ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bagepally News: ತಹಶೀಲ್ದಾರ್ ಕರಾಮತ್ತಿಗೆ ಕಂಗಾಲಾದ ನೈಜ ಫಲಾನುಭವಿ: ನ್ಯಾಯಕ್ಕಾಗಿ ಮೊರೆ

ಸರ್ವೆ 22ರ ಪೈಕಿ 34.15 ಕುಂಟೆ ಸರಕಾರಿ ಭೂಮಿಯಿದ್ದು ಈ ಪೈಕಿ ವಡ್ಡರ ಆಂಜಿನಪ್ಪ ಬಿನ್ ಕೊಂಡಪ್ಪ ಎಂಬುವವರಿಗೆ 1951-52ರಲ್ಲಿ 2 ಎಕರೆ ಗ್ರಾಂಟ್ ಆಗಿದೆ. ಇದೇ ಭೂಮಿಗೆ ಹೊಂದಿ ಕೊಂಡಂತೆ 4 ಎಕರೆ 38 ಗುಂಟೆಯಲ್ಲಿ ನಂಜುಂಡಪ್ಪ ಬಿನ್ ಆಂಜಿನಪ್ಪ ಆದ ನಾವು ಇದ್ದೇವೆ. 1991ರಲ್ಲಿ ಸಾಗುವಳಿ ಚೀಟಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಅನುಭವದಂತೆ ಸ್ಕೆಚ್ ಮಾಡಿಸಿಕೊಂಡು ನಾವೇ ಬೇಸಾಯ ಮಾಡುತ್ತಿದ್ದೇವೆ.

ಸಾಗುವಳಿದಾರರಿಗೆ ಖಾತೆಯಿಲ್ಲ: ಇವರದೇ ಹೆಸರಿನ ಬೇರೊಬ್ಬರಿಗೆ ಖಾತೆ

-

Profile
Ashok Nayak Apr 6, 2026 10:27 PM

ಬಾಗೇಪಲ್ಲಿ: ಸರಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ನೈಜ ಫಲಾನುಭವಿಗೆ ಸಾಗುವಳಿ ಚೀಟಿ ನೀಡಿ ಖಾತೆ ಮಾಡಿಕೊಡುವ ಬದಲಿಗೆ ತಹಶೀಲ್ದಾರ್ ಮನಿಷಾ ಮಹೇಶ್ ಪತ್ರಿ ಸಾಗುವಳಿದಾರರ ಹೆಸರಿನವರೇ ಆದ ನಕಲಿಗಳಿಗೆ ಖಾತೆ ಮಾಡಿಕೊಟ್ಟಿದ್ದು ಈ ಅನ್ಯಾಯ ಪ್ರಶ್ನಿಸಿದ ರೈತನಿಗೆ ಬೇಕಾದ್ದು ಮಾಡಿಕೋ, ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಮಾಡುವುದನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ ಎಂದು ಸಂತ್ರಸ್ಥ ನಂಜುಂಡಪ್ಪ ಬಿನ್ ಆಂಜಿನಪ್ಪ ದೂರಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸೋಮವಾರ ನಡೆಸಿದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದರು.

ಘಂಟಂವಾರೆಪಲ್ಲಿ ಪಂಚಾಯಿತಿಯ ನಾರೇಪಲ್ಲಿ ಗ್ರಾಮದ ನಂಜುಂಡಪ್ಪ ಬಿನ್ ಆಂಜಿನ ಪ್ಪ ಅವರು ಸರ್ವೆ ನಂ22ರಲ್ಲಿ 5 ಎಕರೆ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ತಾನು ಸಾಗುವಳಿ ಮಾಡಿರುವ 2.38 ಎಕರೆ ಭೂಮಿಗೆ ಸಂಬಂಧಿಸಿದಂತೆ ಸಾಗುವಳಿ ಚೀಟಿ ನೀಡುವಂತೆ ಅರ್ಜಿ ಸಲ್ಲಿಸಿದ್ದರೂ ಕೂಡ ಈತನ ಮನವಿಗೆ ಕಿಮ್ಮತ್ತು ನೀಡದ ತಹಶೀಲ್ದಾರ್ ಕಛೇರಿ ನಾರೇಪಲ್ಲಿ ಹೊಸಹುಡ್ಯ ಗಡಿಯ ನಂಜುಂಡಪ್ಪ ಬಿನ್ ಗುರಪ್ಪ ಎಂಬುವರಿಗೆ ನಕಲಿ ಖಾತೆ ಮಾಡಿ ಕೊಟ್ಟಿರುತ್ತಾರೆ.

ಇದನ್ನೂ ಓದಿ: Bagepally News: ತಾಲ್ಲೂಕಿನಾದ್ಯಂತ ಸಂಭ್ರಮದ ಶ್ರೀ ರಾಮನವಮಿ ಆಚರಣೆ: ಪಾನಕ, ಮಜ್ಜಿಗೆ, ಕೋಸಂಬರಿ ಹಂಚಿದ ಶ್ರೀರಾಮ ಭಕ್ತರು

