Chikkaballapur News: ಜಾತಿ ಗಣತಿ ಮಾಡುವಾಗ ಮೂಲ ಜಾತಿ ಹೊಲೆಯ ಎಂದು ನಮೂದಿಸಲು ಮನವಿ
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗಾಗಿ ಹೊಸದಾಗಿ ಸಮೀಕ್ಷೆ ನಡೆಸಲು ಗಣತಿದಾರರು ಮನೆ ಮನೆಗೂ ಬಂದಾಗ ಆದಿಕರ್ನಾಟಕ ಅಥವಾ ಆದಿ ದ್ರಾವಿಡ ಜತೆಯಲ್ಲಿ ತಮ್ಮ ಮೂಲ ಜಾತಿ ಹೊಲೆಯ ಅಥವಾ ಮಾದಿಗ ಎಂಬುದನ್ನು ಕಡ್ಡಾಯವಾಗಿ ಬರೆಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್ ತಿಳಿಸಿದರು

ಪರಿಶಿಷ್ಟಜಾತಿಯಲ್ಲಿ ಒಳಮೀಸಲಾತಿ ಜಾರಿಗಾಗಿ ಹೋಸದಾಗಿ ಸಮೀಕ್ಷೆ ನಡೆಸಲು ಗಣತಿದಾರರು ಮನೆ ಮನೆಗೂ ಬಂದಾಗ ಆದಿಕರ್ನಾಟ ಅಥವಾ ಆದಿದ್ರಾವಿಡ ಜತೆಯಲ್ಲಿ ತಮ್ಮ ಮೂಲ ಜಾತಿ ಹೊಲೆಯ ಅಥವಾ ಮಾದಿಗ ಎಂಬುದನ್ನು ಕಡ್ಡಾಯವಾಗಿ ಬರೆಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್ ತಿಳಿಸಿದರು.

ಚಿಂತಾಮಣಿ : ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗಾಗಿ ಹೊಸದಾಗಿ ಸಮೀಕ್ಷೆ ನಡೆಸಲು ಗಣತಿದಾರರು ಮನೆ ಮನೆಗೂ ಬಂದಾಗ ಆದಿಕರ್ನಾಟಕ ಅಥವಾ ಆದಿ ದ್ರಾವಿಡ ಜತೆಯಲ್ಲಿ ತಮ್ಮ ಮೂಲ ಜಾತಿ ಹೊಲೆಯ ಅಥವಾ ಮಾದಿಗ ಎಂಬುದನ್ನು ಕಡ್ಡಾಯವಾಗಿ ಬರೆಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್ ತಿಳಿಸಿದರು. ಛಲವಾದಿ ಮಹಾಸಭಾದ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರದಿಂದ ಪರಿಶಿಷ್ಟ ಜಾತಿಗೆ ಶೇಕಡಾ 15 ರಷ್ಟು ಮೀಸಲಾತಿ ಇತ್ತು. ಅದರಲ್ಲಿ ಸುಮಾರು 101 ಜಾತಿಗಳಿದ್ದವು. ಜಾತಿಗಳಿಗನುಗುಣವಾಗಿ ಒಳಮೀಸಲಾತಿ ನೀಡಬೇಕು ಎಂಬ ಬೇಡಿಕೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಆರಂಭವಾಯಿತು.
ಹಲವಾರು ವರ್ಷಗಳ ನಂತರ ಕರ್ನಾಟಕದಲ್ಲೂ ಈ ಬೇಡಿಕೆ ಪ್ರಬಲವಾಯಿತು. ಈ ಬಗ್ಗೆ ಸಮಗ್ರ ಸಮೀಕ್ಷೆಗಾಗಿ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸದಾಶಿವ ಆಯೋಗವನ್ನು ರಚಿಸಲಾಯಿತು ಎಂದರು.
