ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ಕಠಿಣ ಪರಿಶ್ರಮ, ಶ್ರದ್ದೆ, ಶಿಸ್ತು, ಸಾಧಿಸಬೇಕು ಎನ್ನುವ ಛಲದಿಂದ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ : ಡಾ.ನಿಮಿಷಾಂಬ

ಸಾಧನೆಗೆ ಬಡವ ಶ್ರೀಮಂತ ಎಂಬ ಯಾವುದೇ ಭೇಧಭಾವವಿಲ್ಲ, ಸಾಧನೆ ಮಾಡುವುದು ಅಷ್ಟು ಸುಲಭದ ಮಾತಲ್ಲ, ಕೇವಲ ಅಂಕಗಳಿಕೆಯಿAದ ಸಾಧನೆ ಮಾಡಲು ಸಾದ್ಯವಿಲ್ಲ, ಯಾವುದೇ ಕಾರಣಕ್ಕೂ ನಿರ್ಲಕ್ಷö್ಯ ತೋರದೆ ಕಠಿಣ ಪರಿಶ್ರಮ, ಶಿಸ್ತು, ನಿರಂತರ ಅಭ್ಯಾಸ, ಗುರಿ ಮುಟ್ಟುವ ಹಠ, ಛಲ ಇದ್ದರೆ ಮಾತ್ರ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ

ಛಲದಿಂದ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ

ಕಠಿಣ ಪರಿಶ್ರಮ, ಶ್ರದ್ದೆ, ಶಿಸ್ತು, ಸಾಧಿಸಬೇಕು ಎನ್ನುವ ಛಲದಿಂದ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಡಾ.ನಿಮಿಷಾಂಬ ತಿಳಿಸಿದರು. -

Ashok Nayak
Ashok Nayak Dec 29, 2025 10:35 PM

ಬಾಗೇಪಲ್ಲಿ: ಕಠಿಣ ಪರಿಶ್ರಮ, ಶ್ರದ್ದೆ, ಶಿಸ್ತು, ಸಾಧಿಸಬೇಕು ಎನ್ನುವ ಛಲದಿಂದ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ಅಲ್ಲದೆ ಮುಂದಿನ ಉಜ್ವಲ ಭವಿಷ್ಯತ್‌ಗಾಗಿ ದೊಡ್ಡ ದೊಡ್ಡ ಕನಸು ಕಾಣುವುದನ್ನು ಬಾಲ್ಯದಿಂದಲ್ಲೇ ಮೈಗೂಡಿಸಿಕೊಳ್ಳಬೇಕು ಎಂದು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಡೆಪ್ಯೊಟಿ ಕಮೀಷನರ್ ಆಫ್ ಕಸ್ಟಮ್ಸ್ ಐಆರ್ ಎಸ್ ಅಧಿಕಾರಿ ಡಾ.ನಿಮಿಷಾಂಬ ಸಿ.ಸಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪಟ್ಟಣದ ಯಂಗ್ ಇಂಡಿಯಾ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಯಂಗ್ ಇಂಡಿಯಾ ಶಾಲೆಯ 32ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಉತ್ತಮ ಸಮಾಜದ ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಆಧಾರ ಸ್ಥಂಭಗಳಿದ್ದಂತೆ. ಕಲಿಕೆ ಕೇವಲ ಶಾಲೆಗೆ ಸೀಮಿತವಾಗಬಾರದು, ಜೀವನದಲ್ಲಿ ಕಲಿಯುವುದು ಸಾಕಷ್ಟಿದೆ, ಹಂತ ಹಂತವಾಗಿ ಜೀವನ ಪರ್ಯಂತ ಕಲಿಯುವ ಮೂಲಕ ಸಮಾಜದಲ್ಲಿ ಒಬ್ಬ ಯಶಸ್ವಿ ವ್ಯಕ್ತಿಯಾಗಿ ಗುರ್ತಿಸಿಕೊಳ್ಳ ಬೇಕೆಂದರು.

ಸಾಧನೆಗೆ ಬಡವ ಶ್ರೀಮಂತ ಎಂಬ ಯಾವುದೇ ಭೇಧಭಾವವಿಲ್ಲ, ಸಾಧನೆ ಮಾಡುವುದು ಅಷ್ಟು ಸುಲಭದ ಮಾತಲ್ಲ, ಕೇವಲ ಅಂಕಗಳಿಕೆಯಿAದ ಸಾಧನೆ ಮಾಡಲು ಸಾದ್ಯವಿಲ್ಲ, ಯಾವುದೇ ಕಾರಣಕ್ಕೂ ನಿರ್ಲಕ್ಷö್ಯ ತೋರದೆ ಕಠಿಣ ಪರಿಶ್ರಮ, ಶಿಸ್ತು, ನಿರಂತರ ಅಭ್ಯಾಸ, ಗುರಿ ಮುಟ್ಟುವ ಹಠ, ಛಲ ಇದ್ದರೆ ಮಾತ್ರ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಇದನ್ನೂ ಓದಿ: Bagepally News: ಚೇಳೂರು ತಾಲ್ಲೂಕು ಕಸಾಪ ಪ್ರಥಮ ಅಧ್ಯಕ್ಷರಾಗಿ ಜೆ.ಕೆ.ಆನಂದ್

