ಸಂವಿಧಾನ ಬಲಪಡಿಸೋಣ ದೇಶದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸೋಣ
ಗಣರಾ ಜ್ಯೋತ್ಸವದ ಕಾರಣವಾಗಿ ಸಂವಿಧಾನದಲ್ಲಿ ಹಲವು ಹಕ್ಕುಗಳನ್ನು ನಮ್ಮ ದೇಶದ ಜನರಿಗೆ ನೀಡಿದೆ. ಸಮಾನತೆ ಧಾರ್ಮಿಕ ಹಕ್ಕು ಮತದಾನದ ಹಕ್ಕು ಎಲ್ಲರಿಗೂ ಶಿಕ್ಷಣದ ಹಕ್ಕು ಹೀಗೆ ಹಲವು ಹಕ್ಕು ಗಳು ನಮಗೆ ಸಿಕ್ಕಿವೆ.,ಇದರಿಂದ ದೇಶದ ಅಭಿವೃದಿಗೆ ಸಹಕಾರಿ ಸಹ ಆಗಿದೆ

ಗೌರಿಬಿದನೂರು ನಗರದಲ್ಲಿ ನಡೆದ ೭೬ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಭಾಗಿಯಾಗಿದ್ದ ಶಾಸಕ ಪುಟ್ಟಸ್ವಾಮಿಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಗೌರಿಬಿದನೂರು: ಅಂಬೇಡ್ಕರ್ ಬರೆದ ಶ್ರೇಷ್ಟ ಸಂವಿಧಾನದಿಂದ ಮಾತ್ರವೇ ದೇಶದ ಸಮಗ್ರ ಅಭಿವೃದ್ದಿಯು ಮುಂದುವರೆದಿದೆ. ಕೇವಲ 77 ವರ್ಷಗಳ ಹಿಂದೆ ಸ್ವಾತಂತ್ರ್ಯ ಗಳಿಸಿದ ಭಾರತ ಇಂದು ವಿಶ್ವ ಮಟ್ಟದಲ್ಲಿ ಕೀರ್ತಿ ಗಳಿಸಿದೆ,. ಇದಕ್ಕೆ ಅಳುವ ಸರ್ಕಾರಗಳ ಕೊಡುಗೆ ಅಪಾರ ಎಂದು ಶಾಸಕ ಕೆಎಚ್,ಪುಟ್ಟಸ್ವಾಮಿಗೌಡ ತಿಳಿಸಿದರು.
ನಗರದ ನೇತಾಜೀ ಕ್ರೀಡಾಂಗದಲ್ಲಿ 76ನೇ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Chikkaballapur News: ಯುವಜನತೆ ಅಪರಾಧಿಕ ಕೃತ್ಯಗಳಿಂದ ದೂರವಿರಲಿ: ರಾಜ್ಯ ಉಪಾಧ್ಯಕ್ಷ ವೆಂಕಟರೋಣಪ್ಪ ಕರೆ
ದೇಶದ ಪ್ರಮುಖ ರಾಷ್ಟ್ರೀಯ ಹಬ್ಬಗಳಾದ ಅಗಸ್ಟ್ 15ರ ಸ್ವಾತಂತ್ರ್ಯೋತ್ಸವ ಮತ್ತು ಜನವರಿ 26ರ ಗಣರಾಜೋತ್ಸವ ಇವುಗಳ ಆಚರಣೆ ಮಾಡುವುದು ನಮ್ಮಲ್ಲರ ಕರ್ತವ್ಯವಾಗಬೇಕಿದೆ. ಗಣರಾ ಜ್ಯೋತ್ಸವದ ಕಾರಣವಾಗಿ ಸಂವಿಧಾನದಲ್ಲಿ ಹಲವು ಹಕ್ಕುಗಳನ್ನು ನಮ್ಮ ದೇಶದ ಜನರಿಗೆ ನೀಡಿದೆ. ಸಮಾನತೆ ಧಾರ್ಮಿಕ ಹಕ್ಕು ಮತದಾನದ ಹಕ್ಕು ಎಲ್ಲರಿಗೂ ಶಿಕ್ಷಣದ ಹಕ್ಕು ಹೀಗೆ ಹಲವು ಹಕ್ಕು ಗಳು ನಮಗೆ ಸಿಕ್ಕಿವೆ.,ಇದರಿಂದ ದೇಶದ ಅಭಿವೃದಿಗೆ ಸಹಕಾರಿ ಸಹ ಆಗಿದೆ. ಈ ನಿಟ್ಟಿನಲ್ಲಿ ಸಂವಿಧಾನವನ್ನು ಬಲಪಡಿಸೋಣ ದೇಶದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸೋಣ ಎಂದರು.