ರಾಜ್ಯದಲ್ಲಿ ಹೊಲೆಯ ಮತ್ತು ಮಾದಿಗ ಉಪಜಾತಿಗಳ ಕುರಿತು ಸಾಕಷ್ಟು ಗೊಂದಲಗಳು ಕಂಡು ಬಂದವು. ನಾಲ್ಕು ರೆವೆನ್ಯೂ ವಿಭಾಗದಲ್ಲಿ ಒಂದೊಂದು ರೀತಿಯಲ್ಲಿ ಜಾತಿ ಮತ್ತು ಉಪಜಾತಿಗಳಿ ದ್ದವು. ಒಂದು ರೆವೆನ್ಯೂ ವಿಭಾಗದಲ್ಲಿ ಒಂದೊಂದು ರೀತಿಯಲ್ಲಿ ಕರೆಯಲಾಗುತ್ತಿತ್ತು. ಒಂದು ವಿಭಾಗದಲ್ಲಿ ಮಾದಿಗ ಎಂದು ಕರೆದರೆ ಮತ್ತೊಂದು ವಿಭಾಗದಲ್ಲಿ ಹೊಲೆಯ ಎಂದು ಕರೆಯು ತ್ತಿದ್ದರು.
ಗೊಂದಲ ಪರಿಹಾರಕ್ಕಾಗಿ ಎರಡು ಜಾತಿಗಳ ಸಚಿವರು, ಮುಖಂಡರು ಪಕ್ಷಾತೀತವಾಗಿ ಸಭೆಗಳನ್ನು ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ನ್ಯಾಯಮೂರ್ತಿ ನಾಗ ಮೋಹನದಾಸ್ ಆಯೋಗವನ್ನು ರಚಿಸಲಾಯಿತು. ಎರಡು ಜಾತಿಗಳ ಗೊಂದಲವನ್ನು ನಿವಾರಿ ಸಲು ನಿರ್ಧಿಷ್ಟ ಅವಧಿಯೊಳಗೆ ಮತ್ತೊಮ್ಮೆ ಸಮೀಕ್ಷೆ ನಡೆಸಲು ಸೂಚಿಸಿದೆ. ಸರ್ಕಾರ ಒಪ್ಪಿ ಕೊಂಡು ಇದೇ ಮಾಹೆಯ 6 ರಿಂದ ಸಮೀಕ್ಷೆ ಆರಂಭವಾಗಿದೆ ಎಂದರು.
ಸಮೀಕ್ಷೆ ನಡೆಸಲು ಗಣತಿದಾರರು ಮನೆ ಮನೆಗೂ ಬಂದಾಗ ಕಡ್ಡಾಯವಾಗಿ ಮೂಲ ಜಾತಿಯನ್ನು ಬರೆಸಬೇಕು. ಎರಡು ಜಾತಿಗಳು ಒಂದೇ ಕುಟುಂಬಸ್ಥರು ವಿಭಕ್ತ ಕುಟುಂಬದ ಸಹೋದರರಂತೆ ಈಗ ಬೇರೆ ಬೇರೆಯಾಗುತ್ತಿದ್ದೇವೆ. ಯಾವುದೇ ಬಿನ್ನಾಭಿಪ್ರಾಯಗಳು ಬೇಡ. ಅನ್ಯೋನ್ಯವಾಗಿ ನಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು.
ಕೈವಾರ ಮಂಜುನಾಥ್ ಮಾತನಾಡಿ ನಾವು ಸಹ ಮೊದಲಿನಿಂದಲೂ ಛಲವಾದಿ ಮಹಾಸಭಾ ಅಡಿಯಲ್ಲಿ ಸಂಘಟಿತರಾಗಿದ್ದೇವೆ. ಯಾವುದೇ ಮನಸ್ತಾಪವಿಲ್ಲದಂತೆ ನಿಖರವಾದ ಮಾಹಿತಿ ಸಂಗ್ರಹಕ್ಕಾಗಿ ಸೂಕ್ತ ಜಾತಿಯ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಮುಖಂಡರಾದ ಉಮೇಶ್, ಕಲ್ಲಹಳ್ಳಿ ನಂಜುAಡಪ್ಪ, ರವೀಂದ್ರ, ಪ್ರಭಾಕರಬಾಬು, ಮಾಳಪಲ್ಲಿ ರಾಜಣ್ಣ,ರೋಹಿಲ್, ಕರಿಯಪಲ್ಲಿ ಶ್ರೀನಾಥ್, ಚನ್ನಕೇಶಪುರ ವೆಂಕಟೇಶಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.