ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಕ್ರಮ ನುಸುಳುಕೋರರ ಪತ್ತೆಗೆ 'SIR' ಅಸ್ತ್ರ...ಕಾಂಗ್ರೆಸ್ ವಿರೋಧಕ್ಕೆ ಸೀಕಲ್ ಆನಂದ್ ಗೌಡ ಕಿಡಿ...!

​"ಕ್ಷೇತ್ರದ ದಂಡಾಧಿಕಾರಿಗಳು ಹಾಗೂ ಇ.ಆರ್.ಓ.ಅವರೊಂದಿಗೆ ನಾವು ನಿರಂತರ ಸಂಪರ್ಕ ದಲ್ಲಿದ್ದು, ಪ್ರತಿದಿನದ ಅಪ್‌ಡೇಟ್‌ಗಳನ್ನು ಪಡೆಯುತ್ತಿದ್ದೇವೆ.ಗ್ರಾಮೀಣ ಭಾಗದಲ್ಲಿ ಈಗಾಗಲೇ ಸುಮಾರು ಶೇಕಡಾ 50 ರಷ್ಟು ಎನ್ಯೂಮರೇಷನ್ ಫಾರಂಗಳನ್ನು ವಿತರಿಸಿ,ಭರ್ತಿ ಮಾಡಿ ಕಲೆಕ್ಟ್ ಮಾಡಲಾಗಿದೆ. ಆದರೆ ಇನ್ನುಳಿದ ಶೇಕಡಾ 50 ರಷ್ಟು ಕಾರ್ಯ ಬಾಕಿ ಉಳಿದಿದೆ.ಇನ್ನು ನಗರ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಕೇವಲ ಶೇಕಡಾ 40 ರಷ್ಟು ಮಾತ್ರ ಪ್ರಗತಿಯಾಗಿದ್ದು, ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ

ಮತದಾರರ ಪಟ್ಟಿ ಪರಿಷ್ಕರಣೆ ವೇಗ ಹೆಚ್ಚಿಸಲು ಆನಂದ್ ಗೌಡ ಆಗ್ರಹ

-

Profile
Ashok Nayak Jul 21, 2026 9:14 AM

ಚಿಂತಾಮಣಿ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ದಿಬ್ಬೂರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್.ಐ.ಆರ್.ಅರಿವು ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾದ ಸೀಕಲ್ ಆನಂದ್ ಗೌಡ ಅವರು ಸಕ್ರಿಯವಾಗಿ ಭಾಗವಹಿಸಿ ಮಾತನಾಡಿದರು.

​ಕಾರ್ಯಕ್ರಮದಲ್ಲಿ ಮಾತನಾಡಿದ ಸೀಕಲ್ ಆನಂದ್ ಗೌಡ ಅವರು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಿಧ ಪ್ರಕ್ರಿಯೆಗಳ ಕುರಿತು ಮಾಹಿತಿ ಹಂಚಿ ಕೊಂಡರು. ಪ್ರಮುಖವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಎನ್ಯೂ ಮರೇಷನ್ ಕಾರ್ಯದ ವೇಗದ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು.

​"ಕ್ಷೇತ್ರದ ದಂಡಾಧಿಕಾರಿಗಳು ಹಾಗೂ ಇ.ಆರ್.ಓ.ಅವರೊಂದಿಗೆ ನಾವು ನಿರಂತರ ಸಂಪರ್ಕ ದಲ್ಲಿದ್ದು, ಪ್ರತಿದಿನದ ಅಪ್‌ಡೇಟ್‌ಗಳನ್ನು ಪಡೆಯುತ್ತಿದ್ದೇವೆ.ಗ್ರಾಮೀಣ ಭಾಗದಲ್ಲಿ ಈಗಾಗಲೇ ಸುಮಾರು ಶೇಕಡಾ 50 ರಷ್ಟು ಎನ್ಯೂಮರೇಷನ್ ಫಾರಂಗಳನ್ನು ವಿತರಿಸಿ,ಭರ್ತಿ ಮಾಡಿ ಕಲೆಕ್ಟ್ ಮಾಡಲಾಗಿದೆ. ಆದರೆ ಇನ್ನುಳಿದ ಶೇಕಡಾ 50 ರಷ್ಟು ಕಾರ್ಯ ಬಾಕಿ ಉಳಿದಿದೆ.ಇನ್ನು ನಗರ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಕೇವಲ ಶೇಕಡಾ 40 ರಷ್ಟು ಮಾತ್ರ ಪ್ರಗತಿಯಾಗಿದ್ದು, ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ ಎಂದು ವಿವರಿಸಿದರು.

