ನು ಮಹಾನ್ ರಾಷ್ಟ್ರವಾಗಿಸಿದರು ಎಂದು ನೆನಪಿಸಿ ಕೊಂಡರು.
ಭೂಮಿಯ ಮೇಲಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವವಾದ ಅಮೆರಿಕ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಗಳು ಸೇವಾ ಚಟುವಟಿಕೆಗಳಿಗಾಗಿ ಒಗ್ಗೂಡಿ ಮುನ್ನಡೆಯ ಬೇಕು. ಸಮಾಜ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಟ್ಟಾಗಿ ಸಾಗಬೇಕು. ಎರಡೂ ದೇಶಗಳು ಪರಸ್ಪರ ಕಲಿಯಬೇಕಾದ್ದು ಸಾಕಷ್ಟು ಇದೆ. ನಾವು ಪ್ರತಿದಿನ ಬಳಸುವ ಕಂಪ್ಯೂ ಟರ್, ಅತ್ಯುತ್ತಮ ತಂತ್ರಜ್ಞಾನ, ಅಂತರ್ಜಾಲ ಹಾಗೂ ಸಾಮಾಜಿಕ ಮಾಧ್ಯಮ ಗಳಲ್ಲಿ ಅಮೆರಿಕದ ಕೊಡುಗೆ ಇದೆ ಎಂದು ವಿಶ್ಲೇಷಿಸಿದರು.
ಅಮೆರಿಕದ ಕ್ರಾಸ್‌ರೂಟ್ ಎಕಾಮಿಕ್ಸ್ ಪಾರ್ಟನರ್‌ಶಿಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾದ ಜಾನ್ ಲಿವಿಂಗ್‌ಸ್ಟನ್ಸ್ ಮಾತನಾಡಿ, ಆರೋಗ್ಯ, ಪೋಷಣೆ ಮತ್ತು ಶಿಕ್ಷಣವು ಒಂದು ಸವಲತ್ತು ಅಲ್ಲ, ಅವು ಎಲ್ಲರ ಹಕ್ಕು ಎಂಬ ದೃಢನಿಶ್ಚಯದಿಂದ ಸತ್ಯ ಸಾಯಿ ಸಂಸ್ಥೆಯು ಸೇವೆ ಸಲ್ಲಿಸುತ್ತಿದೆ. ಮಾನವೀಯತೆಯ ನಿಜವಾದ ಧ್ಯೇಯವೇ ಒಂದು ಕುಟುಂಬವಾಗಿದೆ. ಅದುವೇ ವಸುಧೈವ ಕುಟುಂಬಕA- 'ಒಂದು ಜಗತ್ತು ಒಂದು ಕುಟುಂಬ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾಗತಿಕ ನಾಯಕತ್ವ ಪುರಸ್ಕಾರ
ಭಾರತೀಯ ಷೇರು ಮತ್ತು ವಿನಿಮಯ ಮಂಡಳಿ-ಸೆಬಿ ಮಾಜಿ ಅಧ್ಯಕ್ಷರಾದ ಡಾ ದಾಮೋ ದರನ್ ಮತ್ತು ತ್ಯಾಗರಾಜನ್ ಮಿಲ್ಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ರಾದ ಹರಿ ತ್ಯಾಗರಾಜನ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಲಾಯಿತು.
೬ ಕಂಪನಿಗಳಿಗೆ ಸಿಎಸ್‌ಆರ್ ಪುರಸ್ಕಾರ
ಆಸ್ಪತ್ರೆ ನಿರ್ಮಾಣಕ್ಕೆ ಬೆಂಬಲ ನೀಡುತ್ತಿರುವ ಹನ್ಸ್ ಜಿ ಕಾರ್ಪೊರೇಷನ್ ಕಂಪನಿಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅಧ್ಯಕ್ಷರಾದ ರಾಜನ್ ಹನ್ಸ್ಜಿ ಮತ್ತು ಕೀರ್ತಿ ಹನ್ಸ್ಜಿ ಅವರು ಪ್ರಶಸ್ತಿ ಸ್ವೀಕರಿಸಿದರು.
