ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

World Environment Day: ವಿಶ್ವ ಪರಿಸರ ದಿನದ ಅಂಗವಾಗಿ ಜಾಲಾರಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಈಶ ಸ್ವಯಂಸೇವಕರಿಂದ ಸ್ವಚ್ಛತಾ ಅಭಿಯಾನ

ಬೆಟ್ಟದ ಮೇಲಿರುವ ದೇವಾಲಯದ ಆವರಣ, ಬೆಟ್ಟದ ತಪ್ಪಲು ಹಾಗೂ ದೇವಸ್ಥಾನಕ್ಕೆ ಹೋಗುವ ಹಾದಿಯನ್ನು ಒಳಗೊಂಡಿತ್ತು. ಒಟ್ಟು ಸುಮಾರು 95 ಸ್ವಯಂ ಸೇವಕರು ಇದರಲ್ಲಿ ಭಾಗವಹಿಸಿದ್ದು, ಈ ಪ್ರದೇಶದಿಂದ 40ಕ್ಕೂ ಹೆಚ್ಚು ಚೀಲಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.

ದೇವಸ್ಥಾನದಲ್ಲಿ ಈಶ ಸ್ವಯಂಸೇವಕರಿಂದ ಸ್ವಚ್ಛತಾ ಅಭಿಯಾನ

-

Profile
Ashok Nayak Jun 2, 2026 10:28 PM

ಚಿಕ್ಕಬಳ್ಳಾಪುರ : 2026ರ ವಿಶ್ವ ಪರಿಸರ ದಿನದ ಆಚರಣೆ(Celebration of World Environment Day)ಯ ಅಂಗವಾಗಿ, ಈಶ ಫೌಂಡೇಶನ್‌ನ 80ಕ್ಕೂ ಹೆಚ್ಚು ಸ್ವಯಂ ಸೇವಕರು ಸದ್ಗುರು ಸನ್ನಿಧಿ ಬಳಿಯಿರುವ ಜಾಲಾರಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. 'ಹಸಿರು' ಸ್ವಯಂಸೇವಾ ಸಂಸ್ಥೆ (NGO) ಮತ್ತು ಸ್ಥಳೀಯ ಯುವಕರ ಸಹಯೋಗದೊಂದಿಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: World Environment Day: ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ ಅಳವಡಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಈ ಅಭಿಯಾನವು ಬೆಟ್ಟದ ಮೇಲಿರುವ ದೇವಾಲಯದ ಆವರಣ, ಬೆಟ್ಟದ ತಪ್ಪಲು ಹಾಗೂ ದೇವಸ್ಥಾನಕ್ಕೆ ಹೋಗುವ ಹಾದಿಯನ್ನು ಒಳಗೊಂಡಿತ್ತು. ಒಟ್ಟು ಸುಮಾರು 95 ಸ್ವಯಂ ಸೇವಕರು ಇದರಲ್ಲಿ ಭಾಗವಹಿಸಿದ್ದು, ಈ ಪ್ರದೇಶದಿಂದ 40ಕ್ಕೂ ಹೆಚ್ಚು ಚೀಲಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.

ಪರಿಸರ ಜವಾಬ್ದಾರಿ, ಸುತ್ತಮುತ್ತಲಿನ ಜನರ ಭಾಗವಹಿಸುವಿಕೆ ಹಾಗೂ ಸಾರ್ವಜನಿಕ ಮತ್ತು ಆಧ್ಯಾತ್ಮಿಕ ಸ್ಥಳಗಳ ನಿರ್ವಹಣೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮವು ಮುಂಬರುವ 'ಸದ್ಗುರು ಸನ್ನಿಧಿ ಪರಿಸರ ಉತ್ಸವ'ಕ್ಕೆ ಚಾಲನೆ ನೀಡುವ ವೇದಿಕೆಯಾಗಿಯೂ ಕಾರ್ಯ ನಿರ್ವಹಿಸಿತು. ಇದು ಗ್ರಾಮ ಮಟ್ಟದ ಪರಿಸರ ಜಾಗೃತಿ ಮೂಡಿಸುವ ಒಂದು ವಿಶೇಷ ಉಪಕ್ರಮವಾಗಿದೆ.

clean 2

ಪರಿಸರ ಜಾಗೃತಿ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಜೂನ್‌ ನಿಂದ ಜುಲೈವರೆಗೆ ಐದು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 35 ಹಳ್ಳಿಗಳಲ್ಲಿ 'ಸದ್ಗುರು ಸನ್ನಿಧಿ ಪರಿಸರ ಉತ್ಸವ'ವನ್ನು ಆಯೋಜಿಸಲಾಗುವುದು.

ವಿಶ್ವ ಪರಿಸರ ದಿನದ ಆಚರಣೆಯ ಭಾಗವಾಗಿ ಜೂ.4 ಮತ್ತು 5 ರಂದು ಅನಂತಪುರದ 'ದಕ್ಷಿಣ ವಲಯ ಕೃಷಿ ಯಂತ್ರೋಪಕರಣಗಳ ತರಬೇತಿ ಮತ್ತು ಪರೀಕ್ಷಾ ಸಂಸ್ಥೆ'ಯಲ್ಲಿ (SRFMTTI) ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳ ಲಾಗುವುದು.

Clean

ಈ ಉಪಕ್ರಮಗಳ ಜೊತೆಗೆ, ಹಸಿರು ಚಿಕ್ಕಬಳ್ಳಾಪುರ ಯೋಜನೆ ಅಡಿಯಲ್ಲಿ ಈಶ ಸಂಸ್ಥೆಯು ಜಲಾನಯನ ಪ್ರದೇಶ ಅಭಿವೃದ್ಧಿ ಹಾಗೂ ಸುಸ್ಥಿರ ಕೃಷಿ ಕಾರ್ಯಕ್ರಮಗಳನ್ನು ಜಾರಿ ಗೊಳಿಸುತ್ತಿದ್ದು, ಮರ ಆಧಾರಿತ ಕೃಷಿಯನ್ನು ಉತ್ತೇಜಿಸಲು ಕಾವೇರಿ ಕೂಗು ಚಟುವಟಿಕೆ ಗಳನ್ನು ಸಹ ನಡೆಸುತ್ತಿದೆ. 

ಈ ಎಲ್ಲ ಪ್ರಯತ್ನಗಳು ಜಿಲ್ಲೆಯ ದೀರ್ಘಕಾಲೀನ ಪರಿಸರ ಸಂರಕ್ಷಣೆ ಮತ್ತು ಜಲ ಭದ್ರತೆ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಸದ್ಗುರು ತಿಳಿಸಿದ್ದಾರೆ.