ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

kadalekai Parishe: ಚಿಕ್ಕಬಳ್ಳಾಪುರ ವೀರಾಂಜನೇಯ ಸನ್ನಿಧಿಯಲ್ಲಿ ಕಡಲೇಕಾಯಿ ಪರಿಷೆಗೆ ಚುಂಚಶ್ರೀ ಚಾಲನೆ

ನಗರದ ಹೊರ ವಲಯದ ಆದಿಚುಂಚನಗಿರಿ ಶಾಖಾ ಮಠದ ಎದುರು ಸೂಲಾ ಲಪ್ಪ ದಿನ್ನೆಯಲ್ಲಿ ನೆಲೆಸಿರುವ ಶ್ರೀವೀರಾಂಜನೇಯ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಕಡಲೇ ಕಾಯಿ ಪರಿಷೆ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ವೀರಾಂಜನೇಯ ಸನ್ನಿಧಿಯಲ್ಲಿ ಕಡಲೇಕಾಯಿ ಪರಿಷೆಗೆ ಚುಂಚಶ್ರೀ ಚಾಲನೆ

ವೀರಾಂನೇಯಸ್ವಾಮಿಯ ರಥೋತ್ಸವ ಕೂಡ ಭಕ್ತಗಣದ ನಡುವೆ ಶ್ರದ್ಧಾಭಕ್ತಿಯಿಂದ ನಡೆಯಿತು. -

Ashok Nayak
Ashok Nayak Dec 7, 2025 10:31 PM

ಚಿಕ್ಕಬಳ್ಳಾಪುರ : ನಗರದ ಹೊರ ವಲಯದ ಆದಿಚುಂಚನಗಿರಿ ಶಾಖಾ ಮಠದ ಎದುರು ಸೂಲಾ ಲಪ್ಪ ದಿನ್ನೆಯಲ್ಲಿ ನೆಲೆಸಿರುವ ಶ್ರೀವೀರಾಂಜನೇಯ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಕಡಲೇ ಕಾಯಿಪರಿಷೆ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ಕಡಲೇ ಕಾಯಿ ಪರಿಷೆ ಪ್ರಯುಕ್ತ ಮೊದಲು ಜಡಲತಿಮ್ಮನಹಳ್ಳಿ ಗ್ರಾಮದಿಂದ ವೀರಾಂಜನೇಯ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಭವ್ಯ ಮುತ್ತಿನ ಪಲ್ಲಕ್ಕಿಯೊಂದಿಗೆ ಬೆಂಗಳೂರು ರಸ್ತೆಯ ಮೂಲಕ ವೀರಗಾಸೆ, ಡೊಳ್ಳುಕುಣಿತ, ಪೂಜಾ ಕುಣಿತ ಮತ್ತಿತರ ಸಾಂಸ್ಕೃತಿಕ ಕಲಾ ಮೇಳಗಳೊಂದಿಗೆ ಶ್ರೀ ಆದಿಚುಂಚನಗಿರಿ ಶಾಖಾ ಮಠದವರೆಗೂ ತಂದು ನಂತರ ಮಠದ ಮುಂಭಾಗ ದಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದವರೆಗೂ ಭವ್ಯ ಮೆರವಣಿಗೆ ನಡೆಸಲಾಯಿತು.    

ಇದನ್ನೂ ಓದಿ: Chikkaballapur News: ಅಂಬೇಡ್ಕರ್ ರೀತಿ ನಿರಂತರ ಅಧ್ಯನಶೀಲರಾಗುವ ಮೂಲಕ ದೇಶದ ಆಸ್ತಿಯಾಗಬೇಕು: ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಬಣ್ಣನೆ

ಈ ವೇಳೆ, ಮುತ್ತಿನ ಪಲ್ಲಕ್ಕಿಯಲ್ಲಿ ತಂದಿದ್ದ ವೀರಾಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ದೇವಾಲಯದಲ್ಲಿ ವೀರಾಂಜನೇಯಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬಳಿಕ ಭಕ್ತಾದಿಗಳತ್ತ ಕಡಲೆಕಾಯಿ ಪೊಟ್ಟಣಗಳನ್ನು ತೂರಿ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ತಮ್ಮ ಭಕ್ತಿ ಸಮರ್ಪಿಸಿದರು. ಹನುಮ ಜಯಂತಿ ಸಂದರ್ಭದಲ್ಲಿ ಪ್ರತಿ ವರ್ಷ ಕಡಲೆಕಾಯಿ ಪರಿಷೆ ಸಂಭ್ರಮದಿಂದ ನಡೆಸುತ್ತೇವೆ. ವಿವಿಧ ಭಾಗಗಳಿಂದ ಗ್ರಾಮಸ್ಥರು ಭಾರಿ ಪ್ರಮಾಣದಲ್ಲಿ ಕಡಲೆಕಾಯಿ ಮಾರಾಟಕ್ಕೆ ಬರುತ್ತದೆ. ಕೆಲವರು ಜನರಿಗೆ ವಿತರಿಸಲು ಕಡಲೆಕಾಯಿ ತರುತ್ತಾರೆ ಎಂದು ದೇವಾಲಯದ ಅರ್ಚಕರು ತಿಳಿಸಿದರು.