ಪಠ್ಯದ ಜೊತೆಗೆ ಕಲೆ, ಸಂಸ್ಕೃತಿಕ, ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವುದರ ಜೊತೆಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನ ಓದುವ ಹವ್ಯಾಸದ ಕಡೆ ಗಮನಹರಿಸಬೇಕು, ಒಳ್ಳೆಯ ಸ್ನೇಹಿತರ  ಸಹವಾಸ ಮಾಡಬೇಕು, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವಂತಹ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಮಾತ್ರ ಸಮಾಜದಲ್ಲಿ ಒಬ್ಬ ಯಶಸ್ವಿ ವ್ಯಕ್ತಿಯಾಗಲು ಸಾಧ್ಯವಾಗುತ್ತೆ ಎಂದರು.

ಮಕ್ಕಳ ಶಿಕ್ಷಣದ ವಿಚಾರದಲ್ಲಿ ಶಾಲೆಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಮನೆಯಲ್ಲಿ ಪೋಷಕರ ಪಾತ್ರವೂ ಸಹ ಅಷ್ಟೇ ಮುಖ್ಯ. ಪೋಷಕರು ತಮ್ಮ ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಚಟುವಟಿಕೆಗಳ ಚಲನವಲನಗಳ ಬಗ್ಗೆ ನಿಗಾವಹಿಸಬೇಕೆಂದ ಅವರು ಕಳೆದ 32 ವರ್ಷಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿರುವ ಶಾಲೆಯ ಆಡಳಿತ ಮಂಡಲಿ ಹಾಗೂ ಶಿಕ್ಷಕರನ್ನು ಅಭಿನಂಧಿಸಿದರು.

ಬಿಇಒ ವೆಂಕಟೇಶಪ್ಪ ಮಾತನಾಡಿ, ಶಿಕ್ಷಣದ ಜೊತೆಗೆ ಮಗುವಿನಲ್ಲಿನ ಕಲೆ, ಕ್ರೀಡೆ ಇತ್ಯಾಧಿಗಳಲ್ಲಿನ
ಪ್ರತಿಭೆಯನ್ನು ಗುರ್ತಿಸಬೇಕಾದ ಅಗತ್ಯವಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಂತಹ ಶಾಲೆ ತೆರೆದರೆ ನೂರಾರು ಜೈಲುಗಳು ಮುಚ್ಚಲ್ಪಡುತ್ತೆ ಎಂಬಂತೆ ಇಲ್ಲಿನ ಶಾಲೆಯ ಕಳೆದ 32 ವರ್ಷ ಗಳಿಂದ ಇದುವರೆವಿಗೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಮಗುವಿನ ಸರ್ವತೋ ಮುಖ ಬೆಳವಣಿಗೆಗೆ ಪ್ರಮಾಣಿಕ ಪ್ರಯತ್ನ ಮಾಡುವುದೇ ಯಂಗ್ ಇಂಡಿಯಾ ಶಾಲೆಯ ಆಶಯ ವಾಗಿರುವುದನ್ನು ಶ್ಲಾಘಿಸಿದರು.

32ನೇ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳು ನಾಟಕ,ನೃತ್ಯ ಸೇರಿದಂತೆ ಮನರಂಜನಾ ಕಾರ್ಯಕ್ರಮ ನಡೆಸಿ ಕೊಟ್ಟರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ರ‍್ಯಾಕ್ ಪಡೆದ ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಎನ್.ಎಂ. ಮಂಜುನಾಥ್, ಸಂಯುಕ್ತ ಮಹಾಪ್ರಭಂಧಕರು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಬೆಂಗಳೂರು, ಎಸ್. ಶಶಿಕುಮಾರ್ ಐ ಆರ್ ಎಸ್. ಪ್ಯೂಟಿ ಕಮೀಷನರ್ ಕಸ್ಟಮ್ಸ್ ಬೆಂಗಳೂರು, ಯಂಗ್ ಇಂಡಿಯಾ ಶಾಲೆ ಸಂಸ್ಥಾಪಕರಾದ ಪ್ರೋ.ಡಿ.ಶಿವಣ್ಣ, ದೈಹಿಕ ಶಿಕ್ಷಣಾಧಿಕಾರಿ ರಂಗನಾಥ್, ಶಾಲೆಯ ಮುಖ್ಯ ಶಿಕ್ಷಕಿ ಆರ್ ಕಲ್ಪನಾ ಮತ್ತಿತರರು ಇದ್ದರು.