ಏ.23ರಿಂದ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ
23 ರಂದು ಸಾಯಂಕಾಲ 7 ಗಂಟೆಗೆ ಪುರಾಣ ಮಹಾಮಂಗಲ, ಶ್ರೀ ವಿಶ್ವಕರ್ಮ ಜಗದ್ಗುರು ಮೂರಝಾವಧೀಶ್ವರ ಅಫಝಲಪೂರದ ಶ್ರೀ ಪ್ರಣವ ನಿರಂ ಜನ ಶ್ರೀಗಳು, ಸಿಂದಗಿಯ ರಾಮ ಚಂದ್ರ ಶ್ರೀಗಳು, ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು, ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ, ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ ಉಪಸ್ಥಿತರಿರುವರು
ಕಾಳಿಕಾ ದೇವಿ -
ಇಂಡಿ: ಜಗನ್ಮಾತೆ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸ ಉಚಿತ ಸಾಮೂಹಿಕ ಉಪನಯನ ಹಾಗೂ ನೂತನ ರಥೋತ್ಸವದ ಕಾರ್ಯಕ್ರಮ ಏ.23ರಿಂದ ಏ.26ರವರೆಗೆ ಜರುಗಲಿವೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ನರಸಿಂಹ ತಿಳಿಸಿದ್ದಾರೆ.
23 ರಂದು ಸಾಯಂಕಾಲ 7 ಗಂಟೆಗೆ ಪುರಾಣ ಮಹಾಮಂಗಲ, ಶ್ರೀ ವಿಶ್ವಕರ್ಮ ಜಗದ್ಗುರು ಮೂರಝಾವಧೀಶ್ವರ ಅಫಝಲಪೂರದ ಶ್ರೀ ಪ್ರಣವ ನಿರಂ ಜನ ಶ್ರೀಗಳು, ಸಿಂದಗಿಯ ರಾಮ ಚಂದ್ರ ಶ್ರೀಗಳು, ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು, ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ, ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ ಉಪಸ್ಥಿತರಿರುವರು.
ಇದನ್ನೂ ಓದಿ: Indi News: ಗ್ರಾಪಂ ಗಳಿಗೆ ಬಾರದ 15ನೇ ಹಣಕಾಸು ಯೋಜನೆ ಅನುದಾನ: ಬಹುತೇಕ ಗ್ರಾಪಂಗಳಿಗೆ ಅರ್ಥಿಕ ಸಂಕಷ್ಟ
ಶುಕ್ರವಾರ ಮಧ್ಯಾನ್ಹ 2 ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ, ಮುರನಾಳದ ಶ್ರೀ ಜಗನ್ನಾಥ ಶ್ರೀಗಳು, ಮೇಘರಾಜ ಶ್ರೀಗಳು ಬಾಗಲಕೋಟ, ಶ್ರೀಮತಿ ಬೌರಮ್ಮ ಕಣ್ಣಿ, 25ರಂದು ಮಧ್ಯಾನ್ಹ 2 ಗಂಟೆಗೆ ಶ್ರೀ ಕಾಳಿಕಾ ಸೇವಾ ಬೂ಼ಷಣ ಪ್ರಶಸ್ತಿ ಸಮಾರಂಭ, ಶಿವಜವಳ ಗೇರಾದ ಸೂರ್ಯ ನಾರಾಯಣ ಶ್ರೀಗಳು, ಅಗರಖೇಡದ ಪ್ರಭುಲಿಂಗೇಶ್ವರ ಶ್ರೀಗಳು, ತಡವಲಗಾದ ವಿಜಯಾನಂದ ಶ್ರೀಗಳು, ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮತ್ತಿತರರು, 26ರಂದು ಮಧ್ಯಾನ್ಹ 12 ಗಂಟೆಗೆ ಧರ್ಮಸಭೆ, ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳು, ಮುಗಳಖೇಡದ ಷಡಷ್ಕರಿ ಶಿವಯೋಗಿ ಡಾ. ಮುರುಗರಾಜೇಂದ್ರ ಶ್ರೀಗಳು, ವಿಜಯಪುರದ ಮಹೇಂದ್ರ ಶ್ರೀಗಳು, ಬರಡೋಲದ ಭಾಸ್ಕರಾನಂದ ಶ್ರೀಗಳು, ಕನ್ನೂರ ಪ್ರಕಾಶ ಶ್ರೀಗಳು, ಶಾಸಕ ಯಶವಂತರಾಯಗೌಡ ಪಾಟೀಲರು, ಬಸವರಾಜ ಕಣ್ಣಿ, ಡೊಮನಾಳದ ನಾನಾಗೌಡ ಬಿರಾದಾರ ಮತ್ತಿತರಿರುವರು.
ದೇವಸ್ಥಾನ ಸಮಿತಿಯ ಶಿವಪ್ಪ ಬಡಿಗೇರ, ಭೀಮರಾಯ ಬಡಿಗೇರ, ಜಯಶ್ರೀ ಪತ್ತಾರ, ಪದ್ಮಾವತಿ ಪೊದ್ದಾರ, ಸುಜಿತ ಲಾಳಸಂಗಿ ಉಪಸ್ಥಿತರಿರುವರು.
ಶ್ರೀ ಕಾಳಿಕಾ ಸೇವಾರತ್ನ ಪ್ರಶಸ್ತಿಯನ್ನು ರಾಯಚೂರದ ಕೆ.ಡಿ.ಬಡಿಗೇರ, ಇಂಡಿಯ ಯಮುನಾ ಅಕ್ಕನವರು, ಇಂಡಿಯ ರವಿ ಸಿದ್ದಣ್ಣ ಬಡಿಗೇರ, ಇಂಡಿಯ ಸುಭಾಸ ಬಡಿಗೇರ, ಗಂಗಾ ಗಲಗಲಿ ಇಂಡಿ, ಶರಣಬಸಪ್ಪ ಕಲ್ಲೋಳ್ಳಿ ಇಂಡಿ, ಆನಂದ ಹಿರೇಮಠ ಇಂಡಿ, ಭಾರತಿ ಬಡಿಗೇರ ಇಂಡಿ, ಸುಜೀತಕುಮಾರ ಲಾಳಸಂಗಿ ಇಂಡಿ,ಅಶೋಕ ಬಡಿಗೇರ ಇವರಿಗೆ ನೀಡಲಾಗುವದೆಂದು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.