Chikkaballlapur News: ಜಿಲ್ಲಾ ಕೇಂದ್ರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಕನ್ನಡ ಸೇನೆ ಸಂಘಟನೆ
ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ನಗರ ಜಿಲ್ಲೆಯಾಗಿ 18 ವರ್ಷಗಳೇ ಕಳೆದರೂ ಸಮಸ್ಯೆ ಗಳಿಂದ ನರಳುತ್ತಿದೆ.ನೂತನ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಇತ್ಯರ್ಥ ಪಡಿಸ ಬೇಕು ಎಂದು ಜಿಲ್ಲಾ ಕನ್ನಡಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾ ಯಿತು.
ನಗರದಲ್ಲಿ ಬಹು ದಿನಗಳಿಂದ ಹಾಗೆಯೇ ಉಳಿದಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಇವುಗಳಿಗೆ ಪರಿಹಾರ ಕಾಣಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಕನ್ನಡ ಸೇನೆ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ರವಿಕುಮಾರ್ ನೇತೃತ್ವದಲ್ಲಿ ಮನವಿ ಪತ್ರ ನೀಡಿದರು. -
ಚಿಕ್ಕಬಳ್ಳಾಪುರ: ನಗರದಲ್ಲಿ ಬಹು ದಿನಗಳಿಂದ ಹಾಗೆಯೇ ಉಳಿದಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಇವುಗಳಿಗೆ ಪರಿಹಾರ ಕಾಣಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಕನ್ನಡ ಸೇನೆ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ರವಿಕುಮಾರ್ ನೇತೃತ್ವದಲ್ಲಿ ಮನವಿ ಪತ್ರ ನೀಡಿದರು.
ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ನಗರ ಜಿಲ್ಲೆಯಾಗಿ 18 ವರ್ಷಗಳೇ ಕಳೆದರೂ ಸಮಸ್ಯೆ ಗಳಿಂದ ನರಳುತ್ತಿದೆ. ನೂತನ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಜಿಲ್ಲಾ ಕನ್ನಡಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು.
ಸಮಸ್ಯೆಗಳು
೧. ರಾಜಕಾಲುವೆಗಳ ಒತ್ತುವರಿಯಿಂದಾಗಿ ಮಳೆನೀರು ಸರಾಗವಾಗಿ ಹರಿಯದೇ ನಗರದ ಬಹುತೇಕ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ತುಂಬಾ ತೊಂದರೆ ಯಾಗಿದೆ. ಅಭಿವೃದ್ದಿ ಹೆಸರಿನಲ್ಲಿ ಅಲ್ಪಸ್ವಲ್ಪ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದ್ದು ಇನ್ನೂ ಪೂರ್ಣಗತಿಯಲ್ಲಿ ಮುಗಿದಿಲ್ಲ. ಇದನ್ನು ಮುಗಿಸಲು ತಾಕೀತು ಮಾಡಬೇಕು.ಮಳೆಗಾಲ ಪ್ರಾರಂಭವಾಗುವ ಮುನ್ನವೇ ಈ ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.
ಇದನ್ನೂ ಓದಿ: Chikkaballapur News: ಕೆಐಎಡಿಬಿ ಅಧಿಸೂಚನೆ ಕೈ ಬಿಡುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿದ 13 ಹಳ್ಳಿಗಳ ರೈತರು
೨. ನೆನೆಗುದಿಗೆ ಬಿದ್ದಿರುವ ಬಜಾರ್ ರಸ್ತೆ, ಗಂಗಮ್ಮನ ಗುಡಿ ರಸ್ತೆ ಅಗಲೀಕರಣಕ್ಕೆ ಕೈಹಾಕದ ಕಾರಣ ಪ್ರತಿದಿನ ಬೆಳಿಗ್ಗೆ 8 ರಿಂದ 10.30 ರವರೆಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಕಂಠಕವಾಗಿದೆ.ಕೂಡಲೇ ಈ ಎರಡೂ ರಸ್ತೆಗಳನ್ನು ಅಗಲೀಕರ ಣಗೊಳಿಸಿ ಸ್ವಚ್ಚ ನಗರಕ್ಕೆ ಹಾಗೂ ಸುಭದ್ರ ಮುಕ್ತ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕಾಗಿ ವಿನಂತಿ. ೩. ಚಿಕ್ಕಬಳ್ಳಾಪುರ ನಗರದಲ್ಲಿ ಬಹುತೇಕ ಪುರಾತನ ಕಾಲದ ಅನೇಕ ಕಲ್ಯಾಣಿಗಳಿದ್ದು, ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಲ್ಯಾಣಿಗಳ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಬೇಕಾಗಿ ವಿನಂತಿಸುತ್ತೇವೆ.
೪. ಚಿಕ್ಕಬಳ್ಳಾಪುರ ನಗರದಿಂದ ವಾರ್ಡ್ ನಂ.14ರ ಕಂದವಾರಕ್ಕೆ ಸಂಚರಿಸುವ ಕೆರೆ ಕೆಳಭಾಗದ ರಸ್ತೆಯು ನಂದಿ, ದೊಡ್ಡಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಈ ರಸ್ತೆಯು ತುಂಬಾ ಹದೆಗಟ್ಟಿದ್ದು, ರಸ್ತೆ ಸಂಚಾರಕ್ಕೆ ತುಂಬಾ ಅನಾನುಕೂಲವಾಗಿದೆ. ಇದನ್ನು ಮಾಡಿಸಿಕೊಟ್ಟು ಅನುಕೂಲ ಮಾಡಿಕೊಡುವಂತೆ ಪತ್ರದ ಮೂಲಕ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ವಿ.ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷ ಶ್ರವಣ ಕುಮಾರ್, ನಗರ ಘಟಕದ ಅಧ್ಯಕ್ಷ ಪಿ.ವಿಜಯಕುಮಾರ್, ನಗರ ಸಂಚಾಲಕ ಟಿ.ಎಸ್.ವಿಜಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.