MLA K.H. Puttaswamy Gowda: ಬಡವರು ಯಾವುದೇ ಪಕ್ಷದಲ್ಲಿರಲಿ ನಿವೇಶನ ನೀಡುವುದು ನನ್ನ ಧರ್ಮ: ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ
ಪ್ರತಿಯೊಬ್ಬ ಬಡವನಿಗೂ ತನ್ನದೇ ಆದ ಒಂದು ಸೂರು ಮಾಡಿಕೊಳ್ಳಬೇಕು, ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ಸಂಸಾರವನ್ನು ಚೆನ್ನಾಗಿ ನಡೆಸಬೇಕು ಎಂಬ ಕನಸುಗಳಿರುತ್ತವೆ. ಅವರಿಗೆ ರಾಜಕೀಯ ಮಾಡುವಷ್ಟು ಸಮಯವಿರುವುದಿಲ್ಲ. ಅವರಿಗೆ ಯಾವ ಪಕ್ಷವಾದರೇನು? ಆದರೆ ದಶಕಗಳಿಂದ ಕ್ಷೇತ್ರದ ಬಡವರು ನಿವೇಶನಗಳಿಗೆ ಅಲೆಯುತ್ತಿದ್ದರೂ ಕಲ್ಪಿಸದಿರುವುದು ವಿಪರ್ಯಾಸ. ಈಗ ಆ ಕೆಲಸವನ್ನು ನಾನು ಕೈಗೆತ್ತಿಕೊಂಡಿದ್ದೇನೆ,
ಬಡವರಿಗೆ ಯಾವುದೇ ಪಕ್ಷವಿಲ್ಲ. ಅವರಿಗೆ ದುಡಿದು ಜೀವನ ಸಾಗಿಸುವುದೇ ಕಷ್ಟ. ಅಂತಹವರು ಯಾವುದೇ ಪಕ್ಷದಲ್ಲಿರಲಿ ನಿವೇಶನ ನೀಡುವುದು ನನ್ನ ಧರ್ಮ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು. -
ಗೌರಿಬಿದನೂರು: ಬಡವರಿಗೆ ಯಾವುದೇ ಪಕ್ಷವಿಲ್ಲ. ಅವರಿಗೆ ದುಡಿದು ಜೀವನ ಸಾಗಿಸುವುದೇ ಕಷ್ಟ. ಅಂತಹವರು ಯಾವುದೇ ಪಕ್ಷದಲ್ಲಿರಲಿ ನಿವೇಶನ ನೀಡುವುದು ನನ್ನ ಧರ್ಮ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ(MLA K.H. Puttaswamy Gowda) ಹೇಳಿದರು.
ತಾಲೂಕಿನ ಡಿ.ಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಪ್ರತಿಯೊಬ್ಬ ಬಡವನಿಗೂ ತನ್ನದೇ ಆದ ಒಂದು ಸೂರು ಮಾಡಿಕೊಳ್ಳಬೇಕು, ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ಸಂಸಾರವನ್ನು ಚೆನ್ನಾಗಿ ನಡೆಸಬೇಕು ಎಂಬ ಕನಸುಗಳಿರುತ್ತವೆ. ಅವರಿಗೆ ರಾಜಕೀಯ ಮಾಡುವಷ್ಟು ಸಮಯವಿರುವುದಿಲ್ಲ. ಅವರಿಗೆ ಯಾವ ಪಕ್ಷವಾದರೇನು? ಆದರೆ ದಶಕಗಳಿಂದ ಕ್ಷೇತ್ರದ ಬಡವರು ನಿವೇಶನಗಳಿಗೆ ಅಲೆಯುತ್ತಿದ್ದರೂ ಕಲ್ಪಿಸದಿರುವುದು ವಿಪರ್ಯಾಸ. ಈಗ ಆ ಕೆಲಸವನ್ನು ನಾನು ಕೈಗೆತ್ತಿಕೊಂಡಿದ್ದೇನೆ, ಪಕ್ಷಾತೀತ ಹಾಗೂ ಧರ್ಮಾತೀತವಾಗಿ ಅರ್ಹ ಬಡವ ರನ್ನು ಮಾತ್ರ ಗುರುತಿಸಿ,ಸರ್ಕಾರದ ನಿಯಮಾವಳಿಗಳ ಪ್ರಕಾರ ನಿವೇಶನ ನೀಡುವ ಮೂಲಕ ಅವರ ಸೂರಿನ ಕನಸನ್ನು ನನಸು ಮಾಡುತ್ತೇನೆ ಎಂದರು.
