MLA S N Subbareddy: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ಸುಳ್ಳು ಆರೋಪ: ಕೋಲಾರದ ಸಂದೇಶ್ ವಿರುದ್ಧ ದೂರು
ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲೂಕಿನ ಜನತೆ ಯಾವುದೇ ಜಾತಿ ಬೇಧವಿಲ್ಲದೆ ಜೀವನ ಸಾಗಿಸು ತ್ತಿದ್ದೇವೆ. ಆದರೆ ಬೇರೆ ಕಡೆಯಿಂದ ಬಂದ ಈ ವ್ಯಕ್ತಿ ನಮ್ಮ ಮದ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಅವರ ಈ ನಡೆಯನ್ನು ಬದಲಿಸಬೇಕು. ಇಲ್ಲವಾದಲ್ಲಿ ಇನ್ನೂ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ವಿರುದ್ಧ ಜಮೀನು ಕಬಳಿಕೆಯ ಆಧಾರರಹಿತ ಸುಳ್ಳು ಆರೋಪ ಮಾಡಿ, ಅವರ ತೇಜೋವಧೆ ಮಾಡುತ್ತಿರುವ ಕೋಲಾರದ ಸಂದೇಶ್ ಎಂಬುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡರು ಗುಡಿಬಂಡೆ ಪೊಲೀಸರಿಗೆ ದೂರು ನೀಡಿದರು. -
ಗುಡಿಬಂಡೆ: ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ(MLA S N Subbareddy) ಅವರ ವಿರುದ್ಧ ಜಮೀನು ಕಬಳಿಕೆಯ ಆಧಾರರಹಿತ ಸುಳ್ಳು ಆರೋಪ ಮಾಡಿ, ಅವರ ತೇಜೋವಧೆ ಮಾಡುತ್ತಿರುವ ಕೋಲಾರದ ಸಂದೇಶ್ ಎಂಬುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡರು ಗುಡಿಬಂಡೆ ಪೊಲೀಸರಿಗೆ ದೂರು ನೀಡಿದರು.
ಈ ವೇಳೆ, ಕಾಂಗ್ರೆಸ್ ಮುಖಂಡ ಹೆಚ್.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ತಾಲೂಕಿನ ಸೋಮಲಾಪುರ ಗ್ರಾಮದ ಸರ್ವೆ ನಂಬರ್ 1ರಲ್ಲಿ 162 ಎಕರೆ ಜಮೀನಿದ್ದು, ಇದನ್ನು ಶಾಸಕರು ಕಬಳಿಸಿ ಬೇಲಿ ಹಾಕಿದ್ದಾರೆ ಎಂದು ಸಂದೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(Chief Minister D K Shivkumar) ಅವರಿಗೆ ಶಾಸಕ ಸುಬ್ಬಾರೆಡ್ಡಿ ಅವರನ್ನು ಸಚಿವರನ್ನಾಗಿ ಮಾಡಿದರೆ ಸಿಎಂ ನಿವಾಸದ ಮುಂದೆ ಧರಣಿ ನಡೆಸುವುದಾಗಿ ಬೆದರಿಕೆ ಹಾಕುವ ಮೂಲಕ ಸಂದೇಶ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.
ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲೂಕಿನ ಜನತೆ ಯಾವುದೇ ಜಾತಿ ಬೇಧವಿಲ್ಲದೆ ಜೀವನ ಸಾಗಿಸುತ್ತಿದ್ದೇವೆ. ಆದರೆ ಬೇರೆ ಕಡೆಯಿಂದ ಬಂದ ಈ ವ್ಯಕ್ತಿ ನಮ್ಮ ಮದ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಅವರ ಈ ನಡೆಯನ್ನು ಬದಲಿಸಬೇಕು. ಇಲ್ಲವಾದಲ್ಲಿ ಇನ್ನೂ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಮತ್ತೋರ್ವ ಮುಖಂಡ ಕೃಷ್ಣೇಗೌಡ ಮಾತನಾಡಿ ಜು.25ರಂದು ಮುಂಜಾನೆ 7 ಗಂಟೆ ಸುಮಾರಿಗೆ ಸಂದೇಶ್ ಮತ್ತು ಅವರ ಬೆಂಬಲಿಗರು ಸೋಮಲಾಪುರ ಜಮೀನಿನ ಬಳಿ ತೆರಳಿ, ಅಲ್ಲಿನ ನಿವಾಸಿ ಗಂಗಾಧರಪ್ಪ ಅವರನ್ನು ಪ್ರಶ್ನಿಸಿದ್ದಾರೆ.
ಈ ವೇಳೆ, ಗಂಗಾಧರಪ್ಪ ಅವರು, ಶಾಸಕರಿಗೆ ಇಲ್ಲಿ ಒಂದು ಗುಂಟೆ ಜಮೀನು ಕೂಡ ಇಲ್ಲ. ಬದಲಿಗೆ, ದಶಕಗಳಿಂದ ಸಾಗುವಳಿ ಮಾಡುತ್ತಿರುವ ನಮ್ಮ ಜಮೀನನ್ನು ನಮಗೆ ಮಂಜೂರು ಮಾಡಲು ಅವರು ಒಪ್ಪಿದ್ದಾರೆ ಎಂದು ವಾಸ್ತವ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂದೇಶ್, ಗಂಗಾಧರಪ್ಪ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಲ್ಲಿಂದ ಹೊರಟು ಹೋಗಿದ್ದಾರೆ. ಒಂದು ವೇಳೆ ಶಾಸಕರು ಅಲ್ಲಿನ ಜಮೀನು ಖರೀದಿ ಮಾಡಿದ್ದಾರೆ ಎಂದು ನಿರೂಪಿಸಿದರೇ, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೋಡೋಕೂ ಸಿದ್ದ ಎಂದರು.
ಇನ್ನೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ತಾಲೂಕಿನಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಹಾಗೂ ಶಾಸಕರಿಗೆ ಸಚಿವ ಸ್ಥಾನ ತಪ್ಪಿಸಲು ಷಡ್ಯಂತ್ರ ರೂಪಿಸುತ್ತಿರುವ ಸಂದೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಖಂಡರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ರಿಯಾಜ್ ಪಾಷ, ಪ್ರಕಾಶ್, ರಮೇಶ್, ಇಸ್ಮಾಯಿಲ್ ಆಜಾದ್ ಬಾಬು, ಯೂತ್ ಕಾಂಗ್ರೇಸ್ ನ ನವೀನ್, ಅಂಬರೀಶ್, ಯರಲಕ್ಕೇನಹಳ್ಳಿ ಮಂಜುನಾಥ್, ದಲಿತ ಮುಖಂಡರಾದ ನಂಜುಂಡ, ನಾರಾಯಣಸ್ವಾಮಿ, ಗಂಗಪ್ಪ, ರಮಣ, ಗಣೇಶ್ ಸೇರಿದಂತೆ ಹಲವರು ಹಾಜರಿದ್ದರು.