ತಾಲ್ಲೂಕಿನಲ್ಲಿ ಶೈಕ್ಷಣಿಕಾಭಿವೃದ್ದಿಗೆ ನಾವು ಕಟಿ ಬದ್ಧರಾಗಬೇಕಿದೆ.ಇದಕ್ಕೆ ಶಾಲಾ ಶಿಕ್ಷಕರು ಪೋಷಕರು ಅತಿ ಹೆಚ್ಚು ಕಾಳಜಿವಹಿಸಬೇಕಿದೆ. ಗುಣಮಟ್ಟದ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳ ಮುನ್ನೆಲೆಗೆ ಬರಲು ಸಾಧ್ಯ. ಪ್ರತಿ ವರ್ಷ ಉತ್ತಮ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಗೌರವಿಸಲಾಗುವುದು ಎಂದರು.
ತಾಲ್ಲೂಕು ಅಭಿವೃದ್ದಿಗೆ ಬದ್ಧ : ಜನರ ಅಶೋತ್ತರಗಳನ್ನು ಸಾಕಾಗೊಳಿಸಲು ನಾವು ಬದ್ದ ನಾಗಿದ್ದ ಮೂಲಸೌಕರ್ಯ, ಕುಡಿಯುವ ನೀರು, ರಸ್ತೆಗಳ ಅಭಿವೃದ್ದಿ, ಕೆರೆ ಕಟ್ಟೆಗಳ ಪುನಃಶ್ಚೇತನ ಗೊಳಿಸಲಾಗುವುದು. ಇದಕ್ಕೆ ಬೇಕಾದ ಎಲ್ಲಾ ಅನುದಾನವನ್ನು ಸರ್ಕಾರದಿಂದ ತರಲು ಶ್ರಮಿಸುವೆ ಎಂದರು.
ತಹಸೀಲ್ದಾರ್ ಮಹೇಶ್ ಪತ್ರಿ ಮಾತನಾಡಿ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವುದು ಪ್ರಜಾಪ್ರಭುತ್ವವಾಗಿದೆ. ಅದರ ಆಶಯಗಳನ್ನು ನಾವು ಸಾಕಾರಗೊಳಿಸಬೇಕಿದೆ. ಸಂವಿಧಾನದ ಅಶಯಗಳನ್ನು ನಾವು ತಾಲ್ಲೂಕಿನಲ್ಲಿ ಅನುಷ್ಟಾನಗೊಳಸಿದ್ದೇವೆ. ನಮ್ಮ ಶಾಸಕರ ನಿರ್ದೇಶನ ದಂತೆ ೧೦ ಸಾವಿರ ನಿವೇಶನಗಳನ್ನು ಗುರುತಿಸಿ, ನಿವೇಶನ ರಹಿತರಿಗೆ ನೀಡಲು ತಾಲ್ಲೂಕು ಅಡಳಿತ ಬದ್ಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಲವು ಗಣ್ಯರನ್ನು ಸತ್ಕರಿಸಿದರಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮಿ ನಾರಾಯಣಪ್ಪ,ಉಪಾಧ್ಯಕ್ಷ ಪರೀದ್, ಪೌರಾಯುಕ್ತೆ ಡಿಎಂ,ಗೀತಾ, ಇಓ ಹೊನ್ನಯ್ಯ,ತಾಲ್ಲೂಕು ಅರೋಗ್ಯಾಧಿಕಾರಿ ಡಾ,ಚಂದ್ರಮೋಹನ್ ರೆಡ್ಡಿ, ನಗರಸಭೆ ಸದಸ್ಯರು ಹಾಗೂ ಶಿಕ್ಷಕರು ಶಾಲಾ ಮಕ್ಕಳು ಭಾಗವಹಿಸಿದ್ದರು.