Power Cut: ವಿದ್ಯುತ್ ವ್ಯತ್ಯಯ
ವಿದ್ಯುತ್ ಸರಬರಾಜಾಗುವ ಎಲ್ಲಾ 11ಕೆವಿ ಮಾರ್ಗಗಳು ಮತ್ತು ಗ್ರಾಹಕರಿಗೆ ವಿದ್ಯುತ್ ಸರಬ ರಾಜಿನಲ್ಲಿ ಅಡಚಣೆಯಾಗಲಿದೆ ಎಂದು ಬೆ.ವಿ.ಕಂ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Source : Chikkaballapur Reporter
ಚಿಕ್ಕಬಳ್ಳಾಪುರ : ಟಿ.ಎಲ್ ಮತ್ತು ಎಸ್.ಎಸ್ ವಿಭಾಗ, ಕ.ವಿ.ಪ್ರ.ನಿ.ನಿ, ಚಿಂತಾಮಣಿ ರವರು ೨೨೦ಕೆವಿ ಸ್ವೀಕರಣಾ ಕೇಂದ್ರ, ಚಿಂತಾಮಣಿ ಮತ್ತು ಸದರಿ ಸ್ವೀಕರಣಾ ಕೇಂದ್ರದಿಂದ ಸರಬರಾಜಾಗುವ ಬೆವಿಕಂ ಚಿಂತಾಮಣಿ ವಿಭಾಗ ವ್ಯಾಪ್ತಿಯ 66/11ಕೆವಿ ವಿದ್ಯುತ್ ಉಪ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯಗಳನ್ನು ಜನವರಿ ೧೯ ರಂದು ಹಮ್ಮಿ ಕೊಂಡಿದ್ದು, ಜ.೧೯ ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಚಿಂತಾಮಣಿ, ಶೆಟ್ಟಿಮಾದಮಂಗಲ, ಮಸ್ತೇನಹಳ್ಳಿ, ತಳಗವಾರ, ಚೀಮಂಗಳ, ವೈ ಹುಣಸೇನಹಳ್ಳಿ, ಕೆ.ರಾಗುಟ್ಟಹಳ್ಳಿ, ಬೊಮ್ಮೆಪಲ್ಲಿ ಕ್ರಾಸ್, ಏನಿಗದಳೆ, ಶಿಡ್ಲಘಟ್ಟ, ಮೇಲೂರು, ನಂದಿಗಾನ ಹಳ್ಳಿ, ಜಿ.ಕೋಡಿಹಳ್ಳಿ, ಇರಗಂಪಲ್ಲಿ, ಎಮ್.ಗೊಲ್ಲಹಳ್ಳಿ, ಗಂಜಿಗುಂಟೆ, ಬುರುಡುಗುಂಟೆ, ಪಲ್ಲಿಚರ್ಲು, ದಿಬ್ಬೂರಹಳ್ಳಿ, ಚಿಂತಾಮಣಿಯಿಂದ ವಿದ್ಯುತ್ ಸರಬ ರಾಜಾಗುವ ಹಾಗೂ ಬೆವಿಕಂ ಚಿತಾಮಣಿ ವಿಭಾಗ ವ್ಯಾಪ್ತಿಯ ಉಪಕೇಂದ್ರಗಳು ಮತ್ತು ಅಲ್ಲಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ 11ಕೆವಿ ಮಾರ್ಗಗಳು ಮತ್ತು ಗ್ರಾಹಕರಿಗೆ ವಿದ್ಯುತ್ ಸರಬರಾಜಿ ನಲ್ಲಿ ಅಡಚಣೆಯಾಗಲಿದೆ ಎಂದು ಬೆ.ವಿ.ಕಂ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.19ರಂದು ವಿದ್ಯುತ್ ವ್ಯತ್ಯಯ
ಚಿಕ್ಕಬಳ್ಳಾಪುರ: ಗೌರಿಬಿದನೂರು ಮತ್ತು ಮಿಟ್ಟೇಮರಿ ೨೨೦/೬೬/೧೧ ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರಗಳಲ್ಲಿ ಕವಿಪ್ರನಿನಿ ವತಿಯಿಂದ ನಿರ್ವಹಣಾ ಕಾಮಗಾರಿ ಕೈಗೊಂಡಿ ರುವುದರಿಂದ ಈ ವಿದ್ಯುತ್ ಸ್ವೀಕರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಗೌರಿಬಿದನೂರು, ಅಲ್ಲೀಪುರ, ರಮಾಪುರ, ಕುಡುಮಲಕುಂಟೆ, ತೊಂಡೇಬಾವಿ, ಎ.ಸಿ.ಸಿ, ಇ.ಹೆಚ್.ಟಿ, ಮಂಚೇನಹಳ್ಳಿ, ವಿಧುರಾಶ್ವತ್ಥ, ಪೆರೇಸಂದ್ರ, ಮಂಡಿಕಲ್ಲು, ಗುಡಿಬಂಡೆ, ಡಿ.