ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chintamani News: ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ ಬೆಳೆದರೆ ಅದೇ ವಿದ್ಯೆ ಕಲಿಸಿದ ಗುರುಗಳಿಗೆ ನೀಡುವ ಗುರುಕಾಣಿಕೆ: ಧರ್ಮಾಧಿಕಾರಿ ಎಂ.ಆರ್.ಜಯರಾಮ್

ಈ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಂಡ ಅನುಭವ ಗಳಿಂದ ಪಾಠ ಕಲಿತು, ತಮ್ಮ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಯಾರಾದರೆ ಕಷ್ಟದಲ್ಲಿ ಇದ್ದಾರೋ ಅವರಿಗೆ ಸಹಾಯ ಮಾಡಬೇಕು ಎಂಬ ಸೇವಾ ಮನೋಭಾವದಿಂದ ಈ ಪ್ರೋತ್ಸಾಹಧನ ವಿತರಣಾ ಸೇವಾ ಕಾರ್ಯ ಮಾಡುತ್ತಿದ್ದಾರೆ

ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ ಬೆಳೆದರೆ ಅದೇ ಗುರುಕಾಣಿಕೆ

ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ ಬೆಳೆದರೆ ಅದೇ ವಿದ್ಯೆ ಕಲಿಸಿದ ಗುರುಗಳಿಗೆ ನೀಡುವ ಗುರುಕಾಣಿಕೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು. -

Ashok Nayak
Ashok Nayak Jan 4, 2026 9:48 PM

ಚಿಂತಾಮಣಿ: ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ ಬೆಳೆದರೆ ಅದೇ ವಿದ್ಯೆ ಕಲಿಸಿದ ಗುರುಗಳಿಗೆ ನೀಡುವ ಗುರುಕಾಣಿಕೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ಶ್ರೀಕೈವಾರ ಯೋಗಿನಾರೇಯಣ ಹಳೇ ವಿದ್ಯಾರ್ಥಿಗಳ ಸೇವಾ ಟ್ರಸ್ಟ್ ಕೈವಾರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಂಡ ಅನುಭವ ಗಳಿಂದ ಪಾಠ ಕಲಿತು, ತಮ್ಮ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಯಾರಾದರೆ ಕಷ್ಟದಲ್ಲಿ ಇದ್ದಾರೋ ಅವರಿಗೆ ಸಹಾಯ ಮಾಡಬೇಕು ಎಂಬ ಸೇವಾ ಮನೋಭಾವದಿಂದ ಈ ಪ್ರೋತ್ಸಾಹಧನ ವಿತರಣಾ ಸೇವಾಕಾರ್ಯ ಮಾಡುತ್ತಿದ್ದಾರೆ. ಇವರ ಸೇವೆ ಶ್ಲಾಘನೀಯ. ಸಹಾಯಧನ ಪಡೆದ ಇಂದಿನ ವಿದ್ಯಾರ್ಥಿಗಳು ಮುಂದೆಯೂ ಈ ಸೇವೆ ಮುಂದುವರೆಸಿಕೊಂಡು ಹೋಗಬೇಕು ಎಂದರು.

ಇದನ್ನೂ ಓದಿ: Chintamani News: ಕೋಟಗಲ್‌ನ ಗ್ರಾಮದ 30ಕ್ಕೂ ಹೆಚ್ಚು ಮಂದಿ ಡಾ.ಎಂ.ಸಿ.ಸುಧಾಕರ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ

ಚಿಕ್ಕಬಳ್ಳಾಪುರದ ನಗರಸಭೆ ಸದಸ್ಯ ಮಟಮಪ್ಪ ಮಾತನಾಡಿ, ನಾನು ಇದೇ ಕೈವಾರದಲ್ಲಿ ವಿದ್ಯಾ ಭ್ಯಾಸ ಪಡೆದವನು. ನನಗೆ ದೊರೆತದ್ದನ್ನು ಮರಳಿ ಸಮಾಜಕ್ಕೆ ನೀಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಈ ಟ್ರಸ್ಟ್ ಕೆಲಸಮಾಡುತ್ತಿದೆ. ಇದಕ್ಕೆ ಬೆನ್ನೆಲುಬಾಗಿ ಗುರುಗಳಾದ ಎ.ಗಂಗಾಧರ್ ಅವಿರತ ಶ್ರಮಿಸುತ್ತಿದ್ದಾರೆ. ಹಳೇ ವಿದ್ಯಾರ್ಥಿಗಳ ಟ್ರಸ್ಟ್‌ʼನ ಸಹಾಯ ಪಡೆದ ವಿದ್ಯಾರ್ಥಿಗಳು ಇಂದು ಉನ್ನತ ವ್ಯಾಸಂಗ ಮಾಡಿದ್ದರಿಂದ ಉತ್ತಮವಾದ ನೌಕರಿ ಪಡೆದು ವಿದೇಶಗಳಲ್ಲಿ ಕೆಲಸ ಮಾಡು ತ್ತಿದ್ದಾರೆ ಎಂದರು.

ವಿದ್ಯಾರ್ಥಿಗಳು ತಮಗೆ ದೊರೆತಿರುವ ಈ ಪ್ರೋತ್ಸಾಹಧನವನ್ನು ಸದುಪಯೋಗ ಮಾಡಿಕೊಂಡು ಉನ್ನತವಾಗಿ ಬೆಳೆಯಿರಿ. ಮೊಬೈಲ್‌ನ್ನು ತಮ್ಮ ಓದಿನ ಉಪಯೋಗಕ್ಕಾಗಿ ಬಳಸಿಕೊಳ್ಳಿ, ಅನಗತ್ಯ ವಾಗಿ ಬಳಸಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ ಎಂದರು.

4cbpm2kai ok

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಳೇ ವಿದ್ಯಾರ್ಥಿಗಳ ಸೇವಾ ಟ್ರಸ್ಟ್‌ʼನ ಅಧ್ಯಕ್ಷ ಎ.ಗಂಗಾಧರ್ ಮಾತನಾಡಿ, ವಿದ್ಯೆ ಅಮೂಲ್ಯವಾದ ಸಂಪತ್ತು. ವಿದ್ಯೆಯ ಫಲ ಎಂದೆಂದಿಗೂ ಸಿಹಿಯಾಗಿರುತ್ತದೆ. ಕುಟುಂಬಗಳಲ್ಲಿ ಎಷ್ಟೇ ತೊಂದರೆ ಇರಲಿ ಕಷ್ಟಪಟ್ಟು ಉತ್ತಮವಾದ ವಿದ್ಯೆಯನ್ನು ಸಂಪಾದಿಸಿ. ಅದು ನಿಮ್ಮನ್ನು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ ಉತ್ತಮ ನಾಗರೀಕನನ್ನಾಗಿ ಮಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪೋತ್ಸಾಹ ಧನ ವಿತರಿಸಲಾಯಿತು. ಈವೇಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಈ ವೇಳೆ, ಯೋಗಿನಾರೇಯಣ ಮಠದ ಉಪಾಧ್ಯಕ್ಷ ಜೆ.ವಿಭಾಕರ ರೆಡ್ಡಿ, ಸದಸ್ಯರಾದ ಗಣೇಶ್ ಚಂದ್ರಪ್ಪ, ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಮಂಜುನಾಥ್, ಸಮಾಜ ಸೇವಕ ಹೋಟೇಲ್ ರಾಮಣ್ಣ, ಜೆ.ಸಿ.ಬಿ.ಶಿವು, ಚಿರಂಜೀವಿ, ಮಂಜುನಾಥ್ ಉಪನ್ಯಾಸಕರು, ಎಸ್.ವಿನಾಯಕ, ರಾಮಲಕ್ಷಣ, ಶ್ಯಾಮಲ, ಬೇಬಿರಾಣಿ, ನಾಗವೇಣಿ ದೇವರೆಡ್ಡಿ, ಟಿಸಿಎಸ್ ಕಂಪನಿಯ ಮುರಳಿ ಮುಂತಾದವರು ಉಪಸ್ಥಿತರಿದ್ದರು.