ಸದರಿ ನಂಜುಡಪ್ಪ ಬಿನ್ ಗುರಪ್ಪ ಅವರಿಗೆ ಈಗಾಗಲೇ 4 ಎಕರೆ ಭೂಮಿ ಸರ್ವೆ ನಂಬರ್ 221ರಲ್ಲಿ ಕೊಟ್ಟಿದ್ದು ಇವರು ಕೆಐಎಡಿಬಿಗೆ ಈ ಭೂಮಿ ಕೊಟ್ಟಿರುತ್ತಾರೆ. ಇಂತಹವರಿಗೆ ನನ್ನ ಅನುಭವದಲ್ಲಿರುವ 2.38 ಎಕರೆ ಖಾತೆ ಮಾಡಿಕೊಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇದೇ ಭೂಮಿಯನ್ನು ಮತ್ತೆ ಘಂಟಂವಾರಪಲ್ಲಿ ಗ್ರಾಮದ ಶಿವಮ್ಮ ಕೋಂ ಬೈಪರೆಡ್ಡಿ ಎಂಬುವರಿಗೂ ಕೂಡ ನಕಲಿ ದಾಖಲೆ ಸೃಷಿಸಿ ಖಾತೆ ಮಾಡಿಕೊಟ್ಟಿರುತ್ತಾರೆ. ಹೀಗೆ ಒಂದೇ ಭೂಮಿಗೆ ಸಂಬಂಧಿಸಿದಂತೆ ಇಬ್ಬಿಬ್ಬರಿಗೆ ಖಾತೆ ಮಾಡಿಕೊಡುವ ಮೂಲಕ ತಹಶೀಲ್ದಾರ್ ಕರ್ತವ್ಯಲೋಪ ಎಸಗಿದ್ದಾರೆ. ಇವರ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ವಹಿಸಿ ನಮಗೆ ನ್ಯಾಯ ಕೊಡಬೇಕೆಂದು ಕೋರಿದರು.

ಸರ್ವೆ 22ರ ಪೈಕಿ 34.15ಕುಂಟೆ ಸರಕಾರಿ ಭೂಮಿಯಿದ್ದು ಈ ಪೈಕಿ ವಡ್ಡರ ಆಂಜಿನಪ್ಪ ಬಿನ್ ಕೊಂಡಪ್ಪ ಎಂಬುವವರಿಗೆ 1951-52ರಲ್ಲಿ 2 ಎಕರೆ ಗ್ರಾಂಟ್ ಆಗಿದೆ. ಇದೇ ಭೂಮಿಗೆ ಹೊಂದಿಕೊಂಡಂತೆ 4 ಎಕರೆ 38 ಗುಂಟೆಯಲ್ಲಿ ನಂಜುಂಡಪ್ಪ ಬಿನ್ ಆಂಜಿನಪ್ಪ ಆದ ನಾವು ಇದ್ದೇವೆ. 1991ರಲ್ಲಿ ಸಾಗುವಳಿ ಚೀಟಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಅನುಭವದಂತೆ ಸ್ಕೆಚ್ ಮಾಡಿಸಿಕೊಂಡು ನಾವೇ ಬೇಸಾಯ ಮಾಡುತ್ತಿದ್ದೇವೆ. ಈ ಭೂಮಿಗೆ ಸಂಬಂಧಿಸಿದಂತೆ ಮೂಲ ಸಾಗುವಳಿದಾರನಾದ ನನ್ನನ್ನು ಬಿಟ್ಟು ನಕಲಿಗೆ ಖಾತೆ ಮಾಡಿಸಿ ಕೊಟ್ಟಿರುವ ಗ್ರೀನ್ ಸಿರಿ ಲೇಔಟ್ ಮಾಲಿಕರಾದ ಜಗದೀಶ್‌ ರೆಡ್ಡಿ ಮತ್ತು ಹರೀಶ್‌ರೆಡ್ಡಿ ಈ ಭೂಮಿಯನ್ನು ಅಕ್ರಮವಾಗಿ ಪಡೆಯಲು ಸಂಚು ರೂಪಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದ್ದು ಈ ಸಂಬಂಧ ಜಾತಿನಿಂದನೆ ಪ್ರಕರಣ ದಾಖಲಿಸಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ನೋವು ತೋಡಿಕೊಂಡರು.

ನಮಗೆ ತಹಶೀಲ್ದಾರ್ ಕಡೆಯಿಂದ ನ್ಯಾಯ ದೊರೆತಿಲ್ಲ, ಪೊಲೀಸ್ ಸ್ಟೇಷನ್‌ನಿಂದ ನ್ಯಾಯ ಸಿಕ್ಕಿಲ್ಲ. ಹತ್ತಾರು ವರ್ಷಗಳಿಂದ ಅನುಭವದಲ್ಲಿರುವ ಭೂಮಿಗೆ ತಹಶೀಲ್ದಾರ್ ನೆರವಿನಲ್ಲಿ ಇನ್ಯಾರೋ ಖಾತೆ ಮಾಡಿಸಿಕೊಂಡಿರುವುದು ಎಷ್ಟು ಸರಿ. ಈ ವಿಚಾರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಕೂಡಲೇ ತಹಶೀಲ್ದಾರ್ ಆರ್‌ಐ ಅವರಿಗೆ ತಾಕೀತು ಮಾಡಿದ್ದು, ಸಂತ್ರಸ್ಥರಿಗೆ ಸಹಾಯ ಮಾಡಲು ತಿಳಿಸಿ ಒಂದು ತಿಂಗಳಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳಾದ ತಾವು ನಮಗೆ ನ್ಯಾಯಕೊಡಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತ ಭವನದ ಎದುರು ಧರಣಿ ಮಾಡುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅರವಿಂದ್, ಪೆದ್ದನ್ನ, ಶ್ರೀನಿವಾಸ್, ನಂಜುಡಪ್ಪ ಇದ್ದರು.