ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chinthamani News: ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ

ಹಜರತ್ ರವರ ಅನುಯಾಯಿಗಳು ವಿವಿಧ ರೀತಿಯ ಪಾವಡಗಳನ್ನ ಪ್ರದರ್ಶಿಸಿ ಜನರ ಗಮನ ಸೆಳೆದರು. ತಮ್ಮ ಇಷ್ಟಾರ್ಥ ಈಡೇರಿಸುವಂತೆ ಹರಕೆ ಹೊತ್ತ ಭಕ್ತರು, ದರ್ಗಾಕ್ಕೆ ಗಂಧ ಹಚ್ಚಿ ಛಾದರ್ ಸಮರ್ಪಿಸಿ ದರು. ಮೊದಲನೇ ದಿನ ಉರುಸ್ ಪ್ರಯುಕ್ತ ವಕ್ಫ್ ಬೋರ್ಡ್ ಕಡೆಯಿಂದ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.

ಗ್ರಾಮಸ್ಥರಿಂದ ರಾತ್ರಿ ಸಡಗರ ಸಂಭ್ರಮದಿಂದ ಗಂಧೋತ್ಸವ ಆಚರಣೆ

-

Ashok Nayak Ashok Nayak Sep 7, 2025 1:31 PM

ಚಿಂತಾಮಣಿ: ರಾಜ್ಯದ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಕೇಂದ್ರ ಹಾಗೂ ಪವಿತ್ರ ಯಾತ್ರಾಸ್ಥಳ ವಾಗಿರುವ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾ ಜಾನ್ ದರ್ಗಾ ಗಂಧೋತ್ಸವ ಕಾರ್ಯಕ್ರಮ ಗ್ರಾಮಸ್ಥರಿಂದ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮಸ್ಥರಿಂದ ಮೊದಲನೇ ದಿನ ಪಟೇಲ್ ಭಾಷು ಸಬ್ ಅವರ ಮೊಮ್ಮಗನಾದ ಶುಜಾತಾ ಪಾಷಾ,ಹಾಜಿ ಅನ್ಸರ್ ಖಾನ್, ಫೈಯಾಜ್,ಜಂಗ್ಲಿಪೀರ್ ಬಾಬಾ ದರ್ಗಾ ಮುತವಲ್ಲಿ ಬಾಬಾ ಜಾನ್,ಲೇಟ್ ಅನ್ವರ್ ಸಾಬ್,ನೂರ್ ಜಾನ್, ರವರ ಮನೆಗಳಿಂದ ಗಂಧದ ಮೆರವಣಿಗೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತಾದಿಗಳು ಹಜರತ್ ರವರ ಕೃಪೆಗೆ ಪಾತ್ರರಾದರು.

ಇದನ್ನೂ ಓದಿ: Vishweshwar Bhat Column: ಈಗಲೂ ವಾರದಲ್ಲಿ ಒಂದು ದಿನ ಇಸ್ರೇಲಿಗರು ಮೊಬೈಲ್‌ ಮುಟ್ಟುವುದಿಲ್ಲ !

ಹಜರತ್ ರವರ ಅನುಯಾಯಿಗಳು ವಿವಿಧ ರೀತಿಯ ಪಾವಡಗಳನ್ನ ಪ್ರದರ್ಶಿಸಿ ಜನರ ಗಮನ ಸೆಳೆದರು. ತಮ್ಮ ಇಷ್ಟಾರ್ಥ ಈಡೇರಿಸುವಂತೆ ಹರಕೆ ಹೊತ್ತ ಭಕ್ತರು, ದರ್ಗಾಕ್ಕೆ ಗಂಧ ಹಚ್ಚಿ ಛಾದರ್ ಸಮರ್ಪಿಸಿದರು. ಮೊದಲನೇ ದಿನ ಉರುಸ್ ಪ್ರಯುಕ್ತ ವಕ್ಫ್ ಬೋರ್ಡ್ ಕಡೆಯಿಂದ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.

ಇನ್ನೂ ಉರುಸ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋ ಬಸ್ತ್ ಕೂಡ ಏರ್ಪಡಿಸಲಾಗಿತ್ತು.

ಹಿಂದೂ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿ ಯುತವಾಗಿ ಆಚರಿಸಲಾಗಿದೆ ಎಂದು ವಕ್ಫ್ ಬೋರ್ಡ್ ಅಧಿಕಾರಿಗಳು ಹೇಳಿದರು.

ಮೊದಲನೇ ದಿನದ ಉರುಸ್ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಾಜಿ ಅನ್ಸರ್ ಖಾನ್. ದರ್ಗಾ ಸಮಿತಿ ಕಾರ್ಯದರ್ಶಿ ಆರಿಫ್ ಖಾನ್.ಸದಸ್ಯರಾದ ಅಮೀರ್ ಜಾನ್. ಅಮಾನುಲ್ಲಾ, ನಜೀರ್, ಜಬಿವುಲ್ಲಾ, ಕಲೀಮ್ ಪಾಷಾ,ದರ್ಗಾ ಮೇಲ್ವಿಚಾರಕರಾದ ತಯುಬ್ ನವಾಜ್,ವಕ್ಫ್ ಬೋರ್ಡ್ ಅಧಿಕಾರಿ ನವೀದ್ ಪಾಷಾ,ಗ್ರಾಮದ ಹಿಂದೂ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.