ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿ ಯಾರು ಹೆಚ್ಚಾಗಿ ಪ್ರಚುರಪಡಿಸದೆ ಇರುವುದು ಆಶ್ಚರ್ಯ ಸಂಗತಿ
ವಚನ ಸಾಹಿತ್ಯದಲ್ಲಿ ವಚನಕಾರ್ತಿಯರಂತೆ ಕೊಡುಗೆ ಇದ್ದವರನ್ನು ಬಹುಶಯಾವ ಶತ ಮಾನದಲ್ಲಿ ಕಂಡಿಲ್ಲ ಕಾಲಘಟ್ಟದಲ್ಲಿ ಹಲವಾರುಶರಣರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿ ಯಾರು ಹೆಚ್ಚಾಗಿ ಪ್ರಚುರ ಪಡಿಸದೆ ಇರುವುದು ಆಶ್ಚರ್ಯ ಸಂಗತಿ ಇಂಥವರಿಗೆ ಗೌಪ್ಯ ವಚನಕಾರ್ತಿಯರು ಎಂದು ಕರೆದರು ಎಂದು ಕದಳಿ ವೇದಿಕೆ ಅಧ್ಯಕ್ಷ ಗಂಗಾಗಲಗಲಿ ಹೇಳಿದರು.

ಇಂಡಿ: ವಚನ ಸಾಹಿತ್ಯದಲ್ಲಿ ವಚನಕಾರ್ತಿಯರಂತೆ ಕೊಡುಗೆ ಇದ್ದವರನ್ನು ಬಹುಶಯಾವ ಶತ ಮಾನದಲ್ಲಿ ಕಂಡಿಲ್ಲ ಕಾಲಘಟ್ಟದಲ್ಲಿ ಹಲವಾರುಶರಣರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿ ಯಾರು ಹೆಚ್ಚಾಗಿ ಪ್ರಚುರ ಪಡಿಸದೆ ಇರುವುದು ಆಶ್ಚರ್ಯ ಸಂಗತಿ ಇಂಥವರಿಗೆ ಗೌಪ್ಯ ವಚನಕಾರ್ತಿಯರು ಎಂದು ಕರೆದರು ಎಂದು ಕದಳಿ ವೇದಿಕೆ ಅಧ್ಯಕ್ಷ ಗಂಗಾಗಲಗಲಿ ಹೇಳಿದರು. ಅಹಿರಸಂಗ ಗ್ರಾಮದ ವಸತಿ ಗೃಹದಲ್ಲಿ ದಿವಂಗತ ಶಿವಲಿಂಗಪ್ಪಗೌಡ ಬಿರಾದಾರ, ಶಾಂತಾಬಾಯಿ ಬಿರಾದಾರ ಇವರ ಪುಣ್ಯ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 12ನೇ ಶತಮಾನ ಅನುಭವದ ಶರಣ, ಸಂತತಿ ಯುಗವಾಗಿದ್ದು ಶರಣರು ತಮ್ಮ ಅಂತರ್ಯದಲ್ಲಿ ನವ ಜಾಗೃತಿ ನವ ಸಾಕ್ಷರತೆಯ ಅರಿವು ಮೂಡಿಸಿ ಎಲ್ಲ ವರ್ಗದ ಮಹಿಳೆಯರಿಗೂ ವಿಧ್ಯಾಭ್ಯಾಸ ಕಲಿಸಿ ೩೬ ಕ್ಕೂ ಹೆಚ್ಚು ಜನ ಶರಣಿಯರು ವಚನ ರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟರು ಸತ್ಯೆ ಸಾಮ್ರಾಜ್ಯದ ಸಾರ್ವಭೌಮ ಎಂದೆನಿಸಿದ ಬಸವಣ್ಣನವರು ತಮ್ಮ ಜೊತೆ ಲೋಕದ ಜನರು ಬೆಳೆಯಬೇಕೆಂಬ ಸಂಕಲ್ಪ ತೊಟ್ಟು ವಿಶ್ವ ಕುಟುಂಬಿಯಾಗಿದ್ದರು. ಅವರ ದೃಷ್ಠಿಯಲ್ಲಿ ಹೆಣ್ಣು ಪ್ರತಿಭೆಯಲ್ಲಿ ಬೌದ್ದಿಕತೆಯಲ್ಲಿ ಪುರುಚನಷ್ಠೇ ಸರಿ ಸಮಾನರು ಜೀವನದ ಸಕಲ ವ್ಯವಹಾರಗಳಲ್ಲಿ ಹೆಣ್ಣಿನಷ್ಟು ಕುಶಾಗ್ರಮತಿ ಬೇರಾರು ಇಲ್ಲ, ಮಹಿಳೆಯರು ಅಂತ ಕರುಣವನ್ನು ಒರೆ ಹಚ್ಚಿ ನೋಡಿದರು.
ನಿಲಾಂಬಿಕೆ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಇನೀತರ ಅನೇಕ ಶಿವಶರಣಯರ ವಚನಗಳಲ್ಲಿ ವೈಚಾರಿಕ ವೈಜ್ಞಾನಿಕ ಮತ್ತು ಅಧ್ಯಾತ್ಮಿಕತೆ ಇತ್ತು, ಒಂದೊಂದು ವಚನಗಳು ಓರೆಗಲ್ಲಿಒಗೆ ಹಚ್ಚಿ ದರೆ ಜೀವನದ ಅನುಭವಗಳು ಕಂಡು ಬರುತ್ತ ಎಂದು ಕದಳಿ ವೇದಿಕೆ ಅದ್ಯಕ್ಷ ಗಂಗಾಗಲಗಲಿ ಹೇಳಿದರು.
ಅಧ್ಯಕ್ಷತೆ ವಹಿಸಿ ಶರಣಗೌಡ ಬಿರಾದಾರ, ಜಯಶ್ರೀ ಬಿರಾದಾರ ದಂಪತಿಗಳು ತಮ್ಮ ತಂದೆ ತಾಯಿ ಯನ್ನು ಸ್ಮರಿಸಿದರು. ಮಲ್ಲನಗೌಡ ಬಿರಾದಾರ, ಬಸುಗೌಡ, ಅಣ್ಣುಗೌಡ, ಗುರುದೇವಿ, ನಿರ್ಮಲಾ , ಗೌರಾದೇವಿ, ಶೋಭಾ ಚೆನ್ನಕ್ಕ ಪಾಟೀಲ, ರಾಘವೇಂದ್ರ ಬಿರಾದಾರ, ಪ್ರಭಾಕರ ಹಿರೇಮಠ ಇನ್ನಿತರ ಅಹಿರಸಂಗ ಗ್ರಾಮದ ಹಿರಿಯರು ಶರಣ ಬಂಧುಗಳು ಹಾಗೂ ಕದಳಿ ವೇದಿಕೆಯ ಜಯಶ್ರೀ ತೇಲಗ ,ಬೀನಾ ಸುಮಂಗಲಾ, ಶಶಿಕಲಾ, ಕಲಾವತಿ ಅನೇಕ ಶರಣ ಶರಣಿಯರು ಉಪಸ್ಥಿತರಿದ್ದರು.