ಇದನ್ನೂ ಓದಿ: Chikkaballapur News: ಆಕ್ಸಿಜನ್ ಕೊರತೆಯಿಂದ ಬಾಲಕಿ ಸಾವು ಆರೋಪ; ಆಸ್ಪತ್ರೆ ಎದುರು ಗ್ರಾಮಸ್ಥರ ಪ್ರತಿಭಟನೆ

​ಇದೇ ವೇಗದಲ್ಲಿ ಕಾರ್ಯ ಮುಂದುವರಿದರೆ ಈ ತಿಂಗಳ ಕೊನೆಯೊಳಗೆ ಎನ್ಯೂಮರೇಷನ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸುವುದು ಕಷ್ಟಸಾಧ್ಯವಾಗುತ್ತದೆ. ಫಾರಂಗಳನ್ನು ನೀಡಿ, ಭರ್ತಿ ಮಾಡಿಸಿ, ಅಗತ್ಯ ದಾಖಲಾತಿಗಳನ್ನು ಪಡೆದು ಕ್ರಾಸ್ ಚೆಕ್ ಮಾಡಿ ಅಕ್ನಾಲೆಡ್ಜ್‌ಮೆಂಟ್ ನೀಡಲು ಈ ಸಮಯಾವಕಾಶ ಸಾಲುವುದಿಲ್ಲ. ಹೀಗಾಗಿ ಈ ಕಾರ್ಯಕ್ಕೆ ಇನ್ನಷ್ಟು ವೇಗ ನೀಡುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಚುನಾವಣಾ ಆಯೋಗವು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ, ಅದು ಸ್ವತಂತ್ರವಾಗಿ ಕೆಲಸ ಮಾಡು ತ್ತದೆ. ಅದಕ್ಕೆ ನಾವು ಬೆಂಬಲ ನೀಡಿದಾಗ ಮಾತ್ರ ಎಸ್‌ಐಆರ್ ಮಾಡಲು ಸಾಧ್ಯವಾಗುತ್ತದೆ. ಎಸ್‌ಐಆರ್‌ನ ಮುಖ್ಯ ಉದ್ದೇಶವೆಂದರೆ,ಬೇರೆ ದೇಶಗಳಿಂದ ಬಂದು ಇಲ್ಲಿ ನೆಲೆಸಿ, ಎಲೆಕ್ಷನ್ ಕಾರ್ಡ್ ಮತ್ತು ರೇಷನ್ ಕಾರ್ಡ್‌ಗಳನ್ನು ಮಾಡಿಸಿಕೊಂಡು ಇಲ್ಲಿನ ಸೌಲಭ್ಯಗಳನ್ನು ಪಡೆಯುತ್ತಿರು ವವರನ್ನು ಪತ್ತೆ ಹಚ್ಚುವುದಾಗಿದೆ"ಎಂದು ತಿಳಿಸಿದರು.

​ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಕಾಂಗ್ರೆಸ್‌ನವರು ಎಸ್‌ಐಆರ್ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಅವರು ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿ ಅವರ ವೋಟುಗಳನ್ನು ತೆಗೆಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ಬಾಗೇಪಲ್ಲಿಯಲ್ಲಿ ಪಾಕಿಸ್ತಾನದಿಂದ ಬಂದು 22 ವರ್ಷಗಳಿಂದ ನೆಲೆಸಿದ್ದವರು ಎಲೆಕ್ಷನ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಪಡೆದಿರುವುದು ಎಸ್‌ಐಆರ್ ಪ್ರಕ್ರಿಯೆಯಿಂದಲೇ ಬೆಳಕಿಗೆ ಬಂದಿದೆ.ಈ ರೀತಿಯ ಸೂಕ್ಷ್ಮ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ದೇಶದ ಭದ್ರತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಾಂಗ್ರೆಸ್‌ನವರಿಗೆ ಈ ಬಗ್ಗೆ ಯಾವಾಗ ಬುದ್ಧಿ ಬರುತ್ತದೋ ಗೊತ್ತಿಲ್ಲ.ಅವರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡದೆ ಕೇವಲ ರಾಜಕೀಯ ಮಾಡುತ್ತಿದ್ದಾರೆ" ಎಂದು ಸೀಕಲ್ ಆನಂದ್ ಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು.

​ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯದ ಬಗ್ಗೆ ಮಾತನಾಡಿದ ಅವರು,ಚಿಕ್ಕಬಳ್ಳಾಪುರ ಎಂದ ತಕ್ಷಣ ರಾಜ್ಯದಲ್ಲಿ ಒಬ್ಬ 'ಹುಚ್ಚ ವೆಂಕಟ್'ನಿಂದಾಗಿ ಇಡೀ ಜಿಲ್ಲೆ ನಗೆಪಾಟಲಿಗೀಡಾಗಿದೆ. ದಯವಿಟ್ಟು ಶಿಡ್ಲಘಟ್ಟವನ್ನು ಆ ಮಟ್ಟಕ್ಕೆ ತರಬೇಡಿ. ಇಲ್ಲಿನ ಗುಂಪುಗಾರಿಕೆಯಿಂದ ಕಾರ್ಯ ಕರ್ತರನ್ನು ದಾರಿ ತಪ್ಪಿಸುವ ಕೆಲಸ ನಿಲ್ಲಬೇಕು.ಪ್ರತಿಯೊಂದು ಪ್ರಕ್ರಿಯೆಯೂ ಸಿಸ್ಟಮ್ಯಾಟಿಕ್ ಆಗಿ ನಡೆದಾಗ ಮಾತ್ರ ಅದಕ್ಕೊಂದು ಅರ್ಥ ಇರುತ್ತದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರಾಜಣ್ಣ, ಸೋಮಶೇಖರ ರೆಡ್ಡಿ,ಡಿ ಜೆ ಅಂಜನಪ್ಪ, ಶ್ರೀಧರ್, ಪ್ರಸನ್ನ, ಸುಬ್ಬರಾಯಪ್ಪ, ಕರಿಯಪ್ಪ,ಸೇರಿದಂತೆ ಮತ್ತೆ ಮತ್ತಿತರರು ಇದ್ದರು.