ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chintamani News: ಚಿಂತಾಮಣಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಿಂದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿರವರ ಹುಟ್ಟು ಹಬ್ಬ ಆಚರಣೆ

ಸರಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಗೂ ಆನಾಥಾಶ್ರಮದಲ್ಲಿನ ಆನಾಥ ಮಕ್ಕಳಿಗೆ ಬ್ರೇಡ್ ಹಾಗೂ ಹಣ್ಣು ಹಂಪಲಗಳನ್ನು ವಿತರಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರ ಸ್ವಾಮಿರವರ ಹುಟ್ಟು ಹಬ್ಬವನ್ನು ಚಿಂತಾಮಣಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತ ರು ಜೆಡಿಎಸ್ ಕೋರ್ ಕಮಿಟಿ ಅದ್ಯಕ್ಷ ಜೆಕೆ ಕೃಷ್ಣಾರೆಡಿರವರ ಮಾರ್ಗದರ್ಶನದಲ್ಲಿ ಆರ್ಥಪೂರ್ಣವಾಗಿ ಆಚರಣೆ ಮಾಡಿದರು.

ಸರಕಾರಿ ಆಸ್ಪತ್ರೆಯಲ್ಲಿ ಹಾಗೂ ಆನಾಥಾಶ್ರಮದಲ್ಲಿ ಹಣ್ಣು ಹಂಪಲ ವಿತರಣೆ

-

Ashok Nayak
Ashok Nayak Dec 16, 2025 11:09 PM

ಚಿಂತಾಮಣಿ: ಸರಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಗೂ ಆನಾಥಾಶ್ರಮದಲ್ಲಿನ ಆನಾಥ ಮಕ್ಕಳಿಗೆ ಬ್ರೇಡ್ ಹಾಗೂ ಹಣ್ಣು ಹಂಪಲಗಳನ್ನು ವಿತರಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(Former Chief Minister and Union Minister H.D. Kumaraswamy)ರವರ ಹುಟ್ಟುಹಬ್ಬವನ್ನು ಚಿಂತಾಮಣಿಯಲ್ಲಿ ಜೆಡಿಎಸ್ (JDS)ಪಕ್ಷದ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಕೋರ್ ಕಮಿಟಿ ಅದ್ಯಕ್ಷ ಜೆಕೆ ಕೃಷ್ಣಾರೆಡ್ಡಿರವರ ಮಾರ್ಗದರ್ಶನದಲ್ಲಿ ಆರ್ಥಪೂರ್ಣವಾಗಿ ಆಚರಣೆ ಮಾಡಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿರವರ ಹುಟ್ಟು ಹಬ್ಬದ ಅಂಗವಾಗಿ ಜೆಡಿಎಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅದ್ಯಕ್ಷ ಹಾಗೂ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ದಿರವರ ಮಾರ್ಗದರ್ಶನದಲ್ಲಿ ನಗರದ ಸೊಣ್ಣಶೆಟ್ಟಿ ಹಳ್ಳಿಯಲ್ಲಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ, ಅನ್ನದಾನ ಮಾಡಿ ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ತೇರಳಿ ಆಸ್ಪತ್ರೆಯಲ್ಲಿನ ಹೊರ ಹಾಗೂ ಒಳ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿ ತದನಂತರ ಟ್ಯಾಂಕ್ ಬಂಡ್ ರಸ್ತೆಯಲ್ಲಿನ ಶಿಲ್ಪ ಆನಾಥಾಶ್ರಮಕ್ಕೆ ತೇರಳಿ ಆನಾಥ ಮಕ್ಕಳಿಗೆ ಬ್ರೇಡ್ ಹಣ್ಣು ಹಂಪಲಗಳನ್ನು ವಿತರಣೆ ಮಾಡುವು ದರ ಮೂಲಕ ಆರ್ಥಪೂರ್ಣವಾಗಿ ಕುಮಾರಸ್ವಾಮಿರವರ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು.

ಇದನ್ನೂ ಓದಿ: Chinthamani Crime: ITC ನಕಲಿ ಕಂಪನಿಯ ಸಿಗರೇಟ್ ಮಾರಾಟ: ಮೂವರು ಆರೋಪಿಗಳ ಸಮೇತ ಕಾರು ವಶಕ್ಕೆ

ಇನ್ನೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜೆಕೆ ಭವನದಲ್ಲಿ ಕೇಕ್ ಕತ್ತರಿಸಿ, ಸಿಹಿಹಚಿಚಿ ಅನ್ನದಾನ ಮಾಡುವುದರ ಮೂಲಕ ಕುಮಾರಸ್ವಾಮಿರವರ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಸಂತೇಕಲ್ಲಹಳ್ಳಿ ಪ್ರಭಾಕರ್, ಮಾಜಿ ನಗರಸಭಾ ಸದಸ್ಯರಾದ ಆಬ್ಬುಗುಂಡು ಶ್ರೀನಿವಾಸರೆಡ್ಡಿ, ವೆಂಕಟರವಣಪ್ಪ, ಆಗ್ರಹಾರ ಮುರಳಿ,ದೇವಳಂಶಂಕರ್, ಮಂಜುನಾಥ್, ಚಾಂದ್ ಪಾಷಾ, ಅಲ್ಲಾ ಬಕಾಷ್, ಕೃಷ್ಣ ಮೂರ್ತಿ, ಜೆಡಿಎಸ್ ತಾಲೂಕು ಅದ್ಯಕ್ಷ ದಿನ್ನಮಿಂದಹಳ್ಳಿ ಭೈರಾರೆಡ್ಡಿ, ಜೆಡಿಎಸ್ ತಾಲೂಕು ಯುವ ಘಟಕದ ಅದ್ಯಕ್ಷ ವೆಂಕಟಾಚಲಪತಿ, ಜಿಲ್ಲಾ ಜೆಡಿಎಸ್ ಎಸ್ಸಿ ಘಟಕದ ಜಿಲ್ಲಾದ್ಯಕ್ಷ ಮಾದಮಂಗಳ ಅಂಜಿ, ಮುಖಂಡರಾದ ಶ್ರೀನಿವಾಸಗೌಡ, ಕುರುಬೂರುನಟರಾಜ್, ಅಪ್ಸರ್ ಪಾಷಾ, ಮುನಾವರ್, ಅಸ್ಗರ್ ಖಾನ್, ಜನಾರ್ದನ್, ವಿಜಿ ನಾಗಾ, ಮಂಜು, ಬಾಲಾಜಿ, ಸಿದ್ಡೇಪಲ್ಲಿ ಹರೀಶ್ ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.