ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs DC: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಹೇಗಿರಲಿದೆ ಆರ್‌ಸಿಬಿ ಪ್ಲೇಯಿಂಗ್‌ 11

IPL 2026: ಬೆಂಗಳೂರಿನಲ್ಲಿ ಸದ್ಯ ಮಳೆ ಬರುವಂತೆ ಕಾಣುತ್ತಿಲ್ಲ. ಹಗಲು ಪಂದ್ಯವಾದ ಕಾರಣ ತಾಪಮಾನವು 32 ರಿಂದ 34 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಹೀಗಾಗಿ ಆಟಗಾರರು ಹೆಚ್ಚು ದಣಿಯುವ ಸಾಧ್ಯತೆಯಿದೆ.

ಬ್ಯಾಟಿಂಗ್‌ ಪಿಚ್‌ನಲ್ಲಿ ಆರ್‌ಸಿಬಿ vs ಡೆಲ್ಲಿ ಸೆಣಸು

Royal Challengers Bengaluru vs Delhi Capitals -

Abhilash BC
Abhilash BC Apr 17, 2026 1:56 PM

ಬೆಂಗಳೂರು, ಎ.17: ಸತತ ಗೆಲುವಿನ ಜೋಶ್‌ನಲ್ಲಿ ಆರ್‌ಸಿಬಿ(RCB vs DC) ಮತ್ತು ಗೆಲುವಿನ ಹಳಿಗೆ ಮರಳುವ ಪ್ರಯತ್ನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಶನಿವಾರದ ಐಪಿಎಲ್‌(IPL 2026)ನ ಡಬಲ್‌ ಹೆಡರ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಹಗಲು ನಡೆಯುವ ಈ ಪಂದ್ಯಕ್ಕೆ ಎಂ.ಚಿನ್ನಸ್ವಾಮಿ(Chinnaswamy Stadium) ಕ್ರೀಡಾಂಗಣ ಅಣಿಯಾಗಿದೆ.

ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು 2026ರ ಋತುವನ್ನು ಪ್ರಬಲ ರೀತಿಯಲ್ಲಿ ಆರಂಭಿಸಿದ್ದು, ಐದು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳನ್ನು ದಾಖಲಿಸಿದೆ. ಮೂರು ಪಂದ್ಯಗಳನ್ನು ತವರಿನಲ್ಲಿ ಗೆದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲಿನ ನಂತರ ಆರು ದಿನಗಳ ವಿರಾಮ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪೂರ್ಣ ವಿಶ್ವಾಸದೊಂದಿಗೆ ಪಂದ್ಯವನ್ನಾಡಲು ಸಜ್ಜಾಗಿದೆ. ಡೆಲ್ಲಿ ತಂಡದಲ್ಲಿರುವ ಕನ್ನಡಿಗ ಕೆ.ಎಲ್​ ರಾಹುಲ್​ ಅವರಿಗೆ ಇದು ತವರಿನ ಪಂದ್ಯ. ಇದೇ ಕ್ರೀಡಾಂಗಣದಲ್ಲಿ ಅವರು ಆಡಿ ಬೆಳದದ್ದು. ಹೀಗಾಗಿ ಅವರು ಪಂದ್ಯದ ಪ್ರಮುಖ ಹೈಲೆಟ್ಸ್‌ ಆಗಿದ್ದಾರೆ. ಅಲ್ಲದೆ ನಾಳೆ ಅವರ ಹುಟ್ಟುಹಬ್ಬವೂ ಆಗಿರುವ ಕಾರಣ ಆರ್‌ಸಿಬಿ ಅಭಿಮಾನಿಗಳ ಬೆಂಬಲವೂ ರಾಹುಲ್‌ಗೆ ಸಿಗಲಿದೆ.

