Gauribidanur News: ಶ್ರೀಶಾರದಾ ದೇವಿ ದೇವಸ್ಥಾನದಲ್ಲಿ ವಿಮಾನ ಗೋಪುರ ಕಲಶ ಸ್ಥಾಪನೆ ಹಾಗೂ ಮಹಾಕುಂಭಾಭಿಷೇಕದಲ್ಲಿ ಶ್ರೀವಿಧುಶೇಖರ ಭಾರತಿ ಮಹಾಸ್ವಾಮಿ ಭಾಗಿ
ಬುಧವಾರದಂದು ಮೂಲ ಮಂತ್ರ ಹೋಮ, ಶಾಂತಿ ಪ್ರಾಯಶ್ಚಿತ ಹೋಮ, ಸಿಂಹ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಶೃಂಗೇರಿ ಶಾರದಾ ಮಠದ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀಯ ಸನ್ನಿದಾನಂಗಳವರ ಅಮೃತ ಹಸದಿಂದ ಶ್ರೀ ಮಹಾಗಣಪತಿ, ಶ್ರೀ ಶಾರದಾ ದೇವಿ, ಶ್ರೀ ಚಂದ್ರ ಮೌಳೇಶ್ವರ ಸ್ವಾಮಿಗೆ ಬ್ರಹ್ಮಕುಂಭಾಭಿಷೇಕ, ಮಹಾಪೂಜೆ ಶಿಖರ ಕುಂಭಾಭಿಷೇಕ ನೆರವೇರಿಸಿದರು
ನಗರದ ವಿ.ವಿ ಪುರಂ ಬಡಾವಣೆಯ ಶೃಂಗೇರಿ ಶ್ರೀಶಾರದಾ ದೇವಿ ದೇವಸ್ಥಾನದಲ್ಲಿ ವಿಮಾನ ಗೋಪುರ ಕಲಶ ಸ್ಥಾಪನೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವವು ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀವಿಧುಶೇಖರ ಭಾರತಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಮತ್ತು ಅಮೃತಹಸ್ತದಿಂದ ಅತ್ಯಂತ ವೈಭವೋಪೇತವಾಗಿ ನೆರವೇರಿತು -
ಗೌರಿಬಿದನೂರು: ನಗರದ ವಿ.ವಿ ಪುರಂ ಬಡಾವಣೆಯ ಶೃಂಗೇರಿ ಶ್ರೀಶಾರದಾ ದೇವಿ ದೇವಸ್ಥಾನ ದಲ್ಲಿ ವಿಮಾನ ಗೋಪುರ ಕಲಶ ಸ್ಥಾಪನೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವವು ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀವಿಧುಶೇಖರ ಭಾರತಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಮತ್ತು ಅಮೃತ ಹಸ್ತದಿಂದ ಅತ್ಯಂತ ವೈಭವೋಪೇತವಾಗಿ ನೆರವೇರಿತು.
ಕಳೆದ 3 ದಿನಗಳಿಂದ ದೇವಸ್ಥಾನದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು ಗಣಪತಿ ಪೂಜೆ ಪುಣ್ಯಹ ದೇವಾನಂದ, ಸಂಕಲ್ಪ, ಕಲಾತತ್ವ ಹೋಮ, ಶಿಖರ ಸ್ಥಾಪನೆ, ಮತ್ತು ಶ್ರೀಗಳವರಿಂದ ಮಠದ ಸಂಪ್ರದಾಯದಂತೆ ಶ್ರೀ ಶಾರದಾ ಚಂದ್ರಮೌಳೇಶ್ವರ ಪೂಜಾ ಕಾರ್ಯಕ್ರಮ ಹಾಗೂ ಭಕ್ತಾದಿಗಳಿಂದ ಪಾದಪೂಜೆ ಕಾರ್ಯಕ್ರಮ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಗಳು ನಡೆದವು.
