SSLC Examination: ಮಾ.21 ರಿಂದ ಏ.4 ನೇ ತಾರೀಖಿನವರೆಗೆ ವಿಷಯವಾರು ವೇಳಾಪಟ್ಟಿಯಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ
ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ 1310 ಬಾಲಕರು, 1156 ಬಾಲಕಿಯರು ಸೇರಿ ಒಟ್ಟು 2466 ವಿದ್ಯಾ ರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ದತೆಗಳು ಪೂರ್ಣ ಗೊಂಡಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿ ದ್ದು, ಮಾ 21 ರಿಂದ ಏ.4 ನೇ ತಾರೀಖು ವರೆಗೆ ವಿಷಯವಾರು ವೇಳಾಪಟ್ಟಿಯಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ

ಬಾಗೇಪಲ್ಲಿ ಪಟ್ಟಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ

ಬಾಗೇಪಲ್ಲಿ: ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ 1310 ಬಾಲಕರು, 1156 ಬಾಲಕಿಯರು ಸೇರಿ ಒಟ್ಟು 2466 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ದತೆಗಳು ಪೂರ್ಣಗೊಂಡಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿ ದ್ದು, ಮಾ 21 ರಿಂದ ಏ.4 ನೇ ತಾರೀಖುವರೆಗೆ ವಿಷಯವಾರು ವೇಳಾಪಟ್ಟಿಯಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ.
ಬಾಗೇಪಲ್ಲಿ ಟೌನ್ ವ್ಯಾಪ್ತಿಯಲ್ಲಿ 4 ಕೇಂದ್ರಗಳು:ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಬಾಗೇಪಲ್ಲಿ.(ಬಾಲಕರು 206, ಬಾಲಕಿಯರು 164), ಸರ್ಕಾರಿ ಜೂನಿಯರ್ ಕಾಲೇಜು ಬಾಗೇಪಲ್ಲಿ( ಬಾಲಕರು 92, ಬಾಲಕಿಯರು 227), ಬಿಜಿಎಸ್ ಶಾಲೆ ಬಾಗೇಪಲ್ಲಿ.(ಬಾಲಕರು 168, ಬಾಲಕಿಯರು 95), ಯಂಗ್ ಇಂಡಿಯಾ ಶಾಲೆ( ಬಾಲಕರು 122, ಬಾಲಕಿಯರು 100).
ಇದನ್ನೂ ಓದಿ: SSLC Exam: ಮಾ.21ರಿಂದ SSLC ಪರೀಕ್ಷೆ; ವಿದ್ಯಾರ್ಥಿಗಳೇ ಈ ನಿಯಮಗಳ ಬಗ್ಗೆ ತಿಳಿದಿರಿ
ಗ್ರಾಮಾಂತರ ಪ್ರದೇಶದಲ್ಲಿ 5 ಕೇಂದ್ರಗಳು: ಸರ್ಕಾರಿ ಪ್ರೌಢ ಶಾಲೆ ಗೂಳೂರು( ಬಾಲಕರು 118, ಬಾಲಕಿಯರು 111), ಸರ್ಕಾರಿ ಪ್ರೌಢ ಶಾಲೆ ಪಾತಪಾಳ್ಯ( ಬಾಲಕರು 179, ಬಾಲಕಿಯರು 129), ಸರ್ಕಾರಿ ಪ್ರೌಢ ಶಾಲೆ ಮಿಟ್ಟೇಮರಿ( ಬಾಲಕರು 136, ಬಾಲಕಿಯರು 80), ಕೆ.ಪಿ.ಎಸ್ ಶಾಲೆ ಚೇಳೂ ರು( ಬಾಲಕರು 150, ಬಾಲಕಿಯರು 119, ಪ್ರಶಾಂತಿ ಶಾಲೆ ಚೇಳೂರು( ಬಾಲಕರು 139, ಬಾಲಕಿ ಯರು 131).
