Gauribidanur News: ಶ್ರೀ ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಿಯ ಒಂಬತ್ತನೇ ಬ್ರಹ್ಮರಥೋತ್ಸವ
ಜು.6ರಂದು ಸೋಮವಾರ ಸಂಜೆ 5 ಗಂಟೆಗೆ ಗಂಗಾ ನಯನ, ದೇವತಾ ಪ್ರಾರ್ಥನೆ, ಗುರುಪ್ರಾರ್ಥನೆ, ಗಣಪತಿ ಪೂಜೆ, ಮಹಾಸಂಕಲ್ಪ ಸೇರಿದಂತೆ ಇತರ ಪೂಜಾ ಕೈಂಕಾರ್ಯಗಳೊಂದಿಗೆ ದೇವತಾ ಕಾರ್ಯ ಆರಂಭವಾಗಲಿದೆ. ಜು.7ರಂದು ಮಂಗಳವಾರ ಬೆಳಿಗ್ಗೆ 8.30ಕ್ಕೆ ವೇದ ಪಾರಾಯಣ, ಕಶಸಾರಾಧನೆ, ಪ್ರಾತಃ ನಿತ್ಯ ಹೋಮ, ರಂಗ ಹೋಮ ನಡೆಯಲಿದೆ.
ನಗರದ ಮಧುಗಿರಿ ರಸ್ತೆಯಲ್ಲಿರುವ ಶ್ರೀ ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಿಯ ದೇವಸ್ಥಾನದ ಆವರಣದಲ್ಲಿ ಜುಲೈ ೬ ಸೋಮವಾರ ದಿಂದ ಜುಲೈ ೮ ಬುಧವಾರದವರೆಗೆ ಶ್ರೀ ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಿ ಸಮೇತ ಗಣಪತಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವರ ಒಂಬತ್ತನೇ ವರ್ಷದ ಬ್ರಹ್ಮರಥೋತ್ಸವವನ್ನು ಆಯೋಜಿಸಲಾಗಿದೆ. -
ಗೌರಿಬಿದನೂರು: ನಗರದ ಮಧುಗಿರಿ ರಸ್ತೆಯಲ್ಲಿರುವ ಶ್ರೀ ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಿಯ ದೇವಸ್ಥಾನದ ಆವರಣದಲ್ಲಿ ಜು.6 ಸೋಮವಾರ ದಿಂದ ಜು.8 ಬುಧವಾರದವರೆಗೆ ಶ್ರೀ ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಿ ಸಮೇತ ಗಣಪತಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವರ ಒಂಬತ್ತನೇ ವರ್ಷದ ಬ್ರಹ್ಮರಥೋತ್ಸವವನ್ನು ಆಯೋಜಿಸಲಾಗಿದೆ.
ಜು.6ರಂದು ಸೋಮವಾರ ಸಂಜೆ 5 ಗಂಟೆಗೆ ಗಂಗಾ ನಯನ, ದೇವತಾ ಪ್ರಾರ್ಥನೆ, ಗುರುಪ್ರಾರ್ಥನೆ, ಗಣಪತಿ ಪೂಜೆ, ಮಹಾಸಂಕಲ್ಪ ಸೇರಿದಂತೆ ಇತರ ಪೂಜಾ ಕೈಂಕಾರ್ಯಗಳೊಂದಿಗೆ ದೇವತಾ ಕಾರ್ಯ ಆರಂಭವಾಗಲಿದೆ. ಜು.7ರಂದು ಮಂಗಳವಾರ ಬೆಳಿಗ್ಗೆ 8.30ಕ್ಕೆ ವೇದ ಪಾರಾಯಣ, ಕಶಸಾರಾಧನೆ, ಪ್ರಾತಃ ನಿತ್ಯ ಹೋಮ, ರಂಗ ಹೋಮ ನಡೆಯಲಿದೆ.
ಇದನ್ನೂ ಓದಿ: Gauribidanur News: ಅಕ್ಷರಾಭ್ಯಾಸಕ್ಕೆ ಚಾಲನೆ: ರಾಮಕೃಷ್ಣ ಶಾರದಾದೇವಿ ವಿದ್ಯಾ ಮಂದಿರದಲ್ಲಿ ಕಾರ್ಯಕ್ರಮ
ಬೆಳಿಗ್ಗೆ 11 ಗಂಟೆಗೆ ಶ್ರೀಸೌಂದರ್ಯ ಲಯರಿ ಸಂಚಾಲನಾ ಸಮಿತಿಯ ಮಹಿಳೆಯರಿಂದ ಶ್ರೀಶಂಕರಾ ಚಾರ್ಯ ವಿರಚಿತ ಸ್ತೋತ್ರ ಪಾರಾಯಣ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಶುಭ ಅಭಿಜಿನ್ ಲಗ್ನದಲ್ಲಿ ಬೆಂಗಳೂರಿನ ತೀವ್ರಂ ಕಲಾಸಮಿತಿಯ ವತಿಯಿಂದ ಶಿಂಗಾರಿ ಮೇಳಂ ವಾದ್ಯಗಳೊಂದಿಗೆ ಬ್ರಹ್ಮರಥೋತ್ಸವ ಆರಂಭವಾಗಲಿದೆ.
ಬ್ರಹ್ಮರಥೋತ್ಸವಕ್ಕೆ ಗೌರವಾನ್ವಿತ ನಿವೃತ್ತ ನ್ಯಾಯಾಧೀಶರಾದ ಎನ್.ಕುಮಾರ್ ರವರು ಚಾಲನೆ ನೀಡಲಿದ್ದಾರೆ. ಸಂಜೆ 7 ಗಂಟೆಗೆ ದೇವಾಲಯದ ಆವರಣದಲ್ಲಿ ಶ್ರೀಮತಿ ವಿಜಯಾ ಆದಿಶೇಷರಾವ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಜು.8 ರಂದು ಬುಧವಾರ ಬೆಳಿಗ್ಗೆ ಕಳಶಾರಾಧನೆ, ನಿತ್ಯಹೋಮ ಸೇರಿದಂತೆ ಇತರ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಸಂಜೆ 5 ಗಂಟೆಗೆ ವಿವಿಧ ವಾದ್ಯತಂಡಗಳೊಂದಿಗೆ ಮತ್ತು ಸಿಡಿಮದ್ದು ಗಳ ಪ್ರದರ್ಶನದೊಂದಿಗೆ ನಗರದ ರಾಜಬೀದಿಗಳಲ್ಲಿ ಶ್ರೀ ಆದಿಶಕ್ತಿ ಅನ್ನಪೂರ್ಣೇಶ್ವರಿ ಅಮ್ಮನವರ ಮೆರವಣಿಗೆ ನಡೆಯಲಿದ್ದು ಭಕ್ತಾದಿಗಳು ಆಗಮಿಸಿ ಬ್ರಹ್ಮರಥೋತ್ಸವವನ್ನು ಯಶಸ್ವಿಗೊಳಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ತಿಳಿಸಿದ್ದಾರೆ.