ಬುಧವಾರದಂದು ಮೂಲ ಮಂತ್ರ ಹೋಮ, ಶಾಂತಿ ಪ್ರಾಯಶ್ಚಿತ ಹೋಮ, ಸಿಂಹ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಶೃಂಗೇರಿ ಶಾರದಾ ಮಠದ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀಯ ಸನ್ನಿದಾನಂಗಳವರ ಅಮೃತ ಹಸದಿಂದ ಶ್ರೀ ಮಹಾಗಣಪತಿ, ಶ್ರೀ ಶಾರದಾ ದೇವಿ, ಶ್ರೀ ಚಂದ್ರ ಮೌಳೇಶ್ವರ ಸ್ವಾಮಿಗೆ ಬ್ರಹ್ಮಕುಂಭಾಭಿಷೇಕ, ಮಹಾಪೂಜೆ ಶಿಖರ ಕುಂಭಾಭಿಷೇಕ ನೆರವೇರಿಸಿದರು.
ಇದನ್ನೂ ಓದಿ: Gauribidanur News: ಶ್ರೀ ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಿಯ ಒಂಬತ್ತನೇ ಬ್ರಹ್ಮರಥೋತ್ಸವ
ಬಳಿಕ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀ ಶೃಂಗೇರಿ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ ಅವರು, ಈ ಶಾರದಾ ದೇವಸ್ಥಾನವು ಅನೇಕ ವರ್ಷಗಳಿಂದ ಭಕ್ತರ ನಂಬಿಕೆ ಮತ್ತು ಶ್ರದ್ಧೆಯ ಕೇಂದ್ರವಾಗಿದ್ದು ಮಠದ ಅಭಿವೃದ್ಧಿ ಕಾರ್ಯಗಳನ್ನು ಭಕ್ತರು ವಿಶೇಷ ಪರಿಶ್ರಮದಿಂದ ನಿರ್ವಹಿಸುತ್ತಿದ್ದಾರೆ ಎಂದರು.
ಸುಮಾರು ೮ ವರ್ಷಗಳ ಹಿಂದೆ ನಾವು ಈ ಪ್ರಾಂತಕ್ಕೆ ಭೇಟಿ ನೀಡಿದ್ದಾಗ ಅಭಿವೃದ್ಧಿ ಕಾರ್ಯಗಳ ಕುರಿತು ಕೈಗೊಂಡಿದ್ದ ಸಂಕಲ್ಪವು ಇಂದು ನೆರವೇರಿದೆ,ಶಾರದಾ ಪರಮೇಶ್ವರಿ ಅಮ್ಮನವರಿಗೂ, ಮಹಾಗಣಪತಿಗೂ ಹಾಗೂ ಶಂಕರ ಭಗವತ್ಪಾದಾಚಾರ್ಯರಿಗೂ ಮತ್ತು ಚಂದ್ರಮೌಳೇಶ್ವರ ಸ್ವಾಮಿಗೂ ಮಹಾಕುಂಭಾಭಿಷೇಕ ಮತ್ತು ಶಿಖರ ಕುಂಭಾಭಿಷೇಕವನ್ನು ನೆರವೇರಿಸಲಾಗಿದೆ.ಇಂದಿನ ಆಧುನಿಕ ಯುಗದಲ್ಲಿಯೂ ಧರ್ಮ, ಸಂಪ್ರದಾಯ ಮತ್ತು ಶಾಸ್ತ್ರಗಳ ಆಚರಣೆ ಅತೀ ಅವಶ್ಯಕ ವಾಗಿದೆ. ಆಧುನಿಕ ಸೌಕರ್ಯಗಳು ಜೀವನದ ಭಾಗವಾಗಿರಬಹುದು, ಆದರೆ ಅವುಗಳೇ ಜೀವನವಲ್ಲ ಎಂದರು.
ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಜೀವನ ನಡೆಸುತ್ತಿದ್ದರೂ, ಅಧ್ಯಾತ್ಮಿಕತೆ ಮತ್ತು ಧಾರ್ಮಿಕ ಚೌಕಟ್ಟನ್ನು ಮರೆಯಬಾರದೆಂದು ಕರೆ ನೀಡಿದರು.