ಇದನ್ನೂ ಓದಿ:MLA K.H. Puttaswamy Gowda: ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡರಿಂದ ಮಲ್ಲೇನಹಳ್ಳಿ ಗ್ರಾಮಸ್ಥರಿಗೆ ಅಭಯ
ನಿವೇಶನ ಕೊಟ್ಟು ನೀವು ನನಗೆ ಮತ ಹಾಕಿ ಎಂದು ಕೇಳುವ ಕೀಳು ಮಟ್ಟಕ್ಕೆ ನಾನು ಹೋಗುವು ದಿಲ್ಲ. ತಮಗೆ ಇಷ್ಟ ಬಂದವರಿಗೆ ಮತ ಹಾಕುವುದು ಮತದಾರರ ವಿವೇಚನೆಗೆ ಬಿಟ್ಟಿದ್ದು ಎಂದ ಶಾಸಕರು, ಇಂತಹ ಒಳ್ಳೆಯ ಕೆಲಸಕ್ಕೂ ಕಳಂಕ ತರುವ ಕೆಲಸವನ್ನು ಕೆಲವರು ಮಾಡುತ್ತಿರುವುದು ಬೇಸರದ ಸಂಗತಿ. ಆದರೆ ಕ್ಷೇತ್ರದ ಜನತೆ ನನ್ನ ಜೊತೆಗಿದ್ದಾರೆ ಎಂದು ತಿಳಿಸಿದರು.
ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಮಾತನಾಡಿ, ನಿವೇಶನಗಳಿಗಾಗಿ ಸರಕಾರ ಮಂಜೂರು ಮಾಡಿ ರುವ ಜಮೀನುಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿ ನಿವೇಶನಗಳನ್ನು ವಿಂಗಡಿಸಲಾಗುವುದು. ಅಂತಿಮವಾಗಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಪಿವಿ ರಾಘವೇಂದ್ರ ಹನುಮಾನ್ ಮಾತನಾಡಿ, ಶಾಸಕ ಪುಟ್ಟಸ್ವಾಮಿ ಗೌಡರ ಪ್ರಾಮಾಣಿಕ ಹಾಗೂ ನಿರಂತರ ಪ್ರಯತ್ನದಿಂದಾಗಿ ಕ್ಷೇತ್ರದ ಬಡವರ ದಶಕ ಗಳ ಕನಸು ನನಸಾಗುತ್ತಿದೆ ಎಂದರು.
ಪಂಚಾಯಿತಿಗಳಲ್ಲಿ ಆಯ್ಕೆ; ಸೋಮವಾರ 3 ಗ್ರಾಪಂಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳ ಆಯ್ಕೆ ನಡೆಯಿತು. ಡಿ.ಪಾಳ್ಯ ಪಂಚಾಯಿತಿಯಲ್ಲಿ 2 ಎಕರೆ ಜಮೀನು ಮಂಜೂರಾಗಿದ್ದು, ನಿವೇಶನಕ್ಕಾಗಿ 28 ಅರ್ಜಿ ಸಲ್ಲಿಕೆಯಾಗಿವೆ. ಮೊದಲ ಹಂತದಲ್ಲಿ 23 ಮಂದಿ ಫಲಾನುಭವಿಗಳ ಆಯ್ಕೆ ಮಾಡಲಾ ಯಿತು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ.ಎಚ್.ನಾಗೇಂದ್ರ, ಪಂಚಾಯತಿ ನೋಡಲ್ ಅಧಿಕಾರಿ ಡಾ.ಮಾರುತಿ ಇದ್ದರು.
ನಾಮಗೊಂಡ್ಲು ಗ್ರಾಪಂಗೆ 3 ಎಕರೆ ಜಮೀನು ಮಂಜೂರಾಗಿದ್ದು, 227 ಅರ್ಜಿ ಸಲ್ಲಿಕೆಯಾಗಿವೆ. ಮೊದಲ ಹಂತದಲ್ಲಿ 40 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಗಂಗಸಂದ್ರ ಗ್ರಾಪಂಗೆ 9 ಎಕರೆ ಜಮೀನು ಮಂಜೂರಾಗಿದ್ದು, 340 ಅರ್ಜಿ ಸಲ್ಲಿಕೆಯಾಗಿವೆ. ಮೊದಲ ಹಂತದಲ್ಲಿ 64 ಫಲಾನು ಭವಿಗಳನ್ನು ಆಯ್ಕೆ ಮಾಡಲಾಗಿದೆ.. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೂಪ, ಪಂಚಾಯತಿ ನೋಡಲ್ ಅಧಿಕಾರಿ ಕೆ. ಜೆ. ರಮೇಶ್, ಹಾಜರಿದ್ದರು. ಈ ವೇಳೆ ತಹಸಿಲ್ದಾರ್ ಅರವಿಂದ್, ತಾ.ಪಂ ನೀವು ಜಿಕೆ ಹೊನ್ನಯ್ಯ, ಹಾಜರಿದ್ದರು.