ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಂತಾಮಣಿಯಲ್ಲಿ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ಗೆ ವೇದಿಕೆ ಸಜ್ಜು

ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿ ಯೇಷನ್, ಕೆಎಂಎಫ್ ಹಾಗೂ ಚಿಂತಾಮಣಿ ನಗರಸಭೆಯ ಸಹಯೋಗದಲ್ಲಿ ಡಿಸೆಂಬರ್ 5ರಿಂದ 15ರವರೆಗೆ ರಾಜ್ಯದ ವಿವಿಧೆಡೆ 64ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್ ಆಯೋಜಿಸಲಾಗಿದೆ.

4,492 ಕ್ರೀಡಾಪಟುಗಳ ಆಯ್ಕೆ; ಡಿ.5ರಿಂದ ಮೂರು ವಿಭಾಗಗಳಲ್ಲಿ ಸ್ಪರ್ಧೆ

-

Profile
Ashok Nayak Nov 26, 2026 10:04 PM

ಚಿಕ್ಕಬಳ್ಳಾಪುರ: ದೇಶದ 26 ರಾಜ್ಯಗಳ ಸಾವಿರಾರು ಕ್ರೀಡಾಪಟುಗಳ ಗಮನ ಸೆಳೆಯಲಿರುವ 64ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌(64th National Roller Skating Championship) ಗೆ ಚಿಂತಾಮಣಿ ಸಜ್ಜಾಗುತ್ತಿದೆ. ಡಿಸೆಂಬರ್ 5ರಿಂದ 8ರವರೆಗೆ ನಗರದ ಅಂಜನಿ ಲೇಕ್ ವುಡ್ಸ್‌ನ ಸ್ಕೇಟ್ ಪಾರ್ಕ್‌ನಲ್ಲಿ ಸ್ಕೇಟ್‌ ಬೋರ್ಡಿಂಗ್, ರೋಲರ್ ಫ್ರೀಸ್ಟೈಲ್ ಹಾಗೂ ರೋಲರ್ ಸ್ಕೇಟ್ಸ್ ವಿಭಾಗಗಳ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ನಡೆಯಲಿದ್ದು, ಸುಮಾರು 195 ಕ್ರೀಡಾಪಟು ಗಳು ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.

ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿ ಯೇಷನ್, ಕೆಎಂಎಫ್ ಹಾಗೂ ಚಿಂತಾಮಣಿ ನಗರಸಭೆಯ ಸಹಯೋಗದಲ್ಲಿ ಡಿಸೆಂಬರ್ 5ರಿಂದ 15ರವರೆಗೆ ರಾಜ್ಯದ ವಿವಿಧೆಡೆ 64ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್ ಆಯೋಜಿಸಲಾಗಿದೆ.

ದೇಶದ 26 ರಾಜ್ಯಗಳಿಂದ ಒಟ್ಟು 38,831 ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 4,492 ಮಂದಿ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ 2,696 ಮಂದಿ ನೋಂದಾಯಿಸಿಕೊಂಡಿದ್ದು, 337 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾದ ಸದಸ್ಯ ಅರ್ಜುನ್ ತಿಳಿಸಿದರು.

ಇದನ್ನೂ ಓದಿ: Chikkaballapur News: ಜೀತ ವಿಮುಕ್ತರಿಗೆ ನಿವೇಶನ, ಸಾಗುವಳಿ ಚೀಟಿ ವಿತರಣೆ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಚರ್ಚೆ

ಚಿಂತಾಮಣಿಯ ಅಂಜನಿ ಲೇಕ್ ವುಡ್ಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂತಾಮಣಿಯಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವ ಅವಕಾಶ ದೊರೆತಿರು ವುದು ಹೆಮ್ಮೆಯ ಸಂಗತಿ. ಶಾಸಕ ಡಾ.ಎಂ.ಸಿ.ಸುಧಾಕರ್ ಹಾಗೂ ಅವರ ಸಹೋದರ ಎಂ.ಸಿ.ಬಾಲಾಜಿ ಅವರು ನಿರೀಕ್ಷೆಗೂ ಮೀರಿದ ಸಹಕಾರ ನೀಡಿದ್ದಾರೆ. ಅತ್ಯುತ್ತಮ ಸ್ಕೇಟ್ ಪಾರ್ಕ್ ನಿರ್ಮಾಣವಾಗಿದ್ದು, ಸ್ಪರ್ಧೆಗಳಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಡಿ.5ರಂದು ಬೆಳಿಗ್ಗೆ 6ರಿಂದ ಡಿ.8ರಂದು ಸಂಜೆ 6ರವರೆಗೆ ಸ್ಪರ್ಧೆಗಳು ನಡೆಯಲಿವೆ ಎಂದರು.

ಎಂ.ಸಿ.ಬಾಲಾಜಿ ಮಾತನಾಡಿ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಚಿಂತಾಮಣಿಯಲ್ಲಿ ನಡೆಯುತ್ತಿರುವುದು ಜಿಲ್ಲೆಯ ಕ್ರೀಡಾ ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಲಿದೆ. ಇಂತಹ ಸ್ಪರ್ಧೆಗಳಿಂದ ಸ್ಥಳೀಯ ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಹೆಚ್ಚುವುದರ ಜತೆಗೆ ಭವಿಷ್ಯದ ಕ್ರೀಡಾಪಟುಗಳಾಗಿ ರೂಪುಗೊಳ್ಳಲು ಪ್ರೇರಣೆ ದೊರೆಯಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡಾಕೂಟ, ತರಬೇತಿ ಹಾಗೂ ಸ್ಪರ್ಧೆಗಳಿಗೆ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದರು.

ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಖಜಾಂಚಿ ಲೋಕೇಶ್, ಅಂತಾರಾಷ್ಟ್ರೀಯ ಸ್ಕೇಟರ್ ಪ್ರೀತಿ, ಸುಧಾ ಬಾಬು, ಸರ್ವೇಶ್, ಕೃಷ್ಣಚಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.