ಲಖನೌಗೆ ಬಂದಿಳಿದ ದುಬೈಯಿಂದ ಥಾಯ್ಲೆಂಡ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ; ಕಾರಣವೇನು?
Flydubai Flight: ಸದ್ಯ ಫ್ಲೈದುಬೈ ವಿಮಾನ ವಿಶ್ವಾದ್ಯಂತ ಸುದ್ದಿಯಲ್ಲಿದೆ. ಈ ಮಧ್ಯೆ ದುಬೈಯಿಂದ ಥಾಯ್ಲೆಂಡ್‌ನ ಫುಕೆಟ್‌ಗೆ ಹೊರಟಿದ್ದ ಫ್ಲೈದುಬೈ ಸಂಸ್ಥೆಗೆ ಸೇರಿದ ಮತ್ತೊಂದು ವಿಮಾನ ಉತ್ತರ ಪ್ರದೇಶದ ಲಖನೌ ಏರ್‌ಪೋರ್ಟ್‌ನಲ್ಲಿ ಬಂದಿಳಿದಿದೆ. ಹಾಗಂತ ಈ ವಿಮಾನವನ್ನು ಯಾರೂ ಹೈಜಾಕ್ ಮಾಡಲು ಯತ್ನಿಸಿಲ್ಲ. ಕೆಟ್ಟ ಹವಾಮಾನದ ಕಾರಣದಿಂದ ಭಾರತಕ್ಕೆ ಪ್ರವೇಶಿಸಿದೆ.
ಸಾಂದರ್ಭಿಕ ಚಿತ್ರ -
ಲಖನೌ, ಅ. 3: ಸದ್ಯ ಫ್ಲೈದುಬೈ ವಿಮಾನ (Flydubai Flight) ವಿಶ್ವಾದ್ಯಂತ ಸುದ್ದಿಯಲ್ಲಿದೆ. ಸೆಪ್ಟೆಂಬರ್ 30ರಂದು ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಒಮಾನ್ ಮೂಲಕ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ (Hamam al-Hammami) ಹೈಜಾಕ್ ಮಾಡಲು ಯತ್ನಿಸಿದ ಸಿಕ್ಕಿಬಿದ್ದಿದ್ದು, ಸದ್ಯ ಆತನ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ದುಬೈಯಿಂದ ಥಾಯ್ಲೆಂಡ್‌ನ ಫುಕೆಟ್‌ಗೆ ಹೊರಟಿದ್ದ ಫ್ಲೈದುಬೈ ಸಂಸ್ಥೆಗೆ ಸೇರಿದ ಮತ್ತೊಂದು ವಿಮಾನ ಉತ್ತರ ಪ್ರದೇಶದ ಲಖನೌ ಏರ್‌ಪೋರ್ಟ್‌ನಲ್ಲಿ ಬಂದಿಳಿದಿದೆ. ಹಾಗಂತ ಈ ವಿಮಾನವನ್ನು ಯಾರೂ ಹೈಜಾಕ್ ಮಾಡಲು ಯತ್ನಿಸಿಲ್ಲ. ಥಾಯ್ಲೆಂಡ್‌ನ ಕೆಟ್ಟ ಹವಾಮಾನದ ಕಾರಣದಿಂದ ಭಾರತಕ್ಕೆ ಪ್ರವೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ʼʼದುಬೈಯಿಂದ ಫುಕೆಟ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವೊಂದು ಗಮ್ಯಸ್ಥಾನದ ವಿಮಾನ ನಿಲ್ದಾಣದಲ್ಲಿನ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಉತ್ತರ ಪ್ರದೇಶದ ಲಖನೌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತುʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
174 ಪ್ರಯಾಣಿಕರ ಪ್ರಾಣ ಉಳಿಸಿದ ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಚಾರ್‌ಗೆ ಅಶೋಕ ಚಕ್ರ ಪ್ರಶಸ್ತಿ ನೀಡುವಂತೆ ಮೋದಿಗೆ ಪತ್ರ
ದುಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಿಂದ ಫುಕೆಟ್‌ಗೆ ಹೊರಟಿದ್ದ ಎಫ್‌ಝಡ್ FZ 1165 (FZ 1165) ವಿಮಾನವನ್ನು ಫುಕೇಟ್ ವಿಮಾನ ನಿಲ್ದಾಣದಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಲಖನೌಗೆ ತಿರುಗಿಸಲಾಯಿತು. ಎ6-ಎಫ್‌ಎಂಯು ಬೋಯಿಂಗ್ ಮ್ಯಾಕ್ಸ್ 8 ವಿಮಾನವು ಅಕ್ಟೋಬರ್ 3ರ ಸಂಜೆ 6:53ಕ್ಕೆ ಲಖನೌನಲ್ಲಿ ಸುರಕ್ಷಿತವಾಗಿ ಇಳಿಯಿತು. ಸದ್ಯ ಫುಕೆಟ್‌ನ ಪರಿಸ್ಥಿತಿ ಅಧ್ಯಯನ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಾಧಾರಣ ಲ್ಯಾಂಡಿಂಗ್
ವಿಮಾನ ಲ್ಯಾಂಡಿಂಗ್ ವೇಳೆ ಯಾವುದೇ ತುರ್ತು ಪರಿಸ್ಥಿತಿ ಘೋಷಿಸಿರಲಿಲ್ಲ. ಸಾಮಾನ್ಯದಂತೆಯೇ ಇಳಿಸಲಾಯಿತು. ʼʼಇದು ತುರ್ತು ಭೂಸ್ಪರ್ಶವಲ್ಲ. ಅಂತಹ ಯಾವುದೇ ಪರಿಸ್ಥಿತಿ ಎದುರಾಗಿಲ್ಲ. ಗಮ್ಯ ಸ್ಥಾನದಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಮುಂಚಿತವಾಗಿ ಮಾಹಿತಿ ನೀಡಿ ಲಖನೌ ಏರ್‌ಪೋರ್ಟ್‌ನಲ್ಲಿ ವಿಮಾನವನ್ನು ಇಳಿಸಲಾಯಿತುʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದುಬೈ-ಫುಕೆಟ್ ವಿಮಾನವನ್ನು ಲಖನೌನಲ್ಲಿ ಇಳಿಸಿರುವ ಬಗ್ಗೆ ಅಧಿಕೃತ ಸ್ಪಷ್ಟನೆ ಬಂದಿದ್ದು, ವಿಮಾನದ ಮಾರ್ಗ ಬದಲಾವಣೆಗೆ ಗಮ್ಯಸ್ಥಾನದಲ್ಲಿನ ಹವಾಮಾನ ವೈಪರೀತ್ಯವಷ್ಟೇ ಕಾರಣ ಎಂದು ತಿಳಿಸಲಾಗಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕಠಿಣ ನಿಯಮ ಪರಿಚಯಿಸಲು ಮುಂದಾದ ಕೇಂದ್ರ
ಫ್ಲೈದುಬೈ ವಿಮಾನದಲ್ಲಿ ಏನಾಗಿತ್ತು?
ಫ್ಲೈದುಬೈ ವಿಮಾನ ಗಮನ ಸೆಳೆಯಲೂ ಕಾರಣವಿದೆ. ಸೆಪ್ಟೆಂಬರ್ 30ರಂದು ದುಬೈಯಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಸುಮಾರು 34 ಸಾವಿರ ಅಡಿ ಎತ್ತರದಲ್ಲಿದ್ದಾಗ ಒಮಾನ್ ಮೂಲದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಏಕಾಏಕಿ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿದ್ದ. ವಿಮಾನವನ್ನು ಪತನಗೊಳಿಸುವ ಉದ್ದೇಶದಿಂದ ಸುತ್ತಿಗೆಯಂತಹ ಆಯುಧದಿಂದ ಸ್ಮಿತ್ ಮೇಲೆ ಎರಗಿದ್ದ. ತೀವ್ರ ಗಾಯಗೊಂಡಿದ್ದರೂ ಸ್ಮಿತ್ ಕಾಕ್‌ಪಿಟ್‌ನ ಬಾಗಿಲು ತೆರೆದು ಅಪಾಯದ ಸೂಚನೆ ನೀಡಿದ್ದರು. ತಕ್ಷಣ ಪ್ರಯಾಣಿಕರು ಕ್ಯಾಬಿನ್‌ಗೆ ನುಗ್ಗಿ ದಾಳಿಕೋರನನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿಮಾನದಲ್ಲಿದ್ದ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ಏರ್‌ಪೋರ್ಟ್‌ನಲ್ಲಿ ಸುರಕ್ಷಿತವಾಗಿ ಇಳಿಸಿದ್ದರು. ಹೀಗಾಗಿ ಸದ್ಯ ಫ್ಲೈದುಬೈ ವಿಮಾನ ವಿಶ್ವಾದ್ಯಂತ ಭಾರಿ ಸುದ್ದಿಯಲ್ಲಿದೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.