MLA S N Subbereddy: ಜೆಜೆಎಂ ಕಾಮಗಾರಿ ವಿಳಂಬಕ್ಕೆ ಶಾಸಕರು ಗರಂ
ವಿವಿಧ ಇಲಾಖೆಗಳಿಂದ ಆದ ಅಭಿವೃದ್ಧಿ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳ ವಿವರವನ್ನು ಪಡೆ ದಂತಹ ಶಾಸಕರು ಜೆಜೆಎಂ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಪಡೆದು, ಇದೇ ಮಾರ್ಚ್ ತಿಂಗಳ ಕೊನೆಯ ವೇಳೆಗೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದ್ದೀರಿ
ಬಾಗೇಪಲ್ಲಿ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಯು ವಿಳಂಬ ಮಾಡು ತ್ತಿದ್ದು, ನಾಗರೀಕರಿಗೆ ತೊಂದರೆಗಳಾಗುತ್ತಿವೆ. ಹಾಗೆಯೇ ಸರಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉತ್ತಮ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ತ್ರೈಮಾ ಸಿಕ ಕೆಡಿಪಿ ಸಭೆಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಇವಳ ವಿವಿಧ ಇಲಾಖೆಗಳಿಂದ ಆದ ಅಭಿವೃದ್ಧಿ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳ ವಿವರವನ್ನು ಪಡೆದಂತಹ ಶಾಸಕರು ಜೆಜೆಎಂ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಪಡೆದು, ಇದೇ ಮಾರ್ಚ್ ತಿಂಗಳ ಕೊನೆಯ ವೇಳೆಗೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದ್ದೀರಿ.
ಇದನ್ನೂ ಓದಿ: Chikkaballapur News: ಯುವಜನತೆ ಅಪರಾಧಿಕ ಕೃತ್ಯಗಳಿಂದ ದೂರವಿರಲಿ: ರಾಜ್ಯ ಉಪಾಧ್ಯಕ್ಷ ವೆಂಕಟರೋಣಪ್ಪ ಕರೆ
ಆದರೆ ಬಹುತೇಕ ಗ್ರಾಮಗಳಲ್ಲಿ ರಸ್ತೆಗಳನ್ನು ಅಗೆದು ಮೂರ್ನಾಲ್ಕು ತಿಂಗಳಗಳಾದರೂ ಅದನ್ನು ಸರಿಪಡಿಸುವ ಮತ್ತು ಕಾಮಗಾರಿಯನ್ನು ಪೂರ್ಣಗೊಳಿಸುವ ಗೋಜಿಗೆ ಹೋಗದೆ, ವಿಳಂಬ ಮಾಡ ಲಾಗುತ್ತಿದೆ. ಇದರಿಂದಾಗಿ ನಾಗರಿಕರಿಗೆ ತೊಂದರೆಗಳಾಗುತ್ತಿವೆ. ಈ ಬಗ್ಗೆ ಯಾವುದೇ ರೀತಿ ಕ್ರಮ ಜರುಗಿಸುತ್ತಿಲ್ಲ. ಈ ವಿಳಂಬ ಧೋರಣೆ ಸರಿಯಲ್ಲ ಎಂದು ಎಚ್ಚರಿಸಿದರು.ಇದಕ್ಕೆ ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ 192 ಗ್ರಾಮಗಳಲ್ಲಿ ಮಾರ್ಚ್ ತಿಂಗಳ ಕೊನೆ ವೇಳೆಗೆ ಎಲ್ಲವನ್ನು ಮುಗಿಸುತ್ತೇವೆ ಎಂದರು.