ಪಾಳ್ಯ, ವಾಟದಹೊಸಹಳ್ಳಿ, ಜಿ.ಕೊತ್ತೂರು, ಸೋಮೇನಹಳ್ಳಿ, ಬಾಗೇಪಲ್ಲಿ, ಸಾದಲಿ ಮಿಟ್ಟೇಮರಿ, ತಿಮ್ಮಂಪಲ್ಲಿ, ಸೋಮನಾಥಪುರ, ಚೇಳೂರು, ಪಾತಪಾಳ್ಯ, ಚಾಕವೇಲು, ಗೂಳೂರು, ಜೂಲಪಾಳ್ಯ ೬೬/೧೧ ಕೆ.ವಿ ಉಪ ವಿದ್ಯುತ್ ಕೇಂದ್ರಗಳಿಗೆ ಜ.19ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯ ವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಈ ವಿದ್ಯುತ್ ಉಪ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಗೌರಿಬಿದನೂರು, ಗುಡಿ ಬಂಡೆ, ಬಾಗೇಪಲ್ಲಿ ಪಟ್ಟಣಗಳು ಸೇರಿದಂತೆ ಈ ತಾಲ್ಲೂಕುಗಳ ಎಲ್ಲಾ ಗ್ರಾಮೀಣ ಪ್ರದೇಶ ಗಳಿಗೆ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ, ಮಂಡಿಕಲ್ ಹಾಗೂ ಸುತ್ತಮುತ್ತ ಲಿನ ಗ್ರಾಮೀಣ ಪ್ರದೇಶಗಳಿಗೆ ಜನವರಿ 19 ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಹಾಗೂ ಸಾರ್ವ ಜನಿಕರು ಸಹಕರಿಸಬೇಕೆಂದು ಚಿಕ್ಕಬಳ್ಳಾಪುರ ಬೆವಿಕಂ, ಕಾರ್ಯನಿರ್ವಾಹಕ ಇಂಜಿನಿ ಯರ್ ಪಿ.ಜಿ.ರಮೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*
ಗ್ರಾಹಕರ ಸಂವಾದ ಸಭೆ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಭಾಗ ವ್ಯಾಪ್ತಿಯ ಬೆ.ವಿ.ಕಂ, ಉಪ ವಿಭಾಗ ಕಚೇರಿ ಗಳಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ರವರ ಅಧ್ಯಕ್ಷತೆಯಲ್ಲಿ ಜನವರಿ 18 ರಂದು ಮಧ್ಯಾಹ್ನ ೩ ಗಂಟೆಗೆ ಗ್ರಾಹಕರ ಸಂವಾದ ಸಭೆಯನ್ನು ಏರ್ಪಡಿಸಲಾಗಿದ್ದು, ಆಯಾ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಗ್ರಾಹಕರು ಸಭೆಗೆ ಹಾಜರಾಗಿ, ವಿದ್ಯುತ್ ಸರಬರಾಜಿಗೆ ಸಂಬಂಧಪಟ್ಟಂತೆ ಏನಾದರೂ ಕುಂದುಕೊರತೆಗಳು ಇದ್ದಲ್ಲಿ ಕಾನೂನಾತ್ಮಕವಾಗಿ ರಿಹರಿಸಿಕೊಳ್ಳಬಹುದೆಂದು ಚಿಕ್ಕಬಳ್ಳಾಪುರ ಬೆವಿಕಂ, ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಜಿ.ರಮೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*