9 ಪರೀಕ್ಷಾ ಕೇಂದ್ರಗಳಿಗೆ 200 ಸಿಬ್ಬಂದಿ ಅಯೋಜನೆ: ಮುಖ್ಯ ಆಧೀಕ್ಷರು 9, ಉಪ ಮುಖ್ಯ ಆಧೀಕ್ಷರು 1, ಕಸ್ಟೋಡಿಯನ್ಸ್ 9, ಸ್ಥಾನಿಕ ಜಾಗೃತದಳ 9, ಮಾರ್ಗಾಧಿಕಾರಿಗಳು 3, ಮೊಬೈಲ್ ಪೋನ್ ಸ್ವಾಧೀ ನಾಧಿಕಾರಿಗಳು 9, ಕೊಠಢಿ ಮೇಲ್ವಿಚಾರಕರು 160 ಸೇರಿ ಒಟ್ಟು 200 ಸಿಬ್ಬಂದಿಯನ್ನು ಅಯೋಜಿಸ ಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಕಲ್ಪಿಸಿರುವ ವ್ಯವಸ್ಥೆಗಳು:
9 ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯಿಂದ ವೈಧ್ಯಕೀಯ ಸೇವೆ, ಓಆರ್‌ಎಸ್ ಪಾನೀಯ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಆಡಳಿತ ಮಂಡಳಿಯಿಂದ ಕೊಠಡಿಗಳಲ್ಲಿ ವಿಧ್ಯುತ್ ಶಕ್ತಿ, ಶೌಚಾಲಯ, ಡೆಸ್ಕ್ ವ್ಯವಸ್ಥೆ ಕಲ್ಪಿಸಲಾಗಿದೆ.
ಉಚಿತ ಬಸ್ ಪ್ರಯಾಣ: ಬಾಗೇಪಲ್ಲಿ ತಾಲೂಕಿನ ಎಲ್ಲಾ ಮಾರ್ಗಗಳಲ್ಲಿ ಪರೀಕ್ಷಾ ಸಮಯಕ್ಕೆ ಸರಿಯಾಗಿ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ ಕಲ್ಪಿಸುವುದು, ಪ್ರವೇಶಪತ್ರ ತೋರಿಸುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವಂತೆ ಶಿಕ್ಷಣ ಇಲಾಖೆಯಿಂದ ಆದೇಶಿಸಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ಬಿಗಿ ಭದ್ರತೆ:
ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿ, ಕಾರಿಡಾರ್(ಪಡಸಾಲೆ), ಕಚೇರಿಯಲ್ಲಿ ಕಡ್ಡಾಯ ಸಿಸಿ ಕ್ಯಾಮರಾ ಕಣ್ಗಾವಲು, ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಳತೆಯನ್ನು ನಿಷೇಧಿತ ಪ್ರದೇಶವೆಂದು ಘೋಷಿ ಸಿ 63 ಸೆಕ್ಷನ್ ಜಾರಿ ಮಾಡಿ ಶಾಂತಿ ಸುವ್ಯವಸ್ಥೆಗೆ ಪೋಲಿಸ್ ಸಿಬ್ಬಂದಿ ಅಯೋಜನೆ ಮಾಡಲಾಗಿದೆ.
*
ಬಾಗೇಪಲ್ಲಿ ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಆಗತ್ಯವಾದ ಸಕಲ ಸಿದ್ದತೆ ಗಳನ್ನು ಪೂರ್ಣಗೊಳಿಸಿದ್ದೇವೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ತಾಲೂಕು ಆಡಳಿತ, ಸಾರಿಗೆ ಸಂಸ್ಥೆ, ಆರೋಗ್ಯ ಇಲಾಖೆ ಸಹಕಾರದೊಂದಿಗೆ ಬಾಗೇಪಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ 4 ಕೇಂದ್ರಗಳು, ಗ್ರಾಮಾಂತರ ಪ್ರದೇಶದಲ್ಲಿ 5 ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಗಳನ್ನು ಕಲ್ಪಿಸಿದ್ದೇವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಆಶಿಸುತ್ತೇನೆ.
ಎನ್.ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಾಗೇಪಲ್ಲಿ