Dr. M. C. Sudhakar: ಸುಧಾಕರ್ ಎಂದರೆ ಅಭಿವೃದ್ಧಿ- ಅಭಿವೃದ್ಧಿ ಎಂದರೆ ಸುಧಾಕರ್: ಸೈಯದ್ ಸಿಕಂದರ್
ಇಂದು ಚಿಂತಾಮಣಿ ನಗರದಲ್ಲಿ ಸಚಿವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಚಿತ್ರಗಳ ಬ್ಯಾನರ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು ಸಚಿವರು ಚಿಂತಾಮಣಿ ವಿಧಾನ ಸಭಾ ಕ್ಷೇತ್ರವನ್ನು ಇಡೀ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನು ಮಾಡಲು ಪಣ ತಟ್ಟಿದ್ದಾರೆ. ಅಭಿವೃದ್ಧಿಗೆ ನಾವೆಲ್ಲರೂ ಅವರಿಗೆ ಸಹಕರಿಸಬೇಕೆಂದು ಹೇಳಿದರು
-
ಕಾಂಗ್ರೆಸ್ ಕಾರ್ಯಕರ್ತರಿಂದ ಸಚಿವರ ಅಭಿವೃದ್ಧಿ ಕಾರ್ಯಗಳ ಪೋಸ್ಟರ್ ಪ್ರಚಾರ
ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ! ಎಂ ಸಿ ಸುಧಾಕರ್(Dr.M.C.Sudhakar) ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೆಲವರು ಸಹಿಸದೆ ಅಪಪ್ರಚಾರ ಮಾಡುತ್ತಿದ್ದಾರೆ. ಸುಧಾಕರ್ ಎಂದರೆ ಅಭಿವೃದ್ಧಿ- ಅಭಿವೃದ್ಧಿಯೆಂದರೆ ಸುಧಾಕರ್ ಎಂಬ ಘೋಷಣೆಯೊಂದಿಗೆ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳ ಪೋಸ್ಟರ್ ಬಿಡುಗಡೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಸೈಯದ್ ಸಿಕಂದರ್ ಹೇಳಿದರು.
ಇದನ್ನೂ ಓದಿ: Chintamani News: ಪೋಷಕರು ಮತ್ತು ಶಿಕ್ಷಕರ ಸಮನ್ವಯತೆ ಅಗತ್ಯ : ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್
ಇಂದು ಚಿಂತಾಮಣಿ ನಗರದಲ್ಲಿ ಸಚಿವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಚಿತ್ರಗಳ ಬ್ಯಾನರ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು ಸಚಿವರು ಚಿಂತಾಮಣಿ ವಿಧಾನಸಭಾ ಕ್ಷೇತ್ರವನ್ನು ಇಡೀ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನು ಮಾಡಲು ಪಣ ತಟ್ಟಿದ್ದಾರೆ. ಅಭಿವೃದ್ಧಿಗೆ ನಾವೆಲ್ಲರೂ ಅವರಿಗೆ ಸಹಕರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಇಮ್ರಾನ್ ಪಾಷಾ, ತಬರೇಜ್ ಪಾಷಾ, ನವೀದ್ ಸೇರಿದಂತೆ ಮತ್ತಿತರರು ಇದ್ದರು.