ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Nandamoori Balakrishna: ನಟ ಬಾಲಕೃಷ್ಣ ಶೀಘ್ರ ಚೇತರಿಕೆಗೆ ಪ್ರಾರ್ಥನೆ: ಚಿಂತಾಮಣಿಯ ಕೈಲಾಸಗಿರಿಯಲ್ಲಿ 111 ತೆಂಗಿನಕಾಯಿ ಸೇವೆ!

ನಂದಮೂರಿ ಬಾಲಕೃಷ್ಣ ಮತ್ತು ನಂದಮೂರಿ ಮೋಕ್ಷಜ್ಞ ಅಭಿಮಾನಿಗಳ ಸಂಘ ಚಿಂತಾಮಣಿ ಇವರ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ,ನಟ ಬಾಲಕೃಷ್ಣ ಅವರು ಅಭಿನಯಿಸುತ್ತಿರುವ 111ನೇ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಆದ ಸಣ್ಣ ಪ್ರಮಾಣದ ಕಾಲಿನ ಗಾಯದಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ವಿಶೇಷ ಪ್ರಾರ್ಥನೆ ಮಾಡಲಾಯಿತು.

ಚಿಂತಾಮಣಿಯ ಕೈಲಾಸಗಿರಿಯಲ್ಲಿ 111 ತೆಂಗಿನಕಾಯಿ ಸೇವೆ!

-

Profile
Ashok Nayak Jul 27, 2026 10:31 PM

ಚಿಂತಾಮಣಿ: ಹೈದರಾಬಾದ್‌ನ ಎಆರ್‌ಎನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ, ಶಾಸಕ ನಂದಮೂರಿ ಬಾಲಕೃಷ್ಣ(Nandamoori Balakrishna) ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಕೋರಿ, ಚಿಂತಾಮಣಿಯ ಕೈಲಾಸಗಿರಿ ಬೆಟ್ಟದ ಮೇಲಿರುವ ಶ್ರೀ ಈಶ್ವರ ದೇವಾಲಯದಲ್ಲಿ 111 ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.

ನಂದಮೂರಿ ಬಾಲಕೃಷ್ಣ ಮತ್ತು ನಂದಮೂರಿ ಮೋಕ್ಷಜ್ಞ ಅಭಿಮಾನಿಗಳ ಸಂಘ ಚಿಂತಾಮಣಿ ಇವರ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ,ನಟ ಬಾಲಕೃಷ್ಣ ಅವರು ಅಭಿನಯಿಸುತ್ತಿರುವ 111ನೇ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಆದ ಸಣ್ಣ ಪ್ರಮಾಣದ ಕಾಲಿನ ಗಾಯದಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ವಿಶೇಷ ಪ್ರಾರ್ಥನೆ ಮಾಡಲಾಯಿತು.

ಇದನ್ನೂ ಓದಿ: Nandamuri Balakrishna: ಕೊರಟಾಲ ಶಿವ ಜೊತೆ ನಂದಮೂರಿ ಬಾಲಕೃಷ್ಣ ಹೊಸ ಮೂವಿ ಅನೌನ್ಸ್‌!

ಈ ಸಂದರ್ಭದಲ್ಲಿ ಅಭಿಮಾನಿ ಸಂಘದ ಅಧ್ಯಕ್ಷ ದಾಸರಿ ಶ್ರೀನಿವಾಸಲು ಮಾತನಾಡಿ, ಬಾಲಕೃಷ್ಣ ಅವರು ಶೀಘ್ರವಾಗಿ ಗುಣಮುಖರಾಗಿ ಮತ್ತೆ ಬಣ್ಣದ ಪ್ರಪಂಚಕ್ಕೆ ಬರಲಿ ಎಂದು ಇಡೀ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.ಇವತ್ತು ಕೈಲಾಸಗಿರಿಯಲ್ಲಿ ಅವರಿಗಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

cbpm14nanda

ಈ ವಿಶೇಷ ಪೂಜೆಯಲ್ಲಿ ಅಭಿಮಾನಿ ಸಂಘದ ಸದಸ್ಯರು ಸೇರಿದಂತೆ ನೂರಾರು ಅಭಿಮಾನಿಗಳು ಪಾಲ್ಗೊಂಡು ತೆಂಗಿನಕಾಯಿ ಒಡೆದು ತಮ್ಮ ನೆಚ್ಚಿನ ನಟನ ಶೀಘ್ರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಶೋಕ್ ರೆಡ್ಡಿ, ಅಂಜನಿ ಮುನಿಯಪ್ಪ, ಶಶಿಕುಮಾರ್, ಎಸ್ ಎಸ್ ಶ್ರೀನಿವಾಸ್, ರಾಗ, ಸುಲ್ತಾನ್ ಮಂಜು, ಮೆಡಿಕಲ್ ಸೀನಾ, ವೇಣು, ಫೋಟೋಗ್ರಾಫರ್ ಎಂ.ಸಿ.ರೆಡ್ಡಿ, ನಾಗ, ಕೆಇಬಿ ಮಂಜುನಾಥ್, ಮಹೇಶ್, ನವೀನ್, ಎನ್ ಎಂ ಪಿ ಪ್ರವೀಣ್, ಪ್ರಭಾಕರ್, ಡ್ರೈವರ್ ನರಸಿಂಹ, ಅಂಬುಲೆನ್ಸ್ ನಾಗ ಸೇರಿದಂತೆ ಮತ್ತಿತರರು ಇದ್ದರು.