cbpm8t

ಇದಕ್ಕೂ ಮುನ್ನ ದೇವಾಲಯದ ಆವರಣದಲ್ಲಿ ಬೆಳಿಗ್ಗೆ ೭ಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಭಜನಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ  ೯ರಿಂದ ಮಧ್ಯಾಹ್ನ ೧೨ರವರೆಗೆ   ಆದಿಚುಂಚನಗಿರಿ ಶಾಖಾ ಮಠದ ಸಾಯಿಕೀರ್ತಿನಾಥ ಸ್ವಾಮೀಜಿ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನ ೨ ರಿಂದ ೪ರವರೆಗೆ ಆದಿಚುಂಚನಗಿರಿ ಮಠ ಮತ್ತು ಜಡಲತಿಮ್ಮನಹಳ್ಳಿ ಗ್ರಾಮಸ್ಥರಿಂದ ದೇವರ ಉತ್ಸವ ಮತ್ತು ಪಾನಕ ಸೇವೆ ನಡೆಯಿತು. ಮಧ್ಯಾಹ್ನ ೩ ರಿಂದ ಸಂಜೆ ೬ ರವರೆಗೆ ಭಕ್ತಿಗೀತೆ ಗಳ ಗಾಯನ ಕಾರ್ಯಕ್ರಮ ನಡೆಯಿತು.

ಪರಿಷೆಗೂ ಮುನ್ನ ಸುತ್ತಮುತ್ತಲ ಗ್ರಾಮಗಳಿಂದ ಸುಮಂಗಲಿಯರು ವೀರಾಂಜನೇಯಸ್ವಾಮಿಗೆ ತಂಬಿಟ್ಟಿನಾರತಿ ಪೂಜೆ ನೆರವೇರಿಸಿದರು.

ವೀರಾಂಜನೇಯಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಜಾನಪದ ಕಲಾತಂಡಗಳ ಕುಣಿತ ವಿಶೇಷವಾದ ಮೆರುಗು ನೀಡಿದ್ದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳಿಗೆ ಪಾನಕ ಪನ್ನೀರಿನ ಜತೆಗೆ ತೀರ್ಥಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿತ್ತು.

ಕಡಲೆಕಾಯಿ ಪರಿಷೆಯಲ್ಲಿ ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಮಂಗಳಾನಾಥ ಸ್ವಾಮೀಜಿ,  ಜಡಿಲತಿಮ್ಮನಹಳ್ಳಿಯ ಗ್ರಾಮಸ್ಥರಾದ ಶಂಕರ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುಖ್ಯ ನಿರ್ವಾಹಣಾಧಿಕಾರಿ ಡಾ.ಎನ್. ಶಿವರಾಮರೆಡ್ಡಿ, ಎಸ್ ಜೆಸಿಐಟಿ ಪ್ರಾಂಶುಪಾಲ ಡಾ. ಜಿ. ಟಿ ರಾಜು, ಆಡಳಿತಾಧಿಕಾರಿ ರಂಗಸ್ವಾಮಿ, ಕುಲಸಚಿವ ಜೆ.ಸುರೇಶ,ಅಗಲಗುರ್ಕಿ ಬಿಜಿಎಸ್ ಶಾಲೆಯ ಪ್ರಾಂಶು ಪಾಲ ಡಿ.ಸಿ.ಮೋಹನ್ ಕುಮಾರ್,  ಎಲ್ಲಾ ಶಾಖಾ ಮಠಗಳ ಸ್ವಾಮೀಜಿಗಳು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಎಲ್ಲಾ ಶಾಲಾ-ಕಾಲೇಜುಗಳ ಭೋಧಕ, ಬೋಧಕೇತರ ಸಿಬ್ಬಂದಿ, ಶ್ರೀಮಠದ ಸದ್ಭಕ್ತರು ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು, ಪಾಲ್ಗೊಂಡು, ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಂಜನೇಯನ ದರ್ಶನ ಪಡೆದರು. ಈ ವೇಳೆ ಉಪಸ್ಥಿತ ರಿದ್ದ ಚುಂಚಶ್ರೀಗಳು  ಭಕ್ತರಿಗೆ ಆಶೀರ್ವದಿಸಿದರು.