ಬ್ಯಾಟಿಂಗ್‌ ಸ್ನೇಹಿ ಪಿಚ್‌

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಯಾವಾಗಲೂ ಬ್ಯಾಟಿಂಗ್ ಸ್ನೇಹಿ ಸ್ಥಳವಾಗಿದೆ. ಔಟ್​ ಫೀಲ್ಡ್​ ಕೂಡ ತುಂಬಾ ಹತ್ತಿರ ಇರುವ ಕಾರಣ ಬ್ಯಾಟರ್​ಗಳಿಗೆ ಇದು ಸ್ವರ್ಗವಾಗಿದೆ. ಹೀಗಾಗಿ ಬೌಲರ್​ಗಳು ಇಲ್ಲಿ ಶಕ್ತಿಗಿಂತ ಯುಕ್ತಿಯನ್ನು ಪ್ರದರ್ಶಿಸಬೇಕಿದೆ. ಸ್ಲೋ ಬೌಲಿಂಗ್​ ಮೂಲಕ ಬ್ಯಾಟರ್​ಗಳನ್ನು ಕಟ್ಟಿ ಹಾಕಬೇಕಿದೆ. ಸ್ಪಿನ್ನರ್​ಗಳಿಗೆ ಈ ಪಿಚ್​ ಹೆಚ್ಚು ನರವು ನೀಡುತ್ತದೆ. ಆದ್ದರಿಂದ ಇತ್ತಂಡಗಳು ಸ್ಪಿನ್ನ್​ ಬೌಲರ್​ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬಹುದು. ಚೇಸಿಂಗ್‌ ನಡೆಸುವ ತಂಡಗಳೇ ಇಲ್ಲಿ ಹೆಚ್ಚಾಗಿ ಗೆದ್ದಿರುವ ಕಾರಣ ಟಾಸ್‌ ಗೆದ್ದ ನಾಯಕ ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

ಮಳೆ ಭೀತಿಯಿಲ್ಲ

ಬೆಂಗಳೂರಿನಲ್ಲಿ ಸದ್ಯ ಮಳೆ ಬರುವಂತೆ ಕಾಣುತ್ತಿಲ್ಲ. ಹಗಲು ಪಂದ್ಯವಾದ ಕಾರಣ ತಾಪಮಾನವು 32 ರಿಂದ 34 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಹೀಗಾಗಿ ಆಟಗಾರರು ಹೆಚ್ಚು ದಣಿಯುವ ಸಾಧ್ಯತೆಯಿದೆ.

ಆರ್‌ಸಿಬಿ vs ಡೆಲ್ಲಿ ಪಂದ್ಯದಲ್ಲಿ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು

ಮುಖಾಮುಖಿ

ಉಭಯ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 33 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಆರ್‌ಸಿಬಿ ಗರಿಷ್ಠ 20 ಪಂದ್ಯಗಳನ್ನು ಗೆದ್ದರೆ, ಡೆಲ್ಲಿ 12 ಪಂದ್ಯ ಜಯಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಸಂಭಾವ್ಯ ತಂಡಗಳು

ಆರ್‌ಸಿಬಿ: ಫಿಲಿಪ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ರಸಿಖ್ ಸಲಾಮ್ ದಾರ್, ಸುಯಾಶ್ ಶರ್ಮಾ.

ಇಂಪ್ಯಾಕ್ಟ್ ಪ್ಲೇಯರ್: ವಿರಾಟ್ ಕೊಹ್ಲಿ.

ಡೆಲ್ಲಿ ಕ್ಯಾಪಿಟಲ್ಸ್‌: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿ.ಕೀ.), ಸಮೀರ್ ರಿಜ್ವಿ, ಅಕ್ಷರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಔಕಿಬ್ ನಬಿ ದಾರ್, ಲುಂಗಿ ಎನ್‌ಗಿಡಿ, ಕುಲದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.

ಇಂಪ್ಯಾಕ್ಟ್ ಪ್ಲೇಯರ್: ಅಶುತೋಷ್ ಶರ್ಮಾ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ.

ಪ್ರಸಾರ: ಸ್ಟಾರ್‌ ಸ್ಪೋರ್ಟ್‌, ಜಿಯೋ ಹಾಟ್‌ಸ್ಟಾರ್‌.