ಬಡವರಿಗೆ ಉಚಿತವಾಗಿ ಆರೋಗ್ಯ ಸೌಲಭ್ಯ
ತಾಲೂಕು ಆಸ್ಪತ್ರೆಯಲ್ಲಿ ಬಡವರಿಗೆ ಸರಿಯಾಗಿ ಆರೋಗ್ಯ ಸೇವೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ರೋಗಿಗಳು ಕೆಲ ವೈಧ್ಯಕೀಯ ಸೌಲಭ್ಯಗಳನ್ನು ಪಡೆಯಲು ಸರಕಾರಿ ಆಸ್ಪತ್ರೆಗೆ ಬಂದರೆ ಖಾಸಗಿಯವರಿಗೆ ಸೂಚಿಸುವುದಕ್ಕೆ ಕಡಿವಾಣ ಹಾಕಬೇಕು. ಆಂಬ್ಯುಲೆನ್ಸ್ ನವರು ಡೀಸೆಲ್ ಹಣ ಬಿಪಿಎಲ್ ಕಾರ್ಡ್ ಹೊಂದಿದವರ ಬಳಿ ಪಡೆಯಬಾರದು. ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ.ಸತ್ಯನಾರಾಯಣರೆಡ್ಡಿಯವರಿಗೆ ಶಾಸಕರು ಸೂಚಿಸಿದರು.
ವೈದ್ಯರ ಕೊರತೆ
ತಾಲೂಕಿನಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಸೇರಿದಂತೆ ತಜ್ಞ ವೈಧ್ಯರ ಕೊರತೆ ಇದೆ. ಹೊರ ಗುತ್ತಿಗೆಯ ಆಧಾರದಲ್ಲಿ ಬರಲೂ ಯಾರೂ ಮುಂದಾಗುತ್ತಿಲ್ಲ ಎಂದು ತಾಲೂಕು ವೈಧ್ಯಾಧಿಕಾರಿ ಯವರು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕರು ನೀಡಿದರು.
ಚೆಕ್ ಡ್ಯಾಂಗಳ ಬಗ್ಗೆ ತನಿಖೆ ನಡೆಸಲು ಸೂಚನೆ
ಕೃಷಿ ಇಲಾಖೆಯಿಂದ ನಿರ್ಮಿಸಿರುವುದು ಎನ್ನಲಾಗುತ್ತಿರುವ ಎಲ್ಲ ಚೆಕ್ ಡ್ಯಾಂ ಗಳು ಬೋಗಸ್ ಆಗಿವೆ. ನಾನೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪೋಟೊ ತೆಗೆದುಕೊಂಡು ಬಂದಿದ್ದೇನೆ. ನರೇಗಾ ಸೇರಿದಂತೆ ಹಲವು ಯೋಜನೆಗಳಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ಗಳನ್ನು ಕೃಷಿ ಇಲಾಖೆಯಿಂದ ನಿರ್ಮಿಸಿರುವುದೆಂದ ದಾಖಲೆ ಸೃಷ್ಟಿಸಲಾಗಿದೆ. ಇವೆಲ್ಲವೂ ಬೋಗಸ್ ಆಗಿದ್ದು, ಈ ಬಗ್ಗೆ ಜಿಲ್ಲಾಧಿ ಕಾರಿಯವರ ಗಮನಕ್ಕೆ ತರುತ್ತೇನೆ.ಹಾಗೇಯೆ ಈ ಬಗ್ಗೆ ತನಿಖೆಗೆ ಒಪ್ಪಿಸುತ್ತೇನೆ ಎಂದು ಶಾಸಕರು ಗರಂ ಆದರು. ಹಾಗೇಯೇ ಸಹಾಯಕ ಕೃಷಿ ನಿರ್ದೇಶಕರು ನಾಮಕಾವಸ್ಥೆಗೆ ಇಲ್ಲಿಗೆ ಬಂದಿದ್ದಾರೆ, ಒಂದು ರೂಪಾಯಿಯಷ್ಟು ಕೆಲಸವನ್ನು ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ತಹಶೀಲ್ದಾರ್ ಮನಿಷಾ ಮಹೇಶ್ ಎಸ್ ಪತ್ರಿ, ಇಒ ರಮೇಶ್, ಕೆಡಿಪಿ ಸದಸ್ಯ ಮಂಜುನಾಥ ರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಷಾದ್ರಿ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.