ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gudibande News: ಸಮಾಜ ಸೇವೆಯ ಮೂಲಕ ಹುಟ್ಟುಹಬ್ಬ ಆಚರಣೆ: ಮೀನುಗಾರಿಕೆ ಮಹಿಳೆಯರಿಗೆ ಸೀರೆ ವಿತರಣೆ

ಸಮಾನ ಮನಸ್ಕರ ಪರಿಸರ ಸಂರಕ್ಷಣೆ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಗುಡಿಬಂಡೆ ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗುಡಿಬಂಡೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಜಲಜ, ನವೀನ್ ಕಿರಣ್ ಅವರ ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಏಳು ದಿನಗಳ ಕಾಲ ಆಚರಿಸುತ್ತಿರುವುದು ಶ್ಲಾಘನೀಯ.

ಹುಟ್ಟುಹಬ್ಬ ಆಚರಣೆ: ಮೀನುಗಾರಿಕೆ ಮಹಿಳೆಯರಿಗೆ ಸೀರೆ ವಿತರಣೆ

-

Profile
Ashok Nayak Oct 3, 2026 7:24 PM

ಗುಡಿಬಂಡೆ: ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ಅವರ 48ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ ಏಳು ದಿನಗಳ ಸಮಾಜ ಸೇವಾ ಸಪ್ತಾಹದ ನಾಲ್ಕನೇ ದಿನ ಗುಡಿಬಂಡೆ ಕೆರೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು.

ಸಮಾನ ಮನಸ್ಕರ ಪರಿಸರ ಸಂರಕ್ಷಣೆ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಗುಡಿಬಂಡೆ ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಗುಡಿಬಂಡೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಜಲಜ, ನವೀನ್ ಕಿರಣ್ ಅವರ ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಏಳು ದಿನಗಳ ಕಾಲ ಆಚರಿಸು ತ್ತಿರುವುದು ಶ್ಲಾಘನೀಯ. ಸರಳತೆ, ಸಜ್ಜನಿಕೆ ಹಾಗೂ ಮಾನವೀಯ ಗುಣಗಳನ್ನು ಹೊಂದಿರುವ ಅವರು ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಇದನ್ನೂ ಓದಿ: Gudibande News: ಹಕ್ಕುಗಳ ಜತೆಗೆ ಕರ್ತವ್ಯಗಳ ಅರಿವು ಅಗತ್ಯ: ನ್ಯಾಯಮೂರ್ತಿ ಹಂಚಾಟೆ ಸಂಜೀವ ಕುಮಾರ

ನಿವೃತ್ತ ಉಪನ್ಯಾಸಕ ಬಿ. ಅಮೀರ್ ಜಾನ್ ಮಾತನಾಡಿ, ನವೀನ್ ಕಿರಣ್ ಅವರು ಜಿಲ್ಲಾದ್ಯಂತ ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರು ಆಯೋಜಿಸುವ ರಕ್ತದಾನ ಶಿಬಿರಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಮಾಜ ಸೇವೆಗೆ ಪ್ರೇರಣೆ ನೀಡುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ನವೀನ್ ಕಿರಣ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಗುಂಪುಮರದ ಆನಂದ್, ಸರ್ಕಾರಿ ಆಸ್ಪತ್ರೆಯ ನೇತ್ರ ತಜ್ಞೆ ಅನುಷಾ, ಪಪಂ ಮಾಜಿ ಉಪಾಧ್ಯಕ್ಷ ಎಂ.ಎನ್. ರಾಜಣ್ಣ, ಸದಸ್ಯ ರಾಜೇಶ್, ಪರಿಸರ ವೇದಿಕೆಯ ಮಂಜುನಾಥ್, ಸುರೇಶ್, ಇಂದ್ರಕುಮಾರ್ ಸಿಂಗ್, ನಿತಿನ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.