ಕೆಲವರು ಆಧುನಿಕತೆಯ ನೆಪದಲ್ಲಿ ಹಳೆಯ ಸಂಪ್ರದಾಯಗಳನ್ನು ಕಡೆಗಣಿಸುವುದು ಸರಿಯಲ್ಲ . ಧಾರ್ಮಿಕತೆಯನ್ನು ಬೆಳೆಸಲು ಮತ್ತು ಜಾಗೃತಗೊಳಿಸಲು ಇಂತಹ ಕ್ಷೇತ್ರಗಳು ಅತ್ಯಂತ ಅಗತ್ಯ ವಾಗಿದೆ. ಜಗದ್ಗುರು ಶ್ರೀ ಶ್ರೀ ಆದಿ ಶಂಕರಾಚಾರ್ಯರು ಹಾಕಿಕೊಟ್ಟ ಧರ್ಮಾಚರಣೆಯ ಮಾರ್ಗ ದಲ್ಲಿ ನಡೆಯುವಂತೆ ಭಕ್ತರಿಗೆ ಪ್ರೇರಣೆ ನೀಡಿದರು.
ಈ ಆಶೀರ್ವಚನದ ಮೂಲಕ, ಬಾಹ್ಯ ಆಧುನಿಕತೆಯ ಜೊತೆಗೆ ಆಂತರಿಕ ಧಾರ್ಮಿಕತೆಯನ್ನು ಬೆಳೆಸಿಕೊಳ್ಳುವುದು ಸುಖಮಯ ಜೀವನಕ್ಕೆ ಅಗತ್ಯ ಎಂದು ಸಂದೇಶ ನೀಡಿದರು.
ಇದೇ ವೇಳೆ ಬ್ರಾಹ್ಮಣ ಕ್ಷೇಮಾಭ್ಯುದಯ ಸಂಘದ ಅಧ್ಯಕ್ಷರಾದ ರಘು ಬಾಬು ಮಾತನಾಡಿ, ಈ ಕಾರ್ಯಕ್ರಮವು ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ಅಮೃತಹಸ್ತದಿಂದ ನೆರವೇರುತ್ತಿದೆ.ಭಕ್ತಾದಿಗಳ ಸಹಕಾರದಿಂದ ಅಚ್ಚುಕಟ್ಟಾಗಿ ಜರುಗಿದೆ,
ಈ ಸಮಾರಂಭದಲ್ಲಿ ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಮತ್ತು ಶಾಸಕ ಪುಟ್ಟಸ್ವಾಮಿಗೌಡ(MLA Puttaswamy Gowda), ಮಹಾಲಕ್ಷ್ಮಿ ಲೇಔಟ್‌ನ ಶಾಸಕ ಗೋಪಾಲಯ್ಯ (Mahalakshmi Layout MLA Gopalaiah)ಅವರು ಭಾಗವಹಿಸಿ ಗುರುಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ, ಮಾಜಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕ ಅಧ್ಯಕ್ಷ ಹೆಚ್.ಎನ್. ಸುಬ್ರಹ್ಮಣ್ಯ, ವಿದುರಾಶ್ವತ್ಥ ಅಶ್ವಥ್ ನಾರಾಯಣಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್.ಡಿ.ವಿ, ಬಿ.ಎಸ್.ರಾಘವೇಂದ್ರ ಭಟ್ಟರು, ಜಿಲ್ಲಾ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ನಾಗಭೂಷಣ್ ರಾವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಪಿ.ಆರ್.ಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಎಚ್.ವಿ.ಮಂಜುನಾಥ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ.ವಿ.ರಾಘವೇಂದ್ರ ಹನುಮಾನ್ ಸೇರಿದಂತೆ ಹಲವು ಗಣ್ಯರು ಮತ್ತು ತಾಲೂಕು ಬ್ರಾಹ್ಮಣ ಕ್ಷೇಮಾಭ್ಯುದಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.