ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shidlaghatta News: ಶಿಡ್ಲಘಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ‘ನಾದಾಸ್ ಗೋ ಸಂತೆ’: ಗೌರಿ ಗಣೇಶ ಹಬ್ಬದ ದಿನವಾದ ಸೋಮವಾರ ಗುದ್ದಲಿ ಪೂಜೆ

ಗೌರಿ ಗಣೇಶ ಹಬ್ಬದ ದಿನವಾದ ಸೋಮವಾರ ಚಿಂತಾಮಣಿ ರಸ್ತೆಯಲ್ಲಿರುವ ಬೊಮ್ಮನಹಳ್ಳಿ ಹಾಗೂ ಪಿಂಡಪಾಪನಹಳ್ಳಿ ಮಧ್ಯಭಾಗದಲ್ಲಿರುವ ನಾದಾಸ್ ಹೋಟೆಲ್ ಮುಂಭಾಗದಲ್ಲಿ ‘ನಾದಾಸ್ ಫ್ರೂಟ್’ ಸಂಸ್ಥೆಯ ಅಡಿಯಲ್ಲಿ ಆರಂಭಿಸಲಾಗುತ್ತಿರುವ ‘ನಾದಾಸ್ ಗೋ ಸಂತೆ’ಗೆ ಗುದ್ದಲಿ ಪೂಜೆ ನೆರವೇರಿಸ ಲಾಗುವುದು ಎಂದರು.

ಶಿಡ್ಲಘಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ‘ನಾದಾಸ್ ಗೋ ಸಂತೆ'

-

Profile
Ashok Nayak Sep 15, 2026 6:13 PM

ಶಿಡ್ಲಘಟ್ಟ: ರೈತರು ಹಾಗೂ ಗೋ ಸಾಕಾಣಿಕೆದಾರರ ಅನುಕೂಲಕ್ಕಾಗಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ‘ನಾದಾಸ್ ಗೋ ಸಂತೆ’ ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸಮಾಜ ಸೇವಕ ಕೊತ್ತನೂರು ಪಂಚಾಕ್ಷರ ರೆಡ್ಡಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಗಣೇಶ ಹಬ್ಬದ ದಿನವಾದ ಸೋಮವಾರ ಚಿಂತಾ ಮಣಿ ರಸ್ತೆಯಲ್ಲಿರುವ ಬೊಮ್ಮನಹಳ್ಳಿ ಹಾಗೂ ಪಿಂಡಪಾಪನಹಳ್ಳಿ ಮಧ್ಯಭಾಗದಲ್ಲಿರುವ ನಾದಾಸ್ ಹೋಟೆಲ್ ಮುಂಭಾಗದಲ್ಲಿ ‘ನಾದಾಸ್ ಫ್ರೂಟ್’ ಸಂಸ್ಥೆಯ ಅಡಿಯಲ್ಲಿ ಆರಂಭಿಸಲಾಗುತ್ತಿರುವ ‘ನಾದಾಸ್ ಗೋ ಸಂತೆ’ಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು.

ಇದನ್ನೂ ಓದಿ: Shidlaghatta News: ಶಿಡ್ಲಘಟ್ಟ ನಗರದಲ್ಲಿ ಪಿಎಸ್ಐ ಸುನಿಲ್ ನೇತೃತ್ವದಲ್ಲಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ

ರೈತರು ತಮ್ಮ ಜಾನುವಾರುಗಳ ಖರೀದಿ ಮತ್ತು ಮಾರಾಟಕ್ಕಾಗಿ ದೂರದ ಪ್ರದೇಶಗಳಿಗೆ ತೆರಳುವ ಅಗತ್ಯವಿಲ್ಲದಂತೆ ಸ್ಥಳೀಯವಾಗಿಯೇ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಗೋ ಸಂತೆ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಗೋ ಸಂತೆ ಆರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶಿಡ್ಲಘಟ್ಟ ಕ್ಷೇತ್ರದಾದ್ಯಂತ ರೈತರ ಅನುಕೂಲಕ್ಕಾಗಿ ಗೋ ಸಂತೆಯನ್ನು ವಿಸ್ತರಿಸ ಲಾಗುವುದು ಎಂದು ಪಂಚಾಕ್ಷರ ರೆಡ್ಡಿ ತಿಳಿಸಿದರು.

ರೈತರು ಹಾಗೂ ಗೋ ಸಾಕಾಣಿಕೆದಾರರಿಗೆ ಜಾನುವಾರುಗಳ ಖರೀದಿ–ಮಾರಾಟಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದರ ಜೊತೆಗೆ, ಸ್ಥಳೀಯ ರೈತರಿಗೆ ಅನುಕೂಲವಾಗುವ ಮಾರುಕಟ್ಟೆ ವ್ಯವಸ್ಥೆ ನಿರ್ಮಿಸು ವುದು ‘ನಾದಾಸ್ ಗೋ ಸಂತೆಯ’ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.