ವಸತಿ ಶಾಲೆಯ 6ನೇ ತರಗತಿ ದಾಖಲಾತಿಗಾಗಿ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ೨೦೨೪-೨೫ನೇ ಸಾಲಿಗೆ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಕೊಲುಮೇನಹಳ್ಳಿ ಚಿಕ್ಕಬಳ್ಳಾಪುರ ತಾಲ್ಲೂಕು & ಜಿಲ್ಲೆ ಈ ವಸತಿ ಶಾಲೆಗೆ ೬ನೇ ತರಗತಿಗೆ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಅವಧಿಯಲ್ಲಿ ಪೋಷಕರು ಅರ್ಜಿಯನ್ನು ಪಡೆದು, ವಿದ್ಯಾರ್ಥಿಯ ಎಸ್‌ಟಿಎಸ್ ನಂಬರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ & ಆಧಾರ್‌ಕಾಡ್ ಜೆರಾಕ್ಸ್ ಮತ್ತು ಪೋಟೊಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ವಸತಿ ಶಾಲೆಯಲ್ಲಿ ಆನ್ ಲೈನ್ ಮೂಲಕ ಜನವರಿ ೨೫ ರ ಸಂಜೆ ೫.೩೦ ರೊಳಗೆ ಭರ್ತಿ ಮಾಡಿಸುವುದು. ಹೆಚ್ಚಿನ ವಿವರಗಳಿಗೆ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊಲುಮೇನಹಳ್ಳಿಯ ಪ್ರಾಂಶುಪಾಲರ ಮೊಬೈಲ್ ನಂ:೯೬೮೬೯೦೭೧೬೧ ಗೆ ಸಂಪರ್ಕಿಸಬಹುದು.
ಯುವ ಉದ್ಯಮಿ ದಿಕ್ಸೂಚಿ ಕಾರ್ಯಾಗಾರ
ಚಿಕ್ಕಬಳ್ಳಾಪುರ : ಜಿಲ್ಲಾ ಪಂಚಾಯತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿಕ್ಕಬಳ್ಳಾಪುರ ರವರ ವತಿಯಿಂದ ಎಲ್ಲಾ ತಾಲ್ಲೂಕುಗಳಿಗೆ ಸೇರಿ ಜಿಲ್ಲಾ ಮಟ್ಟದಲ್ಲಿ ಎರಡು ದಿನದ ಉದಯೋನ್ಮುಖ ಯುವ ಉದ್ಯಮಿ ತರಬೇತಿ "ಯುವ ಉದ್ಯಮಿ ದಿಕ್ಸೂಚಿ" ಕಾರ್ಯಾಗಾರ ಆಯೋಜನೆ ಮಾಡಿ ಜಿಲ್ಲೆಯ ಯುವ ಜನತೆಗೆ ಯುವ ಉದ್ಯಮಿಗೆ ಇರಬೇಕಾದ ಅವಶ್ಯಕ ಮಾಹಿತಿ, ಉತ್ಸಾಹ ಹಾಗೂ ಕೌಶಲ್ಯವನ್ನು ಅರ್ಹ ತರಬೇತುದಾರರು ಹಾಗೂ ಈಗಾಗಲೇ ಉದ್ಯಮದಲ್ಲಿ ತೊಡಗಿಕೊಂಡಿರುವ ಯಶಸ್ವಿ ಉದ್ಯಮಿಗಳಿಂದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ೧೮-೨೯ ವಯೋ ಮಾನದ ಯುವಕ/ಯುವತಿಯರಿಗೆ ಫೆಬ್ರವರಿ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಿದ್ದು, ಆಸಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಯುವಕ/ಯುವತಿಯರು ಜನವರಿ ೨೪ ರ ಒಳಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲಾ ಕಚೇರಿಗೆ ಭೇಟಿ ನೀಡುವಂತೆ ಅಥವಾ ದೂರವಾಣಿ ಸಂಖ್ಯೆ: ೦೮೧೫೬-೨೭೦೦೫೪ ನ್ನು ಸಂಪರ್ಕಿಸಿ ಹೆಸರುಗಳನ್ನು ನೊಂದಣಿ ಮಾಡಿಕೊಳ್ಳಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Power Cut: ಡಿ.18, 19ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