Mother-son drown in lake: ಕೆರೆಯಲ್ಲಿ ಮುಳುಗಿ ತಾಯಿ–ಮಗ ಸಾವು: ತಂದೆ–ಮಗಳ ಕಣ್ಣೆದುರೇ ನೀರು ಪಾಲಾದ ದುರಂತ
ನೆಲಮಂಗಲ ತಾಲ್ಲೂಕಿನ ರೇಖಾ (34) ಹಾಗೂ ಅವರ ಪುತ್ರ ಹೇಮಂತ್ (19) ಮೃತ ದುರ್ದೈವಿಗಳು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮದ ಈ ಕುಟುಂಬ ಗಾಂಧಿ ಜಯಂತಿ ಪ್ರಯುಕ್ತ ಪ್ರವಾಸಕ್ಕೆ ಬಂದಿತ್ತು. ಈ ವೇಳೆ ಕೆರೆಯಲ್ಲಿ ಈಜಲು ನೀರಿಗೆ ಇಳಿದಾಗ ಆಳಕ್ಕೆ ತೆರಳಿದ ತಾಯಿ–ಮಗ ನೀರಿನಲ್ಲಿ ಮುಳುಗಿದ್ದಾರೆ.
-
ಚಿಕ್ಕಬಳ್ಳಾಪುರ: ತಾಲ್ಲೂಕಿನ ಪೋಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀನಿವಾಸ ಸಾಗರ ಕೆರೆಯಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ತಾಯಿ ಹಾಗೂ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ತಂದೆ ಹಾಗೂ ಮಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಮನಕಲಕುವ ಘಟನೆ ನಡೆದಿದೆ.
ನೆಲಮಂಗಲ ತಾಲ್ಲೂಕಿನ ರೇಖಾ (34) ಹಾಗೂ ಅವರ ಪುತ್ರ ಹೇಮಂತ್ (19) ಮೃತ ದುರ್ದೈವಿಗಳು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮದ ಈ ಕುಟುಂಬ ಗಾಂಧಿ ಜಯಂತಿ ಪ್ರಯುಕ್ತ ಪ್ರವಾಸಕ್ಕೆ ಬಂದಿತ್ತು. ಈ ವೇಳೆ ಕೆರೆಯಲ್ಲಿ ಈಜಲು ನೀರಿಗೆ ಇಳಿದಾಗ ಆಳಕ್ಕೆ ತೆರಳಿದ ತಾಯಿ–ಮಗ ನೀರಿನಲ್ಲಿ ಮುಳುಗಿದ್ದಾರೆ.
ಇದನ್ನೂ ಓದಿ: Drowned: ಭೂತನಾಳ ಕೆರೆಯಲ್ಲಿ ದುರಂತ: ಒಬ್ಬನನ್ನು ಬದುಕಿಸಲು ಹೋಗಿ ಮೂವರು ನೀರುಪಾಲು
ಅವರೊಂದಿಗೆ ನೀರಿಗೆ ಇಳಿದಿದ್ದ ಮಗಳು ದೀಪಾಳಿಗೂ ಈಜಲು ಬಾರದೆ ನೀರಿನಲ್ಲಿ ಒದ್ದಾಡು ತ್ತಿದ್ದಾಗ, ದಡದಲ್ಲಿದ್ದ ಕೆಲ ನಾಗರಿಕರು ತಕ್ಷಣ ನೀರಿಗೆ ಧುಮುಕಿ ತಂದೆ ರಾಜು ಹಾಗೂ ಮಗಳು ದೀಪಾಳನ್ನು ರಕ್ಷಿಸಿದ್ದಾರೆ.
ತಂದೆ ಹಾಗೂ ಮಗಳ ಕಣ್ಣೆದುರೇ ತಾಯಿ–ಮಗ ನೀರಿನಲ್ಲಿ ಮುಳುಗಿದ ದೃಶ್ಯ ಕುಟುಂಬಸ್ಥರನ್ನು ಕಂಗೆಡಿಸಿದೆ. ಸಾವಿನ ಸುದ್ದಿ ತಿಳಿದು ತಂದೆ ರಾಜು ದುಃಖದಿಂದ ಗೋಳಾಡುತ್ತಿದ್ದ ದೃಶ್ಯ ಸ್ಥಳದಲ್ಲಿದ್ದವರ ಮನಕಲಕುವಂತಿತ್ತು.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಎಎಸ್‌ಪಿ ಜಗನ್ನಾಥ ರೈ ಹಾಗೂ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ಆಳದಲ್ಲಿದ್ದ ರೇಖಾ ಮತ್ತು ಹೇಮಂತ್ ಅವರ ಮೃತದೇಹಗಳನ್ನು ಹೊರತೆಗೆದರು.
ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.