Mallikarjuna Kharge: ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’: ಮುನೀಂದ್ರ ಆಕ್ರೋಶ
ದಲಿತ ಸಮುದಾಯದ ಹಿರಿಯ ನಾಯಕನಿಗೆ ಜಾತಿಯ ಕಾರಣಕ್ಕೆ ಅವಮಾನ ಮಾಡಿದಂತಾಗಿರುವ ಈ ನಡೆ, ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿ ತಾರತಮ್ಯದ ಮನಸ್ಥಿತಿಯನ್ನು ಬಯಲಿ ಗೆಳೆಯುತ್ತದೆ ಎಂದು ಹೇಳಿದ್ದಾರೆ. ಇದು ಖರ್ಗೆ ಅವರಿಗೆ ಮಾತ್ರವಲ್ಲ, ಸಮಾನತೆ, ಸ್ವಾಭಿಮಾನ ಹಾಗೂ ಮಾನವ ಘನತೆಯ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ
-
ಚಿಕ್ಕಬಳ್ಳಾಪುರ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಆ.8ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯನ್ನು ಕೆಲವರು ಗಂಗಾಜಲ ಬಳಸಿ ‘ಶುದ್ಧೀಕರಣ’ ಮಾಡಿರುವುದು ಖಂಡನೀಯ ಎಂದು ಐಎನ್‌ಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಲಿತ ಸಮುದಾಯದ ಹಿರಿಯ ನಾಯಕನಿಗೆ ಜಾತಿಯ ಕಾರಣಕ್ಕೆ ಅವಮಾನ ಮಾಡಿದಂತಾಗಿರುವ ಈ ನಡೆ, ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿ ತಾರತಮ್ಯದ ಮನಸ್ಥಿತಿಯನ್ನು ಬಯಲಿ ಗೆಳೆಯುತ್ತದೆ ಎಂದು ಹೇಳಿದ್ದಾರೆ. ಇದು ಖರ್ಗೆ ಅವರಿಗೆ ಮಾತ್ರವಲ್ಲ, ಸಮಾನತೆ, ಸ್ವಾಭಿಮಾನ ಹಾಗೂ ಮಾನವ ಘನತೆಯ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Mallikarjun Kharge: ಗಂಟೆ ಬಾರಿಸಿದರೆ ದೇವರು ಪ್ರಸನ್ನ ಆಗಲ್ಲ: ಮೋದಿ ಸೋಮನಾಥ ದೇಗುಲ ಭೇಟಿಗೆ ಖರ್ಗೆ ವ್ಯಂಗ್ಯ
ಕೃತಕ ಬುದ್ಧಿಮತ್ತೆ ಹಾಗೂ ಆಧುನಿಕ ವಿಜ್ಞಾನದ ಯುಗದಲ್ಲಿಯೂ ಜಾತಿಯ ಆಧಾರದ ಮೇಲೆ ಮೇಲು-ಕೀಳು ಎಂಬ ಮನಸ್ಥಿತಿ ಮುಂದುವರಿದಿರುವುದು ಆತಂಕಕಾರಿ. ಯಾವುದೇ ಪಕ್ಷ, ಸಂಘಟನೆ ಅಥವಾ ವ್ಯಕ್ತಿಯಾಗಿರಲಿ, ಜಾತಿಯ ಹೆಸರಿನಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೃತ್ಯವನ್ನು ಪ್ರತಿಯೊಬ್ಬರೂ ವಿರೋಧಿಸಬೇಕು.
‘ಜಾತಿ ಅಲ್ಲ, ಮಾನವೀಯತೆ ನಮ್ಮ ಗುರುತು; ತಾರತಮ್ಯವಲ್ಲ, ಸಮಾನತೆ ನಮ್ಮ ದಾರಿ’ ಎಂದು ಮುನೀಂದ್ರ ಹೇಳಿದ್ದಾರೆ.