ತಮಿಳುನಾಡಿನ ತೆಂಕಾಸಿ ಕ್ಯಾಂಪಸ್‌ಗೆ ಬೆಂಬಲ ನೀಡುತ್ತಿರುವ ಟೆಕ್ಯುನಿಷನ್ ಕಂಪನಿಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕರಾದ ಡಾ ಜಯಂತಿ ರಮೇಶ್ ಮತ್ತು ರಮೇಶ್ ಧರ್ಮರಾಜ್ ಪ್ರಶಸ್ತಿ ಸ್ವೀಕರಿಸಿ ದರು.
ಆಸ್ಪತ್ರೆ ನಿರ್ಮಾಣಕ್ಕೆ ಬೆಂಬಲ ನೀಡುತ್ತಿರುವ ಆರ್‌ಎಸ್‌ಸ್ ಕ್ರಿಯೇಟಿವ್ ಡಿಸೈನ್ಸ್ ಇಂಕ್ ಕಂಪನಿಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಪ್ರತಿನಿಧಿ ರೂಪಾ ಶರ್ಮಾ ಅವರು ಪ್ರಶಸ್ತಿ ಸ್ವೀಕರಿಸಿದರು.
ಈಚ್ ಒನ್ ಎಜುಕೇಟ್ ಒನ್ ಸ್ಕಾಲರ್ ಶಿಪ್ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿರುವ ಅಮಿಕಾರ್ಪ್ ಮ್ಯಾನೇಜ್ಮೆಂಟ್ ಇಂಡಿಯಾ (ಬೆಂಗಳೂರು) ಕಂಪನಿಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಅಶೋಕನ್ ಕುನ್ನತುಲಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಅನ್ನಪೂರ್ಣ ಟ್ರಸ್ಟ್ಗೆ ಬೆಂಬಲ ನೀಡುತ್ತಿರುವ ಮಾರ್ಗೋ ಸಮೂಹದ ಜೆ.ಪಿ.ಮಾರ್ಗೊ ಕಂಪನಿಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಸಹ ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರವೀಣ್ ಜೈಪುರಿಯಾ ಅವರು ಪ್ರಶಸ್ತಿ ಸ್ವೀಕರಿಸಿದರು.
ಆಸ್ಪತ್ರೆ ನಿರ್ಮಾಣ ಮತ್ತು ಡಿಜಿಟಲ್ ಪರಿವರ್ತನೆಗೆ ಬೆಂಬಲ ನೀಡುತ್ತಿರುವ ಕ್ಲೌಡಿಂಕ್ ಟೆಕ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್‌ಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ರಾದ ಸತ್ಯ ಕಿರಣ್ ಪರುಚುರು ಅವರು ಪ್ರಶಸ್ತಿ ಸ್ವೀಕರಿಸಿದರು.
ಅಮೆರಿಕ ಪ್ರತಿನಿಧಿಗೆ ಮಾನವೀಯ ಪುರಸ್ಕಾರ
ಅಮೆರಿಕದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಡಾ.ನಿತಿನ್ ಶಾ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು. ಅಮೆರಿಕದ ಪ್ರತಿನಿಧಿ ಗೇಲ್ ಅರ್ನಾಲ್ಡ್ ಅವರು ತಮ್ಮ ದೇಶದ ಕಲೆ, ಸಂಸ್ಕೃತಿ, ಸಂಗೀತ, ಪ್ರಸಿದ್ಧ ತಾಣಗಳು, ಜನಪ್ರಿಯ ಖಾದ್ಯಗಳು, ಸಾಂಪ್ರದಾಯಿಕ ಉಡುಪು, ಅಧ್ಯಾತ್ಮ, ಜನಪ್ರಿಯ ನಾಯಕರು, ಖ್ಯಾತ ಕ್ರೀಡಾಪಟುಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಮತ್ತೊಬ್ಬ ಪ್ರತಿನಿಧಿ ರೂಪಾ ಶರ್ಮಾ ಅವರು ತಮ್ಮ ಜೀವನದಲ್ಲಿ ಆಧ್ಯಾತ್ಮಿಕ ಪರಿವರ್ತನೆಯ ಅನುಭವವನ್ನು ಹಂಚಿಕೊAಡರು.