MLA B.N.Ravikumar: ರಾಜಕಾರಣ ಶಾಶ್ವತವಲ್ಲ, ಅಭಿವೃದ್ಧಿ ಕಾರ್ಯಗಳೇ ಶಾಶ್ವತ: ಶಾಸಕ ಬಿ.ಎನ್.ರವಿಕುಮಾರ್
ರಾಮಲಿಂಗೇಶ್ವರಸ್ವಾಮಿ ದೇವಾಲಯ ಪುರಾಣಪ್ರಸಿದ್ಧ ದೇವಾಲಯವಾಗಿದೆ. ಪ್ರತಿ ವರ್ಷ ಹುಣ್ಣಿಮೆ ಯಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗುತ್ತಾರೆ. ತಾಲೂಕು ಆಡಳಿತ ದ ಸುಪರ್ಧಿಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದ್ದು, ಭಗವಂತ ಸಕಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಬೇಡಿಕೊಂಡಿರುವುದಾಗಿ ಹೇಳಿದರು.
-
ನಲ್ಲರಾಳ್ಳಹಳ್ಳಿಯ ಪುರಾಣ ಪ್ರಸಿದ್ದ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿ ಹೇಳಿಕೆ
ಶಿಡ್ಲಘಟ್ಟ: ರಾಜಕಾರಣ ಶಾಶ್ವತವಲ್ಲ ಅಭಿವೃದ್ಧಿ ಕಾರ್ಯಗಳೇ ಶಾಶ್ವತ. ಅಭಿವೃದ್ಧಿ ವಿಚಾರಗಳಲ್ಲಿ ಯಾವ ಕಾರಣಕ್ಕೂ ರಾಜಕಾರಣ ಮಾಡುವುದಿಲ್ಲ.ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ, ಗೆದ್ದ ಮೇಲೆ ಎಲ್ಲರೂ ನಮ್ಮವರೇ ಎನ್ನುವ ಮನೋಭಾವನೆಯಲ್ಲಿ ಬದುಕುತ್ತಿರುವವನು ನಾನು ಎಂದು ಶಾಸಕ ಬಿ.ಎನ್.ರವಿಕುಮಾರ್(MLA B.N. Ravikumar) ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಬಶೆಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮ ಲಿಂಗೇಶ್ವರದ ಬೆಟ್ಟದ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ರಾಮಲಿಂಗೇಶ್ವರಸ್ವಾಮಿ ದೇವಾಲಯ ಪುರಾಣಪ್ರಸಿದ್ಧ ದೇವಾಲಯವಾಗಿದೆ. ಪ್ರತಿ ವರ್ಷ ಹುಣ್ಣಿಮೆ ಯಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗುತ್ತಾರೆ. ತಾಲೂಕು ಆಡಳಿತದ ಸುಪರ್ಧಿಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸ ಲಾಗುತ್ತಿದ್ದು, ಭಗವಂತ ಸಕಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಬೇಡಿಕೊಂಡಿರುವು ದಾಗಿ ಹೇಳಿದರು.
ಇದನ್ನೂ ಓದಿ: MLA B.N. Ravikumar: 3ನೇ ವರ್ಷದ ಕ್ರೈಸ್ತ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಬಿಎನ್ ರವಿಕುಮಾರ್ ಚಾಲನೆ
ಶುಭಲಗ್ನದಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರವಾದರು.ಹರಕೆ ಹೊತ್ತವರು ಹೂವು, ಬಾಳೆ, ದವನ ಎಸೆದು ದೇವರ ಆಶೀರ್ವಾದ ಬೇಡಿದರು. ಜಾತ್ರೆಯ ಅಂಗವಾಗಿ ಬುರುಗು ಬತ್ತಾಸು ಅಂಗಡಿಗಳು ರಥೋತ್ಸವಕ್ಕೆ ಮೆರುಗು ತಂದವು.
ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಿ.ಎನ್.ರವಿಕುಮಾರ್ ಅವರು ನಾನೊಬ್ಬ ಜನಪರ ಶಾಸಕನಾಗಿದ್ದು ಕ್ಷೇತ್ರದ ಅಭಿವೃದ್ದಿಯೇ ನನ್ನ ಗುರಿಯಾಗಿದೆ. ಶಾಸಕತ್ವದ ಅವಧಿಯಲ್ಲಿ ಗ್ರಾಮಗಳ ಪ್ರವಾಸ ಮಾಡಿ ಅವರ ಕುಂದು ಕೊರತೆಗಳನ್ನು ಆಲಿಸಿದ್ದು, ರಸ್ತೆಗಳು, ನೀರಿನ ಸಮಸ್ಯೆ, ಸ್ಮಶಾನದ ಸಮಸ್ಯೆ ಸೇರಿ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗಿದೆ. ಸಾಧ್ಯವಾದಷ್ಟು ತುರ್ತಾಗಿ ಅಭಿವೃದ್ಧಿ ಕೆಲಸಗಳಿಗೆ ಭೂಮಿ ಪೂಜೆಯನ್ನು ನೆರೆವೇರಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು ಸರ್ವರಿಗೂ ಒಪ್ಪಿತವಾಗುವ ರೀತಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ.ಅಭಿವೃದ್ದಿಯ ಮೂಲಕ ನನ್ನ ಜನಸೇವೆ ಯನ್ನು ಜನರಿಗೆ ಅರ್ಥ ಮಾಡಿಸುತ್ತೇನೆ ಎಂದರು.
ಕ್ಷೇತ್ರದ ಜನರು ನನ್ನನ್ನು ಅತ್ಯಧಿಕ ಮತಗಳನ್ನ ನೀಡುವುದರ ಮೂಲಕ ಚುನಾಯಿತ ಪ್ರತಿನಿಧಿ ಯಾಗಿ ಆಯ್ಕೆ ಮಾಡಿದ್ದಾರೆ. ಅವರ ಕಾಳಜಿಗೆ ಕಿಂಚಿತ್ತೂ ಊನ ಬಾರದ ಹಾಗೆ ನನ್ನ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನಹರಿಸುವೆ, ಯಾರು ಏನೇ ನನ್ನ ಬಗ್ಗೆ ಅಪಪ್ರಚಾರ ಮಾಡಿದರು ಕೂಡ ತಲೆಕೆಡಿಸಿಕೊಳ್ಳದೆ ಅಭಿವೃದ್ಧಿಯ ಕಡೆಗೆ ಹೆಜ್ಜೆ ಇಡುವೆ ಎಂದು ತಿಳಿಸಿದರು.
೨೦೨೫ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಂಪುಟದ ಅರ್ಧಕ್ಕೂ ಹೆಚ್ಚು ಸಚಿವರನ್ನು ಕ್ಷೇತ್ರಕ್ಕೆ ಕರೆಸಿ ಅಭಿವೃದ್ದಿಗೆ ಮುನ್ನುಡಿ ಬರೆಯಲಾಗಿದೆ. ನಮ್ಮ ಕ್ಷೇತ್ರದಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆಮೂಲಕ ನಮ್ಮ ಕ್ಷೇತ್ರಕ್ಕೆ 680 ಕೋಟಿ ವಿಶೇಷ ಅನುದಾನ ಪಡೆಯಲಾಗಿದೆ. ಆ ಅನುದಾನದಲ್ಲಿ ರಾಮಲಿಂಗೇಶ್ವರ ದೇವಸ್ಥಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರೆವೇರಿಸಲಾಗುತ್ತಿದೆ ಎಂದು ತಿಳಿಸಿ ದರು.
ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ತಹಶೀಲ್ದಾರ್ ಗಗನ ಸಿಂಧು, ದೇವಾಲಯದ ಕನ್ವೀನಿಯರ್ ಸುನೀತಾ ಶ್ರೀನಿವಾಸ್ ರೆಡ್ಡಿ, ಅಂಗಾರಹಳ್ಳಿ ಬೈರಾರೆಡ್ಡಿ, ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಪುಟ್ಟು ಆಂಜಿನಪ್ಪ, ತಾದೂರು ರಘು, ಬಂಕ್ ಮುನಿಯಪ್ಪ,ವೆಂಕಟೇಶ್ ಸೇರಿದಂತೆ ಇನ್ನೂ ಹಲವು ಮುಖಂಡರುಗಳು ರಥೋತ್ಸವ ದಲ್ಲಿ ಭಾಗವಹಿಸಿದ್ದರು.