ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA Yashwant Rayagouda Patil: ಇಂಡಿ ಅಭಿವೃದ್ದಿಗಾಗಿ ಕೆಲಸ ಮಾಡುವ ಪ್ರಾಧಿಕಾರ: ಯಶವಂತರಾಯಗೌಡರು

ನಗರಗಳ ವ್ಯವಸ್ಥಿತ ಬೆಳವಣೆಗೆಗೆ ಯೋಜನೆ ಸಿದ್ದಪಡಿಸುವದು ಮತ್ತು ಅನುಷ್ಠಾನಗೊಳಿಸುವದು ಉದ್ದೇಶವಾಗಿದೆ. ಅಭಿವೃದ್ದಿ ಪಡಿಸಿದ ಪ್ರದೇಶಗಳಲ್ಲಿ ರಸ್ತೆ ನೀರು ಸರಬರಾಜು ಒಳಚರಂಡಿ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವದು ನಮ್ಮ ಗುರಿಯಾಗಿದೆ ಎಂದರು. ಇಂಡಿ ನಗರದ ವ್ಯವಸ್ಥಿತ ಅಭಿವೃದ್ದಿ ವಸತಿ ಯೋಜನೆಗಳು ಮತ್ತು ಮೂಲಸೌಕರ್ಯ ಮಾಡುವ ಉದ್ದೇಶ ಹೊಂದಿದೆ ಎಂದರು.

ಇಂಡಿ ಅಭಿವೃದ್ದಿಗಾಗಿ ಕೆಲಸ ಮಾಡುವ ಪ್ರಾಧಿಕಾರ: ಯಶವಂತರಾಯಗೌಡರು

ನೂತನ ಅಧ್ಯಕ್ಷ ಅಜೀತ ಧನಶೆಟ್ಟಿ ಮತ್ತು ಸದಸ್ಯರಿಗೆ ಸಾಯಿ ಶಿಕ್ಷಣ ಸಂಸ್ಥೆಯಿಂದ ಸನ್ಮಾನ -

Profile
Ashok Nayak Apr 22, 2026 10:43 PM

ಇಂಡಿ: ಇಂಡಿ ನಗರದ ಯೋಜನಾಬದ್ದ ಅಭಿವೃದ್ದಿಗಾಗಿ ಕೆಲಸ ಮಾಡುವ ಸಂಸ್ಥೆ ಇಂಡಿ ನಗರಾಭಿ ವೃದ್ದಿ ಪ್ರಾಧಿಕಾರ, ಅದರ ಪ್ರಯೋಜನ ಪಡೆದು ಕಾರ್ಯ ರೂಪಿಸಿ ಇಂಡಿ ನಗರ ಅಭಿವೃದ್ದಿ ಪಡಿಸುವ ಗುರಿಯಾಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ(MLA Yashwant Rayagouda Patil)ರು ಹೇಳಿದರು.

ನಗರದ ಆಡಳಿತ ಸೌಧದ ಮೂರನೇಯ ಮಹಡಿಯಲ್ಲಿ ಇಂಡಿ ನಗರಾಭಿವೃದ್ದಿ ಪ್ರಾಧಿಕಾರ ಕಚೇರಿ ಉದ್ಘಾಟಿಸಿ ಮಾತನಾಡಿದರು. ಇಂಡಿ ನಗರ ಅಭಿವೃದ್ದಿಗೆ ಇಂಡಿ ಅಭಿವೃದ್ದಿ ಪ್ರಾಧಿಕಾರ ಮತ್ತು ಇಂಡಿ ನಗರಸಭೆ ಕಾರ್ಯನಿರ್ವಹಿಸುತ್ತವೆ ಎಂದರು.

ಇಂಡಿ ಅಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ಅಜೀತ ಧನಶೆಟ್ಟಿ ಮಾತನಾಡಿ, ನಗರಗಳ ವ್ಯವಸ್ಥಿತ ಬೆಳವಣೆಗೆಗೆ ಯೋಜನೆ ಸಿದ್ದಪಡಿಸುವದು ಮತ್ತು ಅನುಷ್ಠಾನಗೊಳಿಸುವದು ಉದ್ದೇಶ ವಾಗಿದೆ. ಅಭಿವೃದ್ದಿ ಪಡಿಸಿದ ಪ್ರದೇಶಗಳಲ್ಲಿ ರಸ್ತೆ ನೀರು ಸರಬರಾಜು ಒಳಚರಂಡಿ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವದು ನಮ್ಮ ಗುರಿಯಾಗಿದೆ ಎಂದರು. ಇಂಡಿ ನಗರದ ವ್ಯವಸ್ಥಿತ ಅಭಿವೃದ್ದಿ ವಸತಿ ಯೋಜನೆಗಳು ಮತ್ತು ಮೂಲಸೌಕರ್ಯ ಮಾಡುವ ಉದ್ದೇಶ ಹೊಂದಿದೆ ಎಂದರು.

ಇದನ್ನೂ ಓದಿ: MLA Yashwant Rayagouda Patil: ಹೆಣ್ಣು ಹುಟ್ಟಿದರೆ ಹುಣ್ಣಲ್ಲ, ಹೊನ್ನು ಹುಟ್ಟಿದಂತೆ: ಯಶವಂತರಾಯಗೌಡರು

ಇದೇ ವೇಳೆ ನೂತನ ಅಧ್ಯಕ್ಷರಾಗಿ ಅಜೀತ ಧನಶೆಟ್ಟಿ, ಸದಸ್ಯರಾಗಿ ಚನ್ನಪ್ಪ ಮಲ್ಲಪ್ಪ ಬೋಡಿ, ರವೀಂದ್ರ ನಿಗಡಿ, ದತ್ತಾತ್ರೇಯ ಜೋಶಿ ಅಧಿಕಾರ ಸ್ವೀಕರಿಸಿದರು.

ಜಿಲ್ಲಾಧಿಕಾರಿ ಕೆ.ಆನಂದ, ಪೌರಾಯುಕ್ತ ಶಿವಾನಂದ ಪೂಜಾರಿ, ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಕೃಷಿ ಸಹಾಯಕ ನಿರ್ದೇಶಕ ಮಹಾ ದೇವಪ್ಪ ಏವೂರ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ, ವಕೀಲರ ಸಂಘದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ, ಅಶೋಕ ಗಜಾಕೋಶ, ಸಂದೀಪ ಧನಶೆಟ್ಟಿ, ಶಾಂತುಗೌಡ ಬಿರಾದಾರ ಶ್ರೀಕಾಂತ ಕುಡಿಗನೂರ, ಸತೀಶ ಕುಂಬಾರ ಮತ್ತಿತರಿದ್ದರು.

ನೂತನ ಅಧಕ್ಷರಾಗಿ ಆಯೆಯಾದ ಅಧ್ಯಕ್ಷ ಮತ್ತು ಸದಸ್ಯರನ್ನು ಸಾಯಿ ವಿದ್ಯಾವರ್ಧಕ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ಮತ್ತು ಗಣ್ಯರು ಸನ್ಮಾನಿಸಿದರು.