Free Health Camp: 45 ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಶಿಬಿರ: 103 ಮಂದಿಯಲ್ಲಿ ಹೊಸ ರಕ್ತದೊತ್ತಡ ಪ್ರಕರಣ ಪತ್ತೆ
ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಇಲಾಖೆಯ ಸಹಯೋಗ ದಲ್ಲಿ ನಡೆದ ಶಿಬಿರಗಳಲ್ಲಿ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಕಣ್ಣಿನ ತಪಾಸಣೆ, ಕುಷ್ಠರೋಗ, ರಕ್ತಹೀನತೆ, ಕ್ಷಯರೋಗ ಹಾಗೂ ಎಚ್‌ಐವಿ ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸಲಾಯಿತು.
-
ಚಿಕ್ಕಬಳ್ಳಾಪುರ: ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ)-ವಿಬಿಜಿ ರಾಮ್ ಜೀ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಜಿಲ್ಲೆಯ 45 ಗ್ರಾಮ ಪಂಚಾಯಿತಿಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ(Free Health Camp)ಗಳನ್ನು ಆಯೋಜಿಸಲಾಗಿದ್ದು, ಸಾವಿರಾರು ಕಾರ್ಮಿಕರಿಗೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಶಿಬಿರಗಳಲ್ಲಿ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಕಣ್ಣಿನ ತಪಾಸಣೆ, ಕುಷ್ಠರೋಗ, ರಕ್ತಹೀನತೆ, ಕ್ಷಯರೋಗ ಹಾಗೂ ಎಚ್‌ಐವಿ ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸಲಾಯಿತು.
ಇದನ್ನೂ ಓದಿ: Free Health Camp: 45 ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಶಿಬಿರ: 103 ಮಂದಿಯಲ್ಲಿ ಹೊಸ ರಕ್ತದೊತ್ತಡ ಪ್ರಕರಣ ಪತ್ತೆ
ಒಟ್ಟು 1,848 ಜನರಿಗೆ ರಕ್ತದೊತ್ತಡ ತಪಾಸಣೆ ನಡೆಸಿದಾಗ 103 ಹೊಸ ಪ್ರಕರಣಗಳು ಪತ್ತೆಯಾಗಿವೆ. 1,827 ಜನರಿಗೆ ಮಧುಮೇಹ ತಪಾಸಣೆ ನಡೆಸಲಾಗಿದ್ದು, 70 ಹೊಸ ಪ್ರಕರಣಗಳು ವರದಿಯಾಗಿವೆ. 1,830 ಜನರಿಗೆ ಬಾಯಿ ಕ್ಯಾನ್ಸರ್ ತಪಾಸಣೆ ನಡೆಸಿದಾಗ 14 ಶಂಕಿತ ಪ್ರಕರಣಗಳು ಪತ್ತೆಯಾಗಿವೆ.
ಅದೇ ರೀತಿ 933 ಜನರಿಗೆ ಸ್ತನ ಕ್ಯಾನ್ಸರ್ ತಪಾಸಣೆ ನಡೆಸಿದ್ದು, ಒಂದು ಶಂಕಿತ ಪ್ರಕರಣ ಪತ್ತೆ ಯಾಗಿದೆ. 702 ಜನರಿಗೆ ಗರ್ಭಕಂಠ ಕ್ಯಾನ್ಸರ್ ತಪಾಸಣೆ ನಡೆಸಲಾಗಿದ್ದು, ಯಾವುದೇ ಶಂಕಿತ ಪ್ರಕರಣ ಕಂಡುಬಂದಿಲ್ಲ. 1,600 ಜನರಿಗೆ ಕಣ್ಣಿನ ತಪಾಸಣೆ ನಡೆಸಿದಾಗ 29 ಹೊಸ ಹಾಗೂ 83 ಶಂಕಿತ ಪ್ರಕರಣಗಳು ಪತ್ತೆಯಾಗಿವೆ.
ಇನ್ನು 1,452 ಜನರಿಗೆ ರಕ್ತಹೀನತೆ ತಪಾಸಣೆ ನಡೆಸಿದ್ದು, 62 ಹೊಸ ಹಾಗೂ 105 ಶಂಕಿತ ಪ್ರಕರಣ ಗಳು ವರದಿಯಾಗಿವೆ. 1,747 ಜನರಿಗೆ ಕ್ಷಯರೋಗ ತಪಾಸಣೆ ನಡೆಸಿದಾಗ 15 ಶಂಕಿತ ಪ್ರಕರಣಗಳು ಹಾಗೂ 1,776 ಜನರಿಗೆ ಎಚ್‌ಐವಿ ತಪಾಸಣೆ ನಡೆಸಿದಾಗ ಎರಡು ಶಂಕಿತ ಪ್ರಕರಣಗಳು ಪತ್ತೆಯಾ ಗಿವೆ. 1,762 ಜನರಿಗೆ ನಡೆಸಿದ ಕುಷ್ಠರೋಗ ತಪಾಸಣೆಯಲ್ಲಿ ಯಾವುದೇ ಹೊಸ ಅಥವಾ ಶಂಕಿತ ಪ್ರಕರಣಗಳು ಕಂಡುಬಂದಿಲ್ಲ.
ಶಿಬಿರಗಳಲ್ಲಿ ಪತ್ತೆಯಾದ ಹೊಸ ಮತ್ತು ಶಂಕಿತ ಪ್ರಕರಣಗಳ ಕುರಿತು ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ನಿರಂತರ ಅನುಸರಣೆ ಕೈಗೊಳ್ಳಲಿದ್ದಾರೆ. ಅಗತ್ಯವಿರುವವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆತಂದು ವೈದ್ಯಾಧಿಕಾರಿಗಳ ಮೂಲಕ ಹೆಚ್ಚಿನ ಪರೀಕ್ಷೆ, ಚಿಕಿತ್ಸೆ ಹಾಗೂ ಅಗತ್ಯ ಔಷಧೋಪಚಾರ ಒದಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.